Solar Pumpset : ಸರ್ಕಾರದಿಂದ ಉಚಿತ ಸೋಲಾರ್ ಪಂಪ್ ಸೆಟ್ ವಿತರಣೆ ಆರಂಭ.! ಈಗಲೇ ಅರ್ಜಿ ಸಲ್ಲಿಸಿ

Solar Pumpset : ನಮಸ್ಕಾರ ಸ್ನೇಹಿತರೇ, ಸೋಲಾರ್ ಪಂಪ್ ಸೆಟ್ ಉಚಿತವಾಗಿ ಪಡೆದುಕೊಳ್ಳುವುದು ಹೇಗೆ? ಹಾಗೆಯೇ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ರೈತರು ಈ ದೇಶದ ಪ್ರಮುಖ ಭಾಗವಾಗಿದ್ದು, ರೈತರಿಗೆ ಯಾವುದೇ ರೀತಿಯಲ್ಲಿ ವಿದ್ಯುತ್‌ ಕೊರತೆಯಾಗದಂತೆ, ನೀರಿನ ಸಮಸ್ಯೆ ಉಂಟಾಗದಂತೆ ರೈತರ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು, ತತ್ಕಾಲ್ ಯೋಜನೆಗಳಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಭಾರಿ ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿಯಿಂದಾಗಿ ಕುಡಿಯಲು ನೀರಿಲ್ಲದೆ ಕೃಷಿಕರು ಪರದಾಡುವಂತಾಗಿದೆ. ಹಾಗಾಗಿ ಅರ್ಹ ರೈತ ಫಲಾನುಭವಿಗಳಿಗೆ ಬೆಳೆ ಹಾನಿ ಪರಿಹಾರ ನೀಡಲು ರಾಜ್ಯ ಸರಕಾರ ಮುಂದಾಗಿದೆ.

ಇದನ್ನೂ ಕೂಡ ಓದಿ : Ration Card Update : ಹೊಸ ರೇಷನ್ ಕಾರ್ಡ್ ಗೆ ಕಾಯ್ತಿದ್ದೀರಾ.? ಯಾವಾಗ ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?

40 ಸಾವಿರ ಸೋಲಾರ್ ಪಂಪ್ ಸೆಟ್ ವಿತರಣೆ.!

ಪಿಎಂ ಕುಸುಮ್ ಯೋಜನೆಯ ಅಡಿಯಲ್ಲಿ 40 ಸಾವಿರ ಸೋಲಾರ್ ಪಂಪ್(Solar Pumpset) ವಿತರಣೆಗೆ ಸರ್ಕಾರ ಯೋಜನೆಯನ್ನು ಹಾಕಿದ್ದು, ಈ ಯೋಜನಾ ಅಡಿಯಲ್ಲಿ ರೈತರಿಗೆ 40 ಸಾವಿರ ಸೋಲಾರ್ ಪಂಪ್ ಸೆಟ್ ವಿತರಿಸುವುದಾಗಿ ತಿಳಿದು ಬಂದಿದೆ.

ರೈತರುಗಳಿಗೆ ಈ ಕೆಳಕಂಡ ಆದ್ಯತೆಗಳ ಮೇರೆಗೆ ಸೌರ ಕೃಷಿ ಪಂಪ್ ಸೆಟ್ ಗಳನ್ನು ಅಳವಡಿಸಲಾಗುವುದು

ಆದ್ಯತೆ 1 : ರೈತರು ಈಗಾಗಲೇ ಅನಧಿಕೃತ ಪಂಪ್ ಸೆಟ್ ಸಕ್ರಮಗೊಳಿಸುವಗಳನ್ನು (UNIP) ಯೋಜನೆಯಡಿಯಲ್ಲಿ ರೂ. 10,000/- ಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು ಮತ್ತು ಇವರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರದಲ್ಲಿರುವವರಿಗೆ ಮೊದಲ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve) ಅಳವಡಿಸಲಾಗುವುದು.

ಇದನ್ನೂ ಕೂಡ ಓದಿ : Crop Insurance : ನಿಮಗೆ ಬೆಳೆ ಪರಿಹಾರ ಸಿಕಿದ್ಯಾ.? ಆಧಾರ್ ಕಾರ್ಡ್, ಮೊಬೈಲ್ ನಂಬ‌ರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ

ಆದ್ಯತೆ 2 : ರೈತರು ಈಗಾಗಲೇ ಅನಧಿಕೃತ ಪಂಪ್ ಸೆಟ್ ಸಕ್ರಮಗೊಳಿಸುವ ಗಳನ್ನು (UNIP) ಯೋಜನೆಯಡಿಯಲ್ಲಿ ರೂ. 50/- ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು ಮತ್ತು ಇವರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ದೂರದಲ್ಲಿರುವವರಿಗೆ ಕೇಂದ್ರದಿಂದ 500 ಮೀಟರ್ ಗಿಂತ ಹೆಚ್ಚು ಎರಡನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve ಅಳವಡಿಸಲಾಗುವುದು.

ಆದ್ಯತೆ 3 : ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) 500 ಮೀಟರ್‌ಗಿಂತ ಹೆಚ್ಚು ದೂರವಿದ್ದು ಮತ್ತು ಶೇಕಡ 20 ರಷ್ಟು ಹಣ ಪಾವತಿಸುವವರಿಗೆ ಮೂರನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.

ಆದ್ಯತೆ 4 : ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) 500 ಮೀಟರ್‌ಗಿಂತ ಒಳಗಿದ್ದು ಮತ್ತು ಹಾಗೂ ಶೇಕಡ 20 ರಷ್ಟು ಹಣ ಪಾವತಿಸುವವರಿಗೆ ನಾಲ್ಕನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.

ವಿಶೇಷ ಸೂಚನೆ : ಕುಟುಂಬಕ್ಕೆ ಒಂದು ಸೌರ ಕೃಷಿ ಪಂಪ್ ಸೆಟ್ ಸೀಮಿತಗೊಳಿಸಲಾಗಿದೆ.

ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವುದಾದರೆ ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಈ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ :- Solar Agricultural Pump Set Scheme

ಈಗಾಗಲೇ ರೈತರು ಬಳಸುವಂತಹ ಮೋಟರ್ ಪಂಪ್ ಸೆಟ್ ಗಳು ವಿದ್ಯುತ್ ಚಾಲಕವಾಗಿದ್ದು, ಇದೀಗ ಸೋಲಾರ್ ವಿದ್ಯುತ್ತನ್ನು ಬಳಸಿ ಬಳಕೆಯನ್ನು ಮಾಡಬಹುದು ಎಂದು ಈ ಯೋಜನೆಯ ಅಡಿಯಲ್ಲಿ ತಿಳಿದು ಬಂದಿದ್ದು, ಅದಕ್ಕಾಗಿ ಈ ಕುಸುಮ ಬಿ ಯೋಜನಾ ಅಡಿಯಲ್ಲಿ 40 ಸಾವಿರ ಸೋಲಾರ್ ಪಂಪ ಸೆಟ್(Solar Pumpset) ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ..!

ಅರ್ಜಿ ಸಲ್ಲಿಸುವುದು ಹೇಗೆ..?

ಈ ವೆಬ್ ಸೈಟ್ ಮೂಲಕ ನೀವು ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು. :-
Home – Department of Agriculture(KSDA) – ಕೃಷಿ ಇಲಾಖೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply