Shakti Yojana : ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿ.! ಸಂಪೂರ್ಣ ಮಾಹಿತಿ

Shakti Yojana : ರಾಜ್ಯಾದ್ಯಂತ ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿ ತರಲಾಗಿದೆ. ಸಂಚಾರ ವ್ಯವಸ್ಥಾಪಕರು ಇತ್ತೀಚೆಗೆ ಹೊಸ ಆದೇಶವನ್ನು ಹೊರಡಿಸಿದ್ದು, ಅದರ ಪ್ರಕಾರ ಉಚಿತ ಟಿಕೆಟ್‌ ನೊಂದಿಗೆ ಬಸ್ ‌ನಲ್ಲಿ ಪ್ರಯಾಣಿಸುವ ಮಹಿಳೆಯರು ಟಿಕೆಟ್ ಕಳೆದುಕೊಂಡರೆ ದಂಡ ವಿಧಿಸಲಾಗುತ್ತದೆ.

ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್

ಟಿಕೆಟ್‌ ಗಳಲ್ಲಿ ಘಟಕ, ವಿಭಾಗ, ಮತ್ತು ವೇಳಾಪಟ್ಟಿಯ ಆಯ್ಕೆಗಳಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿದೆ. ಇವೆಲ್ಲವನ್ನೂ ನಿರ್ವಾಹಕರು ಭರ್ತಿ ಮಾಡಿ ಅವರ ಸಹಿ ನಂತರ ಮಹಿಳೆಯರಿಗೆ ಪಿಂಕ್ ಟಿಕೆಟ್ ವಿತರಿಸಬೇಕು. ಪುರುಷರ ಟಿಕೆಟ್‌ ನಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮೊತ್ತವನ್ನು ಸೂಚಿಸಲಾಗಿದೆ. ಆದರೆ ಮಹಿಳೆಯರ ಉಚಿತ ಟಿಕೆಟ್ ‌ನಲ್ಲಿ ನಮೂದಿಸಿಲ್ಲ. ಆದ್ದರಿಂದ ಕಂಡಕ್ಟರ್‌ ಗಳು ಎಲ್ಲವನ್ನೂ ಭರ್ತಿ ಮಾಡಬೇಕು.

ಇದನ್ನೂ ಕೂಡ ಓದಿ : Drought Fund 2024 : ಬೆಳೆ ಪರಿಹಾರ ಹಣ ಇನ್ನೂ ಜಮಾ ಆಗದಿರುವ ರೈತರೇ ಗಮನಿಸಿ : ತಪ್ಪದೇ ಈ ಕೆಲಸ ಮಾಡಿ

ಮಹಿಳಾ ಪ್ರಯಾಣಿಕರಿಗೆ ವಿತರಿಸಲು ನೀಡಿರುವ ಪಿಂಕ್ ಟಿಕೆಟ್ ಕಳೆದುಕೊಂಡರೆ ನಿರ್ವಾಹಕರೆ ದಂಡ ಪಾವತಿಸಬೇಕು ಎಂದು ಕೆಎಸ್ಸಾರ್ಟಿಸಿ ಆದೇಶಿಸಿದೆ. ಒಂದು ವೇಳೆ ವಿತರಿಸಲಾಗದೆ ಉಳಿದಿರುವ ಟಿಕೆಟ್‌ಗಳನ್ನು ನಿರ್ವಾಹಕರು ಕಳೆದುಕೊಂಡರೆ ಪ್ರತಿ ಟಿಕೆಟ್‌ಗೆ 10 ರು.ನಂತೆ ದಂಡದ ರೂಪದಲ್ಲಿ ವಸೂಲಿ ಮಾಡಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.ಶಕ್ತಿ ಯೋಜನೆಯಡಿ ಮಹಿಳೆಯರಿಗೆ ವಿತರಿಸುವ ಪಿಂಕ್ ಟಿಕೆಟ್‌ ಕಳೆದುಹೋದರೆ, ಬಸ್ ಕಂಡಕ್ಟರ್‌ನಿಂದ ಟಿಕೆಟ್‌ ಗೆ ಹತ್ತು ರೂಪಾಯಿ ದಂಡ ವಿಧಿಸಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

mahima bhat - kannada news time

ಕಂಟೆಂಟ್ ರೈಟರ್,
SDM ಉಜಿರೆ ಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಳೆದ 4 ವರ್ಷದಿಂದ ಕಟೆಂಟ್ ರೈಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕನ್ನಡ ಹಾಗು ಪತ್ರಿಕೋದ್ಯಮ ವಿಷಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ನಾಟಕ, ಸಾಹಿತ್ಯ, ಭರತನಾಟ್ಯ, ಯಕ್ಷಗಾನ ಇವರ ಹವ್ಯಾಸ.

Leave a Reply