Drought Fund 2024 : ಬೆಳೆ ಪರಿಹಾರ ಹಣ ಇನ್ನೂ ಜಮಾ ಆಗದಿರುವ ರೈತರೇ ಗಮನಿಸಿ : ತಪ್ಪದೇ ಈ ಕೆಲಸ ಮಾಡಿ

Drought Fund 2024 : ನಮಸ್ಕಾರ ಸ್ನೇಹಿತರೇ, ಬೆಳೆ ಹಾನಿ, ಬೆಳೆ ಪರಿಹಾರ ಹಣ ಜಮೆ ಆಗದಿರುವ ರೈತರು ತಾವು ಖಾತೆ ಹೊಂದಿರುವ ಬ್ಯಾಂಕ್ ಗೆ ಭೇಟಿ ನೀಡಿ, ಖಾತೆ ಚಾಲ್ತಿ ಇರುವ ಬಗ್ಗೆ, ಕೆವೈಸಿ ಅಪ್ಡೇಟ್ ಆಗಿರುವ ಬಗ್ಗೆ ಮತ್ತು ಪ್ರೂಟ್ಸ್ ಸಂಖ್ಯೆ(FID) ಹೊಂದಿರುವ ಬಗ್ಗೆ ಪರಿಶೀಲಿಸಿ, ಆದಷ್ಟು ಬೇಗ ಖಾತರಿ ಮಾಡಿಕೊಳ್ಳಬೇಕೆಂದು ಅರ್ಹ ಫಲಾನುಭವಿ ರೈತರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Bele Parihara – 2024 : ರೈತರ ಬೆಳೆ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿಕೊಂಡ ಬ್ಯಾಂಕ್ ಗಳಿಗೆ ಮರುಪಾವತಿಸಲು ಸೂಚಿಸಿದ ಸರ್ಕಾರ

ಬರಪೀಡಿತ ಪ್ರದೇಶದ ರೈತರ ಅಂದರೆ ಬೆಳೆ ಪರಿಹಾರ ಹಣ ಪಡೆಯಲು ಅರ್ಹರಿರುವ ರೈತರ ಬ್ಯಾಂಕ್ ಅಕೌಂಟ್‍ಗಳನ್ನು ನಿರ್ಬಂಧಿಸಿರುವುದು ಅಥವಾ ಫ್ರೀಜ್ ಮಾಡಿರುವುದು ಹಾಗೂ ಯಾವ ರೈತರ ಖಾತೆಯನ್ನು ಮುಚ್ಚಲಾಗಿದೆಯೋ ಅಂತಹ ಫಲಾನುಭವಿಗಳು ತಕ್ಷಣ ಬ್ಯಾಂಕ್‍ಗೆ ಭೇಟಿ ನೀಡಿ ತಮ್ಮ ಬ್ಯಾಂಕ್ ಖಾತೆಯನ್ನು ರಿ-ಓಪನ್ ಮಾಡಿಸಿಕೊಳ್ಳಬೇಕು.

ಫ್ರೂಟ್ಸ್ (FID) ಅಪ್‍ಡೇಟ್‍ನಲ್ಲಿ ಆಧಾರ್ ಹೆಸರು ಹೊಂದಿಕೆಯಾಗದ ರೈತರು ಫ್ರೂಟ್ಸ್(FID) ತಂತ್ರಾಂಶದಲ್ಲಿ ಹೆಸರು ಅಪ್ಡೇಟ ಮಾಡಿಸಬೇಕು. ಆಧಾರ್ ಅನ್ನು ಬ್ಯಾಂಕ್‍ನೊಂದಿಗೆ ಸೀಡ್, ಖಾತೆಗೆ ಆಧಾರ್ ಮ್ಯಾಪ್, ಕುಸಿದ ಪಾವತಿ ಹಾಗೂ ಎನ್ ಪಿಸಿಐ(NPCI) ಸೀಡಿಂಗ್ ಸಮಸ್ಯೆ ಇರುವಂತ ಫಲಾನುಭವಿಗಳು ಬ್ಯಾಂಕ್‍ಗೆ ಹೋಗಿ ಎನ್ ಪಿಸಿಐ(NPCI) ಮಾಡಿಸಬೇಕು.

ಇದನ್ನೂ ಕೂಡ ಓದಿ : Ration Card Update : ನಿಮಗಿನ್ನೂ ರೇಷನ್ card ಸಿಕ್ಕಿಲ್ವಾ.? ನೀವು ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ.?

ಅಮಾನ್ಯ ಸ್ವೀಕೃತ ಐ.ಎಫ್.ಎಸ್.ಸಿ(IFSC) ಕೋಡ್ ಹೊಂದಿರುವ ಫಲಾನುಭವಿಗಳು ಬ್ಯಾಂಕ್‍ಗೆ ಹೋಗಿ ಐ.ಎಫ್.ಎಸ್.ಸಿ(IFSC) ಕೋಡ್ ಅಪ್ಡೇಟ್ ಮಾಡಿಸಿ ಎನ್ ಪಿಸಿಐ(NPCI) ಮಾಡಿಸಿಕೊಳ್ಳಬೇಕು. ಹೆಚ್ಚಿನ ವಿವರ, ಮಾಹಿತಿ ಅಗತ್ಯವಿದ್ದಲ್ಲಿ ರೈತರು ಆಯಾ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ತೆರೆದಿರುವ ಬರಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಅಥವಾ ಅಲ್ಲಿನ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply