ದಿನೇ ದಿನೇ ರಾಜಧಾನಿ ಬೆಂಗಳೂರಲ್ಲಿ ಉತ್ತರ ಭಾರತದ ಹಿಂದಿವಾಲಗಳು ಸೇರಿದಂತೆ ಹೊರ ರಾಜ್ಯದವರ ಮಾನಗೆಟ್ಟ ವರ್ತನೆ ಮತ್ತು ದಬ್ಬಾಳಿಕೆ ಹೆಚ್ಚಾಗುತ್ತಲೇ ಇದೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದ್ದು ಕನ್ನಡಿಗರನ್ನು ಕೆರಳುವಂತೆ ಮಾಡುವಂತೆ ಮಾಡಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಗಾಡಿಗೆ ಗಾಡಿ ಟಚ್ ಆಗೋದು, ಸಣ್ಣ ಪುಟ್ಟ ಅಪಘಾತಗಳೊಗೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದ್ರೆ ಕೆಲವೊಮ್ಮೆ ಈ ರೀತಿಯ ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ. ಹೀಗೆ ಸ್ಕೂಟಿ ಒಂದಕ್ಕೆ ಆಟೋ ಟಚ್ ಆಗಿದ್ದಕ್ಕೆ ಹೊರ ರಾಜ್ಯದ ಮಹಿಳೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಥಳಿಸಿ ಅಸಭ್ಯವಾಗಿ, ಅನಾಗರೀಕಳಂತೆ ವರ್ತಿಸಿದ್ದಾಳೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಮಹಿಳೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ಈ ಘಟನೆ ನಡೆದಿದೆ. ಟ್ರಾಫಿಕ್ ನಲ್ಲಿ ಸ್ಕೂಟಿಗೆ ಹಿಂಬದಿಯಿಂದ ಆಟೋ ಟಚ್ ಆಗುತ್ತಿದ್ದಂತೆ ಚಾಲಕ ಮತ್ತು ಯುವತಿಯ ನಡುವೆ ಗಲಾಟೆ ಶುರುವಾಗಿದೆ.
ಈ ವೇಳೆ ಇಬ್ಬರ ನಡುವೆ ಜಗಳ ಅತಿರೇಕಕ್ಕೆ ತಿರುಗಿದ್ದು ಮಾತಿಗೆ ಮಾತು ಬೆಳೆದು ಈ ವೇಳೆ ಆಟೋ ಚಾಲಕನಿಗೆ ಯುವತಿ ಚಪ್ಪಲಿಯಿಂದ ಹೊಡೆದಿದ್ದಾಳೆ.ಈ ವೇಳೆ ವಿಡಿಯೋ ಮಾಡಿಕೊಂಡಿರುವ ಆಟೋ ಚಾಲಕ ಪೊಲೀಸ್ ಸ್ಟೇಷನ್ ಗೆ ತೆರಳಿ ದೂರು ನೀಡಿದ್ದಾರೆ.

ಕನ್ನಡಿಗರ ಮೇಲೆ ನಿಲ್ಲದ ಪರ ರಾಜ್ಯದವರ ದಬ್ಬಾಳಿಕೆ, ಆಟೋ ಡ್ರೈವರ್ ಗೆ ಚಪ್ಪಲಿಯಿಂದ ಥಳಿಸಿದ ಯುವತಿ!
WhatsApp Group
Join Now