ಈ ಉದ್ಯಮ ಮಾಡಿದರೆ ಕೇಂದ್ರ ಸರ್ಕಾರದಿಂದ ದೊರೆಯಲಿದೆ ಭರ್ಜರಿ ಹಣ.! ಹೇಗೆ ಏನು ಈಗಲೇ ತಿಳಿದುಕೊಳ್ಳಿ – PMFME

PMFME ಪೂರ್ಣ ಹೆಸರು ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಯೋಜನೆ. ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, 5 ವರ್ಷಗಳವರೆಗೆ ₹10,000 ಕೋಟಿಗಳ ವೆಚ್ಚವನ್ನು ಹೊಂದಿದೆ. ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಹಂಚಿಕೊಳ್ಳುತ್ತವೆ.

ಇದನ್ನೂ ಕೂಡ ಓದಿ : PM Kisan Maandhan : ಪಿಎಂ ಕಿಸಾನ್ ರೈತರ ಖಾತೆಗೆ ಪ್ರತೀ ವರ್ಷ ₹36,000/- ಜಮೆ – ಪಡೆಯುವುದು ಹೇಗೆ.? ಡೈರೆಕ್ಟ್ ಲಿಂಕ್

ಸೂಕ್ಷ್ಮ, ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ರೈತ ಉತ್ಪಾದಕ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪಿಎಂಎಫ್‌ಎಂಇ(PMFME) ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಆಸಕ್ತರು ಅರ್ಜಿ ಸಲ್ಲಿಸಬೇಕು. 18 ವರ್ಷ ಮೇಲ್ಪಟ್ಟ ಆಸಕ್ತ ಫಲಾನುಭವಿಗಳು ಪಿಎಂಎಫ್‌ಎಂಇ(PMFME) ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಯೋಜನೆಯಡಿ ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆಯ ಮಿತಿ ಇರುವುದಿಲ್ಲ.

ಇದನ್ನೂ ಕೂಡ ಓದಿ : Laptop Scheme : ಹೀಗೆ ಮಾಡಿದರೆ ಸಿಗಲಿದೆ ಕರ್ನಾಟಕ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್.! ಡೈರೆಕ್ಟ್ ಲಿಂಕ್

ಉಮ್ಯಮವು ಅಸಂಘಟಿತವಾಗಿರಬೇಕು ಹಾಗೂ 10ಕ್ಕಿಂತ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರಬೇಕು. ಉದ್ಯಮವು ಜಿಲ್ಲೆಯ ಒಡಿಪಿಯಲ್ಲಿ ಗುರುತಿಸಿಲಾಗಿರುವ ಉತ್ಪನ್ನದ ತಯಾರಿಕೆಯಲ್ಲಿ ತೊಡಗಿಸಿಕೊಂಡಿರಬೇಕು. ಅರ್ಜಿದಾರರು ಉದ್ಯಮದ ಮಾಲೀಕತ್ವವನ್ನು ಹೊಂದಿರಬೇಕು. ಉದ್ಯಮವು ಮಾಲೀಕತ್ವ ಪಾಲುದಾರಿಕೆ ಸಂಸ್ಥೆಯಾಗಿರಬೇಕು. ಹಣಕಾಸಿನ ನೆರವನ್ನು ಪಡೆಯಲು ಒಂದು ಕುಟುಂಬದಿಂದ ಕೇವಲ ಓರ್ವ ವ್ಯಕ್ತಿ ಅರ್ಹತೆಯನ್ನು ಹೊಂದಿರುತ್ತಾರೆ.

ಆಸಕ್ತ ಫಲಾನುಭವಿಗಳು PRADHAN MANTRI FORMALISATION OF MICRO FOOD PROCESSING ENTERPRISES SCHEME ಪೋರ್ಟಲ್ ಮೂಲಕ ಅರ್ಜಿ ನೋಂದಾಯಿಸಬಹುದು. 

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

mahima bhat - kannada news time

ಕಂಟೆಂಟ್ ರೈಟರ್,
SDM ಉಜಿರೆ ಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಳೆದ 4 ವರ್ಷದಿಂದ ಕಟೆಂಟ್ ರೈಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕನ್ನಡ ಹಾಗು ಪತ್ರಿಕೋದ್ಯಮ ವಿಷಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ನಾಟಕ, ಸಾಹಿತ್ಯ, ಭರತನಾಟ್ಯ, ಯಕ್ಷಗಾನ ಇವರ ಹವ್ಯಾಸ.

Leave a Reply