PM Kisan Samman Nidhi : ಪಿಎಂ ಕಿಸಾನ್ ಯೋಜನೆಯ ಹಣದ ಮೊತ್ತ ಹೆಚ್ಚಳದ ಸಾಧ್ಯತೆ! ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

PM Kisan Samman Nidhi : ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಸುಮಾರು 9 ಕೋಟಿಗೂ ಅಧಿಕ ಅರ್ಹ ಫಲಾನುಭವಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ನೊಂದಾಯಿಸಿಕೊಂಡ ಎಲ್ಲ ಅರ್ಹ ಫಲಾನುಭವಿ ರೈತರು ಪ್ರತಿ ವರ್ಷ ₹6,000/- ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಈ ಬಾರಿಯ ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಅನುಕೂಲವಾಗುವ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ₹6,000/- ದಿಂದ ₹8,000/- ರೂಪಾಯಿಗಳವರೆಗೆ ಹೆಚ್ಚಿಸುವ ಸಾಧ್ಯತೆಯಿದೆ. 2019 ರಲ್ಲಿ ಆರಂಭಗೊಂಡ ಈ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೊಂದಾಯಿಸಿಕೊಂಡ ರೈತರಿಗೆ ₹2,000/- ರೂಪಾಯಿಗಳಂತೆ 17 ಕಂತುಗಳನ್ನು ಈಗಾಗಲೇ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್

ಈ ಬಾರಿ ನಡೆಯುವ ಕೇಂದ್ರ ಬಜೆಟ್ ನಲ್ಲಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಹಣವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಯೋಜನೆಯ ಅಡಿ ವರ್ಷಕ್ಕೆ ₹6,000/- ರೂಪಾಯಿಗಳನ್ನು ನೀಡಲಾಗುತ್ತಿದ್ದು, ಅದನ್ನು ₹8,000/- ರೂಪಾಯಿಗೆ ಹೆಚ್ಚಿಸುವ ಸಾಧ್ಯತೆಯಿದೆಯಂತೆ. ಈಗ ಪ್ರತಿ 4 ತಿಂಗಳಿಗೊಮ್ಮೆ ಅಂದರೆ ವರ್ಷದಲ್ಲಿ ಮೂರು ಬಾರಿ ತಲಾ ₹2,000/- ರೂಪಾಯಿ ಕಂತುಗಳನ್ನು ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಈಗ ವರ್ಷಕ್ಕೆ ನಾಲ್ಕು ಕಂತುಗಳಲ್ಲಿ ₹8,000/- ರೂಪಾಯಿಗಳನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ದೇಶದ ಕೃಷಿ ಕ್ಷೇತ್ರದ ತಜ್ಞರು ಮತ್ತು ಪ್ರತಿನಿಧಿಗಳು, ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರ ಬಳಿ ಈ ವಿಚಾರವನ್ನು ಚರ್ಚಿಸಿ ಮನವಿ ಕೂಡ ಮಾಡಿದ್ದಾರೆ. ಕೇಂದ್ರದ ಸಚಿವಾಲಯವು ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಹಣವನ್ನು ಹೆಚ್ಚಿಸುವ ಶಿಫಾರಸ್ಸು ಮಾಡಿರುವುದು ಕೂಡ ತಿಳಿದು ಬಂದಿದೆ. ಕೇಂದ್ರ ಕೃಷಿ ಸಚಿವರಾದ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ, ಕೇವಲ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುದಾನದ ಹಣ ಹೆಚ್ಚಿಸುವುದು ಅಷ್ಟೇ ಅಲ್ಲ, ಬಜೆಟ್ನಲ್ಲಿ ಕೃಷಿ ಸಂಶೋಧನೆಗೂ ಇರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಕೃಷಿ ಕ್ಷೇತ್ರದವರು ಒತ್ತಾಯಿಸಿದ್ದಾರೆ.

ಇದನ್ನೂ ಕೂಡ ಓದಿ : Gold Rate : ಇಂದು ಭಾರಿ ಇಳಿಕೆಯಾಯ್ತಾ ಚಿನ್ನದ ಬೆಲೆ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ರೇಟ್.?

ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ.?

ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯು, 2019ರ ಫೆಬ್ರವರಿಯಲ್ಲಿ ಆರಂಭವಾದ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಜಮೀನು ಹೊಂದಿರುವ ರೈತರಿಗೆ ಆರ್ಥಿಕವಾಗಿ ಧನಸಹಾಯ ಮಾಡುವುದಾಗಿದೆ. ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ ₹2,000/- ರೂಪಾಯಿಗಳಂತೆ, ಒಟ್ಟು ₹6,000/- ರೂಪಾಯಿಗಳನ್ನು ಕೇಂದ್ರ ಸರ್ಕಾರ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದೆ.ಇದುವರೆಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ 17ಕಂತುಗಳ ಹಣ ಬಿಡುಗಡೆಯಾಗಿದೆ. ಸುಮಾರು 9 ಕೋಟಿಗೂ ಅಧಿಕ ಅರ್ಹ ಫಲಾನುಭವಿ ರೈತರು ಇದರ ಪ್ರಯೋಜನವನ್ನ ಪಡೆದುಕೊಂಡಿದ್ದಾರೆ.

ಇದನ್ನೂ ಕೂಡ ಓದಿ : Housing Scheme : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.! ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಬಿಡುಗಡೆ.!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು.?

ನೀವು ಇದುವರೆಗೂ ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಪ್ರಯೋಜನವನ್ನ ಪಡೆಯದಿದ್ದರೆ, ನೀವು ಕೃಷಿ ಜಮೀನನ್ನು ಹೊಂದಿದ್ದರೆ, ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಈಗಲೂ ಅರ್ಜಿ ಸಲ್ಲಿಸುವ ಅವಕಾಶವಿದೆ. PM Kisan ಯೋಜನೆಯ ಅಧಿಕೃತ ವೆಬ್ಸೈಟ್ ಅಥವಾ ನಿಮ್ಮ ಗ್ರಾಮ ಸಮೀಪದ ರೈತ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು, ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಅಧಿಕೃತ ವೆಬ್ ಸೈಟ್ ಲಿಂಕ್ ಕೆಳಗೆ ನೀಡಲಾಗಿದ್ದು, ವೆಬ್ ಸೈಟ್ ಗೆ ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧೀಕೃತ ವೆಬ್ ಸೈಟ್ ಲಿಂಕ್ :- PM KISAN SAMMAN NIDHI (ಪಿಎಂ ಕಿಸಾನ್ ಸಮ್ಮಾನ್ ನಿಧಿ)

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply