PM Kisan Samman Nidhi : ಪಿಎಂ ಕಿಸಾನ್ 17ನೇ ಕಂತಿನ ಹಣ ಬರಲಿದೆ.! ಈ ಲಿಂಕ್ ಮೂಲಕ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ನೋಡಿ

PM Kisan Samman Nidhi : ನಮಸ್ಕಾರ ಸ್ನೇಹಿತರೇ, ದೇಶದ ಬೆನ್ನೆಲುಬಾದ ರೈತರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರಾಜ್ಯದ ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಅಂತೆಯೇ, ಕೇಂದ್ರ ಸರ್ಕಾರವು ಸಹ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan Samman Nidhi) ಯೋಜನೆಯನ್ನು ಸಹ ಪ್ರಾರಂಭಿಸಿತ್ತು. ಅದರ ಮೂಲಕ ಸರ್ಕಾರವು ರೈತರಿಗೆ ಆರ್ಥಿಕ ಉತ್ತೇಜನವನ್ನು ನೀಡುತ್ತಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಅಡಿಯಲ್ಲಿ ಪ್ರತಿ ವರ್ಷ ತಲಾ ₹2,000/- ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯ ಮೂಲಕ ಈಗಾಗಲೇ 16 ಕಂತುಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು, 17ನೇ ಕಂತು ಅತಿ ಶೀಘ್ರದಲ್ಲಿ ಜಮಾ ಆಗುವ ಸಾಧ್ಯತೆ ಇದೆ. ಹಾಗಾದರೆ ಈ ಹಣ ಯಾವಾಗ ಖಾತೆಗೆ ಜಮೆಯಾಗುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Ration Card : ಹೊಸ ಪಡಿತರ ಚೀಟಿ ಮತ್ತೊಮ್ಮೆ ಅವಕಾಶ..! ಈ ದಿನಾಂಕ ಅರ್ಜಿ ಪ್ರಕ್ರಿಯೆ ಪ್ರಾರಂಭ – ಬೇಕಾಗುವ ದಾಖಲೆಗಳೇನು.?

ರೈತರ ಖಾತೆಗೆ ಹಣ ಯಾವಾಗ ಜಮೆ ಆಗುತ್ತೆ.?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan Samman Nidhi) ಯೋಜನೆಯ ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ನೀರ ವರ್ಗಾವಣೆ ಮಾಡಲಾಗುತ್ತದೆ. ಮೊದಲ ಕಂತನ್ನು ಏಪ್ರಿಲ್ ನಿಂದ ಜುಲೈ ತಿಂಗಳಲ್ಲಿ ಠೇವಣಿ ಇಡಲಾಗುತ್ತದೆ, ಎರಡನೇ ಕಂತನ್ನು ಆಗಸ್ಟ್‌ನಿಂದ ನವೆಂಬರ್‌ನಲ್ಲಿ ಮತ್ತು ಮೂರನೇ ಕಂತನ್ನು ಡಿಸೆಂಬರ್ ನಿಂದ ಮಾರ್ಚ್ ತಿಂಗಳಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು. ಹಾಗಾಗಿ ಹದಿನೇಳನೇ ಕಂತು ಕೂಡ ಶೀಘ್ರದಲ್ಲೇ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಬಿಡುಗಡೆಯಾಗಬಹುದು.

ಮೊತ್ತ ಹೆಚ್ಚಳ ಸುದ್ಧಿ ನಿಜಾನಾ.?

ಅದೇ ರೀತಿ ಪಿಎಂ ಕಿಸಾನ್ ಸಮ್ಮಾನ್ ನಿಧಿ(PM Kisan Samman Nidhi) ಯೋಜನೆಯ ಕಂತಿನ ಹಣವನ್ನು ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಹೌದು, ಪಿಎಂ ಕಿಸಾನ್ ಹಣ 6 ಸಾವಿರದಿಂದ 8 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ ಎಂಬ ಸುದ್ದಿಯೂ ಎಲ್ಲೆಡೆ ವೈರಲ್ ಆಗಿದೆ. ಇನ್ನೇನು ಲೋಕಸಭೆ ಚುನಾವಣೆ ಫಲಿತಾಂಶ ಬರಲಿದ್ದು, ಆ ಬಳಿಕ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

ಇದನ್ನೂ ಕೂಡ ಓದಿ : Scholarships for Students : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಈ ವಿದ್ಯಾರ್ಥಿಗಳಿಗೆ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ – ಡೈರೆಕ್ಟ್ ಲಿಂಕ್ ಇಲ್ಲಿದೆ

ಫಲಾನುಭವಿ ರೈತರಿಗೆ ಈ ಕೆಲಸ ಕಡ್ಡಾಯ.!

ಪಿಎಂ ಕಿಸಾನ್ ಸಮ್ಮಾನ್ ನಿಧಿ(PM Kisan Samman Nidhi) ಯೋಜನೆಯ 17ನೇ ಕಂತನ್ನು ಅರ್ಹ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮುಂದಿನ ಕಂತನ್ನು ಪಡೆಯಲು ಬಯಸಿದರೆ, ನೀವು ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಈ ಮೊತ್ತವನ್ನು ಪಾವತಿಸದಿದ್ದರೆ ನೀವು PM-KISAN ಸಹಾಯವಾಣಿಗೆ ಕರೆ ಮಾಡಿ ದೂರು ನೀಡಲು ಈ ಸಂಖ್ಯೆ 011-24300606 ಬಳಸಿ.

ಈ ರೀತಿ ಚೆಕ್ ಮಾಡಿಕೊಳ್ಳಿ :-

ಪಿಎಂ ಕಿಸಾನ್ ಸಮ್ಮಾನ್ ನಿಧಿ(PM Kisan Samman Nidhi) ಯೋಜನೆಯ ಫಲಾನುಭವಿಯ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ನೋಡಲು ಈ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡಿ :- PM KISAN SAMMAN NIDHI

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply