ಗಂಡನ ಮನೆಗೆ ಪತ್ನಿ- ಮಕ್ಕಳನ್ನ ಕಳುಹಿಸಿಕೊಡಿ ಎಂದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ (Crime news) ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ತಮಿಳುನಾಡಿನ ಕೃಷ್ಣಗಿರಿ (Krishnagiri) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನವೀನ್ ಕೊನೆಯುಸಿರೆಳೆದಿದ್ದಾನೆ.
ಸಾಯುವ ಮುನ್ನ ಕೃಷ್ಣಗಿರಿಯ ಮಾಜಿಸ್ಟ್ರೇಟ್ ಮುಂದೆ ಡೆತ್ ಡಿಕ್ಲರೇಷನ್ (Death declaration) ಹೇಳಿಕೆ ನೀಡಿದ ನವೀನ್ ತನ್ನ ಮೇಲೆ ಪೆಟ್ರೋಲ್ ಸುರಿದು ಹಲ್ಲೆ ಮಾಡಿ ಬೆಂಕಿ ಹಚ್ಚಿದ ಮಾವ ಸಂಪಂಗಿ ಬಾಮೈದ ಮುನೇಶ್ ಅತ್ತೆ ಪಚ್ಚಮ್ಮ ಹಾಗು ಹೆಂಡತಿ ಸುಚಿತ್ರಾ ಮೇಲೆ ಹೇಳಿಕೆ ದಾಖಲಿಸಿ ಅಸುನೀಗಿದ್ದಾನೆ.
ಅದರಂತೆ ಈ ಮೊದಲೇ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದ ಆನೇಕಲ್ ಪೊಲೀಸರು ಕೃಷ್ಣಗಿರಿ ನ್ಯಾಯಾಲಯದಿಂದ ಬಂದ ಡೆತ್ ಡಿಕ್ಲರೇಷನ್ ನೋಟ್ ಆಧರಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ನವೀನ್ ಸ್ವಭಾವತಃ ಕುಡುಕನಾಗಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದ, ಮನೆಗೆ ಸರಿಯಾಗಿ ಏನು ತಂದು ಹಾಕದೆ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಇದು ಆಗಾಗ ಮುಂದುವರೆದು ಗ್ರಾಮಸ್ಥರ ನೇತೃತ್ವದಲ್ಲಿ ನ್ಯಾಯಪಂಚಾಯತಿಯಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು.
ಆಗಾಗ ರಾಜಿ ಪಂಚಾಯಿತಿಯಾಗಿ ಬಾಡಿಗೆ ಮನೆ ಮಾಡಿದರೆ ಕಳುಹಿಸುವ ನಿರ್ಧಾರ ಹೆಂಡತಿ ಮನೆಯವರು ಬೇಡಿಕೆ ಇಟ್ಟಿದ್ದರು. ಇದು ನೆರವೇರದ ಕಾರಣ ಯುಗಾದಿ ಹಬ್ಬದ ನೆಪದಲ್ಲಿ ಹೆಂಡತಿ ಮಕ್ಕಳೊಂದಿಗೆ ಜನತಾಕಾಲನಿಯ ತವರು ಮನೆಯತ್ತ ಪತ್ನಿ ಹೆಜ್ಜೆ ಹಾಕಿದ್ದಳು.
ಕಳೆದ ಏಪ್ರಿಲ್ 14ರಂದು ಚೂಡೇನಹಳ್ಳಿಯ ಎಳೆನೀರು ಇಳಿಸುವ ನವೀನ್ ಆನೇಕಲ್ ಕಾವಲಹೊಸಹಳ್ಳಿಯ ಜನತಾ ಕಾಲೋನಿಯ ಅತ್ತೆ ಮನೆ ಬಳಿ ಬಂದು ತನ್ನ ಹೆಂಡತಿ – ಮಕ್ಕಳನ್ನು ತನ್ನ ಚೂಡೇನಹಳ್ಳಿ ಮನೆಗೆ ಕಳಿಹಿಸಿಕೊಡುವಂತೆ ಬೇಡಿದ್ದಾನೆ. ಇಷ್ಟೇ ಮಾವ ಬಾಮೈದ ಅತ್ತೆ ಹೆಂಡತಿಯೂ ಸೇರಿ ಹೊಡೆದು ನಿಂದಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರೆಂದು ತನ್ನ ಸಾವಿನ ಮುಂಚಿನ ಹೇಳಿಕೆಯಲ್ಲಿ ನಮೂದಿಸಿದ್ದಾನೆ. ಅದರಂತೆ ಕೊಲೆ ಪ್ರಕರಣ ದಾಖಲಿಸಿರುವ ಆನೇಕಲ್ ಪೊಲೀಸರು ಮಾವ ಸಂಪಂಗಿ ಬಾಮೈದ ಮುನೀಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪ್ರತ್ಯೇಕ ಘಟನೆ : ಹಣಕ್ಕಾಗಿ ಒಂಟಿ ಮಹಿಳೆ ಹತ್ಯೆ – ಐವರು ಪಾತಕಿಗಳು ಅರೆಸ್ಟ್
ಬೆಂಗಳೂರು : ಬೆಂಗಳೂರಲ್ಲಿ (Bengaluru ) ಹಣದ (Money ) ಆಸೆಗಾಗಿ ಒಂಟಿ ಮಹಿಳೆಯನ್ನು ಹತ್ಯೆ(Crime ) ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಐವರು ಕಿರಾತಕರನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸೆರೆ ಸಿಕ್ಕವರಲ್ಲಿ ಕುಖ್ಯಾತ ರೌಡಿ ಶೀಟರ್ಗಳು ಸೇರಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಕೊಲೆಗೆ ಕಾರಣವಾದ ಆ 30 ಲಕ್ಷ ರೂಪಾಯಿ!
ಮಹಾಲಕ್ಷ್ಮಿ ಲೇಔಟ್ ನಿವಾಸಿ ವಿಜಯಲಕ್ಷ್ಮಿ (55) ಎಂಬುವವರ ಬಳಿ 30 ಲಕ್ಷ ರೂಪಾಯಿ ನಗದು ಇರುವ ಬಗ್ಗೆ ಅವರ ಪರಿಚಯಸ್ಥ ಚೇತನ್ ಎಂಬಾತನಿಗೆ ಮಾಹಿತಿ ಇತ್ತು. ಈ ಹಣವನ್ನು ಲೂಟಿ ಮಾಡಲು ಚೇತನ್, ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಮಂಜನಿಗೆ ಸುಪಾರಿ ನೀಡಿದ್ದ. ಮಂಜ ತನ್ನ ಗ್ಯಾಂಗ್ನೊಂದಿಗೆ ಸೇರಿ ಈ ಭೀಕರ ಹತ್ಯೆಗೆ ಸಂಚು ರೂಪಿಸಿದ್ದನು.
ಅಪಘಾತದ ನಾಟಕವಾಡಿದ್ದು ಹೇಗೆ..?
ನೇರವಾಗಿ ಮನೆಯೊಳಗೆ ನುಗ್ಗುವುದು ಅಪಾಯಕಾರಿ ಎಂದು ಭಾವಿಸಿದ ಆರೋಪಿಗಳು, ಏಪ್ರಿಲ್ 20 ರಂದು ಕುರುಬರಹಳ್ಳಿ ಪೈಪ್ಲೈನ್ ರಸ್ತೆಯಲ್ಲಿ ವಿಜಯಲಕ್ಷ್ಮಿ ಅವರು ನಡೆದುಕೊಂಡು ಹೋಗುತ್ತಿದ್ದಾಗ ಸ್ಪೋರ್ಟ್ಸ್ ಬೈಕ್ನಿಂದ ಡಿಕ್ಕಿ ಹೊಡೆಸಿದ್ದರು. ಬಳಿಕ ಅಪರಿಚಿತರಂತೆ ನಾಟಕವಾಡಿ ಅವರನ್ನೇ ಆಸ್ಪತ್ರೆಗೆ ದಾಖಲಿಸಿದ್ದರು. ಏಪ್ರಿಲ್ 27 ರಂದು ಚಿಕಿತ್ಸೆ ಫಲಕಾರಿಯಾಗದೆ ವಿಜಯಲಕ್ಷ್ಮಿ ಮೃತಪಟ್ಟಿದ್ದರು.
ಪೊಲೀಸರಿಗೆ ಸುಳಿವು ಸಿಕ್ಕಿದ್ದು ಎಲ್ಲಿ?
ಆರಂಭದಲ್ಲಿ ಇದೊಂದು ಹಿಟ್ ಅಂಡ್ ರನ್ ಪ್ರಕರಣ ಎನ್ನಲಾಗಿತ್ತು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ ಸಂಚಾರಿ ಪೊಲೀಸರಿಗೆ ಅನುಮಾನ ಮೂಡಿತ್ತು. ಬೈಕ್ ಸವಾರ ರಾಕೇಶ್ ಯಾವುದೇ ಬ್ರೇಕ್ ಹಾಕದೆ ನೇರವಾಗಿ ಮಹಿಳೆಗೆ ಡಿಕ್ಕಿ ಹೊಡೆದಿರುವುದು ಕಂಡುಬಂದಿತ್ತು. ತನಿಖೆ ತೀವ್ರಗೊಳಿಸಿದಾಗ ರಾಕೇಶ್, ಮಂಜುನಾಥ್, ಚೇತನ್, ಯೋಹಾನ್ ಮತ್ತು ‘ಚಿಪ್ಸ್’ ಪ್ರದೀಪ್ ಎಂಬ ಐವರು ಆರೋಪಿಗಳ ಅಸಲಿ ಬಣ್ಣ ಬಯಲಾಗಿದೆ.
ಹೆಂಡತಿಯನ್ನು ಮನೆಗೆ ಕಳಿಸಿ ಅಂದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ – ಚಿಕಿತ್ಸೆ ಫಲಿಸದೆ ಸಾವು!
WhatsApp Group
Join Now