Pan Card : ಪಾನ್ ಕಾರ್ಡ್ ಎಂಬುವುದು ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಹತ್ತು ಅಂಕೆಗಳುಳ್ಳ ಶಾಶ್ವತ ಗುರುತಿನ ಪುರಾವೆಯಾಗಿದೆ. ಇದು ಮಾರಾಟ, ಖರೀದಿ, ಹಣಕಾಸಿನ ವಹಿವಾಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿದೇಶಕ್ಕೆ ಹೋಗುವವರಿಗಂತೂ ಪಾನ್ ಕಾರ್ಡ್ ಅಗತ್ಯ ದಾಖಲೆಗಳಲ್ಲೊಂದಾಗಿದೆ. ಹಾಗಾದರೆ ಒಂದು ವೇಳೆ ಪಾನ್ ಕಾರ್ಡ್ ಕಳೆದು ಹೋದಲ್ಲಿ ಏನು ಮಾಡಬೇಕು? ಬದಲಿ ಪಾನ್ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಕೂಡ ಓದಿ : PMFBY Scheme : ಈ ಯೋಜನೆ ಅಡಿಯಲ್ಲಿ 88,000 ಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ.!
ನಕಲಿ ಪಾನ್ ಕಾರ್ಡ್ ಪಡೆಯಿರಿ
ಪಾನ್ ಕಾರ್ಡ್ ಕಳೆದು ಹೋದರೆ ಅಥವಾ ಕಳ್ಳತನವಾದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ದೂರಿನ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು. ಇದರಿಂದಾಗಿ ಈ ಸಂದರ್ಭದಲ್ಲಿ ನಿಮ್ಮ ಪಾನ್ ಕಾರ್ಡ್ ದುರ್ಬಳಕೆ ಆಗುವುದನ್ನು ತಡೆಯಬಹುದಾಗಿದೆ. ಯಾರಾದರೂ ದುರುಪಯೋಗ ಪಡಿಸಿದರೂ ಕಾನೂನಿನ ಚೌಕಟ್ಟಿನಿಂದ ಇದು ನಿಮ್ಮನ್ನು ರಕ್ಷಿಸುತ್ತದೆ.
ಪಾನ್ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲದ ಕಾರಣ ಹತ್ತಿರದ ಪಾನ್ ಕಾರ್ಡ್ ಮಾಡಿಕೊಡುವ ಕೇಂದ್ರಗಳಲ್ಲಿ 49A ಫಾರ್ಮ್ ಅನ್ನು ಭರ್ತಿ ಮಾಡಿ ನೀಡಿರಿ. ಫಾರ್ಮ್ನ ಮೇಲ್ಬಾಗದಲ್ಲಿ ಬಲಬದಿಗೆ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಫೋಟೋಗೆ ಸಹಿ ಮಾಡಬೇಕು. ಅರ್ಜಿಯೊಂದಿಗೆ ಪೊಲೀಸ್ ಠಾಣೆಯಿಂದ ಪಡೆದ ದೂರಿನ ಪ್ರತಿ, ವಿಳಾಸ ಮತ್ತು ಗುರುತಿನ ಪುರಾವೆ, ಡಿ.ಡಿ. ಅಥವಾ ಚೆಕ್ ಅನ್ನು PAN/NSDL ಕಚೇರಿಗೆ ಸಲ್ಲಿಸಬೇಕು. ಅಥವಾ ಅರ್ಜಿ ಮತ್ತು ದಾಖಲಾತಿಗಳನ್ನು ಅಂಚೆ ಮೂಲಕ ಪುಣೆಯಲ್ಲಿರುವ ಪಾನ್ ಕಾರ್ಡ್ ತಯಾರಿಸಿ ಕೊಡುವ ಕಚೇರಿಗೂ ಕಳುಹಿಸಬಹುದು. ಅವರು ಪರಿಶೀಲಿಸಿ ಹೊಸ ಪಾನ್ಕಾರ್ಡ್ ಅನ್ನು ನಮ್ಮ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ.
ಇದನ್ನೂ ಕೂಡ ಓದಿ : Housing Scheme : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.! ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಬಿಡುಗಡೆ.!
ಪಾನ್ ಕಾರ್ಡ್ ಕಳೆದು ಹೋದಾಗ ಸುಮ್ಮನಿರುವಂತಿಲ್ಲ. ಮೊದಲು ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ದೂರು ನೀಡಿದ ನಂತರ ಹೊಸ ಪಾನ್ಕಾರ್ಡ್ ಪಡೆಯುವುದನ್ನು ಮರೆಯದಿರಿ. ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ಅನ್ನು ಇತರ ಯಾರಾದರೂ ಉಪಯೋಗಿಸುತ್ತಿರುವುದು ಗಮನಕ್ಕೆ ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿರಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Arecanut Price : ಇಂದಿನ ಅಡಿಕೆ ಧಾರಣೆ – 28 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?
- ಗಾಳಿಪಟದ ಮಾಂಜಾ ದಾರಕ್ಕೆ ಮತ್ತೊಂದು ಬಲಿ : ಕುತ್ತಿಗೆ ಕಟ್ ಆಗಿ `LKG’ ಬಾಲಕಿ ಸಾವು.!
- Horoscope Today : 28 ಜನವರಿ 2026 ಬುಧವಾರ ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- Cooking Oil Usage : ನಾಲ್ಕು ಜನರ ಕುಟುಂಬವು ತಿಂಗಳಿಗೆ ಎಷ್ಟು ಅಡುಗೆ ಎಣ್ಣೆ ಬಳಸಬೇಕು ಗೊತ್ತಾ?
- ಅಟ್ಟಾಡಿಸಿ ಹಲ್ಲೆಗೈದು, 2 ನೇ ಮಹಡಿಯಿಂದ ತಳ್ಳಿ ಯುವಕನ ಕಗ್ಗೊಲೆ- ನಾಲ್ವರ ಬಂಧನ
- ಬಿಗ್ ಬಾಸ್ ಗೆದ್ದಿದ್ದು ಗಿಲ್ಲಿ ಅಲ್ಲ ನಿರ್ಮಲಾ ಸೀತಾರಾಮನ್ ಎಂದ ಶಾಸಕ ಪ್ರದೀಪ್ ಈಶ್ವರ್
- ಸರ್ಕಾರಿ ಶಾಲೆಯಲ್ಲಿ ಮಾತ್ರೆ ಸೇವನೆ ಬಳಿಕ 59 ವಿದ್ಯಾರ್ಥಿಗಳು ಅಸ್ವಸ್ಥ
- ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತಸ್ರಾವ ಆಗುವುದು ಕಾಯಿಲೆಯ ಮುನ್ಸೂಚನೆಯೇ?
- ಬೆಳ್ಳಂಬೆಳಗ್ಗೆಯೇ ದೇವರ ಜಾತ್ರೆಗೆ ಹೊರಟ ಭಕ್ತ; ದೈವ ದರ್ಶನಕ್ಕೂ ಮುನ್ನವೇ ಯಮರಾಜ ಕರೆದೊಯ್ದ!
- ಇವನೆಂಥಾ ನೀಚ ಮಗ.! ಹಣಕ್ಕಾಗಿ ಕಲ್ಲಿನಿಂದ ಹೊಡೆದು ತಾಯಿಯನ್ನೇ ಕೊಂದ ಮಗ.! ಆರೋಪಿಯ ಬಂಧನ
- ಆಹಾ ನೋಡೋಕೆ 2 ಕಣ್ಣು ಸಾಲದು ; ಡಿಕೆಶಿ ತಲೆಗೆ ಸ್ವತಃ ಟವೆಲ್ ಕಟ್ಟಿದ ಸಿಎಂ ಸಿದ್ದರಾಮಯ್ಯ.!
- ರಾತ್ರಿ ಹೊತ್ತು ಗೋಚರಿಸುವ ಈ ಬದಲಾವಣೆಗಳು `ಕಿಡ್ನಿ ವೈಫಲ್ಯ’ದ ಲಕ್ಷಣವಾಗಿರಬಹುದು ಎಚ್ಚರ.!
- ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್, ಆತ ಸಿಕ್ಕಿಬಿದ್ದಿದ್ದೇ ರೋಚಕ ಕಹಾನಿ!
- Arecanut Price : ಇಂದಿನ ಅಡಿಕೆ ಧಾರಣೆ – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?
- Dina Bhavishya : 27 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಹಣದ ಆಸೆಗಾಗಿ ಪತ್ನಿಯನ್ನು ಪರಪುರುಷರ ಬಳಿಗೆ ಕಳುಹಿಸಿ ಖಾಸಗಿ ಕ್ಷಣ ಸೆರೆ ಹಿಡಿಯುತ್ತಿದ್ದ ಪತಿ ; ಬೆಚ್ಚಿಬೀಳಿಸುವ ಹನಿ ಟ್ರ್ಯಾಪ್ ಜಾಲ ಬಯಲು
- ದಿನಕ್ಕೆ ಎರಡು ಸಿಗರೇಟ್ ಮಾತ್ರ! ಈ ಸುಳ್ಳು ಎಷ್ಟು ಅಪಾಯಕಾರಿ ಗೊತ್ತಾ?
- ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣ ಸೇರಿದ ಮಗಳು ಕೀರ್ತಿ!
- ಮದುವೆಯಾಗಿ ಮಕ್ಕಳಿದ್ದರೂ ಅನೈತಿಕ ಸಂಬಂಧ- ದುರಂತ ಅಂತ್ಯ ಕಂಡ ಜೋಡಿ!
- ಸೆಕ್ಸ್ ಗೆ ಅಡ್ಡಿಯಾಗುತ್ತಿದ್ದಾನೆ ಅಂತ 1 ವರ್ಷದ ಮಗನನ್ನೇ ಹೊಡೆದು ಕೊಂದ ಪಾಪಿ ತಂದೆ



















