ಬಸ್‌ಗಳಲ್ಲಿ ಲಗೇಜ್ ಹೊರತುಪಡಿಸಿ ಬೇರೆ ಸಾಮಾನು ಸಾಗಾಟಕ್ಕೆ ನಿಷೇಧ: ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

ರಾಮಲಿಂಗಾರೆಡ್ಡಿ ಕರ್ನೂಲ್‌ನಲ್ಲಿ ಖಾಸಗಿ ಬಸ್ಸಿನ ಬೆಂಕಿ ದುರಂತದ ನಂತರ ರಾಜ್ಯದಲ್ಲಿಯೂ ಬಸ್ಸುಗಳಲ್ಲಿ ಪ್ರಯಾಣಿಕರ ಲಗೇಜ್, ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾನುಗಳ ಸಾಗಾಟಕ್ಕೆ ಅವಕಾಶವಿಲ್ಲ ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬೆಂಕಿ ದುರಂತಕ್ಕೊಳಗಾದ ಬಸ್ಸಿನಲ್ಲಿ ಹೆಚ್ಚು ಲಗೇಜ್ ಹಾಕಿದ್ದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು. WhatsApp Group Join Now ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. 2013ರಲ್ಲಿ ನಾನು ಸಾರಿಗೆ … Read more

ತಡರಾತ್ರಿ ಯುವತಿಗೆ ಟಾರ್ಚರ್ : ಕಿರುಕುಳ ಕೊಟ್ಟಿದ್ದ ಪುಂಡರ ಹೆಡೆಮುರಿ ಕಟ್ಟಿದ ಪೊಲೀಸರು ; ಮೂವರು ಅರೆಸ್ಟ್.!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಗೆ ಟಾರ್ಚರ್ ಕೊಟ್ಟಿದ್ದ ಪುಂಡರನ್ನ ಪೊಲೀಸರು ಬಂಧಿಸಿದ್ದಾರೆ. ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಯುವತಿಯನ್ನ ಚುಡಾಯಿಸಿದ್ದ ಮೂವರು ಕಿಡಿಗೇಡಿಗಳನ್ನ ಎಸ್.ಜಿ ಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನ ರೋಷನ್ (19), ಆರ್ಯನ್ (19) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿಯ ಹೆಸರು ತಿಳಿದುಬಂದಿಲ್ಲ. WhatsApp Group Join Now ನಡುರಸ್ತೆಯಲ್ಲಿ ಯುವತಿಗೆ ಕಿರುಕುಳ ಕೊಟ್ಟಿದ್ದ ಕಿಡಿಗೇಡಿಗಳು ಡಿಸೆಂಬರ್ 25 ತಡರಾತ್ರಿ ಸಿಲ್ಕ್ಬೋರ್ಡ್ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಯುವತಿಗೆ … Read more

Dina Bhavishya : ಡಿಸೆಂಬರ್‌ 28 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಸ್ವಾಭಿಮಾನ ಇಂದು ನಿಮ್ಮ ಆತ್ಮರಕ್ಷಣೆಗೆ ದಾರಿ. ಶತ್ರುಕಾಟ ಇದ್ದರೂ ಮನೋಬಲ ಕುಗ್ಗಿಸಿಕೊಳ್ಳಬೇಡಿ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಮತ್ತು ಸಹಾನುಭೂತಿ. ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ಇಂದು ಕೆಲಸದಲ್ಲಿ ಯಾವುದೇ ಅನಾನುಕೂಲತೆ ಇರುವುದಿಲ್ಲ. ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು.‌ ಹಿಂದಿನ ತಪ್ಪುಗಳು ಪಾಠವಾಗುವುದು. ದೈವಾನುಗ್ರಹವನ್ನು ಪಡೆದು ಮುಂದಿನ ಹೊಸ ಕಾರ್ಯಕ್ಕೆ ಅಣಿಯಾಗಿ. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಇಂದು ತಂದೆ ಹೇಳಿದ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಅಪವಾದದಿಂದ ಸಂಘರ್ಷ … Read more

ಮೈಸೂರು ಸ್ಫೋಟಕ್ಕೆ ಮತ್ತಿಬ್ಬರು ಬಲಿ : ತಂಗಿಯ ಸಾವಿನ ಸುದ್ದಿ ಕೇಳಿ ಅಣ್ಣನೂ ಸಾವು.! ಕುಟುಂಬಸ್ಥರ ಆಕ್ರಂದನ

ಮೈಸೂರು ಅರಮನೆ ಮುಂಭಾಗ ನಡೆದ ಹಿಲಿಯಂ ಸಿಲಿಂಡರ್ ಸ್ಪೋಟದಲ್ಲಿ ಗಂಭೀರ ಗಾಯಗೊಂಡಿದ್ದ ಹೂವಿನ ವ್ಯಾಪಾರಿ ಮಂಜುಳಾ ಚಿತಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದು, ಇದೀಗ ಈ ವಿಷಯ ಕೇಳಿದ ಅವರ ಸಹೋದರ ಕೂಡ ಇಂದು ಸಾವನ್ನಪ್ಪಿದ್ದಾರೆ. WhatsApp Group Join Now ಹೀಲಿಯಂ ಸಿಲಿಂಡರ್ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಂಗಿಯ ಸಾವಿನ ಸುದ್ದಿ ತಿಳಿದುಕೊಂಡ ಬಳಿಕ ಅವರ ಅಣ್ಣ ಪರಮೇಶ್ವರ್ (60) ಕೂಡ ಇಂದು ನಿಧನರಾಗಿದ್ದಾರೆ. ನಂಜನಗೂಡು ತಾಲೂಕಿನ ಚಾಮಲಾಪುರದ ನಿವಾಸಿಯಾಗಿರುವ … Read more

ಆತ ಬಿಟ್ರೂ ಆಕೆ ಬಿಡ್ಲಿಲ್ಲ : ವ್ಯಕ್ತಿಯನ್ನು ಬಲಿ ಪಡೆಯಿತಾ ಮಹಿಳೆಯ ಅಕ್ರಮ ಸಂಬಂಧ.? ಆತ್ಮಹತ್ಯೆಗೆ ಶರಣು.!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ವಿವಾಹಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಹಿಂದೆ ಹನಿಟ್ರ್ಯಾಪ್‌ ಶಂಕೆ ವ್ಯಕ್ತವಾಗಿದೆ. ಶಿಡ್ಲಘಟ್ಟ ಮೂಲದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕ, ಆಕೆಯ ಬ್ಲ್ಯಾಕ್‌ಮೇಲ್‌ಗೆ ಹೆದರಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. WhatsApp Group Join Now ಹನಿಟ್ರ್ಯಾಪ್‌ಗೆ ವಿವಾಹಿತ ಯುವಕನೊಬ್ಬ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 30 ವರ್ಷದ … Read more

ಬೆಂಗಳೂರಲ್ಲಿ ಯಾವುದೇ ದಾಖಲೆ ಇಲ್ಲದೆ ಆಟೋ ಓಡಿಸ್ತಿದ್ದಾರಾ ಬಾಂಗ್ಲಾದವ್ರು? ತಮ್ಮವರಿಗೆ ವಿಡಿಯೋ ಮೂಲಕ ಕರೆದ ಯುವಕರು!

ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿರುವ ಕೆಲವರ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ತಮ್ಮನ್ನು ತಾವೇ ಬಾಂಗ್ಲಾದೇಶಿಗರು ಎಂದು ಹೇಳಿಕೊಳ್ಳುವ ಮೂವರು ಆಟೋ ಚಾಲಕರು ಮಾಡಿರುವ ಒಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅನುಮಾನ ಮತ್ತು ಆತಂಕ ಮೂಡಿಸಿದೆ. WhatsApp Group Join Now ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮೂವರು ವ್ಯಕ್ತಿಗಳು ಬೆಂಗಳೂರಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಆಟೋ ಚಾಲನೆ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ಕಂಡುಬರುತ್ತದೆ. ಅಲ್ಲದೇ, ಸೆಕ್ಯೂರಿಟಿ ಕೆಲಸ ಮಾಡಿದರೆ ಕೇವಲ … Read more

ಅಕ್ರಮ ತೆರವು ಮಾಡಿಲ್ಲ, ವಲಸಿಗರಾದ್ರೂ ಮುಸ್ಲಿಂ ಕುಟಂಬಗಳಿಗೆ ಬೇರೆಡೆ ಜಾಗ ಕೋಡ್ತೀವಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಕಾರ್ಯಾಚರಣೆ ಕುರಿತಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಬುಲ್ಡೋಜರ್ ಕಾರ್ಯಾಚರಣೆಗೆ ಹೋಲಿಸಿದ ಬೆನ್ನಲ್ಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. WhatsApp Group Join Now ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಸಿಎಂ ಒಬ್ಬ ಕಮ್ಯೂನಿಸ್ಟ್. ಕೋಗಿಲು ಲೇಔಟ್ ನಲ್ಲಿ 2021-22ರಿಂದ ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರಿಗೆ ನೋಟಿಸ್ ಕೊಟ್ಟು ತೆರವು ಮಾಡಬೇಕು ಎಂದು ಹೇಳಿದ್ದೇವು. ಆದರೆ ಅಲ್ಲಿ ವಾಸಿಸುತ್ತಿದ್ದವರು ನಮ್ಮ ಮಾತನ್ನು … Read more

ಹೃದಯಾಘಾತಕ್ಕೆ 30 ದಿನಗಳ ಮೊದಲು ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಇವು.. ಇರಲಿ ಎಚ್ಚರ.!

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಒಂದು ಕಾಲದಲ್ಲಿ ಈ ಸೈಲೆಂಟ್ ಕಿಲ್ಲರ್ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ಯುವಕರು ಮತ್ತು ಮಕ್ಕಳು ಸಹ ಹೃದಯಾಘಾತದಿಂದ ಬಳಲುತ್ತಿದ್ದಾರೆ. ಈ ಮಾರಕ ರೋಗವನ್ನು ತಡೆಗಟ್ಟಲು, ನಾವು ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. WhatsApp Group Join Now ಏಕೆಂದರೆ ಹೃದಯಾಘಾತದ ಲಕ್ಷಣಗಳು ಅದು ಸಂಭವಿಸುವ ಕೆಲವು ತಿಂಗಳುಗಳ ಮೊದಲು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇತ್ತೀಚೆಗೆ, ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಅನೇಕ … Read more

MGNREGA ರದ್ದು ಮಾಡುವ ಮೂಲಕ ಮೋದಿ ಸರ್ಕಾರ ಬಡವರ ಬೆನ್ನಿಗೆ ಇರಿದಿದೆ : ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಸರ್ಕಾರದ ಅವಧಿಯ ದೂರದೃಷ್ಟಿಯ ಕಾರ್ಯಕ್ರಮ ಎಂಜಿಎನ್‌ಆರ್‌ಇಜಿಎ(MGNREGA)ಯನ್ನು ರದ್ದುಗೊಳಿಸುವ ಮೂಲಕ ಬೆನ್ನಿಗೆ ಇರಿದಿದ್ದಾರೆ ಎಂದು ಆರೋಪಿಸಿದ್ದಾರೆ. WhatsApp Group Join Now ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ತಮ್ಮ ಭಾಷಣದಲ್ಲಿ, ‘ಮಹಾತ್ಮ ಗಾಂಧಿಯವರ ಹೆಸರಿನ ಯೋಜನೆಯಿಂದ ದೇಶದ ಒಂದು ಪೀಳಿಗೆ ಬಡತನದಿಂದ ಪಾರಾಗಿತ್ತು. ಆದರೆ, ಯಾವುದೇ ಅಧ್ಯಯನ ಅಥವಾ ಮೌಲ್ಯಮಾಪನವಿಲ್ಲದೆ, ರಾಜ್ಯಗಳು ಅಥವಾ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ, ಮೂರು … Read more

ಹೆಂಡ್ತಿ ಮಸಾಜ್ ಕೆಲಸಕ್ಕೆ ಮಸಣ ಸೇರಿಸಿದ ಮೂರನೇ ಗಂಡ! ಡೆಡ್ಲಿ ಮರ್ಡರ್ ಗೆ ಬೆಚ್ಚಿಬಿದ್ದ ರಾಜಧಾನಿ

ರಾಜಧಾನಿ ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ಕೆಲಸದ ವಿಚಾರವಾಗಿ ಉಂಟಾದ ಅನುಮಾನ ಮತ್ತು ನಿರಂತರ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಲೇಔಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, 39 ವರ್ಷದ ಆಯೇಷಾ ಸಿದ್ದಿಕಿ ಕೊಲೆಯಾದ ಮಹಿಳೆ. WhatsApp Group Join Now ಈ ಪ್ರಕರಣದಲ್ಲಿ ಆಕೆಯ ಪತಿ ಸೈಯ್ಯದ್ ಜಬಿ ಕೊಲೆ ಆರೋಪಿ ಆಗಿದ್ದು, ಕೊಲೆ ಮಾಡಿದ ನಂತರ ತಾನೇ ಪೊಲೀಸ್ ಠಾಣೆಗೆ … Read more