‘ಕೇವಲ ದಿನ ಎಣಿಸಿದರೆ ಸಾಲದು’ ಪ್ರಧಾನಿ ನರೇಂದ್ರ ಮೋದಿ ದಾಖಲೆಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್!

Spread the love

ಪ್ರಧಾನಿ ನರೇಂದ್ರ ಮೋದಿ (PM MODI ) ಅವರು ಜವಾಹರಲಾಲ್ ನೆಹರು ಅವರ ಸುದೀರ್ಘ ಆಡಳಿತದ ದಾಖಲೆ ಮುರಿದಿರುವುದನ್ನು ಬಿಜೆಪಿ ಸಂಭ್ರಮಿಸುತ್ತಿರುವ ಬೆನ್ನಲ್ಲೇ, ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು,”ಕೇವಲ ಪ್ರಧಾನಿ ಹುದ್ದೆಯಲ್ಲಿದ್ದ ದಿನಗಳನ್ನು ಎಣಿಸಿದರೆ ಸಾಲದು, ದೇಶಕ್ಕೆ ನೀಡಿದ ಕೊಡುಗೆ ಮುಖ್ಯ ಎಂದು ಖರ್ಗೆ ಹೇಳಿದ್ದಾರೆ.

ಮೋದಿ ಕಳೆದ 12 ವರ್ಷಗಳ ಆಡಳಿತದಲ್ಲಿ ದೇಶಕ್ಕಾಗಿ ಮಾಡಿರುವ ಕನಿಷ್ಠ 12 ಪ್ರಮುಖ ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಲಿ ಎಂದರು. ಕೇವಲ ದಿನಗಳನ್ನು ನೋಡಿ ಆರಾಧಿಸುವವರು ಅಂಧ ಭಕ್ತರು ಎಂದು ಲೇವಡಿ ಮಾಡಿದರು.

ಮೋದಿ ಇಷ್ಟು ವರ್ಷಗಳ ಆಡಳಿತಾವಧಿಯಲ್ಲಿ ಒಂದು ಇಸ್ರೋ ಸಂಸ್ಥೆ, ಒಂದು ಐಐಟಿ ಸಂಸ್ಥೆ ಕಟ್ಟಿದ್ದಾರೆಯೇ? ನೆಹರು ಅಧಿಕಾರ ವಹಿಸಿಕೊಂಡಾಗ ಆರ್ಥಿಕ ಪರಿಸ್ಥಿತಿಗಳು ಹೇಗಿತ್ತು. ಈಗ ಹೇಗಿದೆ ಸ್ವಲ್ಪ ತುಲನೆ ಮಾಡಲಿ ಎಂದರು.

ಜೂನ್ 10, 2026ಕ್ಕೆ ಪ್ರಧಾನಿ ಮೋದಿ ಸತತ 4,399 ದಿನ ಪೂರೈಸಿ, ನೆಹರು ಅವರ ನಿರಂತರ ಆಡಳಿತದ ದಾಖಲೆ ಮೀರಿದ್ದಾರೆ. ಈ ಮೈಲಿಗಲ್ಲಿನ ಸುತ್ತ ಈಗ ದೇಶಾದ್ಯಂತ ಭಾರಿ ರಾಜಕೀಯ ವಾಗ್ದಾಳಿ ಶುರುವಾಗಿದೆ.

WhatsApp Group Join Now

Spread the love

Leave a Reply