ಸಿಎಂ ಡಿಕೆ ಶಿವಕುಮಾರ್ ಭವಿಷ್ಯ ನುಡಿದ ನೊಣವಿನಕೆರೆ ಅಜ್ಜಯ್ಯ : ಖಾತೆ ಕ್ಯಾತೆ-ಸಚಿವಗಿರಿ ಲಾಬಿ ಮಧ್ಯೆ ಭವಿಷ್ಯ ಏನಂದ್ರು.?

Spread the love

ಹರಸಾಹಸ ಪಟ್ಟು, ಕೊನೆಗೂ ಸಿಎಂ ಪಟ್ಟ ಏರುವಲ್ಲಿ ಯಶಸ್ವಿಯಾದ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಆರಂಭದಲ್ಲಿಯೇ ರಾಮಲಿಂಗಾರೆಡ್ಡಿ, ಎಚ್ ಕೆ ಮುನಿಯಪ್ಪ ಖಾತೆ ಬಗ್ಗೆ ಮುನಿಸಿಕೊಂಡರು, ಇದು ಸರಿಪಡಿಸಿದ ಬೆನ್ನಲ್ಲೇ ಈಗ ಎರಡನೇ ಹಂತದ ಸಚಿವಗಿರಿಗೆ ಲಾಬಿ ಶುರುವಾಗಿದೆ. ಇದರ ಬೆನ್ನಲ್ಲೇ ಡಿಕೆಶಿ ಭವಿಷ್ಯದ ಬಗ್ಗೆ ನೊಣವಿನಕೆರೆ ಅಜ್ಜಯ್ಯ ಭವಿಷ್ಯ ನುಡಿದಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಗೆ ಯಾವುದೇ ಕಂಟಕ ಇಲ್ಲ

ಸಾಕಷ್ಟು ಪ್ರಯತ್ನದ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಇನ್ನು ಮುಂದೆ ಯಾವುದೇ ಕಂಟಕ ಇಲ್ಲ ಎಂದು ತುಮಕೂರಿನ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಅಭಯ ನೀಡಿದ್ದಾರೆ.

ನೊಣವಿನಕೆರೆ ಸ್ವಾಮೀಜಿಯವರು ತುಮಕೂರಲ್ಲಿ ಕಾಂಗ್ರೆಸ್ ಮುಖಂಡನ ಮನೆಗೆ ಪಾದಪೂಜೆಗೆ ಆಗಮಿಸಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ಡಿಕೆಶಿಗೆ ಗುರುವಿನ ಆಶೀರ್ವಾದ ಇದೆ. ಯಾವುದೆ ಕಂಟಕ ಇಲ್ಲ. ಕಂಟಕ ಇದ್ದರೂ ಎಲ್ಲವೂ ನಿವಾರಣೆ ಆಗಲಿದೆ ಎಂದಿದ್ದಾರೆ.

ಡಿಕೆಶಿಯವರು ನುರಂತರ ಗುರುಮಠದ ಮಗನಾಗಿ ಸೇವೆ ಸಲ್ಲಿಸಿದ್ದಾರೆ. ಗುರು ಆಶೀರ್ವಾದ ಅವರಿಗೆ ರಕ್ಷಾ ಕವಚವಾಗಕದೆ. ಯಾವ ಕಂಟಕ ಬಂದರೂ ಅವರು ಜಯಶೀಲರಾಗುತ್ತಾರೆ ಚಿಂತೆ ಬೇಡ ಎಂದಿದ್ದಾರೆ.

ಮಾಧ್ಯಮದವರು, ನೂತನ ಸಚಿವ ಸಂಪುಟದಲ್ಲಿ ಉಂಟಾಗಿರುವ ಖಾತೆ ಹಂಚಿಕೆ ಗೊಂದಲದ ಬಗ್ಗೆ , ಇದು ಆಡಳಿತಕ್ಕೆ ಹಿನ್ನಡೆಯಾಗುತ್ತದೆಯೇ ಎಂದು ಲ್ರಶ್ನಿಸಿದಾಗ ಉತ್ತರಿಸಿದ ಅಜ್ಜಯ್ಯ, ಖಾತೆ ವಿಚಾರದಲ್ಲಿ ಅವರು ಸ್ವತಂತ್ರಜೀವಿಯಾಗಿ ಹೇಳುವವರಲ್ಲ. ಮೇಲಾಧಿಕಾರಿಗಳು ಅದರ ನಿರ್ಧಾರ ಮಾಡುತ್ತಾರೆ. ಅವರು ಕಂಕಣಬದ್ಧರಾಗಿ ನಿಂತು ರೈತರ, ಬಡವರ, ಸೈನಿಕರ, ವರ್ತಕರ, ಯುವಕರ ಪರಿಪೂರ್ಣ ರಾಜನಾಗಿ, ಕೆಲಸ ಮಾಡಲಿದ್ದಾರೆ. ಧರ್ಮದ ದಂಡವನ್ನು ಶ್ರೀ ಮಠದಿಂದ ಅವರಿಗೆ ಹಸ್ತಾಂತರ ಮಾಡಿದ್ದೇವಡ. ರಾಜಕೀಯದಲ್ಲಾಗಲೀ, ವರ್ತಕರಲ್ಲಾಗಲಿ,ಎಲ್ಲರ ಪ್ರೀತಿಯ ಮಗನಾಗಿ ಅವರ ಜೀವನ ರೂಪಿಸಿಕೊಳ್ಳುತ್ತಾರೆ ಯಾವ ಚಿಂತೆ ಇಲ್ಲ ಎಂದು ಸ್ವಾಮೀಜಿ ಅಭಯ ನುಡಿದಿದ್ದಾರೆ.

ಆರಂಭದಲ್ಲಿ ಇದ್ದ ಸಂಕಷ್ಟ, ಎಲ್ಲರಿಗೂ ಬರುವಂತದ್ದು. ಶ್ರದ್ಧಾ ಭಕ್ತಿಯಿಂದ ಇದ್ದಿದ್ದರಿಂದ ಎಲ್ಲಾ ಕಂಟಕ ದೂರ ಆಗಿದೆ ಎಂದು ಅವರು ಹೇಳಿದರು.

ಸಚಿವಗಿರಿಗೆ ಲಾಬಿ

ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಆಗ್ರಹಿಸಿದ್ದಾರೆ. ಹಲವರು ದೆಹಲಿಗೆ ಹೋಗಿ ಲಾಬಿ ನಡೆಸುತ್ತಿದ್ದಾರೆ. ಈ ಎಲ್ಲಾ ಒತ್ತಡವನ್ನು ಹೈಕಮಾಂಡ್ ಹಾಗೂ ಡಿಕೆ ಶಿವಕುಮಾರ್ ಹೇಗೆ ನಿಭಾಯಿಸಲಿದೆ, ಸರಕಾರ ಹೇಗೆ ಸುಗಮವಾಗಿ ನಡೆಯಲಿದೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

WhatsApp Group Join Now

Spread the love

Leave a Reply