Krishi Bhagya Scheme : ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.?

Spread the love

Krishi Bhagya Scheme : ಕೃಷಿ ಇಲಾಖೆಯಿಂದ 2024-25 ನೇ ಸಾಲಿನ ಕೃಷಿಭಾಗ್ಯ ಯೋಜನೆಯಡಿ ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕು ವ್ಯಾಪ್ತಿಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಒಣ ಭೂಮಿ ರೈತರ ಆದಾಯ ಮಳೆಯ ಮೇಲೆ ಅವಲಂಭಿತವಾಗಿರುವುದರಿಂದ ನಿರೀಕ್ಷಿತ ಆದಾಯ ಸಿಗುವುದು ಕಷ್ಟಸಾಧ್ಯವಾಗಿದ್ದು, ರೈತರು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಹಾಗೂ ವಿವಿಧ ಘಟಕಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana

ಕಡಿಮೆ ಮಳೆ ಬೀಳುವ ಬಹುತೇಕ ಪ್ರದೇಶಗಳಲ್ಲಿ ರೈತರು ಸುಮಾರು 500 ರಿಂದ 1000 ಅಡಿಯವರೆಗೆ ಕೊಳವೆ ಬಾವಿ ಕೊರೆಯಲು ಆರ್ಥಿಕವಾಗಿ ಹೆಚ್ಚು ವೆಚ್ಚ ಮಾಡುತ್ತಿದ್ದಾರೆ. ಈ ಕೊಳವೆ ಬಾವಿ ವಿಫಲವಾದರೆ ಅಥವಾ ಕೆಲ ವರ್ಷಗಳ ನಂತರ ಬತ್ತಿಹೋದ ಸಂದರ್ಭದಲ್ಲಿ ರೈತರು ಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ ರೈತರು ಕೊಳವೆ ಬಾವಿಯ ಬದಲಾಗಿ ಕೃಷಿ ಭಾಗ್ಯ ಯೋಜನೆಯ ಕೃಷಿ ಹೊಂಡ ಹಾಗೂ ಇನ್ನಿತರೆ ಘಟಕಗಳಲ್ಲಿ ಹೂಡಿಕೆಯನ್ನು ಮಾಡಿ ಸುಸ್ಥಿರ ಕೃಷಿಗಾಗಿ ಬಳಸಬಹುದಾಗಿದೆ.

ಕಳೆದ ವರ್ಷ ಕೃಷಿ ಭಾಗ್ಯ ಯೋಜನೆಯು ಕೇವಲ ಮಳೆಯಾಶ್ರಿತ ಪ್ರದೇಶಕ್ಕೆ ಸೀಮಿತವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅಚ್ಚುಕಟ್ಟು ಪ್ರದೇಶಕಕ್ಕೂ ವಿಸ್ತರಿಸಲಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಭಾಗ್ಯ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಕೆಂಪು ಮಣ್ಣಿನಲ್ಲಿ ರೈತರು ಖಡ್ಡಾಯವಾಗಿ ಟಾರ್ಪಲ್ ಹೊದಿಕೆ ಹಾಗೂ ತಂತಿಬೇಲಿಯನ್ನು  ಕೆಂಪು ಮತ್ತು ಕಪ್ಪು ಭೂಮಿ) ಎಲ್ಲಾ ಕೃಷಿ ಹೊಂಡಗಳಿಗೆ ಖಡ್ಡಾಯವಾಗಿ ಸಹಾಯಧನದಡಿ ಅಳವಡಿಸಿಕೊಳ್ಳಬೇಕಾಗುತ್ತದೆ. ಅದಲ್ಲದೇ ಕೃಷಿ ಹೊಂಡ ಮಾಡಿಸಿಕೊಂಡ ಎಲ್ಲಾ ಫಲಾನುಭವಿಗಳಿಗೆ ಕ್ಷೇತ್ರ ಬದು, ಡಿಸೇಲ್ ಇಂಜನ್ ಹಾಗೂ ತುಂತುರು ನೀರಾವರಿ ಘಟಕಗಳಿಗೆ ಕೂಡ ಸಹಾಯಧನ ಲಭ್ಯವಿರುತ್ತದೆ.

ಒಟ್ಟಾರೆ ಸದರಿ ಯೋಜನೆಯಡಿ ಆರು ಘಟಕಗಳಾದ ಕೃಷಿ ಹೊಂಡ, ತಂತಿಬೇಲಿ, ಟಾರ್ಪಲ್ ಹೊದಿಕೆ, ಕ್ಷೇತ್ರ ಬದು, ಡಿಸೇಲ್ ಇಂಜನ್ ಹಾಗೂ ತುಂತುರು ನೀರಾವರಿಗೆ ಸಹಾಯಧನದ ಲಭ್ಯವಿದ್ದು, ಎಲ್ಲಾ ರೈತಭಾಂದವರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಲು ತಿಳಿಸಿದೆ.

10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?

ಹೆಚ್ಚಿನ ಮಾಹಿತಿಗಾಗಿ ಆಸಕ್ತ ರೈತ ಬಾಂಧವರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now

Spread the love

Leave a Reply