Kisan Credit Card Scheme : ನಮಸ್ಕಾರ ಸ್ನೇಹಿತರೇ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ದೇಶದಲ್ಲಿ ರೈತರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಸರ್ಕಾರವು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆ ಜಾರಿಗೆ ತಂದಿದೆ. ಇದರಿಂದಾಗಿ ಜಾನುವಾರುಗಳನ್ನು ಸಾಕಾಣಿಕೆ ಮಾಡುವವರಿಗೆ ಆರ್ಥಿಕ ನೆರವು ನೀಡಿದಂತಾಗುತ್ತದೆ. ಸ್ನೇಹಿತರೇ, ಏನಿದು ಪಶು ಕಿಸಾನ್ ಕಾರ್ಡ್ ಯೋಜನೆ.? ಇದರಿಂದ ರೈತರಿಗೆ ಏನೆಲ್ಲಾ ಉಪಯೋಗಗಳಿವೆ.? ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆಯುವುದು ಹೇಗೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ, ನೀವು ಹಸು ಮತ್ತು ಎಮ್ಮೆಗಳ ಸಾಕಾಣಿಕೆಯನ್ನು ಮಾಡಲು ಈ ಕ್ರೆಡಿಟ್ ಕಾರ್ಡ್ ಮೂಲಕ ಸರ್ಕಾರದಿಂದ ಸಾಲವನ್ನು ಪಡೆಯಬಹುದು. ನೀವು ಬ್ಯಾಂಕುಗಳಲ್ಲಿ ಅರ್ಜಿಯನ್ನು ಸಲ್ಲಿಸಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ನೀವು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಪಶು ಕ್ರೆಡಿಟ್ ಕಾರ್ಡ್ ಮೂಲಕ ಪಶುಗಳ ನಿರ್ವಹಣೆಗೆ ಬೇಕಾದ ಎರಡರಿಂದ ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಪಡೆದ ಸಾಲಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ.
ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್
ಪಶು ಕಿಸಾನ್ ಕಾರ್ಡ್ ನಿಂದ ಎಷ್ಟು ಸಾಲ ಸಿಗುತ್ತದೆ.?
ಈ ಪಶು ಕಿಸಾನ್ ಕಾರ್ಡ್ ನಿಂದ ಒಂದು ಎಮ್ಮೆ ಸಾಕಾಣಿಕೆ ಮಾಡಲು ₹60,249/- ರೂಪಾಯಿ ಸಾಲ ಸಿಗಲಿದೆ, ಹಾಗೆಯೇ ಒಂದು ಆಕಳನ್ನು ನಿರ್ವಹಣೆ ಮಾಡಲು ₹40,783/- ರೂಪಾಯಿ ಸಾಲಗಳನ್ನು ನೀಡಲಾಗುತ್ತದೆ. ನಿಮ್ಮ ಬಳಿ ಎಷ್ಟು ಎಮ್ಮೆ ಮತ್ತು ಎಷ್ಟು ಹಸು ಇದೆಯೋ ಅಷ್ಟಕ್ಕೆ ಮಾತ್ರ ನೀವು ಈ ಪಶು ಕಿಸಾನ್ ಕಾರ್ಡ್ ನಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 1.6 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನೀವು ಪಶು ಸಾಕಾಣಿಕೆ ಮಾಡಲು ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದೆ ಸಾಲ ಪಡೆದರೆ 7% ಬಡ್ಡಿ ಕಟ್ಟಬೇಕಾಗುತ್ತದೆ, ಆದರೆ ಪಶು ಕಿಸಾನ್ ಕಾರ್ಡ್ ಮೂಲಕ ಪಡೆದಂತಹ ಸಾಲಕ್ಕೆ ನೀವು ಕೇವಲ 4% ಬಡ್ಡಿದರ ಕಟ್ಟಬೇಕಾಗುತ್ತದೆ.
ಯಾವ ಬ್ಯಾಂಕ್ ಗಳಲ್ಲಿ ನೀವು ಸಾಲ ಪಡೆದುಕೊಳ್ಳಬಹುದು.?
ದೇಶದ ಬಹುತೇಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರಿಗೆ ಸಾಲ ಸಿಗುತ್ತದೆ. ಆಕ್ಸಿಸ್ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ(Kisan Credit Card) ಮೂಲಕ ಪಶುಗಳ ನಿರ್ವಹಣೆಗೆ ಬೇಕಾದ ಸಾಲವನ್ನು ರೈತರಿಗೆ ನೀಡಲಾಗುತ್ತದೆ .
ಪಶು ಕಿಸಾನ್ ಕ್ರೆಡಿಟ್ ಕಾರ್ಡ ಪಡೆಯಲು ನೀವು ರಾಷ್ಟ್ರೀಕೃತ ಬ್ಯಾಂಕ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಫಾರ್ಮ್ ಪಡೆದು, ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ, ಕೆವೈಸಿಗೆ ಬೇಕಾಗಿರುವ ದಾಖಲೆಗಳನ್ನು ನೀಡಿ ನೀವು ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ನೀವು ನೀಡಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಕೊಂಡು, ನೀವು ನೀಡಿದಂತಹ ದಾಖಲೆಗಳು ಸರಿಯಾಗಿದ್ದರೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನ್ನು ನಿಮಗೆ ನೀಡುತ್ತಾರೆ.
ಇದನ್ನೂ ಕೂಡ ಓದಿ : Scholarship : ಶಾಲಾ ವಿಧ್ಯಾರ್ಥಿಗಳಿಗೆ ದೊರೆಯಲಿದೆ 10 ಸಾವಿರ ಪ್ರೋತ್ಸಾಹ ಧನ! ಇಲ್ಲಿದೆ ಅರ್ಜಿ ಹಾಕುವ ವಿವರ
ಬೇಕಾಗುವ ದಾಖಲೆಗಳೇನು.?
- ಭೂಮಿಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಜಾನುವಾರಗಳ ಆರೋಗ್ಯದ ಬಗ್ಗೆ ಸರ್ಟಿಫಿಕೇಟ್
- ಬ್ಯಾಂಕ್ ಖಾತೆಯ ವಿವರ
- ಪಾಸ್ಪೋರ್ಟ್ ಸೈಜ್ ಫೋಟೋ
ಮೇಲೆ ತಿಳಿಸಿದಂತಹ ಎಲ್ಲಾ ಪ್ರಮುಖ ದಾಖಲೆಗಳನ್ನು ಸರಿಪಡಿಸಿಕೊಂಡು, ಹತ್ತಿರವಿರುವ ಬ್ಯಾಂಕ್ ಗೆ ಭೇಟಿ ನೀಡಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಫಾರ್ಮ್ ಪಡೆದು ಅರ್ಜಿಯನ್ನು ಸಲ್ಲಿಸಿ, ಹೈನುಗಾರಿಕೆಗೆ ಬೇಕಾದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Gruhalakshmi : ಗೃಹಲಕ್ಷ್ಮಿ ಹಣ ಜಮೆ ಆಗುತ್ತಿಲ್ಲ ಯಾಕೆ ಇಲ್ಲಿದೆ ಕಾರಣ – ಮಹಿಳೆಯರು ತಪ್ಪದೇ ನೋಡಿ
- ಭಾರೀ ಇಳಿಕೆ ಕಂಡ ಚಿನ್ನ.! ಇನ್ನೂ ಇಳಿಕೆ ಕಾಣುತ್ತಾ ಬಂಗಾರ.! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Udyogini Yojana : ಉದ್ಯೋಗಿನಿ ಯೋಜನೆ ಅಡಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ – ಅರ್ಹತೆ ಹಾಗು ಬೇಕಾಗುವ ದಾಖಲೆಗಳೇನು.?
- Ration Card Updates : ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ! ಏನೆಲ್ಲಾ ಅರ್ಹತೆಗಳಿರಬೇಕು.?
- SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್
- Gold Rate Today : ಇಳಿಕೆಯ ಹಾದಿ ಮರೆತ ಬಂಗಾರ.? ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- ಚಾಕೊಲೇಟ್ ಆಸೆ ತೋರಿಸಿ 11ರ ಬಾಲಕಿ ಮೇಲೆ ಅತ್ಯಾಚಾರ – ಆರೋಪಿ ಬಂಧನ
- Driving Licence : ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಹೊಸ ಆದೇಶ ಜಾರಿಗೊಳಿಸಿದ ಸಂಚಾರ ಸಾರಿಗೆ ಇಲಾಖೆ! ಸಂಪೂರ್ಣ ಮಾಹಿತಿ
- ಮುಡಾ ಹಗರಣ ಕಾನೂನು ಹೋರಾಟದಲ್ಲಿ ಬಿಗ್ ಟ್ವಿಸ್ಟ್.! ಮೇಲ್ಮನವಿಯಿಂದ ಹಿಂದೆ ಸರಿದ ಸ್ನೇಹಮಯಿ ಕೃಷ್ಣ.!
- Gold Rate : ಬಂಗಾರ ಖರೀದಿಸುವವರಿಗೆ ಗುಡ್ ನ್ಯೂಸ್ ಇದೆಯಾ.? ಇಂದಿನ ಬೆಲೆ ಎಷ್ಟಾಗಿದೆ ಗೊತ್ತಾ.?
- ಸ್ನೇಹಿತರ ಕಣ್ಣೆದುರಲ್ಲೇ ನೀರುಪಾಲಾದ ಮತ್ತಿಬ್ಬರು ಸ್ನೇಹಿತರು – ಘಟನೆ ವಿಡಿಯೋ ಮೊಬೈಲ್ ಕ್ಯಾಮೆರದಲ್ಲಿ ಸೆರೆ
- ಅನ್ಯ ಜಾತಿಯ ಯುವಕನೊಂದಿಗೆ ಮದುವೆಗೆ ಹಠ – ರೊಚ್ಚಿಗೆದ್ದು ಮಗಳನ್ನೇ ಕೊಲೆಗೈದ ಪರಾರಿಯಾದ ತಂದೆ
- ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರತೆಗೆದು ಬಾಲಕನ ಜೀವ ಉಳಿಸಿದ ವೆನ್ಲಾಕ್ ಆಸ್ಪತ್ರೆಯ ವೈದ್ಯರು
- ಶಾಲೆಯಿಂದ ಮನೆಗೆ ತಡವಾಗಿ ಬಂದಿದ್ದಕ್ಕೆ ಬಾಲಕನನ್ನು ಹೊಡೆದು ಕೊಂದ ತಂದೆ.!
- ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ – Health Tips
- ರೈಲಿನಲ್ಲಿ ಗರ್ಭಿಣಿ ಮೇಲೆ ಅತ್ಯಾಚಾರ, ಮಹಿಳೆಗೆ ಗರ್ಭಪಾತ.! ಕೈಮುಗಿದು ಬೇಡಿಕೊಂಡರೂ ಬಿಡದ ಪಾಪಿ
- PM Kisan Samman Yojana : ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ.!
- Gruhalakshmi : ಗೃಹಲಕ್ಷ್ಮಿಯರಿಗೆ ಸಿಕ್ತು ಗುಡ್ ನ್ಯೂಸ್.! ಇನ್ನೂ ನಿಮ್ಮ ಖಾತೆಗೆ ಹಣ ಬಂದಿಲ್ವಾ! ಚಿಂತೆ ಬಿಡಿ ಈ ಸುದ್ದಿ ನೋಡಿ!
- ರೈತರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್! ಇನ್ಮುಂದೆ ರೈತರಿಗೆ ₹7,600/- ರೂಪಾಯಿ ಅಲ್ಲ, ಜಾಸ್ತಿನೇ ಸಿಗುತ್ತೆ!
- Gold Rate Today : ಆಭರಣ ಪ್ರಿಯರೇ ಎಚ್ಚರ.! ಚಿನ್ನದ ಬೆಲೆ ನೋಡಿ ಖರೀದಿ ಮಾಡಿ – ಎಷ್ಟಿದೆ ಚಿನ್ನದ ಬೆಲೆ.?