ದುಬೈನಲ್ಲಿ ಪಾಕಿಸ್ತಾನಿ ಕ್ರಿಕೆಟಗ ಶಾಹಿದ್ ಅಫ್ರಿದಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ ; ತೀವ್ರ ಆಕ್ರೋಶ.!

Spread the love

ದುಬೈನಲ್ಲಿರುವ ಕೇರಳದ ಸಮುದಾಯವೊಂದು ತಮ್ಮ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ ಅವರನ್ನು ಕರೆಸಿ ಗ್ರ್ಯಾಂಡ್ ವೆಲ್ಕಮ್ ಮಾಡಿದೆ. ಸದ್ಯ ಈ ಸಂಬಂಧ ಕೇರಳದ ಸಮುದಾಯವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗುತ್ತಿದೆ.

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ದುಬೈನಲ್ಲಿರುವ ಕೇರಳದ ಸಮುದಾಯದವರು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗ್ರ್ಯಾಂಡ್ ವೆಲ್ಕಮ್ ಮಾಡಿದಕ್ಕೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಫ್ರಿದಿ ಆಗಮಿಸುತ್ತಿದ್ದಂತೆ, ಸಮುದಾಯದ ಮುಖ್ಯಸ್ಥರು, ಸದಸ್ಯರು ಹಾಗೂ ಜನರು ತಮ್ಮ ಸಾಂಸ್ಕೃತಿಕ ಪ್ರದರ್ಶನ ನಿಲ್ಲಿಸಿ ಅವರಿಗೆ ಸ್ವಾಗತ ಕೋರಿದ್ದಾರೆ ಎಂದು ಹೇಳಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಕ್ರಿಕೆಟರ್ ಅಫ್ರಿದಿ, ನನ್ನನ್ನು ಇಂತಹ ಅದ್ಧೂರಿ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಕ್ಕೆ ಇಲ್ಲಿದ್ದ ಎಲ್ಲರಿಗೂ ಧನ್ಯವಾದಗಳು ಹೇಳಿದರು. ಬಳಿಕ ಮಾತನಾಡುತ್ತ ನನಗೆ ಕೇರಳ ಹಾಗೂ ಕೇರಳದ ಆಹಾರ ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಘರ್ಷಣೆ ವೇಳೆ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ, ಭಾರತದ ವಿರುದ್ಧವಾಗಿ ಕಠಿಣವಾಗಿ ಮಾತನಾಡಿದ್ದರು. ಪಾಕಿಸ್ತಾನವನ್ನು ಸಮರ್ಥನೆ ಮಾಡಿಕೊಂಡಿದ್ದ ಅಫ್ರಿದಿ ಭಯೋತ್ಪಾದಕರು ಪಾಕಿಸ್ತಾನದವರಾ?. ಭಾರತದ ಸೈನಿಕರು ಆ ಸ್ಥಳದಲ್ಲಿ ಇದ್ದರೂ ದಾಳಿ ಆಗಿದ್ದು ಹೇಗೆ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದರು.

ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಏಪ್ರಿಲ್ 22 ರಂದು 26 ಜನರನ್ನು ಭಯೋತ್ಪಾದಕರು ಬಲಿ ಪಡೆದಿದ್ದರು. ಅಲ್ಲಿದ್ದವರ ಧರ್ಮ ಕೇಳಿ ಉಗ್ರರು ಗುಂಡು ಹಾರಿಸಿ ಹತ್ಯೆಗೈದಿದ್ದರು. ಇದರಿಂದ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಅಫ್ರಿದಿ , ಭಾರತದ ವಿರೋಧಿ ಮಾತುಗಳನ್ನಾಡಿದ್ದರು. ಹೀಗಾಗಿ ಭಾರತದ ಸರ್ಕಾರ ಶಾಹಿದ್ ಅಫ್ರಿದಿಯ ಯೂಟ್ಯೂಬ್ ಚಾನೆಲ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಿತ್ತು. ಈ ಎಲ್ಲ ಕಾರಣಗಳಿಂದ ಕೇರಳ ಸಮುದಾಯ ಅಫ್ರಿದಿಯನ್ನ ಆಹ್ವಾನ ಮಾಡಿ, ಸ್ವಾಗತ ಕೋರಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

WhatsApp Group Join Now

Spread the love

Leave a Reply