Crop Insurance : ಬರ ಪರಿಹಾರ ಬಿಡುಗಡೆ – ಹೆಚ್ಚಿನ ಪರಿಹಾರಕ್ಕಾಗಿ ಹೀಗೆ ಮಾಡಿ

Crop Insurance : ಬರಗಾಲದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಆರ್ಥಿಕವಾಗಿ ನೆರವಾಗಲು ರಾಜ್ಯ ಸರ್ಕಾರ ಬರ ಪರಿಹಾರವಾಗಿ ಮೊದಲ ಹಂತದಲ್ಲಿ ₹2,000 ರೂಪಾಯಿಯನ್ನು ಈಗಾಗಲೇ ಜಿಲ್ಲಾವಾರುಗಳಂತೆ ಪ್ರತಿ ತಾಲ್ಲೂಕಿನ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ಎಫ್ಐಡಿ ನಂಬರ್ ಪಡೆದಿರುವ ಅರ್ಹ ಫಲಾನುಭವಿಗಳಿಗೆ ಮೊದಲನೇ ಕಂತಿನ ಬೆಳೆ ನಷ್ಟ ಪರಿಹಾರದ ಹಣವನ್ನು ಜಮಾವಣೆ ಮಾಡಲಾಗಿರುತ್ತದೆ.

ಈಗ ಎರಡನೇ ಹಂತದ ಹೆಚ್ಚಿನ ಪರಿಹಾರ ಬಿಡುಗಡೆ ಹಂತದಲ್ಲಿದ್ದು, ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆ ಪರಿಹಾರವಾಗಿ ಎರಡನೇ ಹಂತದಲ್ಲಿ ₹3,474 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಈ ಬರ ಪರಿಹಾರ ಹಂಚಿಕೆ ಕೊಂಚ ವಿಳಂಬವಾಗಬಹುದು. ಆದರೆ ಇಲ್ಲಿ ಇನ್ನು ಕೆಲವು ರೈತರಿಗೆ ಈ ಬೆಳೆ ನಷ್ಟ ಪರಿಹಾರದ ಮೊದಲ ಕಂತಿನ ಹಣ ಜಮಾವಣೆ ಆಗಿರುವುದಿಲ್ಲ. ಅಂತಹ ರೈತರು ಮುಂದೆ ಇಲ್ಲಿ ತಿಳಿಸಿರುವ ಮಾರ್ಗಸೂಚಿಯಂತೆ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

ಇದನ್ನೂ ಕೂಡ ಓದಿ : Borewell Scheme : ರೈತರ ಬೋರ್ ವೆಲ್ ಅಕ್ರಮಕ್ಕೆ ಹೊಸ ಅಪ್ಡೇಟ್.! ಸರ್ಕಾರದಿಂದ ರೈತರಿಗೆ ಉಚಿತ ಬೋರ್‌ವೆಲ್‌ ನೀಡಲು ನಿರ್ಧಾರ.!

ಮೊದಲು ನಿಮ್ಮ ಜಮೀನಿನ ದಾಖಲೆ ಮತ್ತು ನಿಮ್ಮ ಬ್ಯಾಂಕ್ ವಿವರವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿ, ಎಫ್ಐಡಿ ನಂಬರ್ ರಚನೆ ಆಗಿದೆಯಾ ಎನ್ನುವುದನ್ನ ಖಚಿತಪಡಿಸಿಕೊಳ್ಳಿ. ಎಫ್ಐಡಿ ರಚನೆ ಆಗಿದ್ದಲ್ಲಿ ಮುಂದಿನ ಹಂತವಾಗಿ ಆ ನಂಬರಿಗೆ ನಿಮ್ಮ ಹೆಸರಲ್ಲಿರುವ ಎಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ.? ಎಂದು ಒಮ್ಮೆ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಿ. ಯಾಕೆಂದ್ರೆ ಎಕರೆಗೆ ಇಂತಿಷ್ಟು ಅಂತ ಬರ ಪರಿಹಾರ ಹಣ ಜಮಾವಣೆಯಾಗುತ್ತದೆ.

ಹೆಚ್ಚು ಎಕರೆ ಜಮೀನು ಹೊಂದಿರುವವರಿಗೆ, ಹೆಚ್ಚು ಬರ ಪರಿಹಾರ ಜಮಾ ಆಗಲಿದೆ. ಇನ್ನು ಮುಖ್ಯವಾಗಿ ಯಾವುದೇ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಹಣ ಪಡೆಯಲು ಬ್ಯಾಂಕ್ ಖಾತೆಗೆ ಏನ್ ಪಿಸಿಐ ಮ್ಯಾಪಿಂಗ್ ಆಗಿರಲೇಬೇಕು. ಅಂದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ನಿಮ್ಮ ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಿ, ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಇದಾದ ನಂತರವೂ ನಿಮಗೆ ಬರ ಪರಿಹಾರ ಹಣ ಜಮಾವಣೆ ಆಗದಿದ್ದರೆ, ಒಮ್ಮೆ ನಿಮ್ಮ ಇಲ್ಲಿನ ಗ್ರಾಮಾಡಳಿತ ಅಧಿಕಾರಿ ಅವರನ್ನು ಭೇಟಿ ಮಾಡಿ ಬರ ಪರಿಹಾರ ಹಣ ಜಮಾವಣೆಗೊಂಡಿರುವ ಬಗ್ಗೆ ತಿಳಿಸಿ. ಹಾಗು ಮುಂದಿನ ಮಾರ್ಗಸೂಚಿ ಏನು.? ಎನ್ನುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಈ ಹಿಂದೆ ಘೋಷಣೆ ಮಾಡಿರುವ ಬರ ಪೀಡಿತ ತಾಲೂಕಿನ ರೈತರಿಗೆ ಮಾತ್ರ ಬೆಳೆ ನಷ್ಟ ಪರಿಹಾರದ ಹಣ ಜಮಾವಣೆ ಮಾಡಲಾಗುತ್ತದೆ ಹೊರತು ಇತರೆ ಭಾಗದ ರೈತರಿಗೆ ಈ ಬರ ಪರಿಹಾರ ಹಣ ದೊರೆಯುವುದಿಲ್ಲ.

ಇದನ್ನೂ ಕೂಡ ಓದಿ : SSLC Result 2024 : ಪರೀಕ್ಷಾ ಫಲಿತಾಂಶ ದಿನಾಂಕ ಗೊಂದಲ.! ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸ್ಪಷ್ಟನೆ

ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮಾ ಆಗಿದೆಯೇ ಇಲ್ಲವೇ ಎಂದು ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕವು ಅಲ್ಲಿ ಸ್ವ ವಿವರ ನಮೂದಿಸುವ ಮೂಲಕವೂ ತಿಳಿದುಕೊಳ್ಳಬಹುದು. ಕೃಷಿಗೆ ಸಂಬಂಧಪಟ್ಟ ಇನ್ನಷ್ಟು ಇತರ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply