ನಗರದ ಕೋರಮಂಗಲದ ಜಿಎಸ್ ಸೂಟ್ಸ್ ಹೊಟೇಲ್‌ನ ಎಲ್‌ಇಡಿ ಬೋರ್ಡ್‌ನಲ್ಲಿ ಕನ್ನಡಿಗರಿಗೆ ಅತಿಕೆಟ್ಟ ಪದಗಳನ್ನು ಬಳಸಿ ನಿಂದನೆ ಮಾಡಲಾಗಿತ್ತು.
ಹೀಗೆ ಸಾರ್ವಜನಿಕವಾಗಿ ಬೆಂಗಳೂರಿನಲ್ಲಿ ಕನ್ನಡಿಗರಿಗೆ ನಿಂದನೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಕನ್ನಡಿಗರು ಹೊಟೇಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಎಕ್ಸ್ ಖಾತೆಯನ್ನು ಉಲ್ಲೇಖಿಸಿ ದೂರಿದ್ದರು.
ಅದರಂತೆ ಇದೀಗ ಪೊಲೀಸರು ಜಿಎಸ್ ಸೂಟ್ಸ್ ಹೊಟೇಲ್‌ಗೆ ಆಗಮಿಸಿ ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇನ್ನು ಸಿಬ್ಬಂದಿಯನ್ನು ಕಾರು ಹತ್ತಿಸುವ ಸಂದರ್ಭದಲ್ಲಿ ಪೊಲೀಸ್ ಬೈಟ್ ರೇ ಎಂದು ಹೇಳುವುದನ್ನು ಕೇಳಿ ಸಿಬ್ಬಂದಿ ಹಿಂದಿಯವರೆಂಬುದು ತಿಳಿದುಬಂದಿದ್ದು, ಮತ್ತೆ ಕನ್ನಡಿಗರ ಮೇಲೆ ಹಿಂದಿಯವರ ಮಸಲತ್ತು ಬಹಿರಂಗವಾಗಿದೆ.
ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಎಲ್‌ಇಡಿ ಬೋರ್ಡನ್ನೂ ಸಹ ಪೊಲೀಸರು ಹೊತ್ತೊಯ್ದಿದ್ದಾರೆ.
WhatsApp Group
Join Now