ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾಗೆ ಕರ್ನಾಟಕದಲ್ಲಿ ಸಂಕಷ್ಟ ಎದುರಾಗಿದೆ. ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಅವರ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ, ಒಂದು ವೇಳೆ ಸಿನಿಮಾ ರಿಲೀಸ್ ಮಾಡಿದ್ರೆ ಈ ಥಿಯೇಟರ್‌ಗೆ ಬೆಂಕಿ ಹಚ್ಚುವುದಾಗಿ ಕನ್ನಡಪರ ಸಂಘಟನೆಗಳು ಖಡಕ್ ಎಚ್ಚರಿಕೆ ನೀಡಿವೆ. ಆದರೆ ಇದಕ್ಕೆ ಡೋಂಟ್ ಕೇರ್ ಎನ್ನುವಂತೆ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಲು ಕೆಲ ಥಿಯೇಟರ್‌ಗಳು ಮುಂದಾಗಿವೆ ಎಂದು ಹೇಳಲಾಗುತ್ತಿದೆ.
ಹೌದು, ಕನ್ನಡ ಹುಟ್ಟಿದ್ದು ತಮಿಳಿನಿಂದ ಎನ್ನುವ ಮೂಲಕ ಕಮಲ್ ಹಾಸನ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಕನ್ನಡದ ಬಗ್ಗೆ ಈ ರೀತಿ ಅವಹೇಳನ ಮಾಡಿರುವ ಕಮಲ್ ಕೂಡಲೇ ಕ್ಷಮೆ ಕೇಳಬೇಕು ಎಂದು ರಾಜಕಾರಣಿಗಳು, ಕನ್ನಡಪರ ಸಂಘಟನೆಗಳು, ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ಆದರೆ, ಈ ಬೆದರಿಕೆಗಳು ನನಗೆ ಹೊಸದಲ್ಲ, ನಾನೇನು ತಪ್ಪು ಮಾತನಾಡಿಲ್ಲ, ಹಾಗಾಗಿ ಕ್ಷಮೆ ಕೇಳಲ್ಲ ಎಂದು ಕಮಲ್ ಹಾಸನ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಕಮಲ್ ಹಾಸನ್ ಅವರು ಕ್ಷಮೆ ಕೇಳದ ಕಾರಣ ಅವರ ಮುಂದಿನ ಸಿನಿಮಾ ಥಗ್ ಲೈಫ್ ಅನ್ನು ಕರ್ನಾಟಕದಲ್ಲಿ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಕನ್ನಡ ಸಂಘಟನೆಗಳು ವಾರ್ನಿಂಗ್ ನೀಡಿವೆ. ಫಿಲ್ಮ್ ಚೇಂಬರ್‌ಗೆ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದರೆ ಯಾರು ಏನೇ ಹೇಳಲಿ, ನಾವು ಸಿನಿಮಾ ರಿಲೀಸ್ ಮಾಡ್ತೀವಿ, ನಮಗೆ ಬ್ಯುಸಿನೆಸ್ ಮುಖ್ಯ ಎಂದು ಕೆಲ ಥಿಯೇಟರ್‌ಗಳು ಕಮಲ್ ಸಿನಿಮಾ ರಿಲೀಸ್ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕದಲ್ಲಿ ವಿವಾದ, ವಿರೋಧದ ನಡುವೆಯೂ ಸಿನಿಮಾ ರಿಲೀಸ್ ಮಾಡ್ತೀವಿ ಎಂದು ಕೆಲವರು ಸಾಹಸ ಪ್ರದರ್ಶಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಖ್ಯಾತ ಸಿಂಗಲ್ ಸ್ಕ್ರೀನ್ ಸೋಶಿಯಲ್ ಮೀಡಿಯಾದಲ್ಲಿ ಥಗ್ ಲೈಫ್ ಸಿನಿಮಾದ ಮುಂಗಡ ಬುಕಿಂಗ್ ಬಗ್ಗೆ ಪೋಸ್ಟ್ ಹಂಚಿಕೊಂಡಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ತಮಿಳು ಭಾಷೆಯವರು ಹೆಚ್ಚಾಗಿರುವ ಕಾರಣ, ಕಮಲ್ ಅಭಿಮಾನಿಗಳು ಕೂಡ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆ ಅವರಿಗೆ ಮಣೆ ಹಾಕಲು ಕೆಲ ಥಿಯೇಟರ್‌ಗಳು ಕಮಲ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿವೆ.
ಒಂದು ವೇಳೆ ಕನ್ನಡಿಗರ ವಿರೋಧ ಮೀರಿಯೂ ಥಗ್ ಲೈಫ್ ಸಿನಿಮಾ ರಿಲೀಸ್ ಆದ್ರೆ ಆ ಥಿಯೇಟರ್‌ಗಳಿಗೆ ಗ್ರಹಚಾರ ಬಿಡಿಸಲು ಕನ್ನಡಪರ ಸಂಘಟನೆಗಳು ಕೂಡ ಸಜ್ಜಾಗಿವೆ. ಇದು ಕನ್ನಡದ ವಿಚಾರ ಆಗಿರುವುದಿರಂದ, ಕನ್ನಡಕ್ಕೆ ಆಗಿರುವ ಅನ್ಯಾಯ ಮೊದಲು ಸರಿಯಾಗಿಬೇಕು. ಆ ಬಳಿಕವಷ್ಟೇ ಸಿನಿಮಾ ರಿಲೀಸ್ ಮಾತು ಎಂದು ಎಚ್ಚರಿಕೆ ನೀಡಿದ್ದಾರೆ.
ಅಂದ ಹಾಗೆ ಥಗ್ ಲೈಫ್ ಸಿನಿಮಾ ಕನ್ನಡ ಹೊರತುಪಡಿಸಿ, ಉಳಿದೆಲ್ಲ ದಕ್ಷಿಣ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಇದು ಕೂಡ ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಅವರ ಸಿನಿಮಾ ಕನ್ನಡದಲ್ಲೂ ರಿಲೀಸ್ ಮಾಡ್ತಿಲ್ಲ, ಕನ್ನಡದ ಬಗ್ಗೆ ಗೌರವ ಕೂಡ, ಮಾಡಿದ ತಪ್ಪಿಗೆ ಕ್ಷಮೆಯೂ ಕೇಳಲ್ಲ ಅಂತಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ಅದು ಹೇಗೆ ಥಗ್ ಲೈಫ್ ಸಿನಿಮಾ ರಿಲೀಸ್ ಆಗುತ್ತೋ ನೋಡೇಬಿಡ್ತೀವಿ ಎಂದು ಸವಾಲ್ ಹಾಕಿದ್ದಾರೆ. ಜೂನ್ 5ಕ್ಕೆ ಈ ಸಿನಿಮಾ ರಿಲೀಸ್ ಘೋಷಣೆಯಾಗಿದೆ.

ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾಗೆ ಸಂಕಷ್ಟ – ಥಿಯೇಟರ್ ಸುಡ್ತೀವಿ ಅಂದ್ರೂ ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್‌ಗೆ ಸಿದ್ಧತೆ!
WhatsApp Group
Join Now