HSRP : ಮೇ 31 ರಿಂದ ಎಲ್ಲಾ ವಾಹನಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ / HSRP ನಂಬರ್ ಪ್ಲೇಟ್ ₹1,000 ದಂಡ ಘೋಷಣೆ.!

HSRP : ನಮಸ್ಕಾರ ಸ್ನೇಹಿತರೇ, ವಾಹನ ಸವಾರರಿಗೆ ಹೆಚ್ಎಸ್ಆರ್ ಪಿ(HSRP) ನಂಬರ್ ಪ್ಲೇಟ್ ನ್ನ ಅಳವಡಿಸಿಕೊಳ್ಳಲು ಡೆಡ್‌ಲೈನ್ ಕೊಟ್ಟು ಕರ್ನಾಟಕ ಸರ್ಕಾರ ಸುಸ್ತಾಗಿ ಹೋಗಿದೆ. ಆದರೂ ವಾಹನ ಸವಾರರಿಗೆ ಈ ವಿಚಾರದ ಗಂಭೀರತೆ ಅರ್ಥವಾಗ್ತಿಲ್ಲ. ಈ ಕಾರಣಕ್ಕೆ ಕರ್ನಾಟಕ ಸರ್ಕಾರ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ.

ನಿಯಮ ಮೀರಿದ ವಾಹನ ಸವಾರರಿಗೆ ಭಾರಿ ಸಂಕಷ್ಟ ಎದುರಾಗಿದೆ. ಹೆಚ್ಎಸ್ಆರ್ ಪಿ(HSRP) ಅಂದ್ರೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಆಧುನಿಕ ಜಗತ್ತಿನಲ್ಲಿ ಹೊಸ ಕ್ರಾಂತಿ ಮಾಡುತ್ತಿದೆ. ಇದು ಅಲ್ಯೂಮಿನಿಯಂ ಲೋಹದ ಮೂಲಕ ತಯಾರಿಸಿದ ಪ್ಲೇಟ್ ಆಗಿದೆ. ಹೊಸ ವಾಹನಗಳಲ್ಲಿ ಈ ರೀತಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಆಗುತ್ತ ಬಂದಿದ್ದು, ಹೊಸ ನಂಬರ್ ಪ್ಲೇಟ್ ಗಳಲ್ಲಿ ಇಂಗ್ಲಿಷ್ ಅಕ್ಷರ ಸೇರಿದಂತೆ ನಂಬರ್ ಉಬ್ಬಿಕೊಂಡಿರುವ ರೀತಿ ಪ್ರಿಂಟ್ ಆಗಿರುತ್ತದೆ.

ಇದನ್ನೂ ಕೂಡ ಓದಿ : Shrama Shakthi Scheme : ಕರ್ನಾಟಕ ಶ್ರಮ ಶಕ್ತಿ ಯೋಜನೆ ಮೂಲಕ ₹50,000/- ಹಣ ಸಿಗಲಿದೆ.! ಅರ್ಜಿ ಸಲ್ಲಿಸುವುದು ಹೇಗೆ.?

ಈ ಪ್ಲೇಟ್ ಅಳವಡಿಸುವಾಗ ಎರಡು ಲಾಕ್ ಪಿನ್ ಹಾಕಿರುತ್ತಾರೆ. ಪೇಪರ್‌ಗಳ ಸ್ಟೆಪ್ಲರ್ ಪಿನ್ ಮಾಡುವಾಗ ಪಂಚ್ ಮಾಡುವ ರೀತಿಯಲ್ಲಿ ಹೊಸ ನಂಬರ್ ಪ್ಲೇಟ್ ವಾಹನಕ್ಕೆ ಅಂಟಿಸಿರುತ್ತಾರೆ ಎಂಬುದು ವಿಶೇಷ. ಆದರೆ ಈ ಅತ್ಯಾಧುನಿಕ ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಮಾಲೀಕರು ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹೌದು, ರಾಜ್ಯದಲ್ಲಿ 2 ಕೋಟಿ ವಾಹನಗಳಿಗೆ ಹೆಚ್ಎಸ್ಆರ್ ಪಿ(HSRP) ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎನ್ನಲಾಗಿತ್ತು. ಈಗಾಗಿಯೇ ಮೂರು ಬಾರಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಕೊನೆಯ ಬಾರಿ ಅಂತ ಮೇ 31 ರ ಡೆಡ್‌ಲೈನ್ ಕೊಟ್ಟು ಕರ್ನಾಟಕ ಸರ್ಕಾರ ಹೆಚ್ಎಸ್ಆರ್ ಪಿ(HSRP) ನಂಬರ್ ಪ್ಲೇಟ್ ಅಳವಡಿಕೆಗೆ ಆದೇಶ ನೀಡಿತ್ತು. ಹೀಗಿದ್ದರೂ 2 ಕೋಟಿ ವಾಹನಗಳ ಪೈಕಿ ಕೇವಲ ಮೂವತೈದು ಲಕ್ಷ ವಾಹನಗಳಿಗೆ ಹೆಚ್ಎಸ್ಆರ್ ಪಿ(HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ವಾಹನ ಸವಾರರಿಗೆ ದಂಡದ ಆಘಾತ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ.

ಇದನ್ನೂ ಕೂಡ ಓದಿ : Bara Parihara Amount Status Check : ಇನ್ನೂ ನಿಮಗೆ ಬೆಳೆ ಪರಿಹಾರ ಹಣ ಬಾರದಿದ್ದರೆ ಈ 1 ಕೆಲಸ ಮಾಡಿ 5 ನಿಮಿಷದಲ್ಲಿ ಹಣ ನಿಮ್ಮ ಖಾತೆಗೆ ಜಮೆ

ಅಕಸ್ಮಾತ್, ಹೆಚ್ಎಸ್ಆರ್ ಪಿ(HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಗ್ಯಾರಂಟಿ. ಮೇ 31ಕ್ಕೆ ಈ ಗಡುವು ಮುಗಿದ ನಂತರ ಹೆಚ್ಎಸ್ಆರ್ ಪಿ(HSRP) ನಂಬರ್ ಪ್ಲೇಟ್ ಇಲ್ಲದಿರುವ ವಾಹನ ಮಾಲೀಕರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಹೆಚ್ಎಸ್ಆರ್ ಪಿ(HSRP) ನಿಯಮದ ಮೊದಲ ಬಾರಿ ಉಲ್ಲಂಘನೆಗೆ ₹1000 ದಂಡ ವಿಧಿಸುತ್ತಾರೆ. ನಂತರದ ಉಲ್ಲಂಘನೆಗೆ ಪ್ರತಿ ಬಾರಿ ₹1,000 ರೂಪಾಯಿ ದಂಡ ಗ್ಯಾರಂಟಿ ಆಗಿದೆ.

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply