ಬಿಡದಿ ಟೌನ್‌ಶಿಪ್ ಜಟಾಪಟಿ ತೀವ್ರಗೊಂಡಿದೆ. ಯೀಜನೆಯ ಅಂತಿಮ ಅಧಿಸೂಚನೆ ಪ್ರಕಟ ಬೆನ್ನಲ್ಲೇ ರೈತರ ಆಕ್ರೋಶ ಜೋರಾಗಿದ್ದು, ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ರೈತರು ಸಿದ್ಧತೆ ನಡೆಸಿದ್ದಾರೆ.
ಇದರ ನಡುವೆಯೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್ ಸರ್ಕಾರದ ರಿಯಲ್ ಎಸ್ಟೇಟ್, ಡಿಕೆಶಿಯೇ ರಿಯಲ್ ಎಸ್ಟೇಟ್ ದೊರೆ ಎಂದು ಗುಡುಗಿದ್ದಾರೆ.
ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ!
ಟೌನ್ಶಿಪ್ ಹೆಸರಲ್ಲಿ ರೈತರ ಜಮೀನು ಕಬಳಿಸಲು ನಾವು ಬಿಡೋದಿಲ್ಲ ಎಂದು ಕುಮಾರಸ್ವಾಮಿ ಅವರು, ಈ ರಿಯಲ್ ಎಸ್ಟೇಟ್ ದಂಧೆಗೆ ಡಿಕೆಶಿಯೇ ದೊರೆ ಎಂದು ಆರೋಪ ಮಾಡಿದ್ದಾರೆ. 3 ಎಕರೆ ಇದ್ದ ಪಿತ್ರಾರ್ಜಿತ ಆಸ್ತಿ 1400 ಕೋಟಿ ಹೇಗಾಯ್ತು ಎಂದು ಹೆಚ್ಡಿಕೆ ಪ್ರಶ್ನೆ ಮಾಡಿದ್ರು.
ಡಿಕೆಶಿಗೆ ಪ್ರಶ್ನೆಗಳ ಸುರಿಮಳೆ
ಬಿಡದಿ ಟೌನ್ ಶಿಪ್ ಗೆ ಮೋದಿ ಗ್ರೀನ್ ಸಿಗ್ನಲ್ ಎಂದ ಸಿಎಂ ಡಿಕೆಶಿ ಹೇಳಿಕೆ ಬಗ್ಗೆ ಮಾತಾಡಿದ ಕುಮಾರಸ್ವಾಮಿ, ಮೋದಿಯವ್ರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೋ, ಇಲ್ವೋ ನನಗೆ ಗೊತ್ತಿಲ್ಲ. ಡಿಕೆಶಿ ಟೌನ್ ಶಿಪ್ ಮಾಡಿದ್ದ ಜಾಗ ಯಾವುದು? ಟೌನ್‌ಶಿಪ್ ಮಾಡಲು ನನ್ನ ಅಭ್ಯಂತರ ಇಲ್ಲ. ಈ ಹಿಂದೆ BMICP ಎಂಬ ಪ್ರಾಧಿಕಾರ ರಚಿಸಿದ್ರು. ಆ ಪ್ರಾಧಿಕಾರಕ್ಕ ಡಿಕೆಶಿ ಅಧ್ಯಕ್ಷರಾಗಿದ್ರು, ಏನಾಯ್ತು ಅದು? ಬೆಂ-ಮೈ ರಸ್ತೆಯಲ್ಲಿ 1.75ಲಕ್ಷ ಎಕರೆ ಭೂಮಿಯನ್ನು ರಸ್ತೆಗೆ ಮತ್ತು ಟೌನ್‌ಶಿಪ್ ಮಾಡಲು ವಶಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ರು. ಕಳೆದ 30 ವರ್ಷಗಳಲ್ಲಿ ಏನಾಯ್ತು ಆ ಪ್ರಾಜೆಕ್ಟ್? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
‘ಕುಮಾರಸ್ವಾಮಿ ಕೂಸು ಅಂತಿದ್ದಾರೆ’
ಕುಮಾರಸ್ವಾಮಿ ಕೂಸು ಎಂದು ಬಿಡದಿ ಟೌನ್ ಶಿಪ್ ಮಾಡಲು ತರಾತುರಿಯಲ್ಲಿ ಹೊರಟಿದ್ದಾರೆ. ಅವತ್ತು ಇದೇ ಕಾಂಗ್ರೆಸ್ ಹೆಚ್‌ಕೆ ಪಾಟೀಲರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ಎಂದು ಮಾಡಿಕೊಂಡಿದ್ರು. ಕುಮಾರಸ್ವಾಮಿ ಬೆಂಗಳೂರು ಸುತ್ತಮುತ್ತ ರೈತರ ಭೂಮಿ ಕಬಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ರು. ಅವತ್ತು ಮೂರು ಬಾರಿ ರೈತರನ್ನು ಕೃಷ್ಣಾ ಕಚೇರಿಗೆ ಕರೆಸಿ ಚರ್ಚಿಸಿದ್ದೆನು. ಅಂದು ಆ ಭಾಗದ ರೈತರ ಭಾವನೆಗಳಿಗೆ ಸ್ಪಂದಿಸಿ ಕೆಲ ತೀರ್ಮಾನ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
3 ಎಕರೆ, 14000 ಆಗಿದ್ದು ಹೇಗೆ?
ಮೊದಲೇ ಡಿಕೆಶಿ ರಿಯಲ್ ಎಸ್ಟೇಟ್ ದೊರೆ, ತರಾತುರಿಯಲ್ಲಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡ್ತಿದ್ದಾರೆ. 1999ರಲ್ಲಿ ಪಿತ್ರಾರ್ಜಿತ ಆಸ್ತಿ 3 ಎಕರೆ ಎಂದು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ ಡಿಕೆ ಶಿವಕುಮಾರ್, 2018 ರಲ್ಲಿ 1400 ಕೋಟಿ ಆಸ್ತಿ ಘೋಷಿಸಿದ್ದಾರೆ. 3 ಎಕರೆ ಇದ್ದವರ ಆಸ್ತಿ 1400ಕೋಟಿ ಆಸ್ತಿ ಹೇಗಾಯ್ತು? ಜನಕ್ಕೂ ಇದರ ಬಗ್ಗೆ ತಿಳಿಸಲಿ. 1-2 ಎಕರೆ ಇಟ್ಟಿರುವ ರೈತರು ಅವ್ರಂತೆ ಶ್ರೀಮಂತರಾಗಲು ಸಲಹೆ ನೀಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
‘ಸರ್ಕಾರವೇ ರಿಯಲ್ ಎಸ್ಟೇಟ್ ಏಜೆಂಟ್’
ನರೇಂದ್ರ ಮೋದಿಯವರು ಉಪಯೋಗಕ್ಕೆ ಬಾರದ ಬರಡು ಭೂಮಿಯಲ್ಲಿ ಟೌನ್ ಶಿಪ್ ಮಾಡಲು ಹೊರಟಿದ್ದು. ಇವರು ಮಾಡ್ತಿರೋ ಜಾಗದಲ್ಲಿ ಲಕ್ಷಾಂತರ ತೆಂಗು, ಅಡಿಕೆ ಬೆಳೆ ಬೆಳೆಯುತ್ತಾರೆ. ಟೌನ್ ಶಿಪ್ ಮಾಡಪ್ಪ, ಎಲ್ಲಿ ರೈತರಿಗೆ ಉಪಯೋಗ ಬಾರದ ಭೂಮಿ ಇದೆ ಅಲ್ಲಿ ಮಾಡಿ. ಬಿಡದಿ ಬಳಿ ಉತ್ತಮ ನೀರಾವರಿ ಸೌಲಭ್ಯಗಳಾಗಿದೆ. ಪ್ರತಿ ತಿಂಗಳು ಹೈನುಗಾರಿಕೆಯಲ್ಲಿ 6 ಲಕ್ಷ ಲೀಟರ್ ಹಾಲು ಬೆಂಗಳೂರು ಡೈರಿಗೆ ಪೂರೈಕೆ ಆಗ್ತಿದೆ. ಇಂತಹ ಜಾಗದಲ್ಲಿ ಟೌನ್‌ಶಿಪ್ ಮಾಡಿ ಏನು ಸಾಧನೆ ಮಾಡ್ತೀರಾ? ಕೆಲ ರೈತರು ಯೋಜನೆ ಪರ ಇರಬಹುದು. ಆದ್ರೆ ವಿರೋಧ ಮಾಡುತ್ತಿರುವವರ ಸಂಖ್ಯೆ ಶೇ 80% ಇದೆ. ಸರ್ಕಾರವೇ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗಿದ್ದಾರೆ.
3 ಎಕರೆ ಇದ್ದ ಜಮೀನು 1400 ಕೋಟಿ ಆಗಿದ್ದು ಹೇಗೆ? ಡಿಕೆಶಿ ರಿಯಲ್ ಎಸ್ಟೇಟ್ ದೊರೆ ಎಂದು ಕುಮಾರಸ್ವಾಮಿ ಕಿಡಿ
WhatsApp Group
Join Now