ರಾಜ್ಯಸಭಾ ಸ್ಥಾನ‌ ಕೇಳಿಲ್ಲ, ಚರ್ಚೆಯೂ ನಡೆಸಿಲ್ಲ : ಎಚ್.ಡಿ.ದೇವೇಗೌಡ ಸ್ಪಷ್ಟನೆ

Spread the love

ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೆಹಲಿ ಬಿಜೆಪಿ ನಾಯಕರ ಜತೆ‌ ಮಾತುಕತೆಯನ್ನೂ ನಡೆಸಿರಲಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ದೇವೆಗೌಡರಿಗೆ ರಾಜ್ಯಸಭೆಗೆ ಆಯ್ಕೆ ಮಾಡದೆ ಬಿಜೆಪಿ ಮೋಸ ಮಾಡಿದೆ ಎಂಬ ಕಾಂಗ್ರೆಸ್ ಹೇಳಿಕೆ ಹಾಗೂ ಮಾಧ್ಯಮಗಳ ವರದಿ ಕಪೋಕಲ್ಪಿತವಾಗಿವೆ.

ಅದಕ್ಕಾಗಿ ಎರಡು ದಿನ ಟಿ.ವಿಯನ್ನೇ ಬಂದ್ ಮಾಡಿದ್ದೆ. 18 ಶಾಸಕರನ್ನು ಹೊಂದಿರುವ ಜೆಡಿಎಸ್ ರಾಜ್ಯಸಭೆಗೆ ಹೇಗೆ ಆಯ್ಕೆ ಮಾಡುತ್ತದೆ. ದೇವೇಗೌಡರನ್ನು ಆಯ್ಕೆ‌ ಮಾಡಬೇಕು ಎನ್ನುವುದು ಸ್ನೇಹಿತರು, ಹಿತೈಷಿಗಳು ಹಾಗೂ ಪಕ್ಷದ ‌ಮುಖಂಡರು, ಕಾರ್ಯಕರ್ತರ ಆಶಯವಾಗಿತ್ತು ಅಷ್ಟೆ.‌ ನಾನಾಗಲಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರಾಗಲಿ ಈ ಕುರಿತು ಯಾವುದೇ ಚರ್ಚೆ ನಡೆಸಿರಲಿಲ್ಲ ಎಂದು‌ ಸ್ಪಷ್ಟಪಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ದೇಶದ ಪ್ರಧಾನಿ ಸ್ಥಾನದವರೆಗೆ ರಾಜಕೀಯವಾಗಿ ಬೆಳೆದೆ. ಇಂದು ನರೇಂದ್ರ ಮೋದಿ ಅವರು ದೇಶಕ್ಕೆ ಉತ್ತಮ ಆಡಳಿತ ನೀಡುತ್ತಿದ್ದಾರೆ. ಪಕ್ಷಕ್ಕೆ ಬಹುಮತ ಬಂದಾಗಲೂ ಮಿತ್ರ ಪಕ್ಷಗಳನ್ನು ಕಡೆಗಣಿಸಿಲ್ಲ‌. ಅವರ‌ ನನ್ನ ಸಂಬಂಧ ಚೆನ್ನಾಗಿದೆ. 10 ವರ್ಷಗಳಿಂದ ಉತ್ತಮ‌ ಒಡನಾಟ ಇಟ್ಟುಕೊಂಡಿದ್ದೇನೆ‌. ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಅಂತಹ ಸಂಬಂಧ ಹಾಳಾಗುತ್ತದೆಯೇ ಎಂದು ಪ್ರಶ್ನಿಸಿದರು.

WhatsApp Group Join Now

Spread the love

Leave a Reply