ರಾಮನಗರ ಜಿಲ್ಲೆಯ ಬಿಡದಿ ಬಳಿಯ ಭದ್ರಾಪುರದ ಹಕ್ಕಿ-ಪಿಕ್ಕಿ ಕಾಲೋನಿ ರೈಲ್ವೆ ಟ್ರ್ಯಾಕ್ ಸಮೀಪ ನಿನ್ನೆ ( ಮೇ 14) 15 ವರ್ಷದ ವಿಕಲಚೇತನ ಹುಡುಗಿಯೊಬ್ಬಳ ಮೃತದೇಹ ಕಂಡುಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಬಗ್ಗೆ ಆಕ್ರೋಶ ಹೊರಹಾಕಿ ನ್ಯಾಯ ಕೊಡಿಸಬೇಕೆಂದು ಪೋಸ್ಟ್ ಮಾಡಿದ್ದಾರೆ.
ಈ ಹುಡುಗಿ ನಾಲೈದು ದಿನಗಳಿಂದ ಕಾಣೆಯಾಗಿದ್ದಳು ಎನ್ನಲಾಗಿದೆ. ಅವಳ ಮೃತದೇಹವ ಗಂಭೀರವಾದ ಗಾಯಗಳೊಂದಿಗೆ ಕಂಡುಬಂದಿದ್ದು, ನಾಲ್ವರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
LPG Gas Cylinder : ಮನೆಯಲ್ಲಿ ‘ಗ್ಯಾಸ್’ ಸಂಪರ್ಕವಿದ್ಯಾ.? ಹಾಗಿದ್ರೆ, ನೀವು 50 ಲಕ್ಷ ರೂ.ಗಳ ಉಚಿತ ವಿಮೆಗೆ ಹೇಗೆ ಅರ್ಹರು ಗೊತ್ತಾ.?
ಇನ್ನು ಬಾಲಕಿಯು ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ್ದಳು ಮತ್ತು ಮಾತುಗಳು ಮತ್ತು ಕೇಳುವ ಸಾಮರ್ಥ್ಯವಿಲ್ಲದವಳಾಗಿದ್ದಳು. ಅವಳನ್ನು ಕನಿಷ್ಠ 4ಕ್ಕೂ ಹೆಚ್ಚು ಜನರು ಸೇರಿ ಅತ್ಯಾಚಾರ ಮಾಡಿ, ಬೆನ್ನು ಮೂಳೆ ಮುರಿದು, ಕತ್ತನ್ನು ತಿರುಚಿ, ಅತಿಯಾದ ಹಿಂಸೆಗೆ ಗುರಿಯಾಗಿಸಿ ಕೊಂದು, ರೈಲ್ವೆ ಟ್ರ್ಯಾಕ್ ಬಳಿ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ #JusticeforKushi ಎನ್ನುವ ಹ್ಯಾಶ್ ಟ್ಯಾಗ್ ನೊಂದಿಗೆ ಟ್ರೆಂಡ್ ಆಗಿದ್ದು, ಜನರು ಆರೋಪಿಗಳಿಗೆ ತಕ್ಕ ಶಿಕ್ಷೆ ಒದಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅತ್ತ ಮೃತಳ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ತನ್ನ ಮಗಳ ಈ ಪರಿಸ್ಥಿತಿಗೆ ಕಾರಣರಾದ ಕಾಮುಕರಿಗೆ ಶಿಕ್ಷೆ ಕೊಡಿಬೇಕೆಂದು ಮನವಿ ಮಾಡಿಕೊಂಡಿದ್ದಾರೆ.