2026ರ ತಮಿಳು ನಾಡು ವಿಧಾನಸಭೆ ಚುನಾವಣೆಯನ್ನು (Tamilnadu Elections 2026 ) ಡೇವಿಡ್ vs ಗೋಲಿಯಾತ್ ಕತೆಗೆ ಹೋಲಿಕೆ ಮಾಡಿ ಕರೆಯಲಾಗುತ್ತಿದೆ. ಅಂದರೆ ದೈತ್ಯನಾಗಿ ಇರುವ ಅಣ್ಣನನ್ನು, ಸಣ್ಣ ತಮ್ಮ ಸೋಲಿಸಿದ ಎನ್ನುವುದು ಈ ಕತೆಯ ಸಾರಾಂಶ. ಮೊದಲ ಬಾರಿ ಚುನಾವಣೆಗೆ ನಿಂತ ಟಿವಿಕೆಯು, ಡಿಎಂಕೆ ಕೋಟೆಯನ್ನು ಹೊಡೆದುರುಳಿಸಿದೆ ಎಂದು ರೂಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಈ ಬಾರಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಸುದ್ದಿಯಾಗಿದ್ದು, ಇಬ್ಬರು ಸಾಮಾನ್ಯ ವ್ಯಕ್ತಿಗಳಿಗೆ ಟಿಕೆಟ್ ಕೊಟ್ಟಿದ್ದಕ್ಕೆ. ಹೌದು ಅವರೇ, ಒಬ್ಬರು ತನ್ನ ಕಾರು ಚಾಲಕನ ಮಗ. ಇನ್ನೊಬ್ಬರು ಆಟೋ ಚಾಲಕ ವಿಜಯ್ ಧಾಮು(K Vijay Dhamu). ಇಬ್ಬರು ಸಾಮಾನ್ಯ ವ್ಯಕ್ತಿಗಳು ವಿಜಯ್ನ ನಂಬಿಕೆ ಉಳಿಸಿಕೊಂಡು ಗೆದ್ದು ಬೀಗಿದ್ದಾರೆ.
ಇಬ್ಬರು ನುರಿತ ನಾಯಕರನ್ನು ಸೋಲಿಸಿದ ಧಾಮು
ಕೆ.ವಿಜಯ್ ಧಾಮು ರಾಯಪುರಂ ಕ್ಷೇತ್ರದ ಮೂಲಕ ಸ್ಪರ್ಧಿಸಿದ್ದರು. ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಮತ್ತು ಐದು ಬಾರಿ ಶಾಸಕರಾಗಿದ್ದ ಡಿ. ಜಯಕುಮಾರ್ ಹಾಗೂ ಡಿಎಂಕೆ ಬೆಂಬಲಿತ ಅಭ್ಯರ್ಥಿ ಸುಬೈರ್ ಖಾನ್ ಅವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಎಷ್ಟು ಅಂತರದ ಮತಗಳಿಂದ ಗೆಲುವು
ಕೆ.ವಿಜಯ್ ಧಾಮು ಅವರು 55 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದಾರೆ, ತಮ್ಮ ಪ್ರತಿಸ್ಪರ್ಧಿಗಿಂತ 14,000 ಮತಗಳ ಅಂತರದಿಂದ ಆ ಸ್ಥಾನವನ್ನು ಗೆದ್ದರು. ಈ ಗೆಲುವು ವಿಶೇಷವಾಗಿ ಮಹತ್ವದ್ದಾಗಿದೆ ಏಕೆಂದರೆ ಎಐಎಡಿಎಂಕೆಯ ಪ್ರಬಲ ವ್ಯಕ್ತಿ ಮತ್ತು ಐದು ಬಾರಿ ಶಾಸಕ ಡಿ. ಜಯಕುಮಾರ್ ಸೋಲನುಭವಿಸಿದ್ದಾರೆ.ಡಿ. ಜಯಕುಮಾರ್ 18,000 ಕ್ಕೂ ಹೆಚ್ಚು ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದರೆ, ಹಿರಿಯ ನಾಯಕ ಮಾಜಿ ಸಚಿವ ರೆಹಮಾನ್ ಖಾನ್ ಅವರ ಪುತ್ರ ಡಿಎಂಕೆಯ ಸುಬೈರ್ ಖಾನ್ ಎರಡನೇ ಸ್ಥಾನ ಪಡೆದರು. ಆದರೆ ಚೆನ್ನೈ ಮತ್ತು ತಮಿಳುನಾಡಿನ ಉಳಿದ ಭಾಗಗಳನ್ನು ಆವರಿಸಿರುವ ವಿಜಯ್ ಅಲೆಯನ್ನು ತಡೆದುಕೊಳ್ಳುವಲ್ಲಿ ವಿಫಲರಾದರು.
ಒಬ್ಬ ಸಾಮಾನ್ಯ ಆಟೋ ಚಾಲಕನಿಗೆ ಟಿಕೆಟ್ ನೀಡಿ, ಪ್ರಬಲ ರಾಜಕೀಯ ಶಕ್ತಿಗಳ ವಿರುದ್ಧ ಗೆಲ್ಲಿಸುವ ಮೂಲಕ ನಟ ವಿಜಯ್ ಅವರ ‘ಜನಸಾಮಾನ್ಯರ ರಾಜಕಾರಣ’ ಕ್ಕೆ ಯಶಸ್ವಿಯಾಗಿದೆ. ಕ್ಷೇತ್ರದಲ್ಲಿ ಧಾಮು ಅವರ ಸರಳತೆ ಮತ್ತು ಜನರೊಂದಿಗಿನ ಒಡನಾಟ ಈ ಅನಿರೀಕ್ಷಿತ ಗೆಲುವಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ವಿಜಯ್ ಧಾಮು ಯಾರು?
ವಿಜಯ್ ಮಕ್ಕಳ್ ಇಯಕ್ಕಂ ಅಂದರೆ ವಿಜಯ್ ಅಭಿಮಾನಿಗಳ ಸಂಘದ ಭಾಗದಲ್ಲಿದ್ದ ಧಾಮು ಸಾಮಾನ್ಯ ವ್ಯಕ್ತಿ. ನೀವು ನಮ್ಮನ್ನು ಹೊಸಬರು ಎನ್ನಬಹುದು ಆದರೆ, ನಾಬು ನಿಮಗಾಗಿ ಕೆಲಸ ಮಾಡಿದ್ದೇವೆಎಂದು ಧಾಮು ಹೇಳಿದ್ದರು. 1991ರಿಂದ ರಾಯಪುರಂ ಕ್ಷೇತ್ರದಿಂದ ಜಯ ಕುಮಾರ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಾರಿಯ ಸೋಲು ನಿಜಕ್ಕೂ ದೊಡ್ಡ ಹೊಡೆತವಾಗಿದೆ. ಶಾಸಕ ಐಡ್ರೀಮ್ ಆರ್ ನೈರ್ತಿ ಅವರು ಕೈ ಬಿಟ್ಟ ನಂತರ ಸುಬೈರ್ ಖಾನ್ ಅವರನ್ನು ಡಿಎಂಕೆ ಕಣಕ್ಕೆ ಇಳಿಸಿತ್ತು.