Drought Relief : ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ಗುಡ್ ನ್ಯೂಸ್! ರಾಜ್ಯದ ರೈತರ ಖಾತೆಗಳಿಗೆ ಬೆಳೆ ಹಾನಿ, ಬರ ಪರಿಹಾರ ಹಣ, ಎರಡನೇ ಕಂತಿನ ಹಣ ಜಮಾ. ರಾಜ್ಯ ಸರ್ಕಾರದಿಂದ ರಾಜ್ಯದ ಕೆಲವು ಜಿಲ್ಲೆಗಳಿಗೆ ಮತ್ತು ಕೆಲವು ತಾಲೂಕುಗಳನ್ನ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿತ್ತು. ಬರಪೀಡಿತ ತಾಲೂಕುಗಳ ರೈತರ ಖಾತೆಗಳಿಗೆ ಪ್ರತಿ ಹೆಕ್ಟೇರ್ ಭೂಮಿಗೆ ₹22,500 ರೂಪಾಯಿಗಳನ್ನ ಬಿಡುಗಡೆ ಗೊಳಿಸಬೇಕೆಂದು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳನ್ನ ಬಿಡುಗಡೆಗೊಳಿಸಲಾಗಿತ್ತು.
ಅದೇ ಪ್ರಕಾರವಾಗಿ, ರೈತರ ಖಾತೆಗಳಿಗೆ ಹಣ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ರೈತರ ಖಾತೆಗಳಿಗೆ ವರ್ಗಾವಣೆಯಾಗಲಿದೆ. ಬರ ಪರಿಸ್ಥಿತಿಯಿಂದ ಶೇಕಡಾ 33 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಠ ಎರಡು ಹೆಕ್ಟೇರ್ ಗಳಿಗೆ ಸೀಮಿತಗೊಳಿಸಿ, ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹8500 ರೂ.ಗಳು, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹17,000 ರೂ ಗಳು ಮತ್ತು ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹22,500 ರೂ ಗಳು ನಿಗದಿಪಡಿಸಲಾಗಿದೆ.
ಇದನ್ನೂ ಕೂಡ ಓದಿ : Free Laptop Scheme : ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಭಾಗ್ಯ.! ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ.?
2023 ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಬೆಳೆ ಹಾನಿ ಪರಿಹಾರವಾಗಿ ಅರ್ಹತೆಗೆ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ ₹2000 ರೂ ಗಳವರೆಗೆ ರೈತರಿಗೆ ಪಾವತಿಸಲು ಸರಕಾರವು ಅನುಮತಿಯನ್ನ ನೀಡಲಾಗಿರುತ್ತೆ. ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆ ಇರುವ ರೈತರಿಗೆ ಹೆಚ್ಚುವರಿ ಬೆಳೆ ಹಾನಿ ಪರಿಹಾರ ಬಿಡುಗಡೆ ಗೊಳಿಸಲಾಗುವುದು.
FID ಹೊಂದಿರುವ ರೈತರ ಮಾಹಿತಿಯನ್ನು ಆಧರಿಸಿ ಮೊದಲನೇ ಹಂತದಲ್ಲಿ ಗರಿಷ್ಠ ₹2000 ರೂ ಗಳಂತೆ ಒಟ್ಟು 65,170 ರೈತರಿಗೆ ಇನ್ ಪುಟ್ ಸಬ್ಸಿಡಿ ಮೊತ್ತವನ್ನ ಜಮೆ ಮಾಡಲಾಗುತ್ತದೆ. ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತವನ್ನ ಮೇ 2 ರಂದು ಎಂಟು 40,810 ರೈತರಿಗೆ ಇನ್ ಪುಟ್ ಸಬ್ಸಿಡಿ ಹಣ ಜಮೆ ಮಾಡಲು ಅನುಮೋದನೆ ನೀಡಲಾಗಿತ್ತು. ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆ ಮಾಡುತ್ತಾರೆ.
ಇದನ್ನೂ ಕೂಡ ಓದಿ : Drought Relief : ಬೆಳೆ ಪರಿಹಾರ ಹಣ ಬಿಡುಗಡೆ.! ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯಾ ಚೆಕ್ ಮಾಡಿಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಹಾಗೂ ಬೆಳೆ ಪರಿಹಾರ ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರನ್ನ ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ. ಸಹಾಯವಾಣಿಯನ್ನೂ ತೆರೆಯಲಾಗಿತ್ತು. ಸಾರ್ವಜನಿಕರು ದೂರುಗಳನ್ನ ಬೆಳಿಗ್ಗೆ 10 ರಿಂದ ಸಂಜೆ 6:00 ಗಂಟೆವರೆಗೆ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ. ಹಾಗೂ ಸಂಬಂಧಪಟ್ಟ ತಾಲೂಕು ಕೃಷಿ ಅಧಿಕಾರಿ ತಹಶೀಲ್ದಾರ್ ಅವರ ಕಚೇರಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ರಾತ್ರಿ ಸಮಯದಲ್ಲಿ ಈ ರೀತಿಯಾದರೆ ನಿರ್ಲಕ್ಷಿಸಬೇಡಿ, ಇದು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು
- Horoscope Today : 06 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಇನ್ಮುಂದೆ ರಾಜ್ಯದಲ್ಲಿ ಭೂ ದಾಖಲೆಗಳು ಸಂಪೂರ್ಣ ಡಿಜಿಟಲೀಕರಣ : ಕೃಷ್ಣ ಬೈರೇಗೌಡ
- ಬಳ್ಳಾರಿ ಬ್ಯಾನರ್ ಗಲಭೆ : ಎಚ್ ಡಿಕೆ, ಜನಾರ್ಧನ್ ರೆಡ್ಡಿ ವಿರುದ್ಧ ಕಿಡಿಕಾರಿದ ಡಿಸಿಎಂ ಡಿ.ಕೆ ಶಿವಕುಮಾರ್
- ನದಿಗೆ ಹಾರಿ ಯುವತಿ ಆತ್ಮಹತ್ಯೆ: ಪ್ರೇಮ ವಂಚನೆ ಕಾರಣ.?
- ‘ನನ್ ಗಾಡಿ ನಂಗ್ ಬೇಕು.. ಕೊಡ್ತೀರೋ ಇಲ್ವೋ..’: ಹಾವು ತೋರಿಸಿ ಟ್ರಾಫಿಕ್ ಪೊಲೀಸರಿಗೆ ಆಟೋ ಚಾಲಕ ಬೆದರಿಕೆ
- ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ, ಸ್ಥಳದಲ್ಲೇ ಪ್ರಾಣ ಬಿಟ್ಟ ಇಬ್ಬರು ಯುವಕರು
- ಬೈಕ್ʼಗೆ ಹಿಂಬದಿಯಿಂದ ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
- ಬೆಂಗಳೂರಲ್ಲಿ ಘೋರ ದುರಂತ : ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಬಿದ್ದು ‘ಮಹಿಳಾ ಟೆಕ್ಕಿ’ ದಾರುಣ ಸಾವು.!
- ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಜೊತೆಗೆ ಮೈತ್ರಿಗೆ ಬಿಜೆಪಿ ಪರಿಶೀಲನೆ : ಅಮಿತ್ ಶಾ ಹೇಳಿದ್ದೇನು?
- ಇರಾನ್, ಅಮೆರಿಕಾದಿಂದ ಭದ್ರತೆ ಕರೆಸಿಕೊಳ್ಳುವುದಾದರೆ, ನೀವೇನು ದನ ಕಾಯೋದಿಕ್ಕೆ ಇದ್ದೀರಾ : ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ
- ತಾಸುಗಟ್ಟಲೆ ಮೊಬೈಲ್ ನಲ್ಲಿ ವೈದ್ಯನ ಲಲ್ಲೆ – ನರಳಿ ನರಳಿ ಪ್ರಾಣಬಿಟ್ಟ ರೋಗಿ.!
- ಜನಾರ್ಧನ್ ರೆಡ್ಡಿ Z+ ಆದ್ರೂ ಕೇಳಲಿ, ಇರಾನ್ ನಿಂದ ಭದ್ರತೆನಾದ್ರೂ ಕರೆಸಿಕೊಳ್ಳಲಿ : ಡಿಸಿಎಂ ಡಿಕೆ ಶಿವಕುಮಾರ್ ಲೇವಡಿ
- ಅಡಿಕೆ ರೇಟ್ | 05 ಜನವರಿ 2026| ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ?
- ಓಂ ಶಕ್ತಿ ಮಾಲಾಧಾರಿಗಳ ಮೇಲೆ ಬಾಲಕರಿಂದ ಕಲ್ಲೆಸೆತ, ಮೂವರು ಅರೆಸ್ಟ್ : ಗೃಹ ಸಚಿವ ಜಿ. ಪರಮೇಶ್ವರ್
- Dina Bhavishya : 05 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಹಳೆ ವಾಹನ ಇಟ್ಟುಕೊಂಡಿದ್ದೀರಾ ಈ ಸುದ್ದಿ ಓದಿ ಇಲ್ಲದಿದ್ದರೆ ನಿಮ್ಮ ಗಾಡಿ ಗುಜರಿ ಸೇರೋದು ಗ್ಯಾರಂಟಿ
- ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿ
- ನಮಗೆ ಪ್ರಾಣಭೀತಿ ಇದೆ ದಯವಿಟ್ಟು Z+ ಭದ್ರತೆ ಒದಗಿಸಿ : ಸಿಎಂ ಸಿದ್ದರಾಮಯ್ಯಗೆ ಶಾಸಕ ಜನಾರ್ದನ ರೆಡ್ಡಿ ಪತ್ರ.!
- Health Tips : ಲೈಂಗಿಕ ಕ್ರಿಯೆ ನಡೆಸಿದ ನಂತರ ಮೂತ್ರ ವಿಸರ್ಜನೆ ತಡೆಹಿಡಿಯಬಾರದು ಏಕೆ ಗೊತ್ತಾ.?



















