ಮೇಷ :-
ಗಣೇಶನ ಆಶೀರ್ವಾದದೊಂದಿಗೆ ಈ ದಿನವು ನಿಮಗೆ ಒಂದು ಸುದಿನವಾಗಲಿದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ಇಂದು ನಿಮ್ಮ ಕೆಲಸವನ್ನು ನೀವು ಅತ್ಯಂತ ಉತ್ಸಾಹದಿಂದ ಪೂರೈಸುತ್ತೀರಿ. ಲಕ್ಷ್ಮೀದೇವಿಯು ನಿಮ್ಮನ್ನು ಅನುಗ್ರಹಿಸಬಹುದು. ನೀವು ನಿಮ್ಮ ದಿನವನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯಬಹುದು.
ನಿಮ್ಮ ತಾಯಿಯಿಂದ ಪ್ರಯೋಜನವಾಗಲಿದೆ. ನಿಮ್ಮ ಸ್ಥಳದಲ್ಲಿ ಸ್ನೇಹಿತರು ಮತ್ತು ಸಂಬಂಧಿಗಳ ಉಪಸ್ಥಿತಿಯು ನಿಮ್ಮ ವಾತಾವರಣವನ್ನು ಆನಂದಮಯವಾಗಿರಿಸುತ್ತದೆ
ವೃಷಭ :-
ಜಾಗರೂಕತೆಯು ಇಂದು ನಿಮಗೆ ಸರಿಯಾದ ಪದ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಎಲ್ಲಾ ರೀತಿಯ ತೊಂದರೆಗಳು ಇಂದು ನಿಮ್ಮನ್ನು ಚಿಂತೆಗೀಡುಮಾಡುತ್ತವೆ. ಅನಾರೋಗ್ಯ ತೊಂದರೆ ಉಂಟಾಗಬಹುದು. ದೃಷ್ಟಿಗೆ ಸಂಬಂಧಿಸಿದ ತೊಂದರೆಗಳು ಕಂಡುಬರಬಹುದು. ನಿಮ್ಮ ಕುಟುಂಬ ಸದಸ್ಯರ ಯಾವುದೇ ವಿರೋಧಕ್ಕೆ ಇಂದು ನೀವು ಬಗ್ಗಬೇಡಿ. ಇಂದು ನೀವು ಕೈಗೆತ್ತಿಕೊಳ್ಳುವ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ನಿಮ್ಮ ಖರ್ಚುವೆಚ್ಚಗಳು ನಿಮ್ಮ ನಿರೀಕ್ಷೆಗಳಿಗಿಂತ ಹೆಚ್ಚಾಗಿರುತ್ತದೆ. ನೀವು ಯಶಸ್ಸನ್ನು ಕಾಣಬೇಕಾದರೆ ನೀವು ನಿಜವಾಗಿಯೂ ಕಠಿಣ ಶ್ರಮಪಡಲೇಬೇಕು. ಅಪಘಾತದ ಸಂಭಾವ್ಯತೆಯಿದೆ. ಎಚ್ಚರದಿಂದಿರಿ.
ಮಿಥುನ :-
ಇಂದು ನಿಮಗೆ ವಿಫುಲ ಲಾಭವಾಗಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ವಿವಾಹದ ಯೋಜನೆಯಲ್ಲಿರುವವರಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಧನಲಾಭ ಉಂಟಾಗುವ ಸಾಧ್ಯತೆಯಿದೆ. ಸ್ನೇಹಿತರೊಂದಿಗಿನ ಭೇಟಿಯು ಸಂತೋಷದಿಂದ ಕೂಡಿರುತ್ತದೆ. ಮತ್ತು ನಿಮಗೆ ಅವರಿಂದ ಪ್ರಯೋಜನ ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ, ಒಡಹುಟ್ಟಿದವರಿಂದ, ಪತ್ನಿಯಿಂದ ಮತ್ತು ಮಗನಿಂದಲೂ ನಿಮಗೆ ಪ್ರಯೋಜನ ಉಂಟಾಗಲಿದೆ. ಸ್ನೇಹಿತೆಯರು ನಿಮ್ಮಿಂದ ಸಹಾಯ ಕೇಳಬಹುದು ಮತ್ತು ಅದರಿಂದಾಗಿ ನಿಮಗೆ ಬಿಡುವಿಲ್ಲದಂತಾಗಬಹುದು. ನಿಮ್ಮ ಮಕ್ಕಳು ನಿಮಗೆ ಶುಭಸುದ್ದಿಯನ್ನು ತರುತ್ತಾರೆ. ವೃತ್ತಿಕ್ಷೇತ್ರದಲ್ಲಿ ನಿಮಗೆ ಲಾಭ ಉಂಟಾಗಲಿದೆ. ನಿಮ್ಮ ಸುತ್ತಲೂ ಮಹಿಳೆಯರು ಆವರಿಸಿರುತ್ತಾರೆ ಮತ್ತು ಇದು ನಿಮ್ಮ ದಿನವನ್ನು ಉತ್ಸಾಹದ ದಿನವನ್ನಾಗಿಸುತ್ತದೆ.
ಕರ್ಕಾಟಕ :-
ಈ ದಿನವು ನಿಮ್ಮ ಮನಸ್ಥಿತಿಗೆ ಒಪ್ಪುವ ರೀತಿಯಲ್ಲಿರುವಂತಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವಿರಿ. ನಿಮ್ಮ ಮೇಲಾಧಿಕಾರಿಗಳು ನಿಮ್ಮೊಂದಿಗೆ ಸಂತೋಷದಲ್ಲಿರುವ ಸಾಧ್ಯತೆಯಿದೆ. ಬಡ್ತಿ ಸಿಗಲಿದೆ. ನೀವು ನಿಮ್ಮ ಮೇಲಾಧಿಕಾರಿಗಳೊಂದಿಗೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಮನೆಯ ಅಲಂಕಾರದಲ್ಲಿನ ನಿಮ್ಮ ಆಸಕ್ತಿಯು ಮನೆಯ ಅಂದವನ್ನು ಬದಲಾಯಿಸುವಂತೆ ಪ್ರೇರೇಪಿಸುವ ಸಾಧ್ಯತೆಯಿದೆ. ಕಚೇರಿ ನಿಮಿತ್ತ ಪ್ರವಾಸ ತೆರಳುವ ಸಂಭವವಿದೆ. ತಾಯಿಯೊಂದಿಗಿನ ನಿಮ್ಮ ಸಂಬಂಧವು ಅನ್ಯೋನ್ಯವಾಗಿರಲಿದೆ. ಸರಕಾರಿ ಲಾಭ ಮತ್ತು ಪ್ರಯೋಜನಗಳು ಉಂಟಾಗಲಿವೆ. ದಿನಪೂರ್ತಿ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಿಂದಿರುತ್ತೀರಿ.
ಸಿಂಹ :-
ಈ ದಿನವು ನಿಮಗೆ ಸಾಮಾನ್ಯ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ನಿಗದಿಪಡಿಸಿದ ಗುರಿಯನ್ನು ಸಾಧಿಸಲು ಪ್ರಯತ್ನಿಸುವಿರಿ ಮತ್ತು ಅದರಲ್ಲಿ ಸಫಲರಾಗುವಿರಿ. ನಿಮ್ಮ ಮಾರ್ಗವು ನಿರ್ದಿಷ್ಟ ಗುರಿಯನ್ನು ಹೊಂದಿರುವ ಸಾಧ್ಯತೆಯಿದೆ. ಧಾರ್ಮಿಕ ಚಟುವಟಿಕೆಗಳು ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಯಾತ್ರಾಸ್ಥಳಕ್ಕೆ ತೆರಳಲು ಯೋಜನೆ ರೂಪಿಸಬಹುದು. ನೀವು ಸ್ವಲ್ಪ ಮಟ್ಟಿನ ದುರಾಕ್ರಮಣಕ್ಕೆ ಒಳಗಾಗಬಹುದು. ವಿದೇಶಗಳಲ್ಲಿ ನೆಲೆಸಿರುವ ಸಂಬಂಧಿಕರಿಂದ ಶುಭ ಸುದ್ದಿಯನ್ನು ನಿರೀಕ್ಷಿಸಿ.ಮಾನಸಿಕವಾಗಿ ಸ್ವಲ್ಪಮಟ್ಟಿಗೆ ಗೊಂದಲವಾಗಿರುವಂತೆ ಅನಿಸಬಹುದು. ಮಕ್ಕಳಿಗೆ ಸಂಬಂಧಿಸಿದ ಚಿಂತೆಗಳು ನಿಮಗೆ ತೊಂದರೆ ನೀಡಲಿವೆ. ಉದ್ಯಮಿಗಳು ಇಂದು ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿದೆ.
ಕನ್ಯಾ :-
ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇಂದು ಶುಭದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ನಿಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು. ವಿಶೇಷವಾಗಿ ಜಂಕ್ ಫುಡ್ ಮತ್ತು ರೆಸ್ಟೋರೆಂಟ್ ಆಹಾರವನ್ನು ನೀವು ದೂರ ಇರಲೇಬೇಕು.ಮತ್ತು ನಿಮ್ಮ ಸಿಟ್ಟು ಒಮ್ಮೆಗೇ ಭುಗಿಲೇಳುವ ಸಾಧ್ಯತೆಯಿರುವುದರಿಂದ ನಿಮ್ಮ ನಾಲಗೆಯ ಮೇಲೆ ಹಿಡಿತವಿರಲಿ. ಕುಟುಂಬ ಸದಸ್ಯರೊಂದಿಗೆ ಉದ್ರೇಕದ ಚರ್ಚೆಯಲ್ಲಿ ತೊಡಗುವುದನ್ನು ತಪ್ಪಿಸಿ. ಸಾಧ್ಯವಿದ್ದರೆ ನೀರಿನಿಂದ ದೂರವಿರಿ. ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಅನೈತಿಕ ಅಥವಾ ಸರಕಾರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ಕೊನೆಯದಾಗಿ ವಾಗ್ವಾದಗಳಿಂದ ದೂರಿವಿರಿ.
ತುಲಾ :-
ನಿಮ್ಮ ಪ್ರೀತಿಪಾತ್ರರೊಂದಿಗೆ ಮತ್ತು ನಿಮ್ಮ ಸ್ನೇಹಿತರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಮನಸ್ಸಿಗೆ ಸಂತಸ ಉಂಟಾಗಲಿದೆ. ಪ್ರಯಾಣ ಮಾಡಲು ಇಂದು ಸೂಕ್ತ ದಿನ. ಉಡುಪು ಮತ್ತು ಮನರಂಜನಾ ವಸ್ತುಗಳನ್ನು ಖರೀದಿಸುತ್ತೀರಿ. ಇಂದು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುವ ಸಾಧ್ಯತೆಯಿದೆ. ನಿಮ್ಮ ಯಶಸ್ಸು ವೃದ್ಧಿಸಲಿದೆ.
ವೃಶ್ಚಿಕ :-
ಇಂದಿನ ದಿನವಿಡೀ ನಿಮ್ಮ ಕುಟುಂಬದ ವಾತಾವರಣವು ಅತ್ಯಂತ ಉಲ್ಲಾಸದಾಯಕವಾಗಿರುತ್ತದೆ ಎಂಬುದಾಗಿ ಶ್ರೀಗಣೇಶ ಹೇಳುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಉತ್ಸಾಹದಿಂದಿರುತ್ತೀರಿ. ನಿಮ್ಮ ವೈರಿಗಳು ಇವತ್ತು ಸೋಲನ್ನು ಒಪ್ಪಿಕೊಳ್ಳುವರು. ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ದೊರಕಲಿದೆ. ಗೆಳತಿಯರ ಭೇಟಿಯು ಮನಸ್ಸಿಗೆ ಮುದ ನೀಡಲಿದೆ. ಇಂದು ಧನಲಾಭದ ಯೋಗವಿದೆ. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅನಾರೋಗ್ಯಪೀಡಿತರಿಗೆ ಸ್ವಲ್ಪ ಮಟ್ಟಿನ ಶಮನ ದೊರಕೀತು.
ಧನು :-
ಸೋಲಿನಿಂದ ಹತಾಶರಾಗಬೇಡಿ ಎಂಬುದಾಗಿ ಶ್ರೀಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಿ. ನಿಮ್ಮ ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಚಿಂತೆಗೊಳಗಾಗಬಹುದು. ಸಾಧ್ಯವಿದ್ದರೆ ಪ್ರಯಾಣ ಮಾಡುವುದನ್ನು ತಪ್ಪಿಸಿ.
ಮಕರ :-
ಈ ದಿನವು ನಿಮಗೆ ಒಂದು ಶುಭದಿನವಾಗಲಿದೆ ಎಂಬುದಾಗಿ ಶ್ರೀಗಣೇಶ ಶಕುನ ನುಡಿಯುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಉಲ್ಲಾಸದಿಂದಿರುತ್ತೀರಿ. ನಿಮ್ಮ ಕುಟುಂಬ ಸದಸ್ಯರಲ್ಲಿ ಅನಪೇಕ್ಷೀಯ ಘಟನೆಗಳು ನಡೆಯುವುದು ನಿಮ್ಮನ್ನು ಚಿಂತೆಗೀಡು ಮಾಡಬಹುದು. ನಿದ್ರಾಹೀನತೆಯು ನಿಮ್ಮನ್ನು ತೊಂದರೆಗೀಡುಮಾಡಬಹುದು. ನೀರಿನ ವಿಚಾರದೊಂದಿಗೆ ಮತ್ತು ಮಹಿಳೆಯೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ. ಹಣಕಾಸು ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಘನತೆಗೆ ಕುತ್ತು ತರುವಂತಹ ಘಟನೆಗಳು ಸಂಭವಿಸಬಹುದು.
ಕುಂಭ :-
ಮಾನಸಿಕ ಒತ್ತಡದಿಂದ ಇದು ನಿಮಗೆ ಶಮನ ದೊರಕುವ ಸಾಧ್ಯತೆಯಿದೆ ಎಂಬುದಾಗಿ ಶ್ರೀಗಣೇಶ ಹೇಳುತ್ತಾರೆ. ಇಂದು ನಿಮ್ಮ ದಿನವನ್ನು ಅತ್ಯಂತ ಸಂತೋಷದಿಂದಲೇ ಕಳೆಯುತ್ತೀರಿ. ಸ್ನೇಹಿತರೊಂದಿಗೆ ಮತ್ತು ಆಪ್ತರೊಂದಿಗೆ ಜೊತೆಗೂಡಲಿದ್ದೀರಿ. ಕೆಲವು ಮುಖ್ಯ ವಿಚಾರಗಳ ಬಗ್ಗೆ ಯೋಜನೆ ರೂಪಿಸಬಹುದು. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ.
ಮೀನ ‘-
ಮಿತಿಮೀರಿದ ವೆಚ್ಚವನ್ನು ನಿಯಂತ್ರಣದಲ್ಲಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಬೇರೆಯವರ ಮನಸ್ಸಿಗೆ ನೋವುಂಟುಮಾಡುವುದನ್ನು ತಪ್ಪಿಸಲು, ನಿಮ್ಮ ಮಾತು ಹಾಗೂ ದುರಾಕ್ರಮಣದ ಬಗ್ಗೆ ಹತೋಟಿಯಿಡಬೇಕು. ಹಣಕಾಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ದಿನವಿಡೀ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಋಣಾತ್ಮಕ ಆಲೋಚನೆಗಳು ನಿಮ್ಮೊಳಗೆ ಸೇರಿಕೊಳ್ಳಲು ಬಿಡಬೇಡಿ. ಮಿತಿಮೀರಿದ ಆಹಾರ ಸೇವನೆಯನ್ನು ತಪ್ಪಿಸಿ.
ಇಂದಿನ ದಿನ ಭವಿಷ್ಯ : 12 ರಾಶಿಗಳ ಫಲ ಹೇಗಿದೆ.? ನಿಮ್ಮ ರಾಶಿಗೆ ಶುಭವೇ, ಸವಾಲೇ.?
WhatsApp Group
Join Now