ಯಲ್ಲಾಪುರ ರಂಜಿತಾ ಹತ್ಯೆ ಮಾಡಿ ಪರಾರಿಯಾಗಿದ್ದ ರಫಿಕ್ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ಹಾಡಹಗಲೇ ರಂಜಿತಾ ಬನ್ಸೊಡೆ (30) ಎಂಬ ಮಹಿಳೆಗೆ ಇರಿದು ಪರಾರಿಯಾಗಿದ್ದ ರಫಿಕ್ ಯಳ್ಳೂರ ಭಾನುವಾರ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಳಮ್ಮಮಗರದ ರಫಿಕ್, ರಂಜಿತಾ ಬನ್ಸೊಡೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ನರಳುತ್ತಿದ್ದ ರಂಜಿತಾಳನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಳು. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಪರಾರಿಯಾದ ರಫೀಕ್ ಗಾಗಿ ಶೋಧ ನಡೆಸುತ್ತಿದ್ದರು. ಶೋಧಕ್ಕೆ … Read more

ಆರೋಪಿ ರಫೀಕ್ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ! ಪ್ರಮೋದ್ ಮುತಾಲಿಕ್ ಆಕ್ರೋಶ, ಯಲ್ಲಾಪುರ ಬಂದ್ ಕರೆ!

ಯಲ್ಲಾಪುರದಲ್ಲಿ ನಡೆದ ರಂಜಿತಾ ಹತ್ಯೆ ಸಾಕಷ್ಟು ದೊಡ್ಡ ವಿವಾದ ಸೃಷ್ಟಿ ಮಾಡಿದ್ದು ಹತ್ಯೆ ಮಾಡಿದ ರಫಿಕ್ ನನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ರಂಜಿತಾ ಬನಸೋಡೆ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಹಿಂದೂಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ. ಘಟನೆ ನಡೆದ ಬೆನ್ನಲ್ಲೇ ಅಲರ್ಟ್ ಆಗಿರುವ ಶಾಸಕರು, ಈಗಾಗಲೇ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ … Read more

ಸೈಕಲ್‌ ಕಲಿಯಲು ಗ್ರೌಂಡ್‌ಗೆ ಬರುವ 13 ವರ್ಷದ ಬಾಲಕನ ಮೇಲೆ 60 ವರ್ಷದ ಕಾಮುಕ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯ

ಕೇರಳದ ನೆಡುಮಂಗಾಡ್‌ನಲ್ಲಿ ಬಾಲಕನೊಬ್ಬನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವೃದ್ಧ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರ ಜಾಗರೂಕತೆಯಿಂದಾಗಿ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಜೈಲಿಗಟ್ಟಲಾಗಿದೆ. ಹತ್ತು ರೂಪಾಯಿ ನೀಡಿ ಬಾಲಕನ ಮೇಲೆ ದೌರ್ಜನ್ಯ ನೆಡುಮಂಗಾಡ್ ಮೂಲದ ಶಿಯಾದ್ ಮೊಯ್ದೀನ್ (60) ಎಂಬ ಆಟೋ ಚಾಲಕ ಕಳೆದ ಅಕ್ಟೋಬರ್‌ನಿಂದಲೂ ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಪತ್ತಮಕಲ್ಲುವಿನ ಮೈದಾನದಲ್ಲಿ ಸೈಕಲ್ ಕಲಿಯಲು ಬರುತ್ತಿದ್ದ ಬಾಲಕನೊಂದಿಗೆ ಮೊದಲು ಸ್ನೇಹ ಬೆಳೆಸಿದ ಈತ, ನಂತರ ಆತನನ್ನು ತನ್ನ … Read more

ಅಕ್ರಮ ಸಂಬಂಧ ಬೆಳೆಸಿ ಮದುವೆಗೆ ನಿರಾಕರಣೆ : ಪ್ರಿಯಕರನ ‘ಮರ್ಮಾಂಗ’ ಕತ್ತರಿಸಿದ ಆಂಟಿ !

ಮುಂಬೈನಲ್ಲಿ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೊಲೆ ಯತ್ನದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಸ ವರ್ಷದ ಆಚರಣೆಗೆ ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿದ ವಿವಾಹಿತ ಮಹಿಳೆಯೊಬ್ಬಳು, ಅವನ ಖಾಸಗಿ ಅಂಗಗಳನ್ನು ಕತ್ತರಿಸಿದ್ದಾಳೆ. ತನ್ನ 45 ವರ್ಷದ ಪ್ರೇಮಿ ತನ್ನನ್ನು ಮದುವೆಯಾಗಲು ನಿರಾಕರಿಸಿದಾಗ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾಳೆ. ಈ ವೇಳೆ, ಅವಳು ಅವನ ಖಾಸಗಿ ಅಂಗಗಳನ್ನು ಕತ್ತರಿಸಿದ್ದಾಳೆ. ಶುಕ್ರವಾರ ಬೆಳಗಿನ ಜಾವ 1.30 ರ ಸುಮಾರಿಗೆ ಸಾಂತಾಕ್ರೂಜ್ ಪೂರ್ವದ ಜಂಬ್ಲಿಪಾದದಲ್ಲಿರುವ ಆರೋಪಿಯ … Read more

6 ವರ್ಷದ ಪುಟ್ಟ ಬಾಲಕಿ ಮೇಲೆರಗಿದ ಇಬ್ಬರ ಎನ್‌ಕೌಂಟರ್, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ

ಆರು ವರ್ಷದ ಪುಟ್ಟ ಬಾಲಕಿ ಮಹಡಿ ಮೇಲೆ ಆಟವಾಡುತ್ತಿದ್ದ ವೇಳೆ ಅದೆ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಇಬ್ಬರು ದುರುಳರನ್ನು ಆಕೆ ಮೇಲರಿಗಿದ್ದಾರೆ. ಬಾಲಕಿ ಬಾಯಿ ಮುಚ್ಚಿ ಕೃತ್ಯ ಎಸಗಿದ್ದಾನೆ. ಬಳಿಕ ಬಾಲಕಿ ಅಳು ನಿಲ್ಲದಿದ್ದಾಗ ಮಹಡಿಯಿಂದ ಕೆಳಕ್ಕೆ ಎಸದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳ ಪತ್ತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಇಷ್ಟೇ ಅಲ್ಲ ಇಬ್ಬರು ಆರೋಪಿಗಳ ಅರೆಸ್ಟ್ ಮಾಡಲು ಗುಂಡಿನ ದಾಳಿ ನಡೆಸಿದ್ದಾರೆ. ಎನ್‌ಕೌಂಟರ್ ಮೂಲಕ … Read more

ಗಂಡನ ಬಿಟ್ಟು ಲವರ್ ಜೊತೆ ವಿವಾಹಿತೆ ದೋಸ್ತಿ : ಕುತ್ತಿಗೆಗೆ ಚಾಕು ಇರಿದು‌ ಉಸಿರು ನಿಲ್ಲಿಸಿದ ಪ್ರಿಯಕರ!

ಇತ್ತೀಚಿಗೆ ಅಕ್ರಮ ಸಂಬಂಧಗಳಿಂದ ಕೊಲೆಯಾಗುತ್ತಿರುವ ಪ್ರಕರಣ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಕಾರವಾರದಲ್ಲೂ  ವಿವಾಹಿತೆ ಮಹಿಳೆಯೊಬ್ಬರು ಕೊಲೆಯಾಗಿದ್ದಾರೆ. ಗಂಡನನ್ನ ಬಿಟ್ಟು ಬೇರೋಬ್ಬನ ಜೊತೆ ಸಲುಗೆ ಹೊಂದಿದ್ದ ಮಹಿಳೆ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ರಂಜಿತಾ ಎಂಬ ವಿವಾಹಿತೆ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದ ರಫಿಕ್ ಆಕೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಬಳಿಕ ಎಸ್ಕೇಪ್ ಆಗಿ ತಲೆಮರಿಸಿಕೊಂಡಿದ್ದಾನೆ. ಮದುವೆಯಾಗಿ ಗಂಡನಿಂದ ದೂರ ಇದ್ದ ಮೃತ ರಂಜಿತಾ ಪ್ರಿಯಕರ ರಫಿಕ್ನಿಂದ ಕೊಲೆಯಾಗಿರುವ ರಂಜಿತಾ ಮದುವೆಯಾಗಿ ಗಂಡನಿಂದ ದೂರ ಇದ್ದಳು ಎನ್ನಲಾಗಿದೆ. … Read more

ಅರೆ ಬೆಂದ ಅನ್ನ, ಮಸಾಲೆ ಇಲ್ಲದ ಸಾರು ! ಸರ್ಕಾರಿ ಶಾಲೆಯ ಅಡುಗೆ ಸಿಬ್ಬಂದಿಗಳ ದರ್ಬಾರ್

ಚಿಕ್ಕಮಗಳೂರು : ಅರೆ ಬೆಂದ ಅನ್ನ, ಮಸಾಲೆ ಇಲ್ಲದ ಸಾರು…. ಇದು ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳ ದರ್ಬಾರ್. ಇಲ್ಲಿ ಹೇಳೋರಿಲ್ಲ-ಕೆಳೋರಿಲ್ಲ.. ಮಕ್ಕಳು ಅನ್ನ ಬೆಂದಿಲ್ಲಾ, ಹುಳ ಇದೆ ಅಂದರೂ, ಶಿಕ್ಷಕರು ಡೋಂಟ್ ಕೇರ್..ಇದು ಕಡೂರು ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿನ ಘಟನೆಗಳು. ಆ ಶಾಲೆಯಲ್ಲಿ ಕಲಿಯುವ ಪುಟ್ಟ-ಪುಟ್ಟ ಮಕ್ಕಳು ಸರ್ಕಾರದ ಬಿಸಿ ಊಟವನ್ನೇ ತೊರೆಯುತ್ತಿದ್ದಾರೆ. ಯಾಕೆಂದರೆ ಸರ್ಕಾರದ ಬಿಸಿಯೂಟದ ಯೋಜನೆಯ ಊಟದಲ್ಲಿ ಹುಳುಗಳದ್ದೇ ಕಾರುಬಾರು. ಮಕ್ಕಳು ಹುಳ ಇದೆ ಎಂದು ಊಟ ಬಿಟ್ರು ಶಿಕ್ಷಕರು – … Read more

ಹೃದಯದ ಆರೋಗ್ಯಕ್ಕೂ ಮಲಗುವ ಭಂಗಿಗೂ ಇದೆ ನಿಕಟ ಸಂಬಂಧ! ರಕ್ತ ಪರಿಚಲನೆ ಹೆಚ್ಚಿಸಲು ಮತ್ತು ಹಾರ್ಟ್ ಅಟ್ಯಾಕ್ ತಡೆಯಲು ಇಲ್ಲಿದೆ ಸರಳ ಸೂತ್ರ

ಅಮೆರಿಕದ ಕಾರ್ಡಿಯಾಕ್ ಐಸಿಯುನಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಅನುಭವಿ ನರ್ಸ್ ಪೆಟ್ರೀಷಿಯಾ ಮೂರ್ ಅವರ ಪ್ರಕಾರ, ನಾವು ಮಲಗುವ ರೀತಿ ನಮ್ಮ ಹೃದಯದ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸುಮಾರು 3,000ಕ್ಕೂ ಹೆಚ್ಚು ಹೃದಯಾಘಾತದಿಂದ ಬದುಕುಳಿದವರನ್ನು ಗಮನಿಸಿದ ಅವರು, ರಾತ್ರಿಯ ಸಮಯದಲ್ಲಿ ಹೃದಯದ ಮೇಲಿನ ಯಾಂತ್ರಿಕ ಒತ್ತಡವನ್ನು ಕಡಿಮೆ ಮಾಡಲು ನಿರ್ದಿಷ್ಟ ಸಲಹೆಗಳನ್ನು ನೀಡಿದ್ದಾರೆ. ಹೃದಯದ ಆರೋಗ್ಯಕ್ಕೆ ಯಾವ ಭಂಗಿ ಉತ್ತಮ? ಪೆಟ್ರೀಷಿಯಾ ಅವರ ಪ್ರಕಾರ, ಎಡಭಾಗಕ್ಕೆ ತಿರುಗಿ ಮಲಗುವುದು (Left-side … Read more

ಚಾಲಕನ ನಿರ್ಲಕ್ಷ್ಯದಿಂದ ಶಾಲಾ ಬಸ್ ಕಾಲುವೆಗೆ ಬಿದ್ದು 40 ವಿದ್ಯಾರ್ಥಿಗಳಿಗೆ ಗಾಯ

ತೆಲಂಗಾಣದ ಖಮ್ಮಂ ಜಿಲ್ಲೆಯ ಪೆನುಬಳ್ಳಿ ಮಂಡಲದ ಗಣೇಶಪಾಡು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸುಮಾರು 100 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಕಾಲುವೆಗೆ ಉರುಳಿದೆ. ಮದ್ದುಲಗುಡೆಮ್ (ವೆಮ್ಸೂರ್ ಮಂಡಲ) ದ ವಿವೇಕಾನಂದ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಹೊರಟಿದ್ದ ಶಾಲಾ ಬಸ್ ಶುಕ್ರವಾರ ನಿನ್ನೆ ಸಂಜೆ ಅಪಘಾತಕ್ಕೆ ಒಳಗಾಗಿದೆ. ಸ್ಕೂಲ್‌ ಮುಗಿದ ಬಳಿಕ ಗಣೇಶಪಾಡು, ಎಲ್.ಎಸ್. ಬಂಜಾರ್, ಕೆ.ಎಂ. ಬಂಜಾರ್, ಮರ್ಲಕುಂಟ ಮತ್ತು ಮುತ್ತುಗುಡೆಮ್ ನಿಂದ ವಿದ್ಯಾರ್ಥಿಗಳು ಬಸ್ಸಿನ ಮೂಲಕ ಮನೆಗಳಿಗೆ ತೆರಳುತ್ತಿದ್ದರು. … Read more

ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಸಾವು: Viral Video ಬಳಿಕ ಪ್ರೊಫೆಸರ್ ಸೇರಿ ನಾಲ್ವರ ವಿರುದ್ಧ ಪ್ರಕರಣ!

ಇತ್ತೀಚೆಗಷ್ಟೇ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ (19) ಸಾವಿನ ಪ್ರಕರಣದಲ್ಲಿ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಹಿಮಾಚಲ ಪ್ರದೇಶ ಪೊಲೀಸರು ಕಾಲೇಜಿನ ಪ್ರಾಧ್ಯಾಪಕ ಮತ್ತು ಮೂವರು ವಿದ್ಯಾರ್ಥಿನಿಯರ ವಿರುದ್ಧ ರ‍್ಯಾಗಿಂಗ್, ದೈಹಿಕ ಹಲ್ಲೆ ಮತ್ತು ಲೈಂಗಿಕ ಕಿರುಕುಳದ ಆರೋಪದಡಿ ಪ್ರಕರಣ ದಾಖಲಿಸಿ, ತನಿಖೆಗೆ ಒಳಪಡಿಸಿದ್ದಾರೆ. ಮೃತ ಪಲ್ಲವಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಳು. ಕಳೆದ ವರ್ಷ ಸೆಪ್ಟೆಂಬರ್ 18ರಂದು ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ಹರ್ಷಿತಾ, ಆಕೃತಿ ಮತ್ತು ಕೊಮೊಲಿಕಾ … Read more