ಏರಿಕೆಯತ್ತ ಹೊರಟಿದ್ದ ಅಡಿಕೆ ಧಾರಣೆ ದಿಢೀರ್ ಕುಸಿತ.! ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಏರಿಕೆಯತ್ತ ಸಾಗಿತ್ತು.

Arecanut Price: ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಏರಿಕೆಯತ್ತ ಸಾಗಿತ್ತು. ಆದರೆ, ಇದೀಗ ದಿಡೀರ್ ಕುಸಿತ ಕಂಡಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಕುಗ್ಗಿದಂತಾಗಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಕೊಯ್ಲು ಸಂಪೂರ್ಣವಾಗಿ ಮುಕ್ತಾಯವಾದ ಸಮಯದಲ್ಲೇ ಅಡಿಕೆ ಧಾರಣೆ ಏರಿಕೆಯತ್ತ ಹೊರಟಿತ್ತು. ಆದರೆ, ಇದೀಗ ಇಂದು ಇದ್ದಕ್ಕಿದ್ದಂತೆ ಅಡಿಕೆ … Read more

ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ : SC ಒಳಮೀಸಲಾತಿ ಮಸೂದೆ ವಾಪಾಸ್ ಕಳುಹಿಸಿದ ರಾಜ್ಯಪಾಲರು

ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಎನ್ನುವಂತೆ ಎಸ್ಸಿ ಒಳಮೀಸಲಾತಿ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕದೇ ವಾಪಾಸ್ ಕಳುಹಿಸಿದ್ದಾರೆ. ಬೆಳಗಾವಿಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ದ್ವೇಷ ಭಾಷಣ ತಡೆ ಮಸೂದೆ ಸೇರಿದಂತೆ ಹಲವು ಮಹತ್ವದ ಮಸೂದೆಗಳಿಗೆ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂಕಿತ ಹಾಕಲಾಗಿತ್ತು. ಈ ಮಸೂದೆಗಳನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿತ್ತು. ಆದರೇ ಇನ್ನೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿಲ್ಲ. ರಾಜ್ಯಪಾಲರ ಪರಿಶೀಲನೆಯಲ್ಲೇ ದ್ವೇಷ ಭಾಷಣ ತಡೆ ಮಸೂದೆ ಇದೆ. … Read more

Horoscope Today : 10 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಅದೃಷ್ಟಕಾರಿ ಮೇಷರಾಶಿಯವರಿಗೆ ಸೋಮವಾರದ ಹತಾಶೆಯು ಇಂದು ಚರ್ಚಿಸಿ ಫಲವಿಲ್ಲದ್ದು. ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಈ ದಿನ ಪೂರ್ತಿ ಹರ್ಷ, ನಗು ಮತ್ತು ನೆಮ್ಮದಿಯನ್ನು ಗಣೇಶ ನಿಮಗೆ ದಯಪಾಲಿಸುತ್ತಾರೆ. ಹಣಕಾಸು ವಿಚಾರಗಳಲ್ಲಿ ಒಲವು ಹೆಚ್ಚಾಗುವುದರೊಂದಿಗೆ ಇಂದು ಲಕ್ಷ್ಮೀದೇವಿಯು ನಿಮ್ಮನ್ನು ಅನುಗ್ರಹಿಸುತ್ತಾರೆ ಮತ್ತು ಪರಿಣಾಮವಾಗಿ ನೀವು ಏಳಿಗೆಯನ್ನು ಕಾಣಬಹುದು. ನಿಮ್ಮ ಪ್ರಯತ್ನವನ್ನು ಸೂಕ್ತರೀತಿಯಲ್ಲಿ ಪ್ರಾಮಾಣೀಕರಿಸಲು ನಿಮಗೆ ಸಾಧ್ಯವಾಗಬಹುದು. ಇದು ಇಂದು ನೀವು ವ್ಯವಹಾರದಲ್ಲಿ ಹೊಂದಿರುವ ಜಾಹೀರಾತು ಯೋಜನೆಗಳನ್ನು ಉಲ್ಲೇಖಿಸಬಹುದು. ಮುಂದಕ್ಕೆ ಸಾಗಿ. ಅವುಗಳು ಫಲಪ್ರದವಾಗಿರುತ್ತದೆ. ನಿಮ್ಮ ಸಂಪರ್ಕ … Read more

ನಕಲಿ ಗೋಲ್ಡ್, ಅಸಲಿ ಎಫ್ಐಆರ್ : ಕಳ್ಳರಿಗೆ ಚಳ್ಳೆಹಣ್ಣು ತಿನ್ನಿಸಿದ ಶಿವಮೊಗ್ಗದ 73ರ ಅಜ್ಜಿ

ಶಿವಮೊಗ್ಗ : ಮನೆಗೆ ಬಂದಿದ್ದ ಇಬ್ಬರು ಕಳ್ಳರಿಗೆ 73ರ ಅಜ್ಜಿ ಚಳ್ಳೆಹಣ್ಣು ತಿನ್ನಿಸಿದ ಘಟನೆ ಶಿವಮೊಗ್ಗದ ಗೋಪಾಳ ಬಳಿಯ ಕೆಎಚ್‌ಬಿ ಕಾಲೋನಿಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವಲಿಂಗಮ್ಮ ಅಜ್ಜಿ ಕೆಎಚ್‌ಬಿ ಕಾಲೋನಿಯಲ್ಲಿ ವಾಸವಾಗಿದ್ದು, ಮನೆಯಲ್ಲಿ ಒಬ್ಬರೇ ಇದ್ದಾಗ ಇಬ್ಬರು ಕಳ್ಳರು ನುಗ್ಗಿದ್ದಾರೆ. ಅಜ್ಜಿ ಧರಿಸಿದ ಬಳೆಗಳನ್ನು ಬಿಚ್ಚಿಕೊಂಡು ಕಳ್ಳರಿಬ್ಬರು ಪರಾರಿಯಾಗಿದ್ದಾರೆ. ಅಜ್ಜಿಯ ದಿನನಿತ್ಯದ ರೂಢಿ ಇಂದು ಅವರ ಪ್ರಾಣ ಮತ್ತು ಬಂಗಾರವನ್ನು ಉಳಿಸಿದೆ. ಬಂಗಾರ ಎಂದು ಕಳ್ಳರು ತೆಗೆದುಕೊಂಡು ಹೋಗಿದ್ದ … Read more

ಡಿಸಿಎಂ ಹುದ್ದೆಗೆ ಎಕ್ಸ್ಟ್ರಾ ಕೊಂಬು, ಕೋಡು ಇರಲ್ಲ.. : ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ

ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಮಾತಿನ ಸಮರ ಮುಂದುವರಿದಿದೆ. ಗುರುವಾರ ಡಿಕೆ ಶಿವಕುಮಾರ್‌ ಅವರು ಬಿಜೆಪಿ-ಜೆಡಿಎಸ್‌ ವಿಲೀನದ ಬಗ್ಗೆ ಮಾತನಾಡಿದ್ದು, ಅದಕ್ಕೆ ಎಚ್‌ ಡಿಕೆ ಅವರು ಇದೀಗ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು ಡಿಕೆ ಶಿವಕುಮಾರ್‌ ಅವರ ಅಡಳಿತಾನುಭವದ ಬಗ್ಗೆ ಮಾತನಾಡಿದ್ದಾರೆ. ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು ಡಿಸಿಎಂ ಡಿಕೆಶಿ ಅವರ ಅನುಭವ ಎಂದು … Read more

ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸೋಕೆ ಡಿ.ಕೆ ಶಿವಕುಮಾರ್‌ ಯಾರು? ರಾಜ್ಯದಲ್ಲಿ ಇರೋದು ಹೆಬ್ಬೆಟ್ಟು ಗೃಹ ಸಚಿವರಾ? – ಕುಮಾರಸ್ವಾಮಿ ಆಕ್ರೋಶ

ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಯಾರು? ಅವರಿಗೆ ಆ ಅಧಿಕಾರ ಯಾರು ಕೊಟ್ಟರು? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಾತಾಡಿದ ಕೇಂದ್ರ ಸಚಿವರು ಡಿಸಿಎಂ ಅವರು ಮಂಗಳವಾರ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅದಕ್ಕೆ ಗೃಹ ಸಚಿವರು ಇಲ್ಲವೇ? ರಾಜ್ಯದಲ್ಲಿರುವ ಗೃಹ ಸಚಿವರು ಹೆಬ್ಬೆಟ್ಟು ಸಚಿವರಾ? ಎಂದು ಪ್ರಶ್ನಿಸಿದರು. ಡಿಸಿಎಂ ಅವರು ಯಾವ … Read more

ಬಿಜೆಪಿ-ಜೆಡಿಎಸ್ ವಿಲೀನವಾದರೆ ನಮಗೂ ಒಳ್ಳೆಯದು : ಕುಮಾರಸ್ವಾಮಿಯಿಂದ ಕಲಿಯುವ ಅಗತ್ಯ ನನಗಿಲ್ಲ – ಡಿಸಿಎಂ ಡಿಕೆಶಿ

‘ಕುಮಾರಸ್ವಾಮಿಯವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆಯಿದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲ ಇರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜು ಮತ್ತು ಅವರ ಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಮುಂತಾದವರನ್ನು ಕೆಪಿಸಿಸಿ … Read more

ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ.? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ : ಮೃತ ಮಹಿಳೆಯ ಒಂದು ಕಣ್ಣಿನ ಗುಡ್ಡೆ ನಾಪತ್ತೆ!

ಸೊಸೆ ಕಾಟಕ್ಕೆ ಬೇಸತ್ತ ಅತ್ತೆಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ನಡೆದಿದೆ. ಅತ್ತೆಯ ಆತ್ಮ*ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಸೊಸೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತ ಮಹಿಳೆಯನ್ನು ಭ್ರಮರಾಂಭಿಕೆ (60) ಎಂದು ಗುರುತಿಸಲಾಗಿದೆ. ಬುಧವಾರ ಬೆಳಗಿನ ಜಾವ ಅನುಮಾನಾಸ್ಪದ ಸ್ಥಿತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಪ್ರಕರಣವು ಕೊಲೆಯೆಂಬ ಅನುಮಾನಕ್ಕೂ ಕಾರಣವಾಗಿತ್ತು. ಗ್ರಾಮದ ತೋಟದ ಮನೆಯಲ್ಲಿದ್ದ ಪಂಪ್ ಹೌಸ್‌ನಲ್ಲಿ, ಫಾರ್ಮ್ ಹೌಸ್‌ನಿಂದ ಸುಮಾರು 200 ಮೀಟರ್ ದೂರದಲ್ಲಿ, ಭ್ರಮರಾಂಭಿಕೆ … Read more

ಡಿಪೋ ಮ್ಯಾನೇಜರ್ ಕಿರುಕುಳ: ನೇಣಿಗೆ ಕೊರಳೊಡ್ಡಿದ KSRTC ಚಾಲಕ, ಬಸ್ ನಲ್ಲೇ ಶವ ರವಾನೆ

ಕೆಎಸ್ಆರ್ಟಿಸಿ ಬಸ್ ಚಾಲಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ನಡೆದಿದೆ. ನಾಗಪ್ಪ (54) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ. ಡ್ಯೂಟಿ ನೀಡದೇ ಡಿಪೋ ಮ್ಯಾನೇಜರ್ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿದೆ. ಸದ್ಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡ್ಯೂಟಿ ನೀಡಿದೆ ಡಿಪೋ ಮ್ಯಾನೇಜರ್ ಕಿರುಕುಳ ಮೃತ ಕೆಎಸ್ಆರ್ಟಿಸಿ ಬಸ್ ಚಾಲಕ ನಾಗಪ್ಪ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ತ್ಯಾಗರ್ತಿ ಗ್ರಾಮದಲ್ಲಿ ವಾಸವಿದ್ದರು. … Read more

ಹಣ ನೀಡದಿದ್ದರೂ ಸರಿ, ಅಪಪ್ರಚಾರ ನಿಲ್ಲಿಸಿ – ಕಾರು ಅಪಘಾತದಲ್ಲಿ ಮೃತಪಟ್ಟ ರಾಜೇಶ್ ಸಹೋದರಿ ನಂದಿನಿ ಅಳಲು

ಮಾಗಡಿ : ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯ, ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ನಮಗೆ ಪರಿಹಾರ ನೀಡದಿದ್ದರೂ ಸರಿಯೇ, ನಮ್ಮನ್ನು ನೆಮ್ಮದಿಯಿಂದ ಬದುಕಲು ಬಿಡಲಿ ಎಂದು ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟ ರಾಜೇಶ್ ಕುಟುಂಬ ಮಾಧ್ಯಮದವರ ಎದುರು ಅಳಲು ತೋಡಿಕೊಂಡಿದೆ. ತಾಲೂಕಿನ ಗುಡೇಮಾರನಹಳ್ಳಿಯ ಸಿಡಗನಹಳ್ಳಿ ಬಳಿ ಡಿ.12 ರಂದು ಎಚ್.ಎಂ.ರೇವಣ್ಣ ಪುತ್ರ ಶಶಾಂಕ್ ಮಾಲೀಕತ್ವದ ಕಾರು ಓವರ್ ಟೇಕ್ ಮಾಡುವ ವೇಳೆ ಬೈಕ್ಗೆ ಡಿಕ್ಕಿಯೊಡೆದು ನಿಲ್ಲಿಸದೇ ತೆರಳಿತ್ತು. ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ನನ್ನ ಸಹೋದರ ರಾಜೇಶ್ … Read more