ಶಿವಣ್ಣನ ಅಕ್ಕನ ಮಗನೊಂದಿಗೆ ಅಕ್ರಮ ಸಂಬಂಧ, ಹೆಂಡತಿಯ ದ್ರೋಹಕ್ಕೆ ಬಲಿಯಾದವು ಮೂರು ಜೀವಗಳು!

ಅದು ಒಂದು ಸುಂದರ ಸಂಸಾರ. ಇಬ್ಬರು ಮುದ್ದಾದ ಗಂಡು ಮಕ್ಕಳು. ಆದರೆ, ಅಕ್ಕನ ಮಗ ಅಂತಾ ಮನೆಯಲ್ಲಿಟ್ಕೊಂಡಿದ್ದಕ್ಕೆ ಸಂಸಾರ ಹಾಳುಮಾಡಿ ಕುಟುಂಬದ ಪಾಲಿಗೆ ಯಮನಾದ. ಉಂಡ ಮನೆಗೆ ಕನ್ನ ಹಾಕಿದ ಅಕ್ಕನ ಮಗನ ನಂಬಿಕೆ ದ್ರೋಹಕ್ಕೆ ತಂದೆ, ಇಬ್ಬರು ಮಕ್ಕಳು ಸೇರಿ ಮೂವರು ಬಲಿಯಾಗಿದ್ದಾರೆ. ತುಮಕೂರಿನ ಕುಣಿಗಲ್‌ನಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಘಟನೆ ಹಿನ್ನೆಲೆ ಏನು? ಈ ದುರಂತ ಕಥೆ ಶುರುವಾಗೋದು ಶಿವಣ್ಣ ಎಂಬುವವರ ಉದಾರ ಗುಣದಿಂದ. ತನ್ನ ಅಕ್ಕ ಮೃತಪಟ್ಟ ಬಳಿಕ … Read more

ಸಂಬಂಧಿಯೊಡನೆ ಪತ್ನಿ ಪರಾರಿ : ಮಕ್ಕಳನ್ನು ಕೊಂದು ಸಾವಿಗೆ ಶರಣಾದ ಪತಿ.! ಇಡೀ ಗ್ರಾಮಸ್ಥರ ಕಣ್ಣಲ್ಲಿ ನೀರು!

ತುಮಕೂರಲ್ಲಿ ಕುಣಿಗಲ್ ತಾಲ್ಲೂಕಿನ ಆಲ್ಕೆರೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಪತ್ನಿಯ ಅನೈತಿಕ ಸಂಬಂಧ ಹಾಗೂ ಆಕೆಯ ನಡವಳಿಕೆಯಿಂದ ಮನನೊಂದ ಪತಿಯೊಬ್ಬ ತನ್ನ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ಮೃತ ದುರ್ದೈವಿಗಳನ್ನು ಆಲ್ಕೆರೆ ಗ್ರಾಮದ ಶಿವಣ್ಣ (40) ಹಾಗೂ ಆತನ ಮಕ್ಕಳಾದ ಜೀವನ್ (11) ಮತ್ತು ಪ್ರಾಣೇಶ್ (6) ಎಂದು ಗುರುತಿಸಲಾಗಿದೆ. ಶಿವಣ್ಣ ಅವರು ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕ … Read more

ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಬಲಿ ಕೊಡಲು ಹೊರಟ ಪುತ್ರ: ಮಾಟಗಾರ ಎಸ್ಕೇಪ್, ಓರ್ವನ ಬಂಧನ

ಚಾಮರಾಜನಗರ : ಇಲ್ಲಿನ ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರಲ್ಲಿ ನಂಬಲಸಾಧ್ಯವಾದ ಕ್ರೂರ ಘಟನೆಯೊಂದು ಬೆಳಕಿಗೆ ಬಂದಿದೆ. ಗುಪ್ತನಿಧಿಯ ಆಸೆಗೆ ಬಿದ್ದ ಮಗ ಕೊಂಡಯ್ಯನ ಮಾದಶೆಟ್ಟಿ ತನ್ನನ್ನು ಹೆತ್ತು ಹೊತ್ತು ಸಲಹಿದ 80 ವರ್ಷದ ವಯೋವೃದ್ಧ ತಾಯಿ ಮಾದಮ್ಮಶೆಟ್ಟಿಯನ್ನು ಬಲಿಕೊಡಲು ಮುಂದಾದ ಕೃತ್ಯ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಅತೀವ ದುರಾಸೆ ಮನುಷ್ಯನನ್ನು ಯಾವ ಮಟ್ಟಕ್ಕೆ ಕೆಡವಬಲ್ಲದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. ಈ ಆರೋಪಿ ಮನೆಯಲ್ಲಿ ಗುಪ್ತನಿಧಿ ಇದೆ ಎಂಬ ಮೂಢನಂಬಿಕೆಗೆ ಒಳಗಾಗಿದ್ದ ಎನ್ನಲಾಗಿದೆ. ಹೀಗಾಗಿ ನಿಧಿಯನ್ನು ಪಡೆಯಲು … Read more

15 ವರ್ಷದ ಬಾಲಕನ ಪಾಲಿಗೆ ಯಮನಾದ ಖಾಸಗಿ ಬಸ್: ರಸ್ತೆಯಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿ

ಬೆಂಗಳೂರಿನ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ 15 ವರ್ಷದ ವರುಣ್ ಮೃತಪಟ್ಟಿದ್ದಾನೆ. ವೈಟ್ ಟಾಪಿಂಗ್ ಕಾಮಗಾರಿಯಿಂದ ರಸ್ತೆ ಸುರಕ್ಷತೆ ಕಡಿಮೆಯಾಗಿ ಅಪಘಾತ ಹೆಚ್ಚಾಗಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಪೊಲೀಸರು ಬಸ್ ವಶಪಡಿಸಿಕೊಂಡಿದ್ದಾರೆ. ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಬಾಲಕನೋರ್ವ ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. 9ನೇ ತರಗತಿ ಪಾಸ್ ಆಗಿದ್ದ ವರುಣ್(15) ಮೃತ ದುರ್ದೈವಿ. ನೀರು ತರಲು ಹೋಗಿದ್ದ ಈತ ಮನೆಗೆ … Read more

ಯಾರೋ ಸಿಂಪಲ್ ಸುಧಾ ಗಂಡ ಅಂತೆ ನನಗೆ ಗೊತ್ತಿಲ್ಲ: ವಾರಕ್ಕೆ 75 ಗಂಟೆ ಕೆಲಸ ಮಾಡಬೇಕಂತೆ; ನಾರಾಯಣ ಮೂರ್ತಿ ವಿರುದ್ಧ ಹರಿಪ್ರಸಾದ್ ಗರಂ

ಕಾರ್ಮಿಕ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಡಾ.ಬಿ.ಆರ್ ಅಂಬೇಡ್ಕರ್ ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂತ ಹೇಳಿದರು. ಆದರೆ, ಆಯಮ್ಮ ಯಾರೋ ಸಿಂಪಲ್ ಸುಧಾ ಅಂತೆ … Read more

ಇದು ಆಡಳಿತವಲ್ಲ, ಸಂಘಟಿತ ಲೂಟಿ: ಸಿಲಿಂಡರ್ ದರ ಏರಿಕೆ ವಿರುದ್ಧ ಸಿದ್ದರಾಮಯ್ಯ ಕಿಡಿ

ದೇಶಾದ್ಯಂತ ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ರಾಜ್ಯದ ಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದು ಆಡಳಿತವಲ್ಲ, ಇದು ಸಂಘಟಿತ ಲೂಟಿ. ಚುನಾವಣೆಯ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವುದು ಮತ್ತು ನಂತರ ಅವರ ಮೇಲೆ ಹೊರೆ ಹಾಕುವುದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಾದರಿ ಎಂದು ಸಿಎಂ ವಾಗ್ದಾಳಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ … Read more

ಸಾವಿನಲ್ಲೂ ಮಗುವನ್ನು ಎದೆಗಪ್ಪಿಕೊಂಡ ತಾಯಿ: ಜಬಲ್ಪುರ ಬೋಟ್ ದುರಂತದ ಈ ಚಿತ್ರ ಕಲ್ಲು ಮನಸ್ಸನ್ನೂ ಕರಗಿಸುತ್ತೆ

ಮಧ್ಯಪ್ರದೇಶದ ಜಬಲ್ಪುರದಲ್ಲಿ ನರ್ಮದಾ ನದಿಗೆ ನಿರ್ಮಿಸಲಾಗಿರುವ ಬಾರ್ಗಿ ಡ್ಯಾಮ್‌ನಲ್ಲಿ ನಿನ್ನೆ ಪ್ರವಾಸಿಗರು ಇದ್ದ ಬೋಟ್ ಮಗುಚಿ 9 ಜನ ಮೃತಪಟ್ಟಿದ್ದಾರೆ. ಬೋಟ್‌ನಲ್ಲಿ 30 ಜನ ಇದ್ದರು. ಅದರಲ್ಲಿ 17 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 4 ಜನರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆದಿದೆ. 9 ಜನರ ಶವಗಳನ್ನು ಪತ್ತೆ ಹಚ್ಚಿ ನೀರಿನಿಂದ ಹೊರತೆಗೆಯಲಾಗಿದ್ದು, ಅದರಲ್ಲಿ ದೆಹಲಿ ಮೂಲದ ತಾಯಿಯೊಬ್ಬಳು ತನ್ನ ಮಗುವನ್ನು ಎದೆಗಪ್ಪಿಕೊಂಡೇ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಮಗುವನ್ನು ಉಳಿಸುವ ಅವರ ಪ್ರಯತ್ನ ವಿಫಲವಾಗಿರುವುದು ಹೃದಯ ವಿದ್ರಾವಕ ದೃಶ್ಯಕ್ಕೆ … Read more

ರಾಹುಲ್- ಸೋನಿಯಾ ಗಾಂಧಿ ಏನೇ ಹೇಳಿದ್ರು ಪ್ರಸಾದವೆಂದು ಸ್ವೀಕಾರ : ಕೇಂದ್ರ ಜನಸಾಮಾನ್ಯರ ನೋವು ಅರಿಯಬೇಕು ; ಡಿ.ಕೆ. ಶಿವಕುಮಾರ್

ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಮಿತ್ರ ರಾಷ್ಟ್ರಗಳ ಜೊತೆ ಉಳಿಸಿಕೊಳ್ಳಬೇಕಿರುವುದು ಅತ್ಯವಶ್ಯ. ಅನೇಕ ದೇಶಗಳು ಭಾರತವನ್ನು ಅನೇಕ ರೀತಿಯಲ್ಲಿ ಬೆಂಬಲಿಸಿವೆ. ನಮ್ಮ ವಿದೇಶಾಂಗ ನೀತಿ ವಿಫಲವಾಗದಂತೆ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಗಾಂಧಿನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಉತ್ತರಿಸಿದರು. ಅಡುಗೆ ಅನಿಲ … Read more

ಸಿಎಂ ಬದಲಾವಣೆ ಪ್ರಸ್ತಾಪವೇ ಇಲ್ಲ, ಸಿದ್ದರಾಮಯ್ಯನವರೇ ಐದು ವರ್ಷ ಆಡಳಿತ – ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿಕೆ!

ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ನಾಯಕತ್ವ ಬದಲಾವಣೆ’ಯ  ವದಂತಿಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬ್ರೇಕ್ ಹಾಕಿದ್ದಾರೆ. “ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಪ್ರಸ್ತಾವನೆ ಇಲ್ಲ, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೈಶಾಖ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ರಾಜ್ಯದಲ್ಲಿ ನಾಯಕತ್ವದ ಕುರಿತು ಗೊಂದಲಗಳಿರುವುದು ನಿಜ. ಆದರೆ, ಈ ಗೊಂದಲಗಳನ್ನು ಶೀಘ್ರದಲ್ಲಿಯೇ ಬಗೆಹರಿಸುತ್ತೇವೆ. ಪ್ರಸ್ತುತ ಸಿದ್ದರಾಮಯ್ಯ … Read more

ಭೂ ಪರಿವರ್ತನೆಗಾಗಿ ಅಲೆದು ಸುಸ್ತಾದ ರೈತ: ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

ಜಮೀನು ಭೂ ಪರಿವರ್ತನೆ  ಮಾಡಿಸಿಕೊಳ್ಳಲು ಅಧಿಕಾರಿಗಳ ಸುತ್ತ ಅಲೆದು ಬೇಸತ್ತ ರೈತಯೊಬ್ಬರು, ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. ಕಚೇರಿಗಳ ಅಲೆದಾಟಕ್ಕೆ ಬೇಸತ್ತ ರುದ್ರಯ್ಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ರುದ್ರಯ್ಯ ಅಮ್ಮಿನಬಾವಿಮಠ (50) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿ. ಇವರು ತಮ್ಮ ಎರಡು ಎಕರೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ (ಎನ್‌ಎ) ಭೂ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿ ಹಲವು ದಿನಗಳಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಮೊದಲು ಹಾವೇರಿ ಡಿಸಿ … Read more