ಮುಸ್ಲಿಂ ಪ್ರದೇಶದಲ್ಲಿ ಟಿಎಂಸಿ ಹಿನ್ನಡೆ ಅಸಾಧ್ಯ; ಇವಿಎಂ ಹ್ಯಾಕ್ ಆರೋಪ ಮಾಡಿದ ಟಿಎಂಸಿ ಅಭ್ಯರ್ಥಿ

ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆ ಮುಂದುವರೆದಿದ್ದು, ವಿಪಕ್ಷ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದ್ದು, ಆಡಳಿತರೂಢ ಟಿಎಂಸಿ ಹಿನ್ನಡೆ ಅನುಭವಿಸಿದೆ. ಆದರೆ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಟಿಎಂಸಿ ಹಿನ್ನಡೆಯಾಗಿದ್ದನ್ನು ಪ್ರಶ್ನಿಸಿರುವ ಟಿಎಂಸಿ ಅಭ್ಯರ್ಥಿಯೊಬ್ಬರು, ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವಿನತ್ತ ದಾಪುಗಾಲಿಡುತ್ತಿದ್ದು, 198 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತರೂಢ ಟಿಎಂಸಿ 89 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 4 ಸ್ಥಾನಗಲ್ಲಿ ಮುನ್ನಡೆಯಲ್ಲಿದೆ. ಬಾಗ್ಡಾದ ಟಿಎಂಸಿ ಅಭ್ಯರ್ಥಿ ಮಧುಪರ್ಣ ಠಾಕೂರ್, ಇವಿಎಂ … Read more

ಸಾವರ್ಕರ್ ಮುಖವಾಡದ ಜೊತೆಯಲ್ಲೇ ಸಂಘಪರಿವಾರ, ಬಿಜೆಪಿಯ ಮುಖವಾಡವೂ ಕಳಚುತ್ತದೆ: ಬಿ.ಕೆ.ಹರಿಪ್ರಸಾದ್

‘ಸಾವರ್ಕರ್ ಮುಖವಾಡದ ಜೊತೆಯಲ್ಲೇ ಸಂಘಪರಿವಾರ ಹಾಗೂ ಬಿಜೆಪಿಯ ಮುಖವಾಡವೂ ಕಳಚುತ್ತದೆ. ‘ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’. ಇತಿಹಾಸ ತಿರುಚುವ ಕೈಗಳು ಯಾವಾಗಲೂ ನಡುಗುತ್ತವೆ. ಆದರೆ ಸತ್ಯವನ್ನು ಹಿಡಿದ ಕೈಗಳು ಎಂದಿಗೂ ತಲೆಬಾಗುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರುಗಳು, ವಾಟ್ಸ್‌ಅಪ್ ಯೂನಿವರ್ಸಿಟಿಯ ಮಬ್ಭಕ್ತರು ಅರ್ಥಮಾಡಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಾವರ್ಕರ್ ವೀರನೂ ಅಲ್ಲ, ಶೂರನೂ ಅಲ್ಲ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರು’ ಎಂದು ಸ್ವತಃ ಸಾವರ್ಕರ್ … Read more

ಜನನಾಯಗನ್ ‘ಸೇಡು’? ಬಿಜೆಪಿ ಕಾರಣಕ್ಕೆ ಎಐಎಡಿಎಂಕೆ ಬೇಡ ಅಂತಾರಾ ವಿಜಯ್.? ದಳಪತಿ ಮುಂದಿರುವ ಆಯ್ಕೆಗಳೇನು.?

ವಿಜಯ್ ಅವರ ಟಿವಿಕೆ ಪಕ್ಷ ತನ್ನ ಚೊಚ್ಚಲ ಸ್ಪರ್ಧೆಯಲ್ಲಿ ಬಹುಮತದ ಸಮೀಪಕ್ಕೆ ಹೋಗಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ತಮಿಳಗ ವೆಟ್ರಿ ಕಳಗಂ (TVK) 107-108 ಸ್ಥಾನಗಳಲ್ಲಿ ಗೆಲುವು ಮತ್ತು ಮುನ್ನಡೆ ಹೊಂದಿದೆ. ಬಹುಮತಕ್ಕೆ ಅಗತ್ಯ ಇರುವುದು 118 ಸ್ಥಾನಗಳಿಗೆ ಸುಮಾರು 10-11 ಸ್ಥಾನಗಳ ಕೊರತೆ ಎದುರಾಗಬಹುದು. ವಿಜಯ್ ಅವರು ಈ ಕೊರತೆ ತುಂಬಿಕೊಂಡರೆ ಕಿಂಗ್ ಮೇಕರ್ ಬದಲು ಕಿಂಗ್ ಆಗುವ ಅವಕಾಶ ಇದೆ. ವಿಜಯ್ ಯಾರೊಂದಿಗೆ ಮೈತ್ರಿ.? … Read more

ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಳ್ಳಲು ಸಿದ್ಧ : ‘TVK’ ಪಕ್ಷದ ನಾಯಕ ವಿಜಯ್ ತಂದೆ ಎಸ್.ಎ ಚಂದ್ರಶೇಖರ್ ಹೇಳಿಕೆ!

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಚುನಾವಣಾ ಅಖಾಡದಲ್ಲಿ ಅಭೂತಪೂರ್ವ ಮುನ್ನಡೆ ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಸದ್ಯದ ಟ್ರೆಂಡ್ ಪ್ರಕಾರ, ಟಿವಿ ಕೆ ಪಕ್ಷವು 112ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ತಮಿಳುನಾಡಿನಲ್ಲಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಸರಳ ಬಹುಮತದ ಹೊಸ್ತಿಲಲ್ಲಿ ಟಿವಿ ಕೆ: ತಮಿಳುನಾಡಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿ ಕೆ ಪಕ್ಷಕ್ಕೆ ಸರಳ ಬಹುಮತಕ್ಕೆ … Read more

ತನ್ನದೇ ಭದ್ರ ಕೋಟೆಯಲ್ಲಿ ಹೀನಾಯವಾಗಿ ಸೋತಿದ್ದೇಕೆ ಮಮತಾ ಪಡೆ.? ಇಲ್ಲಿದೆ 5 ಕಾರಣ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ನಂತರ ಮತ ಎಣಿಕೆ ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮತ ಎಣಿಕೆಯ ಟ್ರೆಂಡ್‌ಗಳ ನಂತರ ಚಿತ್ರಣವು ಹೆಚ್ಚು ಸ್ಪಷ್ಟವಾಗುತ್ತಿದೆ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಅನ್ನು ಬಿಜೆಪಿ ವೇಗವಾಗಿ ಹಿಂದಿಕ್ಕುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಟ್ರೆಂಡ್ ಮುಂದುವರಿದರೆ, ಮಮತಾ ಅವರ ಭದ್ರಕೋಟೆ ಕುಸಿಯುತ್ತಿದೆ ಮತ್ತು ಬಿಜೆಪಿ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಲು ಸಜ್ಜಾಗಿದೆ ಎಂಬುವುದು ಸ್ಪಷ್ಟವಾಗಿದೆ. ಮಮತಾ ಮತ್ತು ಅವರ ಈ ಕಳಪೆ ಪ್ರದರ್ಶನಕ್ಕೇನು ಕರಣ? ಇಲ್ಲಿದೆ ನೋಡಿ … Read more

‘TVK’ ಪಕ್ಷದ ಅಭ್ಯರ್ಥಿ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಗೆ ಹೀನಾಯ ಸೋಲು!

ತಮಿಳುನಾಡಲ್ಲಿ TVK ಪಕ್ಷದ ನಾಯಕ ಹಾಗು ನಟ ವಿಜಯ್ ಭರ್ಜರಿ ಜಯ ಸಾಧಿಸಿದ್ದು, ಡಿಎಂಕೆ, ಹಾಗು ಎಐಡಿಎಂಕೆಗೆ ಶಾಕ್ ನೀಡಿದ್ದಾರೆ. ಇದೀಗ ತಮಿಳುನಾಡಲ್ಲಿ ಮುಖ್ಯಮಂತ್ರಿ ಎ..ಕೆ ಸ್ಟಾಲಿನ್ ಗೆ ಸೋಲಾಗಿದೆ.ಕೊಳತ್ತೂರು ಕ್ಷೇತ್ರದಲ್ಲಿ TVK ಅಭ್ಯರ್ಥಿ ವಿ.ಎಸ್ ಬಾಬು ವಿರುದ್ಧ ಸ್ಟಾಲಿನ್ ಗೆ ಸೋಲಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಶಾಕ್: ಕೊಳತ್ತೂರಿನಲ್ಲಿ ಸೋಲು ಈ ಚುನಾವಣೆಯ ಅತಿ ದೊಡ್ಡ ಆಘಾತಕಾರಿ ಫಲಿತಾಂಶವೆಂದರೆ ಅದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸೋಲು. ಕಳೆದ ಹಲವು ಅವಧಿಗಳಿಂದ ಡಿಎಂಕೆಯ ಭದ್ರಕೋಟೆಯಾಗಿದ್ದ ಕೊಳತ್ತೂರು … Read more

ರೇಣುಕಾಸ್ವಾಮಿ ಕೊಲೆ ಕೇಸ್ : ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್ ; ರಾಜ್ಯ ಸರ್ಕಾರಕ್ಕೆ ನೋಟಿಸ್.!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರು ಸಲ್ಲಿಸಿರುವ ಹೊಸ ಜಾಮೀನು ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರಿಗೆ ಜಾಮೀನು ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಪ್ರಕರಣದ ತನಿಖಾ ಪ್ರಗತಿ ಹಾಗೂ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ … Read more

ನಟ ವಿಜಯ್ ಸೋಲಿನ ವದಂತಿ : ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ !

ನಟ ವಿಜಯ್ ಎಂದರೆ ಪ್ರಾಣವನ್ನೇ ಕೊಡುವಂತಹ ಅಭಿಮಾನಿಗಳು ಇದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಕೇವಲ ಒಂದು ವದಂತಿಯನ್ನು ಕೇಳಿ ಪ್ರಾಣವನ್ನೇ ಪಣಕ್ಕಿಡಲು ಮುಂದಾಗಿರುವ ಘಟನೆ ನಿಜಕ್ಕೂ ಎಲ್ಲರನ್ನೂ ಆತಂಕಕ್ಕೀಡುಮಾಡಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಈ ಘಟನೆ ಸದ್ಯ ಎಲ್ಲರಿಗೂ ಶಾಕ್ ನೀಡಿದೆ . ಘಟನೆಯ ವಿವರ: ಕೃಷ್ಣಗಿರಿ ಜಿಲ್ಲೆಯ ಬರೂರು ಮೂಲದ ಕೆ. ಮಹೇಂದ್ರನ್ (28) ಎಂಬ ಯುವಕ ನಟ ಮತ್ತು ಟಿವಿ ಕೆ (TVK) ಪಕ್ಷದ ಮುಖ್ಯಸ್ಥ ವಿಜಯ್ ಅವರ ಅತ್ಯಂತ ದೊಡ್ಡ ಅಭಿಮಾನಿಯಾಗಿದ್ದಾನೆ. … Read more

Horoscope Today : 04 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ಲೌಕಿಕ ಆಕಾಂಕ್ಷೆಗಳಿಗಿಂತ ಆಧ್ಯಾತ್ಮಿಕ ಆಕಾಂಕ್ಷೆಗಳು ಹೆಚ್ಚು ದೃಢವಾಗಿರುತ್ತದೆ. ಆಧ್ಯಾತ್ಮದಲ್ಲಿನ ನಿಮ್ಮ ಅನ್ವೇಷಣೆಯು ಇಂದು ದಿನಪೂರ್ತಿ ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಆಳವಾದ ಚಿಂತನೆಯಿಂದ ಇದು ಸಾಧ್ಯವಾಗಲಿದೆ. ನೀವು ಗಣನೀಯ ಆಧ್ಯಾತ್ಮ ವೃದ್ಧಿಯನ್ನು ಕಾಣಬಹುದು. ಆದರೆ ನೀವು ಏನು ಮಾತನಾಡುತ್ತೀರಿ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. ಎಚ್ಚರಿಕೆಯಿಲ್ಲದೆ ಆಡಿದ ಮಾತುಗಳು ಮತ್ತು ನಿಮ್ಮ ಮಾತಿನ ಶೈಲಿಯು ನಿಮ್ಮ ಜೀವನದಲ್ಲಿನ ಕೋಲಾಹಲವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಬೇಡಿ ಮತ್ತು ಪ್ರತಿಸ್ಪರ್ಧಿಗಳಿಂದ ದೂರವಿರಿ. ಅಸಂಭವನೀಯ ಮೂಲಗಳಿಂದ … Read more

ನಗ್ನ ಫೋಟೋ ಕಳುಹಿಸು, ಒಂದು ರಾತ್ರಿ ಬೆತ್ತಲಾಗಿ ಪೂಜೆಗೆ ಕುಳಿತರೆ 30 ಲಕ್ಷ ಹಣ ಕೊಡುವುದಾಗಿ ಆಫರ್: ಪಕ್ಕದ ಮನೆ ಫಟಿಂಗನಿಂದ ಯುವತಿಗೆ ಟಾರ್ಚರ್

ಮಾಟ-ಮಂತ್ರದ ಹೆಸರಲ್ಲಿ ಯುವತಿಯರು, ಮಹಿಳೆಯರನ್ನು ನಂಬಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಜ್ಯೋತಿಷಿ ಓರ್ವ ಮಹಿಳೆಗೆ ಆರ್ಥಿಕ ಅಭಿವೃದ್ಧಿಗಾಗಿ ಪೂಜೆ, ದೀಕ್ಷೆ ನೆಪದಲ್ಲಿ ನಿರಂತರ ಅತ್ಯಾಚಾರವೆಸಗಿ, ವಿಷಯ ಬಾಯ್ಬಿಟ್ಟರೆ ಪತಿ ಹಾಗೂ ಮಗನಿಗೆ ಮಾಟ-ಮಂತ್ರ ಮಾಡಿ ರಕ್ತ ಕಾರಿ ಸಾಯುವಂತೆ ಮಾಡುತ್ತೇನೆ ಎಂದು ಹೆದರಿಸಿ ಪದೇ ಪದೇ ದೌರ್ಜನ್ಯವೆಸಗುತ್ತಿದ್ದ ಕಾಮಪಿಪಾಸು ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. ಈ ಘಟನೆ ಬೆನ್ನಲ್ಲೇ ರಾಮನಗರದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಾಟ-ಮಂತ್ರ ಮತ್ತು … Read more