ಎಸ್‌ಎಸ್‌ಎಲ್‌ಸಿ (SSLC) ತೃತೀಯ ಭಾಷೆಗೆ ಅಂಕ, ಹೈಕೋರ್ಟ್ ಆದೇಶಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕಗಳನ್ನು ನೀಡಬೇಕು ಎಂಬ ಹೈಕೋರ್ಟ್ ಆದೇಶ ಹೊರಬಿದ್ದ ಹಿನ್ನೆಲೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ, ಆದರೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಜತೆ ಚರ್ಚಿಸಿ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹೈಕೋರ್ಟ್ ಆದೇಶ ನೀಡಿದೆ. ಈ ಕುರಿತು ನಾನು ಅಡ್ವೊಕೇಟ್ ಜನರಲ್ ಜತೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗೂ ಮಾಹಿತಿ ನೀಡಿದ್ದೇವೆ. ನಾಳೆ ಸಿಎಂ ಅವರನ್ನು ಭೇಟಿ ಮಾಡಿ ಮುಂದಿನ … Read more

ರಾಜ್ಯದ ಜನತೆಗೆ ‘ವಿದ್ಯುತ್ ದರ ಏರಿಕೆ’ ಶಾಕ್ ಕೊಟ್ಟ ಗ್ಯಾರಂಟಿ ಸರ್ಕಾರ! ಪ್ರತಿ ಯೂನಿಟ್ ಮೇಲೆ 56 ಪೈಸೆ ಹೆಚ್ಚಳ ಆದೇಶ!

ಸುಡುವ ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ವಿದ್ಯುತ್ (ಎಲ್ಲಾ ಎಸ್ಕಾಂಗಳು-ESCOM) ಗ್ರಾಹಕರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಆದೇಶದನ್ವಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಯ ಮೇಲೆ 56 ಪೈಸೆ ಹೆಚ್ಚುವರಿ ಹೊರೆಯನ್ನು ಗ್ರಾಹಕರು ಹೊರಬೇಕಾಗಿದೆ. ದರ ಏರಿಕೆಗೆ ಕಾರಣವೇನು? ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ, ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ … Read more

ನಿಮ್ಮ ಬ್ಯಾಂಕ್ ಖಾತೆಗೆ ಪದೇ ಪದೇ ಹಣ ಹಾಕ್ತಿದ್ದೀರಾ ? ‘IT’ ನೋಟಿಸ್ ಬರಬಹುದು ಹುಷಾರ್.!

ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ನಗದು ಜಮೆ ಮಾಡುವ ವ್ಯವಹಾರಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಹದ್ದಿನ ಕಣ್ಣಿಟ್ಟಿದ್ದು, ನಿಯಮ ಮೀರಿ ಹಣ ಜಮೆ ಮಾಡಿದರೆ ಐಟಿ ನೋಟಿಸ್ ಬರುವ ಸಾಧ್ಯತೆಯಿದೆ. ಒಂದು ಹಣಕಾಸು ವರ್ಷದಲ್ಲಿ ಉಳಿತಾಯ ಖಾತೆಗೆ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಜಮೆ ಮಾಡಿದರೆ ಬ್ಯಾಂಕುಗಳು ಆ ಮಾಹಿತಿಯನ್ನು ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡುತ್ತವೆ. ದೊಡ್ಡ ಮೊತ್ತದ ನಗದು ವ್ಯವಹಾರ ಮಾಡುವಾಗ ಆದಾಯದ ಮೂಲಕ್ಕೆ ಸರಿಯಾದ ದಾಖಲೆಗಳಿಲ್ಲದಿದ್ದರೆ ಭಾರಿ ದಂಡ ತೆರಬೇಕಾಗಬಹುದು … Read more

SSLC Results 2026 : ವಿದ್ಯಾರ್ಥಿಗಳ ಗಮನಕ್ಕೆ… ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬಗ್ಗೆ KSEAB ಮಹತ್ವದ ಮಾಹಿತಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದೆ ಇಂದು ಎಂಬ ತಪ್ಪು ಮಾಹಿತಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಆದರೆ ಈ ರೀತಿ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಅಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇನ್ನೂನಡೆಯುತ್ತಿದೆ. ಇದನ್ನು ಪೂರ್ಣಗೊಳ್ಳಲು ಕಾಲಾವಕಾಶ ಬೇಕಿದೆ. ಹೀಗಾಗಿ 10ನೇ ತರಗತಿ ಫಲಿತಾಂಶದ ಬಗ್ಗೆ ಮಂಡಳಿ ಅಧಿಕೃತ ಮಾಹಿತಿ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದೆ. SSLC ರಿಸಲ್ಟ್‌ ಯಾವಾಗ? ಕರ್ನಾಟಕ ರಾಜ್ಯ ಪರೀಕ್ಷೆ … Read more

ವಿದ್ಯಾರ್ಥಿಗಳ ಗಮನಕ್ಕೆ : ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.?

2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1ರ ಫಲಿತಾಂಶವನ್ನು 9 ರಂದು ಗುರುವಾರ ಪ್ರಕಟಿಸಲಾಗುವುದು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ ಡಿಜಿ ಲಾಕರ್ ಮೂಲಕ ವಿದ್ಯಾರ್ಥಿಗಳು ಫಲಿತಾಂಶ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಸರ್ವರ್ ಸಮಸ್ಯೆಯಿಂದ ಆಗುತ್ತಿದ್ದ ತೊಂದರೆಗಳು ನಿವಾರಣೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ … Read more

HSRP: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ

ರಾಜ್ಯದಲ್ಲಿ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸುವ ವಿಚಾರದಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಕ್ಕೆ ಸಾರಿಗೆ ಇಲಾಖೆ ತೆರೆ ಎಳೆದಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯವಾಗಿದ್ದು, ಈ ನಿಯಮದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಮಾಧ್ಯಮ ವರದಿಗಳು ತಪ್ಪು ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯವಲ್ಲ ಅಥವಾ ನಿಯಮ ಸಡಿಲಿಕೆಯಾಗಿದೆ ಎಂಬ ಸುದ್ದಿಗಳು ಪ್ರಕಟವಾಗಿದ್ದವು. ಈ ವರದಿಗಳನ್ನು ಸಾರಿಗೆ ಇಲಾಖೆ ತಳ್ಳಿಹಾಕಿದ್ದು, … Read more

ನೀವು SBI ನಲ್ಲಿ ಖಾತೆ ಹೊಂದಿದ್ದೀರಾ.? ‘SBI’ ಖಾತೆದಾರರಿಗೆ ಸರ್ಕಾರ ಗಂಭೀರ ಎಚ್ಚರಿಕೆ ; ಯಾಕೆ.?

ನೀವು SBIನಲ್ಲಿ ಖಾತೆ ಹೊಂದಿದ್ದೀರಾ.? ಆದ್ರೆ, ನೀವು ಇದನ್ನು ತಿಳಿದುಕೊಳ್ಳಬೇಕು. ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ, ಅನುಕೂಲತೆಯ ಜೊತೆಗೆ, ಅಪಾಯಗಳೂ ಇವೆ. ಪ್ರಸ್ತುತ, ಸೈಬರ್ ಅಪರಾಧಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೊಸ ಬಲೆಯನ್ನು ಹಾಕಿದ್ದಾರೆ. ನಿಮ್ಮ YONO ಖಾತೆಯನ್ನ ನಿರ್ಬಂಧಿಸಲಾಗುತ್ತದೆ ಎಂಬ ಭಯವನ್ನ ಸೃಷ್ಟಿಸುವ ಮೂಲಕ ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನ ದೋಚಲು ಅವರು ಸಿದ್ಧರಾಗಿದ್ದಾರೆ. WhatsApp ಮತ್ತು SMS ಮೂಲಕ ಬರುವ ನಕಲಿ ಸಂದೇಶವು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುತ್ತಿದೆ. … Read more

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ₹1.50 ಲಕ್ಷ ಪಾವತಿಸಿ ಕೃಷಿ ಪಂಪ್‌ ಸೆಟ್ ಅಕ್ರಮ-ಸಕ್ರಮಕ್ಕೆ 3 ತಿಂಗಳ ಗಡುವು.!

ರಾಜ್ಯದಲ್ಲಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ಸರ್ಕಾರ ಮೂರು ತಿಂಗಳ ಕಾಲಾವಕಾಶ ನೀಡಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಅಕ್ರಮ ಸಂಪರ್ಕ ಹೊಂದಿರುವ ರೈತರು ₹1.50 ಲಕ್ಷ ಪಾವತಿಸಿ ತಮ್ಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಬಹುದು. ಈ ಹಿಂದೆ ಮೂಲಸೌಕರ್ಯ ಒದಗಿಸಲು ₹4.50 ಲಕ್ಷ ಪಾವತಿಸಬೇಕಿತ್ತು. ಆದರೆ ರೈತರ ಹಿತದೃಷ್ಟಿಯಿಂದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ₹3 ಲಕ್ಷ ಕಡಿತಗೊಳಿಸಿ ಕೇವಲ ₹1.50 ಲಕ್ಷಕ್ಕೆ ಸಕ್ರಮಗೊಳಿಸಲು ನಿರ್ಧರಿಸಲಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲು … Read more

‘ವಿದ್ಯುತ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ ; ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!

ವಿದ್ಯುತ್ ಬಿಲ್ ನಮಗೆ ವಿಳಾಸದ ಪುರಾವೆಯಾಗಿ (Address Proof) ಬಹಳ ಮುಖ್ಯವಾಗಿದೆ. ಆಧಾರ್, ಪಾನ್ ಅಥವಾ ಚಾಲನಾ ಪರವಾನಗಿಯನ್ನು ಪಡೆಯಲು ವಿದ್ಯುತ್ ಬಿಲ್ ಸಹಕಾರಿಯಾಗುತ್ತದೆ. ನೀವು ಹೊಸ ಫ್ಲಾಟ್ ಖರೀದಿಸಿದ್ದರೆ ಅಥವಾ ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಬಿಲ್ ಅನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಈಗ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಹಳೆಯ ಕನೆಕ್ಷನ್ ರದ್ದುಪಡಿಸಿ ಹೊಸದು ಪಡೆಯುವ ಬದಲು, ಆನ್‌ಲೈನ್ ಮೂಲಕವೇ ಹೆಸರು ಬದಲಾಯಿಸಿಕೊಳ್ಳಬಹುದು. ಹೌದು. ವಿದ್ಯುತ್ ಬಿಲ್‌ನಲ್ಲಿ (Power Bill) ಹೆಸರು ಬದಲಾವಣೆ ಮಾಡುವುದು ಎಂದರೆ … Read more

ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ಬದಲಾವಣೆ ; ಇನ್ನು 21 ದಿನ ಕಾಯಲೇಬೇಕು! ಕೇಂದ್ರ ಸರ್ಕಾರ ಪ್ರಮುಖ ಘೋಷಣೆ!

ಕೇಂದ್ರ ಸರ್ಕಾರ ಪ್ರಮುಖ ಘೋಷಣೆ ಮಾಡಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಎಲ್‌ಪಿಜಿ ಪೂರೈಕೆಯ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಪಂಚದಾದ್ಯಂತ ಯುದ್ಧದ ವಾತಾವರಣ ಹೆಚ್ಚು ಅಪಾಯಕಾರಿಯಾಗುತ್ತಿರುವುದರಿಂದ ಭಾರತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದಾಗಿ ಆಮದುಗಳನ್ನ ನಿಲ್ಲಿಸುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಅದಕ್ಕಾಗಿಯೇ ಪೆಟ್ರೋಲಿಯಂ ಸಚಿವಾಲಯವು ದೇಶದಲ್ಲಿ ಎಲ್‌ಪಿಜಿ ಕೊರತೆಯನ್ನು ತಡೆಗಟ್ಟಲು ಸಂವೇದನಾಶೀಲ ಆದೇಶಗಳನ್ನು ಹೊರಡಿಸಿದೆ. ಈ ನಿರ್ಧಾರವು ಕೋಟ್ಯಂತರ ಗೃಹ ಗ್ರಾಹಕರಿಗೆ ದೊಡ್ಡ ಪರಿಹಾರವಾಗಿದೆ. … Read more