ತಾಂಡವ್ನನ್ನು ಬ್ಲಾಕ್ಮೇಲ್ ಮಾಡಿ ಮನೆಗೆ ಬಂದು ಸೇರಿಕೊಂಡಿರುವ ಶ್ರೇಷ್ಠಾ, ತಾನು ಅಧಿಕೃತವಾಗಿ ಆ ಮನೆ ಸೊಸೆ ಎನ್ನುವಂತೆ ವರ್ತಿಸುತ್ತಿದ್ದಾಳೆ. ಮನೆಯವರೆಲ್ಲಾ ನನ್ನನ್ನು ಇಲ್ಲಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಆ ಭಾಗ್ಯಾಗಿಂತ ಕಡಿಮೆ ಎನಿಸಿಕೊಳ್ಳಬಾರದು ಎಂದು ಮನೆ ಕೆಲಸವನ್ನು ತಾನೇ ಮಾಡುತ್ತಿದ್ದಾಳೆ.
ಸತ್ಯನಾರಾಯಣಸ್ವಾಮಿಗೆ ಪ್ರಸಾದ ತಯಾರಿಸುತ್ತೇನೆ ಎಂದು ಹೇಳಿ ಶ್ರೇಷ್ಠಾ, ಉಪ್ಪಿಟ್ಟು ತಯಾರಿಸುತ್ತಾಳೆ. ಅದನ್ನು ನೋಡಿ ಅರ್ಚಕರು ಇಷ್ಟು ವರ್ಷಗಳ ಕಾಲ ಪೂಜೆ ಮಾಡಿದ್ದೇನೆ ಎಲ್ಲಿಯೂ ಈ ರೀತಿ ಪ್ರಮಾದ ಆಗಿಲ್ಲ, ಯಾರಾದರೂ ಸತ್ಯನಾರಾಯಣ ಪೂಜೆಗೆ ಉಪ್ಪಿಟ್ಟು ತಯಾರಿಸುತ್ತಾರಾ ಎಂದು ಕೇಳುತ್ತಾರೆ, ಅದರ ರುಚಿ ನೋಡುವ ಶ್ರೇಷ್ಠಾ ಚೆನಾಗಿದೆಯಲ್ಲಾ ಇದನ್ನು ಏಕೆ ಪ್ರಸಾದವಾಗಿ ಇಡುವುದಿಲ್ಲ ಎಂದು ಕೇಳುತ್ತಾಳೆ. ಶ್ರೇಷ್ಠಾ ವರ್ತನೆಗೆ ತಾಂಡವ್ ಬಿಟ್ಟು ಉಳಿದವರು ಸಿಟ್ಟಾಗುತ್ತಾರೆ. ನಾನು ಮನೆಯಲ್ಲಿ ಪೂಜೆ ಮಾಡುವುದಿಲ್ಲ ಎಂದು ಅರ್ಚಕರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಅವರನ್ನು ಮನವಿ ಮಾಡುವ ಭಾಗ್ಯಾ ನಾನು ಇನ್ನು 5 ನಿಮಿಷದಲ್ಲಿ ದೇವರಿಗೆ ಪ್ರಸಾದ ಮಾಡಿಕೊಡುತ್ತೇನೆ ಎನ್ನುತ್ತಾಳೆ.
ಹೇಳಿದಂತೆ ಭಾಗ್ಯಾ 5 ನಿಮಿಷಕ್ಕೆ ಪ್ರಸಾದ ಮಾಡಿ ತರುತ್ತಾಳೆ. ಪೂಜೆಗೆ ಯಾರು ಕೂರುತ್ತಾರೆ ರಂದು ಅರ್ಚಕರು ಕೇಳುತ್ತಾರೆ. ಭಾಗ್ಯಾ ಹಾಗೂ ತಾಂಡವ್ ಕೂರುತ್ತಾರೆ ಎಂದು ಧರ್ಮರಾಜ್ ಹೇಳುತ್ತಾಳೆ. ಆದರೆ ಶ್ರೇಷ್ಠಾ ಅದಕ್ಕೆ ನಿರಾಕರಿಸುತ್ತಾಳೆ. ಡಿವೋರ್ಸ್ ಆಗಿರುವ ಭಾಗ್ಯಾ ಹೇಗೆ ತಾಂಡವ್ ಜೊತೆ ಪೂಜೆಗೆ ಕೂರುತ್ತಾಳೆ? ನಾನು ಕೂರುತ್ತೇನೆ ಎನ್ನುತ್ತಾಳೆ. ತಾಳಿ ಇಲ್ಲದೆ ನೀನು ಪೂಜೆಗೆ ಕೂರೋಕೆ ಆಗುವುದಿಲ್ಲ ಎಂದು ಸುನಂದಾ ಹೇಳುತ್ತಾಳೆ.ಹಾಗಾದರೆ ಈ ಪೂಜೆ ನಡೆಯುವುದಿಲ್ಲ, ಭಾಗ್ಯಾ ತನ್ನ ಸ್ವಾರ್ಥಕ್ಕಾಗಿ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ನಿಲ್ಲಿಸುತ್ತಾಳೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಪೂಜೆ ನಿಲ್ಲುವುದಿಲ್ಲ, ಈ ಮನೆಯಲ್ಲಿ ಹಿರಿಯ ದಂಪತಿ ಇದ್ದಾರೆ, ನನ್ನ ಅತ್ತೆ ಮಾವ, ಅವರು ಪೂಜೆಗೆ ಕೂರುತ್ತಾರೆ ಎಂದು ಭಾಗ್ಯಾ ಹೇಳುತ್ತಾಳೆ.
ಕುಸುಮಾ, ಧರ್ಮರಾಜ್ ಇಬ್ಬರೂ ಪೂಜೆಗೆ ಕೂರುತ್ತಾರೆ. ಪೂಜೆ ಮುಗಿದ ನಂತರ ಎಲ್ಲರಿಗೂ ತಾಂಬೂಲ ಕೊಡುವಂತೆ ಅರ್ಚಕರು ಭಾಗ್ಯಾಗೆ ತಟ್ಟೆ ಕೊಡುತ್ತಾರೆ. ಅದನ್ನು ತೆಗೆದುಕೊಳ್ಳಲು ಭಾಗ್ಯಾ ಹೋದಾಗ, ಅವಳ ಕೈಯಿಂದ ಶ್ರೇಷ್ಠಾ ಕಸಿದುಕೊಂಡು ಎಲ್ಲರಿಗೂ ತಾಂಬೂಲ ಕೊಡಲು ಹೋಗುತ್ತಾಳೆ. ಆದರೆ ಅವಳ ಕೈಯಿಂದ ಯಾರೂ ತಾಂಬೂಲ ತೆಗೆದುಕೊಳ್ಳುವುದಿಲ್ಲ. ಈ ಮನೆಗೆ ತಕ್ಕ ಸೊಸೆ ಭಾಗ್ಯಾ, ಅವಳು ಕೊಟ್ಟರೆ ಮಾತ್ರ ನಾವು ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಪೂಜಾ ಬಂದು ಶ್ರೇಷ್ಠಾ ಕೈಯಿಂದ ತಾಂಬೂಲದ ತಟ್ಟೆ ಕಸಿದುಕೊಂಡು ಭಾಗ್ಯಾಗೆ ಕೊಡುತ್ತಾಳೆ.
ಕೋಪಗೊಂಡ ಶ್ರೇಷ್ಠಾ ರೂಮ್ಗೆ ಹೋಗುತ್ತಾಳೆ. ನಾನು ಭಾಗ್ಯಾ ಆಗಿ ಇದ್ದರೆ ಇವರನ್ನೆಲ್ಲಾ ಬಗ್ಗಿಸಲು ಸಾಧ್ಯವಿಲ್ಲ. ನಾನು ಶ್ರೇಷ್ಠಾ ಆಗೇ ಇವರಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಳ್ಳುತ್ತಾಳೆ. ಮರುದಿನ ಆಫೀಸಿಗೆ ಹೋಗಲು ರೆಡಿ ಆಗುತ್ತಾಳೆ. ನೀನು ಆಫೀಸಿಗೆ ಹೋದರೆ ಮನೆ ಕೆಲಸ ಯಾರು ಮಾಡುತ್ತಾರೆ ಎಂದು ಕುಸುಮಾ ಕೇಳುತ್ತಾಳೆ. ಅದಕ್ಕೆ ನಾನು ಎಲ್ಲಾ ರೆಡಿ ಮಾಡಿದ್ದೇನೆ ಎಂದು ಹೇಳುವ ಶ್ರೇಷ್ಠಾ, ಮನೆ ಕೆಲಸದವಳನ್ನು ಕರೆಯುತ್ತಾಳೆ.
ಮನೆ ಕೆಲಸದವಳನ್ನು ಕುಸುಮಾ ಒಪ್ಪುತ್ತಾಳಾ.? ಶ್ರೇಷ್ಠಾ ಮತ್ತೇನು ಅವಾಂತರ ಮಾಡುತ್ತಾಳೆ.? ಮುಂದಿನ ಎಪಿಸೋಡ್ಗಳಲ್ಲಿ ಉತ್ತರ ದೊರೆಯಲಿದೆ.
- Gruhalakshmi : ಗೃಹಲಕ್ಷ್ಮಿ ಹಣ ಜಮೆ ಆಗುತ್ತಿಲ್ಲ ಯಾಕೆ ಇಲ್ಲಿದೆ ಕಾರಣ – ಮಹಿಳೆಯರು ತಪ್ಪದೇ ನೋಡಿ
- ಭಾರೀ ಇಳಿಕೆ ಕಂಡ ಚಿನ್ನ.! ಇನ್ನೂ ಇಳಿಕೆ ಕಾಣುತ್ತಾ ಬಂಗಾರ.! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Udyogini Yojana : ಉದ್ಯೋಗಿನಿ ಯೋಜನೆ ಅಡಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ – ಅರ್ಹತೆ ಹಾಗು ಬೇಕಾಗುವ ದಾಖಲೆಗಳೇನು.?
- Ration Card Updates : ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ! ಏನೆಲ್ಲಾ ಅರ್ಹತೆಗಳಿರಬೇಕು.?
- SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್
- Gold Rate Today : ಇಳಿಕೆಯ ಹಾದಿ ಮರೆತ ಬಂಗಾರ.? ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- ಚಾಕೊಲೇಟ್ ಆಸೆ ತೋರಿಸಿ 11ರ ಬಾಲಕಿ ಮೇಲೆ ಅತ್ಯಾಚಾರ – ಆರೋಪಿ ಬಂಧನ
- Driving Licence : ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಹೊಸ ಆದೇಶ ಜಾರಿಗೊಳಿಸಿದ ಸಂಚಾರ ಸಾರಿಗೆ ಇಲಾಖೆ! ಸಂಪೂರ್ಣ ಮಾಹಿತಿ
- ಮುಡಾ ಹಗರಣ ಕಾನೂನು ಹೋರಾಟದಲ್ಲಿ ಬಿಗ್ ಟ್ವಿಸ್ಟ್.! ಮೇಲ್ಮನವಿಯಿಂದ ಹಿಂದೆ ಸರಿದ ಸ್ನೇಹಮಯಿ ಕೃಷ್ಣ.!
- Gold Rate : ಬಂಗಾರ ಖರೀದಿಸುವವರಿಗೆ ಗುಡ್ ನ್ಯೂಸ್ ಇದೆಯಾ.? ಇಂದಿನ ಬೆಲೆ ಎಷ್ಟಾಗಿದೆ ಗೊತ್ತಾ.?
- ಸ್ನೇಹಿತರ ಕಣ್ಣೆದುರಲ್ಲೇ ನೀರುಪಾಲಾದ ಮತ್ತಿಬ್ಬರು ಸ್ನೇಹಿತರು – ಘಟನೆ ವಿಡಿಯೋ ಮೊಬೈಲ್ ಕ್ಯಾಮೆರದಲ್ಲಿ ಸೆರೆ
- ಅನ್ಯ ಜಾತಿಯ ಯುವಕನೊಂದಿಗೆ ಮದುವೆಗೆ ಹಠ – ರೊಚ್ಚಿಗೆದ್ದು ಮಗಳನ್ನೇ ಕೊಲೆಗೈದ ಪರಾರಿಯಾದ ತಂದೆ
- ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರತೆಗೆದು ಬಾಲಕನ ಜೀವ ಉಳಿಸಿದ ವೆನ್ಲಾಕ್ ಆಸ್ಪತ್ರೆಯ ವೈದ್ಯರು
- ಶಾಲೆಯಿಂದ ಮನೆಗೆ ತಡವಾಗಿ ಬಂದಿದ್ದಕ್ಕೆ ಬಾಲಕನನ್ನು ಹೊಡೆದು ಕೊಂದ ತಂದೆ.!
- ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ – Health Tips
- ರೈಲಿನಲ್ಲಿ ಗರ್ಭಿಣಿ ಮೇಲೆ ಅತ್ಯಾಚಾರ, ಮಹಿಳೆಗೆ ಗರ್ಭಪಾತ.! ಕೈಮುಗಿದು ಬೇಡಿಕೊಂಡರೂ ಬಿಡದ ಪಾಪಿ
- PM Kisan Samman Yojana : ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ.!
- Gruhalakshmi : ಗೃಹಲಕ್ಷ್ಮಿಯರಿಗೆ ಸಿಕ್ತು ಗುಡ್ ನ್ಯೂಸ್.! ಇನ್ನೂ ನಿಮ್ಮ ಖಾತೆಗೆ ಹಣ ಬಂದಿಲ್ವಾ! ಚಿಂತೆ ಬಿಡಿ ಈ ಸುದ್ದಿ ನೋಡಿ!
- ರೈತರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್! ಇನ್ಮುಂದೆ ರೈತರಿಗೆ ₹7,600/- ರೂಪಾಯಿ ಅಲ್ಲ, ಜಾಸ್ತಿನೇ ಸಿಗುತ್ತೆ!
- Gold Rate Today : ಆಭರಣ ಪ್ರಿಯರೇ ಎಚ್ಚರ.! ಚಿನ್ನದ ಬೆಲೆ ನೋಡಿ ಖರೀದಿ ಮಾಡಿ – ಎಷ್ಟಿದೆ ಚಿನ್ನದ ಬೆಲೆ.?
- Bank Rules : ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇರಬೇಕು? ತಪ್ಪಿದರೆ ಯಾವ್ಯಾವ ಬ್ಯಾಂಕಿನಿಂದ ಎಷ್ಟೆಷ್ಟು ದಂಡ ಬೀಳುತ್ತೆ?
- Gold Rate : ಬ್ರೇಕಿಂಗ್ ನ್ಯೂಸ್.! ಎಷ್ಟಾಗಿದೆ ನೋಡಿ ಇಂದಿನ ಗೋಲ್ಡ್ ರೇಟ್.?
- PM Kisan Samman : ಪಿಎಂ ಕಿಸಾನ್ ಸಮ್ಮಾನ್ ಯೋಜನೆ’ಗೆ ಇನ್ನು ಮುಂದೆ ಕೃಷಿಕರ ಗುರುತಿನ ಚೀಟಿ ಕಡ್ಡಾಯ.!
- ನನ್ನ ತಾಯಿ ತೀರಿಕೊಂಡಿದ್ದಾರೆ. ತಾಯಿಯ ತವರು ಮನೆಯಲ್ಲಿ ಆಸ್ತಿ ಭಾಗ ಕೇಳಬಹುದ.? ಎಷ್ಟು ಆಸ್ತಿ ಸಿಗುತ್ತೆ.? ಸಂಪೂರ್ಣ ಮಾಹಿತಿ
- SBI ಬ್ಯಾಂಕ್ ನಲ್ಲಿ ಖಾತೆ ಇದ್ದರೆ ತಿಂಗಳಿಗೆ ಮನೆಯಲ್ಲೇ ಕಳಿತು 30 ರಿಂದ 50 ಸಾವಿರ ಹಣ ಗಳಿಸುವ ಸುವರ್ಣಾವಕಾಶ.!
- Gold Rate : ಕುಸಿತ ಕಂಡಿತಾ ಬಂಗಾರ.! ಇಂದಿನ ಗೋಲ್ಡ್ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.?
- Bank Account : ವ್ಯಕ್ತಿ ಸತ್ತರೆ, ಅವನ ಬ್ಯಾಂಕ್ ಖಾತೆಯಲ್ಲಿರುವ ಹಣ ಯಾರಿಗೆ ಸೇರುತ್ತದೆ.?
- ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್ ! ನಿಮ್ಮದು ಈ ಟೆಸ್ಟ್ ಆಗಿದೆಯಾ.?