Bele Parihara – 2024 : ರೈತರ ಬೆಳೆ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿಕೊಂಡ ಬ್ಯಾಂಕ್ ಗಳಿಗೆ ಮರುಪಾವತಿಸಲು ಸೂಚಿಸಿದ ಸರ್ಕಾರ

Spread the love

Bele Parihara – 2024 : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಈಗಾಗಲೇ ರೈತರಿಗೆ ಬರಗಾಲದಿಂದ ಅದ ನಷ್ಟಕ್ಕೆ ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರವು ಈಗಾಗಲೇ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನ ವರ್ಗಾವಣೆ ಮಾಡಿದೆ.

WhatsApp Group Join Now

ಆದರೆ ಕೆಲವು ರೈತರು ಬ್ಯಾಂಕ್ ಗಳಲ್ಲಿ ಸಾಲ ತೀರಿಸದೇ ಬಾಕಿಯಿಟ್ಟ ಕಾರಣ ಅಂತಹ ರೈತರ ಬ್ಯಾಂಕ್ ಖಾತೆಗೆ ಸರ್ಕಾರ ವರ್ಗಾವಣೆ ಮಾಡಿದ ಬೆಳೆ ಪರಿಹಾರದ ಹಣವನ್ನು ಬ್ಯಾಂಕ್ ಗಳು ರೈತರ ಹಿಂದಿನ ಸಾಲಕ್ಕೆ ಜಮಾ ಮಾಡಿದೆ. ಇದರಿಂದಾಗಿ ಅಂತಹ ರೈತರಿಗೆ ಆರ್ಥಿಕ ತೊಂದರೆ ಉಂಟಾಗಿದ್ದು, ಈಗ ಬ್ಯಾಂಕ್ ನ ಈ ಕ್ರಮದಿಂದ ತೊಂದರೆಗೆ ಒಳಗಾದ ರೈತರಿಗೆ ಕೂಡಲೇ ಹಣ ಮರುಪಾವತಿ ಮಾಡುವಂತೆ ಸರ್ಕಾರವು ಆದೇಶ ಹೊರಡಿಸಿದೆ.

ಇದನ್ನೂ ಕೂಡ ಓದಿ : PM Suryodaya Yojana : ಉಚಿತ ಸೋಲಾರ್ ಮೆಲ್ಛಾವಣೆ ವಿತರಣೆ.! ಈ ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಸೋಲಾರ್ ಮೇಲ್ಚಾವಣಿ ಪಡೆದುಕೊಳ್ಳಿ.!

WhatsApp Group Join Now

ಈಗಾಗಲೇ ಮುಂಗಾರು ಆರಂಭವಾಗಿದ್ದು, ಇದರಿಂದಾಗಿ ರೈತರಿಗೆ ಬೀಜ ಬಿತ್ತನೆ ಹಾಗೂ ಗದ್ದೆ ಉಳುವ ಸಮಯದಲ್ಲಿ ರೈತರಿಗೆ ಆರ್ಥಿಕವಾಗಿ ಹಣದ ತೊಂದರೆ ಇರುತ್ತದೆ. ಸರ್ಕಾರ ನೀಡಿದ ಬೆಳೆ ಪರಿಹಾರದ ಹಣವನ್ನು ಬ್ಯಾಂಕ್ ತೆಗೆದುಕೊಂಡರೆ, ಈಗಾಗಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಬೆಳೆ ಬೆಳೆಯಲು ಕಷ್ಟವಾಗುತ್ತದೆ. ಆದ್ದರಿಂದ ರೈತರ ಬ್ಯಾಂಕ್ ಖಾತೆಗೆ ಹಣ ಮರುಪಾವತಿಸುವಂತೆ ಬ್ಯಾಂಕ್ ಗಳಿಗೆ ಸರಕಾರ ತಿಳಿಸಿದೆ. ಈ ಕೂಡಲೇ ಹಣ ವರ್ಗಾವಣೆ ಮಾಡದ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಸಹ ರಾಜ್ಯ ಸರ್ಕಾರ ನೀಡಿದೆ.

ಬ್ಯಾಂಕ್ ಗಳು ರೈತರಿಗೆ ಹಣ ವರ್ಗಾವಣೆ ಮಾಡದೇ ಇದ್ದರೆ ಕಾನೂನು ಕ್ರಮದ ಎಚ್ಚರಿಕೆ

ಬರಪೀಡಿತ ಪ್ರದೇಶದ ರೈತರ ಒಪ್ಪಿಗೆ ಇಲ್ಲದೆಯೇ ಬ್ಯಾಂಕ್ ಗಳು ರಾಜ್ಯ ಸರ್ಕಾರ ನೀಡಿರುವ ಬರ ಪರಿಹಾರ ಹಣವನ್ನು ಅವರು ಈ ಹಿಂದೆ ಬ್ಯಾಂಕ್ ನಲ್ಲಿ ಪಡೆದುಕೊಂಡ ಸಾಲದ ಖಾತೆಗೆ ಜಮೆ ಮಾಡಿಕೊಂಡು ಪರಿಹಾರದ ಹಣವನ್ನು ರೈತರಿಗೆ ಸಿಗದಂತೆ ಮಾಡಿದರೆ ಅದು ಕಾನೂನು ವಿರುದ್ಧದ ಕ್ರಮ ಎಂದು ಇದಕ್ಕಾಗಿ ಸಂಬಂಧಪಟ್ಟ ಬ್ಯಾಂಕಿನ ಮುಖ್ಯಸ್ಥರನ್ನು ಹಾಗೂ ಶಾಖಾ ವ್ಯವಸ್ಥಾಪಕರನ್ನು ಜವಾಬ್ದಾರನಾಗಿ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

WhatsApp Group Join Now

ನಿಯಮದ ಪ್ರಕಾರ ಸರಕಾರದಿಂದ ನೀಡಿರುವ ಯಾವುದೇ ಪ್ರೋತ್ಸಾಹದ ಸಹಾಯಧನವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳದೇ ರೈತರಿಗೆ ಅನುಕೂಲ ಮಾಡಿಕೊಡಬೇಕು. ಯಾವುದೇ ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್ ಗಳು ಸಾಲದ ಹಣವನ್ನು ರೈತರಿಗೆ ಸಿಗುವಲ್ಲಿ ಅಡೆತಡೆ ಉಂಟು ಮಾಡಿದರೆ ಬ್ಯಾಂಕಿನ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ-2005ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಡಿ.ಸಿ ತಿಳಿಸಿದ್ದಾರೆ.

ಇದನ್ನೂ ಕೂಡ ಓದಿ : Bara Parihara Amount Failed : ನಿಮಗಿನ್ನೂ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಈ ತಪ್ಪುಗಳೇ ಕಾರಣ! ಸಂಪೂರ್ಣ ಮಾಹಿತಿ

ಈಗಾಗಲೇ ಬರಗಾಲದಿಂದಾಗಿ ಆರ್ಥಿಕವಾಗಿ ಕಂಗೆಟ್ಟಿರುವ ರೈತರ ಜೊತೆಗೆ ಬ್ಯಾಂಕ್ ಗಳು ಸಂಯಮದಿಂದ ವರ್ತಿಸಬೇಕು ಹಾಗೂ ಬ್ಯಾಂಕ್ ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾದರೆ ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಸಿ, ಅವರಿಗೆ ಮಾರ್ಗದರ್ಶನ ನೀಡಿ ಆದಷ್ಟು ಬೇಗನೇ ರೈತರ ಸಮಸ್ಯೆಯನ್ನು ಪರಿಹರಿಸುವುದು ಬ್ಯಾಂಕ್ ನೌಕರರ ಕರ್ತವ್ಯ ಆಗಿರುತ್ತದೆ ಎಂದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply