Bara Parihara Amount Failed : ನಿಮಗಿನ್ನೂ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಈ ತಪ್ಪುಗಳೇ ಕಾರಣ! ಸಂಪೂರ್ಣ ಮಾಹಿತಿ

Bara Parihara Amount Failed : ನಮಸ್ಕಾರ ಸ್ನೇಹಿತರೇ, ಬರಗಾಲ ಪೀಡಿತ ಪ್ರದೇಶದ ರೈತರಿಗೆ ಸರ್ಕಾರ ಬಿಡುಗಡೆಗೊಳಿಸಿರುವ ಬರ ಪರಿಹಾರ ಹಣ ರೈತರ ಬ್ಯಾಂಕ್ ಖಾತೆಗೆ ಇನ್ನೂ ಕೂಡ ವರ್ಗಾವಣೆ ಆಗದಿರಲು ಯಾವೆಲ್ಲಾ ತಪ್ಪುಗಳು ಕಾರಣ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(NDRF) ಮಾರ್ಗಸೂಚಿಯ ಅನ್ವಯ ರಾಜ್ಯದ ಸುಮಾರು 32.12 ಲಕ್ಷ ಅರ್ಹ ಫಲಾನುಭವಿ ರೈತರಿಗೆ ₹3,454 ಕೋಟಿ ಬರ ಪರಿಹಾರದ ಎರಡನೇ ಕಂತಿನ ಹಣವನ್ನು ನೇರ ವರ್ಗಾವಣೆ(DBT) ಮೂಲಕ ರೈತರ ಬ್ಯಾಂಕ್(Bank) ಹಣವನ್ನು ಜಮಾ ಮಾಡಲಾಗಿದೆ. ಮೂಲಗಳ ಪ್ರಕಾರ ಇನ್ನೂ 1.5 ಲಕ್ಷ ಅರ್ಹ ರೈತರ ಬ್ಯಾಂಕ್ ಖಾತೆ(Bank Account)ಗಳಿಗೆ ಇದುವರೆಗೂ 2ನೇ ಕಂತಿನ ಬರ ಪರಿಹಾರದ ಹಣ ವರ್ಗಾವಣೆಯಾಗಿಲ್ಲ.

ಯಾವೆಲ್ಲಾ ಕಾರಣಕಗಳಿಂದ ರೈತರ ಖಾತೆಗೆ ಇನ್ನೂ ಕೂಡ ಹಣ ವರ್ಗಾವಣೆಯಾಗಿಲ್ಲ.? ಇದನ್ನು ಸರಿಪಡಿಸಿಕೊಳ್ಳುವ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು.? ಇದುವರೆಗೂ ಬರ ಪರಿಹಾರದ(bara Parihara) ಹಣ ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವುದು ಹೇಗೆ.? ಎನ್ನುವ ಮಾಹಿತಿಯನ್ನು ತಿಳಿಯೋಣ.

ಇದನ್ನೂ ಕೂಡ ಓದಿ : Ration Card Update : ನಿಮಗಿನ್ನೂ ರೇಷನ್ card ಸಿಕ್ಕಿಲ್ವಾ.? ನೀವು ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ.?

ಬರ ಪರಿಹಾರದ ಹಣ ಜಮಾ ಆಗದಿರಲು ಇದೇ ಪ್ರಮುಖ ಕಾರಣ

  • ಫ್ರೂಟ್ಸ್ ಐಡಿ(FID) ರಚನೆ ಆಗದಿರುವುದು ಅಥವಾ ಫ್ರೂಟ್ಸ್ ಐಡಿ(FID) ನಂಬರ್ ನಿಮ್ಮ ಸರ್ವೇ ನಂಬರ್ ಗೆ ಸೇರ್ಪಡೆಯಾಗದಿರುವುದು.

ಕೆಲವು ಅರ್ಹ ರೈತ ಫಲಾನುಭವಿಗಳ ಫ್ರೂಟ್ಸ್ ಐಡಿ(FID) ನಂಬರ್ ಇನ್ನು ರಚನೆ ಆಗಿರುವುದಿಲ್ಲ ಅಥವಾ ಫ್ರೂಟ್ಸ್ ಐಡಿ(FID) ಗೆ ಎಲ್ಲಾ ಸರ್ವೆ ನಂಬರ್‌ ಸೇರ್ಪಡೆ ಆಗಿಲ್ಲವೆಂದರೆ, ಬರ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ. ರೈತರು ಈ ವಿಷಯವನ್ನು ಸರಿಪಡಿಸಿಕೊಳ್ಳಲು ನಿಮ್ಮ ಹತ್ತಿರವಿರುವ ಕೃಷಿ ಇಲಾಖೆ, ಹೋಬಳಿ, ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಕೂಡಲೇ ಮಾಹಿತಿಯನ್ನು ಸರಿಪಡಿಸಿಕೊಳ್ಳಬಹುದು.

  • ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದಿರುವುದು.

ನಿಮ್ಮ ಬ್ಯಾಂಕ್‌ ಖಾತೆಗೆ ಇದುವರೆಗೂ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೆಂದರೆ ಬರ ಪರಿಹಾರದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ. ಆದಷ್ಟು ಬೇಗ ಬ್ಯಾಂಕ್ ಗೆ ಭೇಟಿ ನೀಡಿ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.

  • ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗು ಪಹಣಿಯಲ್ಲಿರುವ ಹೆಸರು ಸರಿಯಾಗಿ ತಾಳೆ ಆಗದೆ ಇರುವುದು ಕೂಡ ಇದಕ್ಕೆ ಕಾರಣ.

ನಿಮ್ಮ ಆಧಾರ್ ಕಾರ್ಡ್ ನ ಹೆಸರು ಹಾಗು ಪಹಣಿಯಲ್ಲಿ ಹೆಸರು ಒಂದಕ್ಕೊಂದು ತಾಳೆಯಗದೇ ಇದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಆದಷ್ಟು ಬೇಗ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಿ, ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಪಹಣಿಯಲ್ಲಿರುವ ಹೆಸರನ್ನು ಸರಿಪಡಿಸಿಕೊಳ್ಳಿ

ಇದನ್ನೂ ಕೂಡ ಓದಿ : HSRP : ಮೇ 31 ರಿಂದ ಎಲ್ಲಾ ವಾಹನಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ / HSRP ನಂಬರ್ ಪ್ಲೇಟ್ ₹1,000 ದಂಡ ಘೋಷಣೆ.!

ಬರ ಪರಿಹಾರದ ಹಣ ಜಮಾ
ಆಗದೇ ಇರುವವರ ಪಟ್ಟಿ ನೋಡಲು
ಇಲ್ಲಿ ಕ್ಲಿಕ್ ಮಾಡಿ
Bhoomi Online – Parihara

ಇಲ್ಲಿ ನೀಡಿರುವ ಅಧೀಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ಸರಿಯಾದ ದಾಖಲೆಗಳನ್ನು ನಮೂದಿಸಿ ಬರ ಪರಿಹಾರದ ಹಣ ಯಾವ ರೈತರ ಬ್ಯಾಂಕ್ ಖಾತೆಗೆ ಜಮಾವಾಗಿಲ್ಲ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply