ಬೆಳಗಾವಿಯ ಆರ್‌ಎಸ್‌‍ಎಸ್‌‍ ಸಮಾವೇಶ ಖಾಸಗಿ ಕಾರ್ಯಕ್ರಮ, ಅನುಮತಿ ಅಗತ್ಯವಿಲ್ಲ : ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

Spread the love

ಬೆಳಗಾವಿಯಲ್ಲಿ ಆರ್‌ಎಸ್‌‍ಎಸ್‌‍ ರಾಷ್ಟ್ರೀಯ ಪ್ರಾಂತ ಪ್ರಚಾರಕರ ಸಮಾವೇಶ ಖಾಸಗಿ ಕಾರ್ಯಕ್ರಮವಾಗಿದ್ದು, ಅದಕ್ಕೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಬೀದಿಗಿಳಿದು ಬೃಹತ್‌ ಮೆರವಣಿಗೆ ನಡೆಸುತ್ತೇವೆ ಎಂದಾದರೆ, ಆಗ ಅನುಮತಿ ಬೇಕಾಗುತ್ತದೆ. ಅವರು ಮನವಿ ಸಲ್ಲಿಸಬಹುದು, ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಆಧರಿಸಿ ಅನುಮತಿ ನೀಡಬೇಕೋ ಅಥವಾ ಕಾರ್ಯಕ್ರಮ ಮುಂದೂಡಿ ಎಂದು ಸಲಹೆ ನೀಡಬೇಕೋ ಎಂಬುದನ್ನು ನಿರ್ಧರಿಸುತ್ತೇವೆ ಎಂದರು.

ಎಸ್‌‍ಐಆರ್‌ ಪ್ರಕ್ರಿಯೆ ಸರಿಯಿಲ್ಲ ಎಂದು ನಾವು ಕೂಡ ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ. ಈ ಬಗ್ಗೆ ಚರ್ಚೆ ಮಾಡಲು ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದ ತಮಗೆ ಕೇಂದ್ರ ಚುನಾವಣಾ ಆಯೋಗ ಸಮಯ ನೀಡಲಿಲ್ಲ. ಆದರೆ ಬಿಜೆಪಿ-ಜೆಡಿಎಸ್‌‍ನವರು ಕೇಳಿದಾಕ್ಷಣ ಸ್ಪಂದಿಸಿದ್ದಾರೆ.

ಇದನ್ನು ನೋಡಿದರೆ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಸ್ಪಷ್ಟವಾಗುವುದಿಲ್ಲವೇ? ಸರ್ಕಾರದ ಪ್ರಶ್ನೆಗಳಿಗೆ ಉತ್ತರಿಸದ ಆಯೋಗ, ವಿರೋಧ ಪ್ರಕ್ಷದ ಮನವಿಗೆ ಯಾವ ನಿರ್ಣಯ ಕೈಗೊಳ್ಳುತ್ತದೆ ಎಂದು ಕಾದು ನೋಡುತ್ತೇವೆ ಎಂದರು.

ದೂರು ನೀಡುವುದು, ನಂತರ ವ್ಯವಸ್ಥೆಯನ್ನೇ ಬದಲಾಯಿಸುವುದು ಬಿಜೆಪಿಯವರ ಸಾಮಾನ್ಯ ಕಾರ್ಯಸೂಚಿ. ಪಶ್ಚಿಮ ಬಂಗಾಳದಲ್ಲಿ ಎಸ್‌‍ಐಆರ್‌ ಆರಂಭವಾದಾಗ ಅಧಿಕಾರಿಗಳು ಮಮತಾ ಬ್ಯಾನರ್ಜಿ ಅವರ ಕೈಗೊಂಬೆ ಎಂದು ಪ್ರತಿಭಟನೆ ಮಾಡಿದರು. ಕೊನೆಗೆ ಲಾಜಿಕಲ್‌ ಡಿಸ್ಕಿಪ್ರೆನ್ಸಿ ಎಂಬ ವ್ಯವಸ್ಥೆ ತಂದು ಲಕ್ಷಾಂತರ ಮತದಾರರನ್ನು ಕಿತ್ತುಹಾಕಿದ್ದರು ಎಂದು ಹೇಳಿದರು.

ರಾಜ್ಯದ ಬರಪರಿಸ್ಥಿತಿಯ ಆಂತರಿಕ ಅಂದಾಜಿನ ಪ್ರಕಾರ 10 ಸಾವಿರ ಕೋಟಿ ರೂ. ನೆರವು ನೀಡುವಂತೆ, ಕೇಂದ್ರ ಸರ್ಕಾರಕ್ಕೆ ಮೌಖಿಕ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಮಾರ್‌ ಅವರು, ವಿಭಾಗವಾರು ಸಭೆ ನಡೆಸಿ, ವಾಸ್ತವತೆಯ ಆಧಾರದ ಮೇಲೆ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಲಿದೆ. ಬರ ಘೋಷಣೆ ನಮ ಕೈಯಲ್ಲಿಲ್ಲ. ಅದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಕಾರ್ಯನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಿಯಾಂಕ್‌ ಖರ್ಗೆ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಿದ್ದ ಬಿಜೆಪಿಯವರು ಕೇಂದ್ರದ ವರದಿಯನ್ನು ಬಿಜೆಪಿಯವರು ಕಣ್ಣುತೆರೆದು ನೋಡಲಿ, ಹಿಂದೆ ಆಕ್‌್ಸಪರ್ಡ್‌ ವಿಶ್ವವಿದ್ಯಾಲಯ ಗ್ಯಾರಂಟಿ ಯೋಜನೆಗಳ ಕುರಿತು ಸಕಾರಾತಕ ವರದಿ ನೀಡಿದಾಗ ಬಿಜೆಪಿಯವರು, ವ್ಯಂಗ್ಯದ ಮಾತುಗಳನ್ನಾಡಿದ್ದರು. ಈಗ ಅವರದೇ ಪಕ್ಷದ ಕೇಂದ್ರ ಸರ್ಕಾರವೇ ಗ್ಯಾರಂಟಿಗಳನ್ನು ಕೊಂಡಾಡಿದೆ. ಅಷ್ಟೇ ಅಲ್ಲದೇ ಜಲಜೀವನ್‌ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಗ್ರಾಮ ಪಂಚಾಯಿತಿಗಳಲ್ಲಿ ಹಣ ಬಳಕೆ, ತೆರಿಗೆ ಸಂಗ್ರಹದಲ್ಲೂ ನಾವು ಮೊದಲಿಗರಾಗಿದ್ದೇವೆ. ಹಿಂದೆ ಟೀಕೆ ಮಾಡಿದವರು ಈಗ ಬಂದು ಸನಾನ ಮಾಡಲಿ, ತಾವು ಸಮಯ ನೀಡುತ್ತೇವೆ ಎಂದರು.

ಚನ್ನಪಟ್ಟಣದ ತಹಶೀಲ್ದಾರ್‌ ಅವರನ್ನು ಬ್ಲಾಕ್‌ ಮೇಲ್‌ ಮಾಡಿರುವ ಪ್ರಕರಣ ಈಗಷ್ಟೇ ತಮ ಗಮನಕ್ಕೆ ಬಂದಿದೆ. ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆ ಎಂದರು.ಹುಣಸೂರು ಶಾಸಕ ಹರೀಶ್‌ಗೌಡ ಅವರ ಪತ್ನಿ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಟೀಕೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣ ದಾಖಲಿಸಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜಿ ಇಲ್ಲ. ಆದರೆ ಸೆಲೆಬ್ರಿಟಿ ಮಹಿಳೆಯರ ವಿರುದ್ಧ ಕ್ರಮ ಕೈಗೊಂತೆ ತಮ ಪ್ರಕರಣದಲ್ಲೂ ತುರ್ತು ಕ್ರಮಗಳಾಗಬೇಕೆಂದು ದೂರುದಾರರು ಹೇಳಿರುವುದು ತಮ ಗಮನಕ್ಕೆ ಬಂದಿದೆ. ಯಾವುದೇ ಪ್ರಕರಣವಾದರೂ ಪರಿಶೀಲನೆ ಮಾಡಬೇಕು. ಅದಕ್ಕೆ ಸಮಯಾವಕಾಶ ಹಿಡಿಯುತ್ತದೆ. ಈ ಪ್ರಕರಣದಲ್ಲೂ ಅದೇ ರೀತಿಯಾಗುತ್ತದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ನಡೆದಿರುವ ಚಂದಾ ಚೋರಿ ಪ್ರಕರಣಕ್ಕೂ ಕಾಂಗ್ರೆಸ್‌‍ ಪಕ್ಷವೇ ಉತ್ತರ ನೀಡಬೇಕು ಎಂಬಂತೆ ಬಿಜೆಪಿಯವರು ಮಾತನಾಡುತ್ತಾರೆ. ರಾಮಮಂದಿರ ವಿಚಾರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟವಾದಾಗ, ಪ್ರಾಣ ಪ್ರತಿಷ್ಠಾಪನೆ, ಅಡಿಗಲ್ಲು ಹಾಕುವುದು ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ಪ್ರಧಾನಿಯವರೇ ಕ್ರೆಡಿಟ್‌ ತೆಗೆದುಕೊಂಡರು. ಈಗ ದೇಣಿಗೆ ಹಣ ಲೂಟಿಯಾದಾಗ ಕಾಂಗ್ರೆಸ್‌‍ ಮಾತನಾಡಬೇಕೆಂದು ಬಯಸುತ್ತಾರೆ.

ಚಾಯಿ ಪೇ ಚರ್ಚೆ ಮಾಡಿರುವ ಪ್ರಧಾನಿಯವರು, ಚಂದಾಫೇ ಚರ್ಚೆ ಮಾಡಲಿ. ಉತ್ತರಿಸಲಾಗದಂತಹ ಕಠಿಣ ಪ್ರಶ್ನೆಗಳು ಎದುರಾದಾಗ ಪ್ರಧಾನಿ ದೇಶದಲ್ಲಿ ಇರದೇ, ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ, ನೀಟ್‌ ಅಕ್ರಮಗಳಂತಹ ಸಂದರ್ಭದಲ್ಲಿ ಪ್ರಧಾನಿಯವರ ಕಾರ್ಯಕ್ರಮಗಳು ನೋಡಿದರೆ ಗೊತ್ತಾಗುತ್ತದೆ ಎಂದರು.
ರಾಮಮಂದಿರ ಹುಂಡಿ ಲೂಟಿಯ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಧಿಕಾರಿಗಳು ಉತ್ತರ ಪ್ರದೇಶದ ಮುಖ್ಯಮಂತ್ರಿಯವರ ಅಧೀನದಲ್ಲಿದ್ದಾರೆ. ಇದರಿಂದ ನ್ಯಾಯ ಸಿಗುತ್ತದೆ, ಸರಿಯಾದ ತನಿಖೆಯಾಗುತ್ತದೆ ಎಂದು ಅನಿಸುವುದಿಲ್ಲ ಎಂದರು.

ಬಿಜೆಪಿಯ ಮುಖಂಡನ ಮನೆಗೆ ಪೊಲೀಸ್‌‍ ಅಧಿಕಾರಿಗಳನ್ನು ಕಳುಹಿಸಲಾಗಿದೆ ಎಂಬ ಆರೋಪ ಸದ್ಯಕ್ಕೆ ದೂರವಾಗಿದೆ. ನನ್ನ ವಿರುದ್ಧ ಈ ರೀತಿಯ ಆರೋಪ ಮಾಡುವವರ ನೇತೃತ್ವದಲ್ಲೇ ಸಮಿತಿಯೊಂದನ್ನು ರಚಿಸುತ್ತೇನೆ. ನನ್ನ ವಿರುದ್ಧವೂ ಪಾರದರ್ಶಕ ತನಿಖೆ ಮಾಡಲಿ ಎಂದು ಅವರು ಸವಾಲು ಹಾಕಿದರು.

ಅಯೋಧ್ಯೆಯ ಲೂಟಿಯ ಬಗ್ಗೆ ಪ್ರಶ್ನೆ ಕೇಳಿದರೆ, ಕಾಂಗ್ರೆಸ್‌‍ ಕಾಲದಲ್ಲಿ ಲೂಟಿಯಾಗಿಲ್ಲವೇ? ಎಂದು ಹೇಳುತ್ತಾರೆ. ದೇಶದಲ್ಲಿ ಅಧಿಕಾರ ನಡೆಸುತ್ತಿರುವವರು ಯಾರು? ಒಂದು ವೇಳೆ ಹಗರಣ ನಡೆದಿದ್ದರೆ, ತಪ್ಪುಗಳಾಗಿದ್ದರೆ, ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿ, ನನ್ನನ್ನೂ ಸೇರಿದಂತೆ ಕಾಂಗ್ರೆಸಿಗರನ್ನು ಜೈಲಿಗೆ ಹಾಕಲಿ ಎಂದು ಹೇಳಿದರು.

ಬೆಂಗಳೂರು, ಜು.8- ಬೆಳಗಾವಿಯಲ್ಲಿ ಆರ್‌ಎಸ್‌‍ಎಸ್‌‍ ರಾಷ್ಟ್ರೀಯ ಪ್ರಾಂತ ಪ್ರಚಾರಕರ ಸಮಾವೇಶ ಖಾಸಗಿ ಕಾರ್ಯಕ್ರಮವಾಗಿದ್ದು, ಅದಕ್ಕೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದ್ದಾರೆ.

WhatsApp Group Join Now

Spread the love

Leave a Reply