ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು

ತುಮಕೂರು : ಗಂಡನ ಸಾವು ಹೃದಯಾಘಾತ ಎಂದು ಪತ್ನಿ ಕಣ್ಣೀರು ಹಾಕಿದ್ದಳು. ಗಂಡನ ಸಾವಿನ ಬಗ್ಗೆ ಕಿಂಚಿತ್ತು ಕೊರಗಿಲ್ಲದ ಪತ್ನಿ, ಪತಿ ಮೃತಪಟ್ಟ 20 ದಿನಕ್ಕೆ ಮತ್ತೊಬ್ಬನ ಮದುವೆಯಾಗಿದ್ದಳು. ಆಕೆಯ ನಡೆಯಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಂತ್ಯಕ್ರಿಯೆ ಮಾಡಿ ಹೂತಿಟ್ಟ ಶವ ಸಹ ಹೊರ ತೆಗೆದು ಪರಿಕ್ಷೆ ನಡೆಸಲಾಗಿತ್ತು. ಈ ನಡುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಎಂಬಂತೆ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಯಲಾಗಿದ್ದು, ಪತ್ನಿ ಹಾಗೂ ಆಕೆಯ ಹೊಸ ಗಂಡ ತಾವೇ … Read more

‘ಮೀನು’ ಪ್ರಿಯರೇ ಎಚ್ಚರ : ಅಪ್ಪಿ ತಪ್ಪಿಯೂ ಈ ಫಿಶ್ ತಿಂದ್ರೆ ‘ಕ್ಯಾನ್ಸರ್’ ಬರುತ್ತೆ ಹುಷಾರ್.!

ಅನೇಕ ಮಾಂಸಾಹಾರಿಗಳು ಮೀನುಗಳನ್ನ ಇಷ್ಟಪಡುತ್ತಾರೆ. ಅವ್ರು ಪ್ರತಿದಿನ ಅದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಪೌಷ್ಟಿಕ ಮೀನುಗಳು ಲಭ್ಯವಿದ್ದರೂ, ಕೆಲವು ರೀತಿಯ ಮೀನುಗಳು ತಿನ್ನಲು ಸುರಕ್ಷಿತವಲ್ಲ ಮತ್ತು ಮಾರಕ ಅಪಘಾತಗಳಿಗೆ ಕಾರಣವಾಗಬಹುದು ಎಂದು ಅನೇಕ ಜನರಿಗೆ ತಿಳಿದಿಲ್ಲ. ಕ್ಯಾನ್ಸರ್’ಗೆ ಕಾರಣವಾಗುವ ಥಾಯ್ ಮಾಗುರ್.! ಅಂತಹ ಒಂದು ಮೀನು ಥಾಯ್ ಮಾಗುರ್.. ಈ ಮೀನು ಮಾನವನ ಆರೋಗ್ಯಕ್ಕೆ ಮಾತ್ರವಲ್ಲದೆ ಜಲಚರಗಳಿಗೂ ಅಪಾಯಕಾರಿ. ಕೇಂದ್ರ ಸರ್ಕಾರವು ಇದರ ಸಂತಾನೋತ್ಪತ್ತಿ, ಮಾರಾಟ ಮತ್ತು ಸೇವನೆಯನ್ನ ಸಂಪೂರ್ಣವಾಗಿ ನಿಷೇಧಿಸಿದೆ. ಈ … Read more

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ.? ಯಾವಾಗ ವೈದ್ಯರ ಸಲಹೆ ಪಡೆಯಬೇಕು

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದನ್ನು ಕೆಲವರು ದೇಹದಲ್ಲಿ ಉಷ್ಣತೆ ಜಾಸ್ತಿಯಾಗಿ ಈ ರೀತಿ ಆಗಿರಬಹುದು ಎಂದು ತಿಳಿದು ಅದನ್ನು ಸಾಮಾನ್ಯ ಸಮಸ್ಯೆಯಂತೆ ನಿರ್ಲಕ್ಷ್ಯ ಮಾಡುತ್ತಾರೆ. ಒಂದು ಅಥವಾ ಎರಡು ಬಾರಿ ಈ ಸಮಸ್ಯೆ ಕಾಣಿಸಿಕೊಂಡರೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಆದರೆ ಈ ಸ್ಥಿತಿ ಮುಂದುವರಿದರೆ ಅದು ಕಿಡ್ನಿ ಕ್ಯಾನ್ಸರ್‌ನ ಲಕ್ಷಣವಾಗಿರಬಹುದೆಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾಗಿ ಈ ರೀತಿಯ ಸಮಸ್ಯೆ ಯಾಕಾಗಿ ಕಂಡುಬರುತ್ತದೆ, ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ತಿಳಿಯುವುದು ಅತ್ಯಗತ್ಯ. ಮೂತ್ರದಲ್ಲಿ (Urine) ರಕ್ತ ಕಾಣಿಸಿಕೊಳ್ಳುವುದು … Read more

Horoscope Today : 06 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಸಿಟ್ಟಿನ ಮೇಷರಾಶಿಯವರಿಗೆ ಒಂದು ಮಂಗಳಕರ ದಿನ ಆಗಲಿರುವುದಾಗಿ ಗಣೇಶ ಕಾಣುತ್ತಿದ್ದಾರೆ. ನಿಮ್ಮ ಮನೆ ಅಥವಾ ಸಹೋದರರ ಮನೆಯಲ್ಲಿ ನಡೆಯುವ ಒಂದು ಸಣ್ಣ ಧಾರ್ಮಿಕ ಸಮಾರಂಭವು ನಿಮ್ಮನ್ನು ಸಂತೋಷವಾಗಿರಿಸುವುದು. ನೀವು ಈ ಪ್ರೀತಿಪಾತ್ರರೊಂದಿಗಿನ ಕ್ಷಣಗಳನ್ನು ಆನಂದಿಸುವಿರಿ ಮತ್ತು ಆಹ್ಲಾದಿಸುವಿರಿ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಣ್ಣ ಸಣ್ಣ ಪ್ರಾರ್ಥನೆ ಮತ್ತು ಯಜ್ಞಗಳು ನಿಮ್ಮನ್ನು ಮಾನಸಿಕವಾಗಿ ನೆಮ್ಮದಿಯಾಗಿರಲು ಸಹಕರಿಸುತ್ತವೆ. ನಿಮ್ಮನ್ನು ಆವರಿಸಿದ ಸದ್ಭಾವನೆಗಳಿಂದ ನೀವು ನಲಿದಾಡುವಿರಿ ಮತ್ತು ಅದರಿಂದ ಉಬ್ಬಿ ಹೋಗುವಿರಿ. ಹಣಕಾಸಿನ ವಿಷಯಗಳಿಗೆ ಇಂದು ಸರಿಯಾದ ದಿನ ಮತ್ತು … Read more

ಲೋಕಾಯುಕ್ತ ದಾಳಿ: ಕಾರ್ಯನಿರ್ವಾಹಕ ಎಂಜಿನಿಯರ್ ಖಲೀಲ್‌ ಬಳಿ 7 ಮನೆ, 5 ನಿವೇಶನ

ಮೈಸೂರು: ಇಲ್ಲಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ ಆಸಿಫ್‌ ಇಕ್ಬಾಲ್‌ ಖಲೀಲ್‌ ಅವರಿಗೆ ಸೇರಿದ ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ₹1.03 ಕೋಟಿ ಮೌಲ್ಯದ 5 ನಿವೇಶನ ಹಾಗೂ ₹4.28 ಕೋಟಿ ಮೌಲ್ಯದ ಏಳು ಮನೆಗಳನ್ನು ಪತ್ತೆ ಹಚ್ಚಿದ್ದಾರೆ. ಲೋಕಾಯುಕ್ತ ಎಸ್‌ಪಿ ಉದೇಶ್‌ ಮಾರ್ಗದರ್ಶನದಲ್ಲಿ ಪೊಲೀಸರ ತಂಡವು ಎನ್‌.ಆರ್‌ ಮೊಹಲ್ಲಾದಲ್ಲಿರುವ ಆಸಿಫ್‌ ಅವರಿಗೆ ಸೇರಿದ 2 ಮನೆ, ಸರಸ್ವತಿಪುರಂನಲ್ಲಿರುವ ಕಚೇರಿಗೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ಅವರ ಆಸ್ತಿ … Read more

ನಾಗ್ಪುರದಲ್ಲಿ ಅಮಾನವೀಯ ಕೃತ್ಯ: ಮೈ ಮೇಲೆ ಬಣ್ಣ ಹಾಕಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಕುದಿಯುವ ನೀರು ಸುರಿದ ಅಜ್ಜಿ

ಮಹಾರಾಷ್ಟ್ರದ ನಾಗ್ಪುರದಲ್ಲಿ ಹೋಳಿ ಹಬ್ಬದ ಆಚರಣೆಯ ವೇಳೆ ಮನುಷ್ಯ ಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಬಣ್ಣದಾಟವಾಡುತ್ತಿದ್ದ ಪುಟ್ಟ ಮೊಮ್ಮಗನ ಮೇಲೆ ಆತನ ಸ್ವಂತ ಅಜ್ಜಿಯೇ ಕುದಿಯುವ ನೀರನ್ನು ಸುರಿದು ಕ್ರೌರ್ಯ ಮೆರೆದಿದ್ದಾಳೆ. ಈ ದಾರುಣ ಘಟನೆಯು ನಾಗ್ಪುರ ಜಿಲ್ಲೆಯ ಕೋರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ನಾಲ್ಕು ವರ್ಷದ ಓಂ ಹರೀಶ್ ವಾಂಗೆ ಮನೆಯ ಮುಂದೆ ಬಣ್ಣದ ನೀರು ತುಂಬಿದ್ದ ಸ್ಪ್ರೇ ಬಾಟಲಿಯೊಂದಿಗೆ ಆಟವಾಡುತ್ತಿದ್ದನು. ಈ ಸಂದರ್ಭದಲ್ಲಿ ಹತ್ತಿರದಲ್ಲೇ ಬಿಸಿ … Read more

ಚಟ ಇರೋರು ಆಡ್ತಾರೆ ಬಿಡಿ, ಕುಣಿಗಲ್ ನಲ್ಲಿ ರೇಸ್ ಕೋರ್ಸ್‌ನಿಂದ 2 ಸಾವಿರ ಉದ್ಯೋಗ ಸೃಷ್ಟಿ: ವಿರೋಧಿಗಳಿಗೆ ಡಿಕೆಶಿ ತಿರುಗೇಟು

ರೇಸ್ ಕೋರ್ಸ್ ನ್ನು ಬೆಂಗಳೂರಿನಿಂದ ಕುಣಿಗಲ್ ಗೆ ಸ್ಥಳಾಂತರ ಮಾಡುವುದರಿಂದ 2 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ. ಹಾಗಾಗಿ ಇದಕ್ಕೆ ವಿರೋಧ ಏಕೆ? ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ಮಾಗಡಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಮೈಸೂರು ಮಹಾರಾಜರ ಕಾಲದಿಂದಲೂ ಕುಣಿಗಲ್ ನಲ್ಲಿ ಕುದುರೆ ಸಾಕಲಾಗುತ್ತಿದೆ. ಬೆಂಗಳೂರು ರೇಸ್ ಕೋರ್ಸ್ ಅನ್ನು ಇಲ್ಲಿಗೆ ಸ್ಥಳಾಂತರಿಸುತ್ತೇವೆ ಎಂದರೆ ಇದಕ್ಕೆ ವಿರೋಧ ಮಾಡುತ್ತೀರಾ? ಇದರಿಂದ ಸುಮಾರು 2 ಸಾವಿರ ಜನರಿಗೆ ಕೆಲಸ ಸಿಗುತ್ತದೆ. … Read more

ಕಿಡ್ನಿ ಕಾಯಿಲೆ ಎಂಬ ‘ಮೌನ ಕೊಲೆಗಾರ’ : ಈ 8 ಲಕ್ಷಣಗಳಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ!

ಇತ್ತೀಚಿನ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಭಾರತದಲ್ಲಿ ಮೂತ್ರಪಿಂಡ (Kidney) ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಿಡ್ನಿ ಸಮಸ್ಯೆಯ ಅತ್ಯಂತ ಭಯಾನಕ ಅಂಶವೆಂದರೆ, ಶೇ. 80ರಷ್ಟು ಭಾಗ ಹಾನಿಯಾಗುವವರೆಗೂ ಯಾವುದೇ ಗಂಭೀರ ಲಕ್ಷಣಗಳು ಹೊರಬರುವುದಿಲ್ಲ. ಅದಕ್ಕಾಗಿಯೇ ವೈದ್ಯಕೀಯ ಲೋಕ ಇದನ್ನು ‘ಸೈಲೆಂಟ್ ಕಿಲ್ಲರ್’ (Silent Killer) ಎಂದು ಕರೆಯುತ್ತದೆ.ವೈದ್ಯಕೀಯ ತಜ್ಞರ ಪ್ರಕಾರ, ನಿಮ್ಮ ದೇಹದಲ್ಲಿ ಈ ಕೆಳಗಿನ ಬದಲಾವಣೆಗಳಾಗುತ್ತಿದ್ದರೆ ಅದು ಕಿಡ್ನಿ ವೈಫಲ್ಯದ ಮುನ್ಸೂಚನೆಯಾಗಿರಬಹುದು. ಅತಿಯಾದ ಆಯಾಸ : ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದಾಗ … Read more

ಭಾರತೀಯರ ರಕ್ಷಣೆಗೆ ಕೇಂದ್ರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ವೇಗವಾಗಿ ಹೆಚ್ಚುತ್ತಿರುವ ಸಂಘರ್ಷವು ತೀವ್ರ ಕಳವಳಕಾರಿಯಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ಅವರು, ʼಮಧ್ಯಪ್ರಾಚ್ಯದಾದ್ಯಂತ ಪ್ರತಿಯೊಬ್ಬ ಭಾರತೀಯ ನಾಗರಿಕನ ಸುರಕ್ಷತೆ ಮತ್ತು ಭದ್ರತೆ ನಮ್ಮ ಅತ್ಯುನ್ನತ ಆದ್ಯತೆಯಾಗಿರಬೇಕು. ನಮ್ಮ ಜನರನ್ನ ರಕ್ಷಿಸಲು ಭಾರತ ಸರ್ಕಾರವು ತಕ್ಷಣ ಮತ್ತು ಪೂರ್ವಭಾವಿ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆʼ ಎಂದು ತಿಳಿಸಿದ್ದಾರೆ. ತೀವ್ರ ಸ್ವರೂಪ ಪಡೆಯುತ್ತಿರುವ ಸಂಘರ್ಷ! ಪರಮಾಣು ಒಪ್ಪಂದ ಮಾತುಕತೆಗೆ ಸ್ಪಂದಿಸಿದ ಕಾರಣ … Read more

ಸೇಮ್‌ ಟು ಸೇಮ್‌ ಚೆಲುವಿನ ಚಿತ್ತಾರ; ಉಲ್ಲಾಸದ ಹೂಮಳೆ ಹಾಡುತ್ತಿದ್ದ ಜೋಡಿಗೆ ಕಟುಕನಾದ ಅಪ್ಪ!

ಕನ್ನಡದ ಸೂಪರ್‌ಹಿಟ್‌ ಸಿನಿಮಾ ಚೆಲುವಿನ ಚಿತ್ತಾರದ ಕಥೆಯನ್ನೇ ನೆನಪಿಸುವಂಥ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.. ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಸಿನಿಮೀಯ ಶೈಲಿಯ ಲವ್ ಸ್ಟೋರಿಯೊಂದು ನಡೆದಿದ್ದು, ಪ್ರೀತಿಸಿ ಮದುವೆಯಾಗಿದ್ದ ನವಜೋಡಿಯನ್ನು ಪೋಷಕರೇ ಬಲವಂತವಾಗಿ ಬೇರ್ಪಡಿಸಿದ ಘಟನೆ ವರದಿಯಾಗಿದೆ. ತಿಳವಳ್ಳಿ ಗ್ರಾಮದ ಮಣಿಕಂಠ ಮತ್ತು ಸೃಷ್ಟಿ ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದ ಕಾರಣ, ಈ ಜೋಡಿ ಇತ್ತೀಚೆಗಷ್ಟೇ ಕಾನೂನುಬದ್ಧವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯ ನಂತರ ಸೃಷ್ಟಿ ತನ್ನ ಪತಿ … Read more