ಮಿಕ್ಸ್‌ಚರ್‌ನಲ್ಲಿದ್ದ ಶೇಂಗಾಬೀಜ ನುಂಗಿ ಮೂರು ವರ್ಷದ ಕಂದಮ್ಮ ದುರ್ಮರಣ

ಮಕ್ಕಳು ಏನು ತಿಂದರೂ ಅದನ್ನು ಪೋಷಕರು ನೋಡ್ತಾ ಇರಬೇಕು. ತಿನ್ನೋ ವಸ್ತು ತಾನೆ ತಿನ್ಲಿ ಎಂದು ಸುಮ್ಮನೆ ಇದ್ದರೆ ಕೆಲವೊಮ್ಮೆ ದುರ್ಘಟನೆಗಳು ಸಂಭವಿಸುತ್ತವೆ. ಕೇರಳದ ಮಲಪ್ಪುರಂನಲ್ಲಿ ಮಿಕ್ಸ್ಚರ್‌ನಲ್ಲಿ ಇರುವ ಶೇಂಗಾ ಬೀಜ ಗಂಟಲಿನಲ್ಲಿ ಸಿಕ್ಕು ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕುನ್ನುಂಪುರಂನ ಚೆಂಗಣಿ ನಿವಾಸಿಗಳಾದ ಮುನೀರ್ ಮತ್ತು ಫರ್ಸಿನಾ ದಂಪತಿಯ ಮೂರು ವರ್ಷದ ಮಗ ಮುಹಮ್ಮದ್ ರಿಝಾನ್ ಬಲಿಯಾದ ದುರ್ದೈವಿ. ರಿಝಾನ್‌ ಬೆಳಗ್ಗೆ ಮಿಕ್ಸ್‌ಚರ್‌ ಸೇವಿಸುತ್ತಿದ್ದ. ತಿನ್ನುವ ವಸ್ತು ಎಂದು ಪೋಷಕರು ಸುಮ್ಮನಿದ್ದರು. ತಿನ್ನುವ ವೇಳೆ ಶೇಂಗಾ … Read more

ಅಧಿಕಾರಿಗಳಿಗೆ ಹೊಡೆಯಬೇಡಿ, ಬೇಕಾದ್ರೆ ನನಗೆ ಪೊರಕೆಯಲ್ಲಿ ಹೊಡೆಯಿರಿ: ಬಿಡದಿ ಘಟನೆಗೆ ಕಣ್ಣೀರು ಹಾಕಿದ ಸಿಎಂ ಡಿಕೆಶಿ

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಂಡಲಹಳ್ಳಿಯಲ್ಲಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಘಟನೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಹೇಳಿದ ಅವರು, “ಬೇಕಾದರೆ ನನಗೆ ಪೊರಕೆಯಲ್ಲಿ ಹೊಡೆಯಿರಿ, ತಪ್ಪು ಮಾಡಿದ್ದರೆ ನನಗೆ ಹೊಡೆಯಲಿ, ಆದರೆ ಅಧಿಕಾರಿಗಳಿಗೆ ಹೊಡೆಯಬೇಡಿ” ಎಂದು ಭಾವುಕರಾಗಿ ಮನವಿ ಮಾಡಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, “ಬಿಡದಿಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ. ರಾಜಕೀಯ ಪ್ರೇರಿತ ಕುಮ್ಮಕ್ಕಿನಿಂದ ಅಧಿಕಾರಿಗಳಿಗೆ … Read more

40 ವರ್ಷದ ನಂತರ ಮಹಿಳೆಯರಲ್ಲಿ ಕಿಡ್ನಿ ಹಾನಿ ಮಾಡುವ 5 ದೈನಂದಿನ ಅಭ್ಯಾಸಗಳು

ನೋವು ನಿವಾರಕಗಳ ಅನಿಯಮಿತ ಸೇವನೆ, ಕಡಿಮೆ ನೀರು ಕುಡಿಯುವುದು, ಮತ್ತು ಮೂತ್ರವನ್ನು ಹಿಡಿದಿಟ್ಟುಕೊಳ್ಳುವಂತಹ ದೈನಂದಿನ ಅಭ್ಯಾಸಗಳು ಕಿಡ್ನಿಗಳ ಆರೋಗ್ಯಕ್ಕೆ ಹಾನಿಕಾರಕ. ಈ ತಪ್ಪುಗಳು ದೀರ್ಘಕಾಲದಲ್ಲಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು, ಆದ್ದರಿಂದ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ನಿರಂತರವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಕಿಡ್ನಿಗಳ ಆರೋಗ್ಯವನ್ನು ಹದಗೆಡಿಸುತ್ತದೆ. ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕಗಳು, ಜ್ವರದ ಮಾತ್ರೆಗಳನ್ನು ಸೇವಿಸುವುದು ಕಿಡ್ನಿಗಳಿಗೆ ಹಾನಿ ಉಂಟುಮಾಡಬಹುದು. ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸಲು ನೀರು ಅತ್ಯಗತ್ಯ. ಸಾಕಷ್ಟು ನೀರು ಕುಡಿಯದಿರುವುದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ದೇಹದ ಆರೋಗ್ಯಕ್ಕೆ … Read more

Dina Bhavishya : ಇಂದಿನ ದಿನ ಭವಿಷ್ಯ: ನಿಮ್ಮ ರಾಶಿಯ ಇಂದಿನ ಫಲಿತಾಂಶವನ್ನು ಈಗಲೇ ತಿಳಿಯಿರಿ

ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯಾದ ಜುಲೈ 15ರಂದು ಆಷಾಢ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದ್ದು, ಪಿತೃ ತರ್ಪಣ, ಪಿಂಡ ಪ್ರದಾನ ಹಾಗೂ ಪೂರ್ವಜರ ಸ್ಮರಣೆಗಾಗಿ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ನದಿ, ಕೆರೆ ಅಥವಾ ಸಮುದ್ರ ತೀರದಲ್ಲಿ ತರ್ಪಣ ಸಲ್ಲಿಸುವ ಸಂಪ್ರದಾಯವೂ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ ದಿನ ಕೆಲವು ರಾಶಿಗಳಿಗೆ ಹೊಸ ಅವಕಾಶಗಳು, ಧನಲಾಭ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ದೊರೆಯಲಿದ್ದು, … Read more

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೂಲ್ಸ್‌ ತಿರುಪತಿಯಲ್ಲಿ ನಡೆಯಲ್ಲ, ಮೊದಲ ಆರತಿ ವಿಚಾರವಾಗಿ ಸಿಡಿದೆದ್ದ ಟಿಟಿಡಿ

ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಮಂಗಳಾರತಿ ಪ್ರೋಟೋಕಾಲ್ ಬದಲಾವಣೆ ಹಾಗೂ ವಿಐಪಿ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಟಿಟಿಡಿ ಮಂಡಳಿ ಆಕ್ಷೇಪಣೆ ವ್ಯಕ್ತಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ತಿರುಪತಿ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುವ ಟಿಟಿಡಿ ಮಂಡಳಿಯ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಅತ್ಯಂತ ಪವಿತ್ರವಾದ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ತಿರುಪತಿಯನ್ನು ರಾಜಕೀಯ ಕ್ಷೇತ್ರವನ್ನಾಗಿ ಮಾಡಬೇಡಿ. ಆರತಿಯ ಪ್ರಸ್ತುತ ಪ್ರೋಟೋಕಾಲ್‌ಗಳನ್ನು ನಿಮಗಾಗಿ ಬದಲಾಯಿಸಲಾಗುವುದಿಲ್ಲ,’ … Read more

Arecanut Rate : ಇಂದಿನ ಅಡಿಕೆ ಬೆಲೆ ಲೈವ್ ಅಪ್‌ಡೇಟ್ – ಪ್ರಮುಖ ಮಾರುಕಟ್ಟೆಗಳ ದರಗಳು

ಇಂದಿನ (ಜುಲೈ 14, 2026) ತಾಜಾ ಮಾರುಕಟ್ಟೆ ವರದಿಯ ಪ್ರಕಾರ, ಕರ್ನಾಟಕದ ಪ್ರಮುಖ ಎಪಿಎಂಸಿ ಮತ್ತು ಸಹಕಾರಿ ಸಂಘಗಳಲ್ಲಿ ರಾಶಿ ಅಡಿಕೆ ಬೆಲೆಯು ಪ್ರತಿ ಕ್ವಿಂಟಾಲ್‌ಗೆ (100 ಕೆಜಿ) ಸರಾಸರಿ ₹48,000 ರಿಂದ ₹53,000 ವರೆಗೆ ವಹಿವಾಟು ನಡೆಸುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯು ಉತ್ತಮ ಸ್ಥಿರತೆಯನ್ನು ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳ ಇತ್ತೀಚಿನ ಅಧಿಕೃತ ದರಗಳ ಪಟ್ಟಿ ಇಲ್ಲಿದೆ: ಚನ್ನಗಿರಿ ಮಾರುಕಟ್ಟೆ (TUMCOS): • ರಾಶಿ ಅಡಿಕೆ (Rashi): ಕನಿಷ್ಠ ₹48,899 | ಗರಿಷ್ಠ ₹53,000 … Read more

ವರದಕ್ಷಿಣೆ ಎಂಬ ರಕ್ಕಸನಿಗೆ ಬಲಿಯಾದ ನವವಿವಾಹಿತೆ: ಅವರನ್ನು ಸುಮ್ಮನೆ ಬಿಡಬೇಡಿ ಅಮ್ಮ ಎಂದು ಡೆತ್ ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ

ಬೆಂಗಳೂರು ನಗರದಲ್ಲಿ ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ನವವಿವಾಹಿತೆಯೊಬ್ಬಳು ಗಂಡ ಹಾಗೂ ನಾದಿನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿ ಕ್ರಾಸ್ ಬಳಿ ಈ ದುರಂತ ಸಂಭವಿಸಿದ್ದು, ಮೃತ ದುರ್ದೈವಿಯನ್ನು ಮೂಲತಃ ಕಡೂರಿನ ಶ್ವೇತಾ ಎಂದು ಗುರುತಿಸಲಾಗಿದೆ. ಹಸಿರು ಚಪ್ಪರ ಒಣಗುವ ಮುನ್ನವೇ ಮಗಳ ಸಾವು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶ್ವೇತಾ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮೂರ್ತಿ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯ ಸಂದರ್ಭದಲ್ಲಿ ಶ್ವೇತಾ … Read more

Dina Bhavishya : ಇಂದು ಈ ರಾಶಿಗೆ ವೈಯಕ್ತಿಕ ವಿಚಾರದ ನಿರ್ಧಾರದಲ್ಲಿ ಗೊಂದಲ ಏರ್ಪಡುವ ಸಾಧ್ಯತೆ!

ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ಪುನರ್ವಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ. ಮೇಷ ರಾಶಿ: ಈ ರಾಶಿಗೆ ಇಂದು ಮನೆಯ ವಿಚಾರ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ಮುಖ್ಯ ಗಮನ ನೀಡಬೇಕು.ಹಾಗೂ ಕೋರ್ಟ್ ಕಛೇರಿ … Read more

ಬಿಎಂಟಿಸಿ ಬಸ್‌ ನಲ್ಲಿ ಸಚಿವ ಬೈರತಿ ಸುರೇಶ್ ದಿಢೀರ್ ರಿಯಾಲಿಟಿ ಚೆಕ್ : ಚಿಲ್ಲರೆ ಇಲ್ಲದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್

ರಾಜ್ಯ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಸಾರ್ವಜನಿಕರಂತೆ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣ ಕೈಗೊಳ್ಳುವ ಮೂಲಕ ಬಿಗ್ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಮಾಸ್ಕ್ ಧರಿಸಿ ಯಾರಿಗೂ ಗುರುತು ಸಿಗದಂತೆ ಸಂಚರಿಸಿದ ಸಚಿವರಿಗೆ ಬಿಎಂಟಿಸಿ ಸಿಬ್ಬಂದಿಯ ಅಸಲಿ ದರ್ಶನವಾಗಿದ್ದು, ನಿಯಮ ಉಲ್ಲಂಘಿಸಿದ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ತಕ್ಷಣದ ಕ್ರಮಕ್ಕೆ ಸೂಚಿಸಿದ್ದಾರೆ. ರಾತ್ರಿ 7.10 ರಿಂದ 9.10 ರವರೆಗೆ ಕೇವಲ 2 ಗಂಟೆಗಳ ಅವಧಿಯಲ್ಲಿ ಜಯಮಹಲ್, ಆರ್.ಟಿ. ನಗರ, ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್, … Read more

Dina Bhavishya : ಇಂದಿನ ರಾಶಿಫಲ: ಒಂದೇ ಕ್ಲಿಕ್‌ನಲ್ಲಿ 12 ರಾಶಿಗಳ ಸಂಪೂರ್ಣ ಫಲ – ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ಮೇಷ ರಾಶಿ :- ಮೇಷ ರಾಶಿಯವರಿಗೆ ಇಂದು ಮಿಶ್ರ ಫಲಗಳ ದಿನವಾಗಿದೆ. ಸೂರ್ಯನ ಪ್ರಭಾವದಿಂದಾಗಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ವ್ಯಾಪಾರಸ್ಥರಿಗೆ ದೂರದ ಪ್ರಯಾಣದಿಂದ ಲಾಭವಾಗಲಿದೆ. ಆದರೆ ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ನಿಮ್ಮ ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ವೃಷಭ ರಾಶಿ ವೃಷಭ ರಾಶಿಯವರಿಗೆ ಇಂದು ಆರ್ಥಿಕವಾಗಿ ಅತ್ಯಂತ ಅನುಕೂಲಕರವಾದ ದಿನವಾಗಿದೆ. ದೀರ್ಘಕಾಲದಿಂದ … Read more