Agriculture Department : ನಮಸ್ಕಾರ ಸ್ನೇಹಿತರೇ, ಕೃಷಿ ಇಲಾಖೆಯಲ್ಲಿ ಒಟ್ಟಾರೆ 945 ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳನ್ನೊಳಗೊಂಡ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿದೆ. ಕೃಷಿ ಇಲಾಖೆಯ ಉಳಿಕೆ ಮೂಲ ವೃಂದದ ಗ್ರೂಪ್ ‘ಬಿ’ ಹುದ್ದೆಗಳಾದ ಕೃಷಿ ಅಧಿಕಾರಿಗಳು 86 ಹಾಗೂ ಸಹಾಯಕ ಕೃಷಿ ಅಧಿಕಾರಿಗಳು 586 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಕೂಡ ಓದಿ : Vidya Nidhi Scholarship : ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಸಿಹಿಸುದ್ಧಿ – ರಾಜ್ಯ ಸರ್ಕಾರದಿಂದ `ವಿದ್ಯಾನಿಧಿ’ ಯೋಜನೆಗೆ ಅರ್ಜಿ ಆಹ್ವಾನ.!
ಉಳಿದಂತೆ ಹೈದರಾಬಾದ್ ಕರ್ನಾಟಕ ವಿಭಾಗದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ 42 ಕೃಷಿ ಅಧಿಕಾರಿಗಳು ಹಾಗೂ 231 ಸಹಾಯಕ ಕರಷಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 945 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಈವರೆಗೆ ಕೃಷಿ ಇಲಾಖೆಯ ಅತಿ ದೊಡ್ಡ ನೇಮಕಾತಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಆನ್‌ಲೈನ್ ಮೂಲಕ ಅ.07ರಿಂದ ಅರ್ಜಿ ಸಲ್ಲಿಕೆ ಮಾಡಬಹುದಿದ್ದು, ನವೆಂಬರ್ 07ಕ್ಕೆ ಕೊನೆಯ ದಿನಾಂಕವಾಗಿದೆ. ಶೈಕ್ಷಣಿಕ ಮಾನದಂಡಗಳು, ವಯೋಮಿತಿ ಸೇರಿದಂತೆ ಇತರೆ ಅರ್ಹತೆಗಳಿಗಾಗಿ ಕೆಳಗೆ ನೀಡಿರುವ ಪಿಡಿಎಫ್ ವೀಕ್ಷಣೆ ಮಾಡಿ.
ಪಿಡಿಎಫ್ ಲಿಂಕ್ :- https://kpsc.kar.nic.in/AAO%20-%20AO_RPC_Notification.pdf
ಹೈದರಾಬಾದ್ ಕರ್ನಾಟಕ ವೃಂದದ ನೇಮಕಾತಿ ಅಧಿಸೂಚನೆ :- https://kpsc.kar.nic.in/AAO%20-%20AO_HK_Notification.pdf
ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women
ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಇಲಾಖೆ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರಿವುದು ಇದೇ ಮೊದಲು. ಎನ್. ಚಲುವರಾಯಸ್ವಾಮಿ ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ಇಲಾಖಾ ಸುಧಾರಣೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇಲಾಖೆಯಲ್ಲಿ ಶೇ.60 ಕ್ಕೂ ಅಧಿಕ ಹುದ್ದೆ ಗಳು ಖಾಲಿ ಇರುವುದನ್ನು ಮನಗಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಆರ್ಥಿಕ ಇಲಾಖೆ ಅನುಮತಿಯನ್ನು ಪಡೆದು ಇಲಾಖೆ ಮೂಲಕ ಕೆ.ಪಿ.ಎಸ್.ಸಿ ಗೆ ಪ್ರಸ್ತಾವನೆ ಕಳಿಸಲು ಕಾರಣರಾಗಿದ್ದಾರೆ.
ಈ ನೇಮಕಾತಿಯಿಂದ ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡಲು ಅಧಿಕಾರಿಗಳನ್ನು ನೇಮಿಸಲು ಸಾಧ್ಯವಾಗಲಿದೆ. 2008 ರಲ್ಲಿ ಕೆ.ಪಿ ಎಸ್.ಸಿ ಮೂಲಕ 410 ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇದೀಗ ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಮಾಡಲು ಕ್ರಮ ವಹಿಸಲಾಗಿದ್ದು ಮೂರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ. ಇದರಿಂದ ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಲಭ್ಯವಾಗಲಿದ್ದು ಕೃಷಿಕ ಸಮುದಾಯದ ಮಾರ್ಗದರ್ಶನ ಹಾಗೂ ಸೇವೆಗೆ ದೊಡ್ಡ ಶಕ್ತಿ ದೊರೆತಂತಾಗಲಿದೆ.
ಇದನ್ನೂ ಕೂಡ ಓದಿ : Canara Bank Recruitment : ಕೆನರಾ ಬ್ಯಾಂಕಿನಲ್ಲಿ 3,000 ಹುದ್ದೆಗಳಿಗೆ ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.? ಕೊನೆಯ ದಿನಾಂಕ ಯಾವುದು.?
ಕೃಷಿ ಇಲಾಖೆಯಲ್ಲಿ ಏಕಕಾಲದಲ್ಲಿ ಇಷ್ಟು ದೊಡ್ಡ ಮಟ್ಟದ ನೇಮಕಾತಿಗೆ ಅನುಮತಿ ಒದಗಿಸಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃಷಿ ಸಚಿವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ನೇಮಕಾತಿಯಿಂದ ಇಲಾಖೆಯಲ್ಲಿ ಖಾಲಿ ಇದ್ದ ಮೂರನೇ ಒಂದರಷ್ಟು ಅಧಿಕಾರಿಗಳ ಹುದ್ದೆ ಭರ್ತಿಯಾದಂತಾಗಲಿದೆ. ಇದರಿಂದ ರೈತರಿಗೆ ಸೇವಾ ಸೌಲಭ್ಯ ಒದಗಿಸುವ ಪ್ರಕ್ರಿಯೆ ಸುಗಮವಾಗಲಿದೆ. ಬಾಕಿ ಉಳಿವ ಖಾಲಿ ಹುದ್ದೆಗಳ ಭರ್ತಿಗೂ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- BSNL Plan : ಬರೋಬ್ಬರಿ 150 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಅತ್ಯುತ್ತಮ ರಿಚಾರ್ಜ್ ಪ್ಲಾನ್!
- ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ.! ಪೋಷಕರ ತೀರ್ಮಾನವೇನು ಗೊತ್ತಾ.?
- 5 ದಿನಗಳಲ್ಲಿ ಈ ಕೆಲಸ ಮಾಡದವರ ಪಿಂಚಣಿ ಬಂದ್.! ಸರ್ಕಾರದ ಹೊಸ ಆದೇಶ.! Pension New Updates
- ಒಂದು EMI ಮಿಸ್ ಆದವರಿಗೆ ಇನ್ಮೇಲೆ ಹೊಸ ರೂಲ್ಸ್ | Missed EMI & CIBIL Score
- ಬ್ಯಾಂಕ್ ಖಾತೆ ಇದ್ದು ಈ ತಪ್ಪು ಮಾಡಿದವರಿಗೆ 2 ವರ್ಷ ಜೈಲು ಹಾಗು ದಂಡ – ಸಂಪೂರ್ಣ ಮಾಹಿತಿ
- ಎಲ್ಲಾ ಗೃಹಲಕ್ಷ್ಮಿ ಯರಿಗೆ ಬಿಗ್ ಶಾಕ್.! ರಾತ್ರೋರಾತ್ರಿ ಹೊಸ ಲಿಸ್ಟ್ ಬಿಡುಗಡೆ | ಹೆಸರು ಇದ್ದವರಿಗೆ ಮಾತ್ರ ಹಣ.!
- ಮಳೆ.! ಮಳೆ.! ಅಕ್ಟೋಬರ್ 29 ರ ವರೆಗೆ | 18 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ | weather forecast
- ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರದಿಂದ ಸಿಹಿಸುದ್ಧಿ.! ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ರೂಪಿಸಲು ಅವಕಾಶ
- ತುಟ್ಟಿಭತ್ಯೆ ಶೇ. 55 ರಿಂದ 58ಕ್ಕೆ ಹೆಚ್ಚಳ, ಸರ್ಕಾರದ ಅಧಿಕೃತ ಆದೇಶ ಪ್ರಕಟ – ಯಾರೆಲ್ಲಾ ಇದರ ಪ್ರಯೋಜನ ಪಡೆಯುತ್ತಾರೆ?
- ಕ್ಷುಲಕ ಕಾರಣಕ್ಕೆ ದಂಪತಿ ನಡುವೆ ಜಗಳ, ತವರು ಮನೆ ಸೇರಿದ ಪತ್ನಿ, ಅವಳಿ ಹೆಣ್ಣು ಮಕ್ಕಳ ‘ಕತ್ತು ಸೀಳಿ’ ಕೊಂದ ಕಟುಕ ತಂದೆ!
- ಇನ್ಮೇಲೆ ಈ ಕೆಲಸ ಅಪರಾಧವಲ್ಲ ಕೋರ್ಟ್ ಹೊಸ ಆದೇಶ ಜಾರಿಗೆ | ಹೈಕೋರ್ಟ್ ಕೊಟ್ಟಿರುವ ಈ ತೀರ್ಪು ಯಾವುದು.?
- ರೈತರ ಸಾಲಮನ್ನಾ : ಗುಡ್ ನ್ಯೂಸ್ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
- ನವೆಂಬರ್ 1 ರಿಂದ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ | ಬ್ಯಾಂಕ್ ಖಾತೆಯನ್ನ ಹೊಂದಿರುವವರು ತಪ್ಪದೇ ನೋಡಿ
- ನೀವು ಈ 10 ರೀತಿಯ ಕ್ಯಾಷ್ ಟ್ರಾನ್ಸಾಕ್ಷನ್ ಮಾಡ್ತಿದ್ದೀರಾ? ಐಟಿ ನೋಟಿಸ್ ಬರಬಹುದು ಎಚ್ಚರ! Income Tax
- ಪೊಲೀಸರು 5 ತಿಂಗಳಲ್ಲಿ 4 ಬಾರಿ ಅತ್ಯಾಚಾರ ಮಾಡಿದ್ರು : ಕೈಯಲ್ಲಿ ಡೆತ್ ನೋಟ್ ಬರೆದುಕೊಂಡು ವೈದ್ಯೆ ಆತ್ಮಹತ್ಯೆ
- ಪರಿಶಿಷ್ಟ ಪಂಗಡದ ಮಹಿಳೆ ಆಸ್ತಿಗೆ ಹಕ್ಕುದಾರಳಲ್ಲ : ಸಂವಿಧಾನವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಹೇಳಿದ್ದೇನು?
- BPL ಕಾರ್ಡ್ ಇದ್ದ 75 ವರ್ಷದವರಿಗೆ ದೊಡ್ಡ ಸಿಹಿಸುದ್ದಿ – ಹಿರಿಯ ನಾಗರಿಕರಿಗೆ ಈ ಸೇವೆ ಉಚಿತ | BPL Ration Card
- ಪೋಷಕರು ಮಾರಿದ ಆಸ್ತಿಯನ್ನು ಪ್ರಾಪ್ತ ವಯಸ್ಕ ಮಕ್ಕಳು ನಿರಾಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
- ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಹೊಸ ರೂಲ್ಸ್ – ಯಾವ ಪಟ್ಟಿಯಲ್ಲಿ ಹೆಸರಿರಬೇಕು.?
- ನವೆಂಬರ್ 1 ರಿಂದ ಗ್ಯಾಸ್ ಸಿಲಿಂಡರ್ ಗೆ ಹೊಸ ರೂಲ್ಸ್ | ಏನಿದು ಹೊಸ ನಿಯಮ.? Gas Cylinder



















