‘ಮಿಸ್ಟರ್ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರೇ ಇನ್ನು ವಯನಾಡನ್ನು ನೀವು ಮರೆತು ಬಿಡಿ. ಏಕೆಂದರೆ ನೀವು ಇಲ್ಲಿಂದ ಎಲೆಕ್ಷನ್ಗೆ ನಿಂತರೆ ಮತ್ತೆಂದು ಗೆಲ್ಲೋದಿಲ್ಲ. ರಾಹುಲ್ ಗಾಂಧಿಯವರೇ ಕೆಸಿ ವೇಣುಗೋಪಾಲ್ ಅವರು ನಿಮ್ಮ ಬಿಗ್ ಬ್ಯಾರರ್(ಬ್ಯಾಗ್ ಹೊರುವವರು) ಆಗಿರಬಹುದು.
ಆದರೆ, ನಿಮ್ಮನ್ನು ಕೇರಳದ ಜನರು ಎಂದಿಗೂ ಕ್ಷಮಿಸೋದಿಲ್ಲ’ ಎನ್ನುವ ಪೋಸ್ಟರ್ಗಳು ವಯನಾಡಿನ ಕಾಂಗ್ರೆಸ್ ಕಚೇರಿ ಮುಂದೆ ರಾರಾಜಿಸುತ್ತಿದೆ.
ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿ ಒಂದು ವಾರ ಕಳೆದರೂ ಸಹ ಕಾಂಗ್ರೆಸ್ ಹೈಕಮಾಂಡ್ ಇನ್ನು ಯಾರನ್ನು ಸಿಎಂ ಕುರ್ಚಗೆ ಕೂರಿಸಬೇಕು ಎನ್ನುವ ಇಕ್ಕಟ್ಟಿನಲ್ಲಿದೆ. ಆ ಬೆನ್ನಲ್ಲೇ ವಯನಾಡು ಕಾಂಗ್ರೆಸ್ ಜಿಲ್ಲಾ ಸಮಿತಿ ಕಚೇರಿ ಬಳಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಪೋಸ್ಟರ್ಗಳು ರಾರಾಜಿಸುತ್ತಿದೆ.
ಪೋಸ್ಟರ್ ಪ್ರೊಟೆಸ್ಟ್
ವಯನಾಡಿನಲ್ಲಿ ಒಟ್ಟು ಮೂರ್ನಾಲ್ಕು ಪೋಸ್ಟರ್ ಅಂಟಿಸಲಾಗಿದ್ದು ಅದರಲ್ಲಿ ಹೀಗಿದೆ, ‘ವಯನಾಡನ್ನು ಮರೆತು ಬಿಡಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕರನ್ನು ಮತ್ತೆ ಗೆಲ್ಲಿಸೋದಿಲ್ಲ. ಚುನಾವಣೆಗೆ ನಿಲ್ಲಬೇಡಿ ಎಂದು. ಮತ್ತೊಂದರಲ್ಲಿ ಕೆಸಿ ವೇಣುಗೋಪಾಲ್ ನಿಮ್ಮ ಬ್ಯಾಗ್ ಹೊರುವವರು ಆಗಿರಬಹುದು ಆದರೆ, ನಿಮ್ಮ ಮೇಲೆ ಇಲ್ಲಿನ ಜನಕ್ಕೆ ಯಾವುದೇ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಮೂರನೇ ಪೋಸ್ಟರ್ನಲ್ಲಿ ಆರ್ಜಿ ಮತ್ತು ಪಿಜಿ ಇದು ಎಚ್ಚರಿಕೆ ಅಲ್ಲ. ಈ ತಪ್ಪಿಗಾಗಿ ನಿಮ್ಮನ್ನು ಎಂದಿಗೂ ಕೇರಳದ ನಿಮ್ಮ ಬ್ಲಂಡರ್ ಅನ್ನು ಮರೆಯೋದಿಲ್ಲ. 2019ರಲ್ಲಿ ರಾಹುಲ್ ಗಾಂಧಿಯವರ ಭದ್ರಕೋಟೆಯಾಗಿದ್ದ ಅಮೇಥಿ ಕ್ಷೇತ್ರವನ್ನು ಸೋತಿದ್ದರು. ಮುಂದಿನ ದಿನದಲ್ಲಿ ಪ್ರಿಯಾಂಕಾ ಗಾಂಧಿಯವರು ವಯನಾಡಿನಲ್ಲಿ ಈ ಸಮಸ್ಯೆ ಎದುರಿಸಬಹುದು’ ಎಂದು ಇಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟರ್ ಅಂಟಿಸಲಾಗಿದೆ.
ಸಿಎಂ ರೇಸ್ನಲ್ಲಿರೋದು ಯಾರು?
ಕೇರಳದಲ್ಲಿ ಮುಂದಿನ ಸಿಎಂ ಆಗೋದು ಯಾರು ಎನ್ನುವ ಗೊಂದಲ ಹಲವರಲ್ಲಿ ಹಾಗೆಯೇ ಉಳಿದಿದೆ. ಕಾಂಗ್ರೆಸ್ ಶಾಸಕರು ಈಗ ಸಿಎಂ ಯಾರೆಂದು ಎಂದು ನಿರ್ಧರಿಸುವ ಹೊಣೆಯನ್ನು ಹೈಕಮಾಂಡ್ಗೆ ನೀಡಿದೆ. ರೇಸ್ನಲ್ಲಿ AICC ಪ್ರಧಾನ ಕಾರ್ಯದರ್ಶಿಯಾದ ವೇಣುಗೋಪಾಲ್ ಅವರಿದ್ದು, ಕಾಂಗ್ತೆಸ್ ನಾಯ, ವಿಡಿ ಸತೀಸನ್ ಹಾಗೂ ಹಿರಿಯ ನಾಯಕ ರಮೇಶ್ ಚನ್ನಿತ್ತಲ ಇದ್ದಾರೆ. ಮೂವರಲ್ಲಿ ಗದ್ದುಗೆ ಏರೋದು ಯಾರು ಎನ್ನುವ ಪ್ರಶ್ನೆಯೇ ಇನ್ನು ಉಳಿದಿರುವುದು ಪೋಸ್ಟರ್ ಅಂಟಿಸಿರೋರ ಸಿಟ್ಟಿಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಎಡಪಂಥೀಯ ಪಕ್ಷ ಉರುಳಿಸಿದ ಯುಡಿಎಫ್
140 ವಿದಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 104 ಸ್ಥಾನವನ್ನು ಯುಡಿಎಫ್ ಗೆದ್ದುಕೊಂಡಿತ್ತು. ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ ಮಾಡಿದ ಎಡಪಂಥೀಯ ಸರ್ಕಾರವನ್ನು ನಿರ್ಮೂಲನೆ ಮಾಡಿತ್ತು. ಬಹುಮತ ಸಿಕ್ಕರೂ ಸಿಎಂ ಆಯ್ಕೆಯಲ್ಲಿ ವಿಳಂಬವಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣ ಇರಬಹುದು ಎಂದು ಊಹಿಸಲಾಗಿದೆ.
ಸಿಎಂ ಆಯ್ಕೆ ವಿಳಂಬವನ್ನು ಬಿಜೆಪಿ ಮತ್ತು ಎಲ್ಡಿಎಫ್ ಪಕ್ಷ ಬಳಸಿಕೊಳ್ಳುತ್ತಿದ್ದು, ಫಲಿತಾಂಶ ಹೊರ ಬಿದ್ದು ಹತ್ತು ದಿನ ಕಳೆದರೂ ಸಿಂ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇಂದು ಸಿಎಂ ರೇಸ್ನಲ್ಲಿದ್ದ ನಾಯಕರು ದೆಹಲಿಗೆ ಭೇಟಿ ಕೊಟ್ಟು ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
‘ನಿಮ್ಮನ್ನು ಕೇರಳ ಕ್ಷಮಿಸಲ್ಲ, ಮತ್ತೆ ಚುನಾವಣೆಯಲ್ಲಿ ಗೆಲ್ಲಲ್ಲ’; ಸಿಎಂ ಆಯ್ಕೆ ವಿಳಂಬ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್ ಪ್ರೊಟೆಸ್ಟ್
WhatsApp Group
Join Now