ವಿಧಾನಸಭೆಯ ಮೊದಲ ಕಲಾಪದಲ್ಲೇ ಉಭಯ ನಾಯಕರ ನಡುವೆ ಗದ್ದಲದ ಮುನ್ಸೂಚನೆ ಸಿಕ್ಕಿದೆ. ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತಮಿಳು ನಾಡಗೀತೆಗಿಂತ ಮೊದಲು ‘ವಂದೇ ಮಾತರಂ’ ನುಡಿಸಿದ್ದನ್ನು ಉದಯನಿಧಿ ಕಟುವಾಗಿ ಟೀಕಿಸಿದರು.
ನಮ್ಮ ತಮಿಳುನಾಡು ರಾಜ್ಯ ಗೀತೆಯನ್ನು ಎಂದಿಗೂ ಎರಡನೇ ಸ್ಥಾನಕ್ಕೆ ತಳ್ಳಬಾರದು. ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲೇ ಇಂತಹ ಸಂಪ್ರದಾಯವಿಲ್ಲ. ತಮಿಳು ಸಂಸ್ಕೃತಿಗೆ ಧಕ್ಕೆ ತರುವ ಇಂತಹ ನಡೆಗಳು ಮರುಕಳಿಸಬಾರದು.. ಎಂದು ಉದಯನಿಧಿ ಎಚ್ಚರಿಸಿದರು.
ಸನಾತನ ಧರ್ಮದ ಹೇಳಿಕೆ ಮತ್ತು ವಿಜಯ್ ಮೌನ : ಇದೇ ವೇಳೆ ಉದಯನಿಧಿ ಸ್ಟಾಲಿನ್ ಅವರು “ತಮಿಳುನಾಡಿನಿಂದ ಸನಾತನ ಧರ್ಮವನ್ನು ನಾಶ ಮಾಡಬೇಕು” ಎಂಬ ತಮ್ಮ ಹಳೆಯ ನಿಲುವನ್ನು ಪುನರುಚ್ಚರಿಸಿದರು. ಆದರೆ, ಈ ವಿವಾದಾತ್ಮಕ ಹೇಳಿಕೆಗೆ ಮುಖ್ಯಮಂತ್ರಿ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವಿಜಯ್ ಅವರ ಈ ಮೌನವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ಉದಯನಿಧಿ ಅವರು ಬೇರೆ ಧರ್ಮಗಳ ವಿರುದ್ಧ ಇಂತಹ ಹೇಳಿಕೆ ನೀಡಿದ್ದರೆ ವಿಜಯ್ ಸುಮ್ಮನಿರುತ್ತಿದ್ದರೇ? ಎಂದು ಹಲವಾರು ನಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಒಂದೇ ಕಾಲೇಜಿನಲ್ಲಿ ಓದಿ, ಸಿನಿಮಾ ರಂಗದಲ್ಲಿ ಒಟ್ಟಿಗೆ ಬೆಳೆದ ಇಬ್ಬರೂ ನಾಯಕರು ಈಗ ತಮಿಳುನಾಡಿನ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ಮಾತುಗಳನ್ನಾಡಿದ್ದಾರೆ. “ನಾವು ಭಿನ್ನ ಸಾಲುಗಳಲ್ಲಿ ಕುಳಿತಿದ್ದರೂ, ಅಭಿವೃದ್ಧಿಗಾಗಿ ಸಲಹೆಗಳನ್ನು ಸ್ವೀಕರಿಸಬೇಕು” ಎಂದು ಉದಯನಿಧಿ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ, ವಿಧಾನಸಭೆಯ ಮೊದಲ ದಿನವೇ ಗೆಳೆಯರ ನಡುವಿನ ಆತ್ಮೀಯ ಸಂವಾದ ಮತ್ತು ಸೈದ್ಧಾಂತಿಕ ವಾಗ್ವಾದಗಳು ತಮಿಳುನಾಡು ರಾಜಕಾರಣ ಮುಂದಿನ ದಿನಗಳಲ್ಲಿ ತೀವ್ರ ಕುತೂಹಲ ಕೆರಳಿಸುವುದಕ್ಕೆ ಸಾಕ್ಷಿಯಾಗಿವೆ.. ಮುಂದಿನ ದಿನ ಸನಾತನ ನಾಶ ವಿಚಾರ ಯಾವ ತಿರುವು ಪಡೆಯುತ್ತೆ ಅಂತ ಕಾಯ್ದು ನೋಡಬೇಕಿದೆ..
ಸನಾತನ ಧರ್ಮ ನಾಶ : ಸದನದಲ್ಲಿ ಉದಯನಿಧಿ ಗುಡುಗು, ಮೌನವಹಿಸಿ ಸಮ್ಮತಿಸಿದ್ರಾ ಸಿಎಂ ವಿಜಯ್
WhatsApp Group
Join Now