ನಿಮ್ಮ ಪಾದಗಳೇ ಯಕೃತ್ತಿನ ಕಾಯಿಲೆಗೆ ಕನ್ನಡಿ: ನಡೆಯುವಾಗ ಕಂಡುಬರುವ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

Spread the love

ನಮ್ಮ ದೇಹದ ಮುಖ್ಯ ಅಂಗವಾದ ಯಕೃತ್ತು..ಒಳಗಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಾದಗಳಲ್ಲಿ ಬದಲಾವಣೆ ಕಾಣಿಸಿಕೊಂಡಾಗ ಅದು ಯಕೃತ್ತಿನ ಮೇಲಾಗುತ್ತಿರುವ ಸಮಸ್ಯೆ ಎಂದು ಕಂಡುಕೊಳ್ಳಬೇಕಾಗುತ್ತದೆ.

ಪಾದಗಳ ಊತ, ಚರ್ಮದ ಮೇಲಾಗುವ ಸಮಸ್ಯೆ, ಕಾಲ್ಬೆರಳುಗಳ ಮಧ್ಯೆ ಕಾಣಿಸಿಕೊಳ್ಳುವ ಹಳದಿ ಬಣ್ಣ ಇವೆಲ್ಲವು ಯಕೃತ್ತಿನ ಕಾಯಿಲೆಗಳನ್ನು ಸೂಚಿಸುತ್ತದೆ. ಇತ್ತೀಚೆಗೆ ರಿಲೀಸ್ ಆದ ಲಿವರ್ ಜನರಲ್ ವರದಿ ಪ್ರಕಾರ, ಪಾದದಲ್ಲಾಗುವ ಬದಲಾವಣೆಯನ್ನು ಗಮನಿಸಿ ನಿಮ್ಮ ಯಕೃತ್ತಿನ ಮೇಲೆ ನಿಗಾ ವಹಿಸಬೇಕು ಎಂದು ವರದಿ ಹೇಳಿದೆ. ಹಾಗಾದ್ರೆ ಪಾದಕ್ಕೂ ಯಕೃತ್ತಿಗೂ ಸಂಬಂಧ ಹೇಗಾಗುತ್ತದೆ. ಯಕೃತ್ತಿಗೆ ಸಮಸ್ಯೆಯಾದರೆ, ಪಾದಕ್ಕೆ ಹೇಗೆ ಕನೆಕ್ಟ್ ಆಗುತ್ತೆ ಅನ್ನೋದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಪಾದದಲ್ಲಿ ಊತ ಕಾಣಿಸಿಕೊಳ್ಳೋದು ಯಾಕೆ?

ನಿತ್ಯ ನಡೆಯುವಾಗ ಪಾದದಲ್ಲಿ ಊತ ಕಾಣಿಸಿಕೊಂಡಾಗ ಅಥವಾ ಕಾಲು ಭಾರವೆನಿಸಿದಾಗ ಕೂಡಲೇ ವೈದ್ಯರನ್ನು ಕಾಣಬೇಕು. ಇದು ಯಕೃತ್ತಿನ ಸಮಸ್ಯೆ ಬಗ್ಗೆ ನೀಡುತ್ತಿರುವ ಮುನ್ಸೂಚನೆಯಾಗಿದೆ. ಸಾಮಾನ್ಯವಾಗಿ ಯಕೃತ್ತು ಸರಿಯಾಗಿ ತನ್ನ ಕಾರ್ಯ ನಿರ್ವಹಿಸದೇ ಹೋದಲ್ಲಿ ನಿಮ್ಮ ಪಾದದ ಮೇಲೆ ಪ್ಲಾಸ್ಮಾ ಆಂಕೋಟಿಕ್ ಒತ್ತಡ ಹೆಚ್ಚಾಗಿ ದ್ರವದ ಅಂಶವು ಪಾದದ ಕೀಲುಗಳಲ್ಲಿ ತುಂಬಿಕೊಂಡು ಅಸ್ವಸ್ಥೆಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು. ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಹೊಂದಿರುವವರು ಮತ್ತಷ್ಟು ಗಂಭೀರ ಸಮಸ್ಯೆಗೆ ಒಳಗಾಗುವ ಎಲ್ಲ ಲಕ್ಷಣ ಇರಲಿದೆ ಎನ್ನುತ್ತಾರೆ ವೈದ್ಯರು.

ಚರ್ಮ, ಕಾಲ್ಬೆರಳು ಹಳದಿಯಾಗ್ತಿದ್ದರೆ ನೋಡಿಕೊಳ್ಳಿ

ಚರ್ಮ ಮತ್ತು ಕಾಲ್ಬೆರಳಿನ ಮಧ್ಯೆ ಹಳದಿ ಬನ್ಣ ಕಾಣಿಸಿಕೊಂಡರೆ ಇದು ಯಕೃತ್ತಿನ ಸಮಸ್ಯೆ ಇದೇ ಎಂದು ಕೊಡುತ್ತಿರುವ ಸೂಚನೆಯಾಗಿದೆ. ಸೂರ್ಯನ ಬೆಳಕಿನಲ್ಲಿ ಇದನ್ನು ಗಮನಿಸುವುದು ಹೆಚ್ಚು ಸೂಕ್ತ ಎನ್ನುತ್ತಾರೆ ವೈದ್ಯರು. ಮೊದಲು ಕಣ್ಣುಗಳಲ್ಲಿ ನಂತರ ಕಾಲಿನ ಬೆರಳುಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಪಾದದಡಿ ತುರಿಕೆಯಾದ್ರೆ ನಿರ್ಲಕ್ಷ್ಯ ಬೇಡ

ಯಕೃತ್ತಿನಲ್ಲಿ ಪಿತ್ತರಸ ಸರಿಯಾಗಿ ಹರಿಯದಿದ್ದಾಗ ಪಾದದ ಅಡಿ ತೀವ್ರ ತುರಿಕೆಯಾಗುತ್ತದೆ. ಅದನ್ನು ಸಾಮಾನ್ಯ ಚರ್ಮದ ಸಮಸ್ಯೆ ಎಂದು ಭಾವಿಸಬೇಡಿ. ರಕ್ತದಲ್ಲಿ ಸಂಗ್ರಹವಾಗಿ ಪಾದಗಳ ಅಡಿಭಾಗದಲ್ಲಿ ತೀವ್ರ ತುರಿಕೆಯನ್ನು ಉಂಟುಮಾಡುತ್ತದೆ.

ಸೂಜಿ ಚುಚ್ಚಿದಂತಾದ್ರೆ ಸುಮ್ಮನಾಗಬೇಡಿ

ನೀವು ನಡೆಯುವಾಗ ಪಾದದಡಿ ಸೂಜಿ ಚುಚ್ಚಿದಂತಾದರೆ ಬೇಜವಾಬ್ದಾರಿಯಿಂದ ವರ್ತಿಸದೆ ವೈದ್ಯರನ್ನು ಕಾಣಿ. ಏಕೆಂದರೆ, ಯಕೃತ್ತು ಹಾನಿಗೊಳಗಾದಾಗ ದೇಹದಲ್ಲಿ ಬಿ ಜೀವಸತ್ವಗಳ ಕೊರತೆಯುಂಟಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಪಾದದ ಮೇಲೆ ರಕ್ತನಾಳ ಕಾಣಿಸಿಕೊಂಡರೆ ಏನರ್ಥ?

ನಿಮ್ಮ ಪಾದಗಳು ಅಥವಾ ಕಾಲುಗಳ ಮೇಲೆ ಸಣ್ಣ ಕೆಂಪು ಬಣ್ಣದ ಜೇಡನ ಬಲೆಯ ಆಕಾರದ ರಕ್ತನಾಳಗಳು ಕಾಣಿಸಿಕೊಂಡರೆ, ಅದು ಯಕೃತ್ತಿನ ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರಬಹುದು. ಇದು ದೇಹದಲ್ಲಿ ಈಸ್ಟ್ರೊಜೆನ್ ಮಟ್ಟ ಹೆಚ್ಚಾಗುವುದರಿಂದ ಸಂಭವಿಸುತ್ತದೆ. ಕೊಬ್ಬಿನ ಪಿತ್ತಜನಕಾಂಗ, ಮದ್ಯಬಳಕೆ, ಮಧುಮೇಹ ಯಕೃತ್ತಿನ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ.

ಹಕ್ಕು ನಿರಾಕರಣೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

WhatsApp Group Join Now

Spread the love

Leave a Reply