ಮೇಷ :-
ಇಂದು ನೀವಿಡುವ ಹೆಜ್ಜೆಯ ಮೇಲೆ ಗಮನವಿರಲಿ. ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇಂದು ನಿಮ್ಮ ನಿರ್ಧಾಗಳಿಗೆ ನಿಮ್ಮ ಮೇಲಾಧಿಕಾರಿಗಳು ಬೆಂಬಲ ನೀಡದ ಕಾರಣ, ಕಾರ್ಯಸ್ಥಳದಲ್ಲಿನ ಪರಿಸ್ಥಿತಿಗಳು ಸೂಕ್ತವಾಗಿರುವುದಿಲ್ಲ.
ಇದು ನಿಮ್ಮ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವನ್ನು ಉಂಟುಮಾಡುತ್ತದೆ. ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಬೇರೊಂದು ದಿನಕ್ಕೆ ಮುಂದೂಡಿ. ನೀವು ನಿಮ್ಮ ಮಕ್ಕಳೊಂದಿಗೆ ಭಿನ್ನಾಭಿಪ್ರಾಯಕ್ಕೆ ಒಳಗಾಗಬಹುದು ಮತ್ತು ಇದು ಶೀಘ್ರದಲ್ಲೇ ಬಗೆಹರಿಯುವ ಸಾಧ್ಯತೆಯಿದೆ. ಮುರಿದ ಕಾಲ್ಗಂಟು ಸೇರಿದಂತೆ ಸಣ್ಣ ಸಣ್ಣ ಗಾಯಗಳು ದೊಡ್ಡ ಹಾನಿಯನ್ನೇ ಉಂಟಾಮಮಾಡಬಲ್ಲವು ಅಥವಾ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಅವ್ಯಸ್ಥಿತಗೊಳ್ಳಬಹುದು.
ವೃಷಭ :-
ನೀವು ಇಂದು ರಜಾಮನಸ್ಥಿತಿಯಲ್ಲಿದ್ದೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮಗೆ ಇಂದು ಶಾಪಿಂಗ್ ಮಾಡುವ ಸಮಯ. ನಿಮ್ಮ ಸ್ನೇಹಿತರನ್ನು ಭೇಟಿ ಮಾಡಿ ಮತ್ತು ಉತ್ತಮ ಉಡುಪು ಮತ್ತು ಪ್ರಾಸಾಧನಗಳ ಖರೀದಿಯಲ್ಲಿ ತೊಡಗಿಕೊಳ್ಳಿ. ಮಿಶ್ರ ಪಾನೀಯವನ್ನು ಕುಡಿದು ನಿಮಗಿಷ್ಟವಾದ ಹೋಟೇಲ್‌ನಲ್ಲಿ ನಿಮ್ಮ ನಾಲಗೆರುಚಿಯನ್ನು ತೃಪ್ತಿಪಡಿಸಿ. ಸಂಜೆಯ ವೇಳೆಗೆ, ಸಾಮಾಜಿಕ ಸಮಾರಂಭಗಳಲ್ಲಿ ನೀವು ಆಸಕ್ತಿದಾಯಕ ಜನರನ್ನು ಭೇಟಿ ಮಾಡಬಹುದು. ಅವರೊಂದಿಗಿನ ಸಂವಾದವು ನಿಮ್ಮನ್ನು ಸಂಪೂರ್ಣ ಉಲ್ಲಾಸದಲ್ಲಿರಿಸುತ್ತದೆ. ಏನೇ ಆದರೂ, ನಿಮ್ಮ ಆರೋಗ್ಯದ ಬಗ್ಗೆ ಗಮವಿರಲಿ. ಸಾಮಾನ್ಯ ಆರೋಗ್ಯ ವಿಚಾರಗಳನ್ನೂ ಕಡೆಗಣಿಸಬೇಡಿ.
ಮಿಥುನ :-
ಗೆಲುವು ಮತ್ತು ಉತ್ಸಾಹ; ಈ ಪದಗಳು ನಿಮ್ಮ ಈ ದಿನವನ್ನು ವ್ಯಾಖ್ಯಾನಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಸಂಪೂರ್ಣವಾಗಿ ಲವಲವಿಕೆಯಿಂದ ಕೂಡಿರುತ್ತೀರಿ, ಧನಾತ್ಮಕ ಶಕ್ತಿಗಳು ನಿಮ್ಮ ಸುತ್ತಲೂ ಆವರಿಸುವ ಸಾಧ್ಯತೆಯಿದೆ. ಕೈಗೆತ್ತಿಕೊಂಡ ಕಾರ್ಯಗಳನ್ನು ಪೂರ್ಣಗೊಳಿಸುವುದು ಕೇಕ್ ಮೇಲಿನ ಐಸ್‌ನಂತೆ ನಿಮಗೆ ಸುಲಭವಾಗಲಿದೆ. ಕೆಲಸದಲ್ಲಿನ ನಿಮ್ಮ ನಿರ್ವಹಣೆಗಾಗಿ ನೀವು ಮನ್ನಣೆಯನ್ನು ಪಡೆಯುವಿರಿ ಮತ್ತು ಇದು ನಿಮ್ಮ ಮನಸ್ಥಿತಿಯನ್ನು ಇನ್ನಷ್ಟು ಉಲ್ಲಾಸಿತಗೊಳಿಸುತ್ತದೆ. ಆರ್ಥಿಕ ಲಾಭದಿಂದಾಗಿ ನಿಮ್ಮ ಬೊಕ್ಕಸವು ತುಂಬಿತುಳುಕುತ್ತದೆ. ಸ್ನೇಹಿತರೊಂದಿಗೆ ಸಂಭ್ರಮದ ಸಂಜೆಯನ್ನು ಕಳೆಯಿರಿ.
ಕರ್ಕಾಟಕ :-
ಕರ್ಕಾಟಕ ರಾಶಿಯವರಾದ ನಿಮಗೆ ಅದ್ಭುತ ದಿನವು ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಮತ್ತು ನಿಮ್ಮ ಉತ್ಸಾಹ ಮತ್ತು ಲವಲವಿಕೆಯ ಮನಸ್ಥಿತಿಯು ಇದನ್ನು ಇನ್ನಷ್ಟು ಉತ್ತಮವಾಗಿಸುತ್ತದೆ. ನಿಮ್ಮ ಹಣಕಾಸು ಮೂಲಗಳನ್ನು ಹೂಡಿಕೆ ಮಾಡಲು ಮತ್ತು ನಿಮ್ಮ ಭವಿಷ್ಯದ ಸುರಕ್ಷತೆಗಳಿಗೆ ಸಂಬಂಧಿಸಿದಂತೆ ಇಂದು ಸೂಕ್ತ ದಿನ. ನೀವು ಅಪೂರ್ಣಗೊಂಡಿರುವ ಕಾರ್ಯಗಳು ಸದ್ಯದಲ್ಲಿಯೇ ಪೂರ್ಣಗೊಳ್ಳಲಿವೆ ಮತ್ತು ಸಹಕಾರ ನೀಡಿದಕ್ಕಾಗಿ ನಿಮ್ಮ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಲು ಮರೆಯಬೇಡಿ. ವೃತ್ತಿಯ ಹೊರತಾಗಿ, ವಿದ್ಯಾರ್ಥಿಗಳಿಗೂ ಈ ದಿನದಿಂದ ಪ್ರಯೋಜನ ಉಂಟಾಗಲಿದೆ. ನಿಮ್ಮ ಸಂಜೆಯನ್ನು ಸ್ನೇಹಿತರೊಂದಿಗೆ ಕಳೆದು ಹೋದ ಸಂತಸದ ಕ್ಷಣಗಳನ್ನು ನೆನಪಿಸುವ ಮೂಲಕ ಕಳೆಯಿರಿ.
ಸಿಂಹ :-
‘ಇದೂ ಕಳೆದುಹೋಗುತ್ತದೆ’ ಇದು ನಿಮ್ಮ ಇಂದಿನ ಮಂತ್ರವಾಗಿರಬೇಕು ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ದುರ್ಬಲರಾಗುವಿರಿ. ಇದಕ್ಕಿಂತಲೂ ಹೆಚ್ಚಾಗಿ, ನಿಮ್ಮ ತಾಯಿಯ ಆರೋಗ್ಯ ಮತ್ತು ಖರ್ಚುವೆಚ್ಚಗಳು ನಿಮ್ಮನ್ನು ಚಿಂತೆಯಲ್ಲಿರಿಸುತ್ತದೆ. ಏನೇ ಆದರೂ, ಸಂಜೆಯ ವೇಳೆಗೆ ನೀವು ಹಣಕಾಸು ಸಿದ್ಧತೆಗಳನ್ನು ಮಾಡಲು ನಿಮಗೆ ಸಾಧ್ಯವಾಗಬಹುದು. ವೃತ್ತಿಪರರಿಗೆ, ತಾವು ಪಟ್ಟಿರುವ ಶ್ರಮದ ಮೇಲೆ ನಿಮ್ಮ ಕೆಲಸದ ಫಲಿತಾಂಶವು ಕೊನೆಗೊಳ್ಳುತ್ತದೆ. ವಿದ್ಯಾರ್ಥಿಗಳಿಗೂ ಇದೇ ಅನ್ವಯವಾಗುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ದಿನವು ಸುಲಭವಾಗಿರುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಹೂಡಿಕೆ ಮಾಡಲು ಇದು ಉತ್ತಮ ದಿನವಲ್ಲ.
ಕನ್ಯಾ :-
ದೈವಿಕ ವಿಷಯಗಳು ಮತ್ತು ಆಧ್ಯಾತ್ಮದೆಡೆಗಿನ ನಿಮ್ಮ ಒಲವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಲಕ್ಷ್ಮೀದೇವಿಯು ನಿಮ್ಮ ಮೇಲೆ ಅನುಗ್ರಹ ತೋರುತ್ತಾರೆ; ನಿಮಗೆ ಅನಿರೀಕ್ಷಿತ ಧನಲಾಭ ಉಂಟಾಗಲಿದೆ. ಏನೇ ಆದರೂ, ನಿಮ್ಮ ಅದೃಷ್ಟಕಾರಕ ಗ್ರಹಗಳು ಹೊಸ ಯೋಜನೆಗಳಿಗೆ ಸಹಕಾರ ನೀಡುವುದಿಲ್ಲ. ಇದು ಬಾಕಿ ಸಮಯದಲ್ಲಿ ನಿಮ್ಮನ್ನು ಕಿರಿಕಿರಿಗೊಳಿಸುತ್ತದೆ. ಜೊತೆಗೆ, ಸ್ಥಿರಾಸ್ತಿ ಮತ್ತು ಸ್ವತ್ತುಗಳ ದಾಖಲೆಗಳಿಗೆ ಸಂಬಂಧಿಸಿದ ಮಾತುಕತೆಗಳನ್ನು ಮುಂದೂಡಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಧ್ಯಾನ ಮಾಡಿ. ಇದು ನಿಮಗೆ ಉತ್ತಮ ಅಂಶಗಳ ಅನುಭವವನ್ನು ನೀಡುತ್ತದೆ ಮತ್ತು ನಿಮ್ಮ ಮನಸ್ಸನ್ನು ಹಗುರವಾಗಿಸುತ್ತದೆ.
ತುಲಾ :-
ಇಂದು ನೀವು ನೀರಸ ಹಾಗೂ ಆಲಸ್ಯದಿಂದ ದಿನವನ್ನು ಪ್ರಾರಂಭಿಸುತ್ತೀರಿ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಬಹುಶಃ ನಿಮ್ಮ ಆರೋಗ್ಯವು ಇಂದು ಅನುಕೂಲಕರವಾಗಿರುವುದಿಲ್ಲ ಮತ್ತು ನೀವು ಚೈತನ್ಯದ ಕೊರತೆಯನ್ನು ಎದುರಿಸುವಿರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡುವಾಗ ನಿಮ್ಮ ಮಿತಿಗಳ ಮೇಲೆ ಗಮನವಿರಲಿ. ಪರಿಸ್ಥಿತಿಗಳು ಅಹಿತಕರ ತಿರುವನ್ನು ಪಡೆದುಕೊಳ್ಳಲು ಬಿಡಬೇಡಿ. ಧಾರ್ಮಿಕ ಚಟುವಟಿಕೆಗಳಿಗೆ, ಆಧ್ಯಾತ್ಮ ಮತ್ತು ದೈವಿಕ ವಿಚಾರಗಳಿಗೆ ನೀವು ವೆಚ್ಚಮಾಡಬೇಕಾಗುತ್ತದೆ, ಏನೇ ಆದರೂ ನೀವು ಸ್ವಲ್ಪ ಕಳೆದುಕೊಳ್ಳುವಿರಿ, ಸ್ವಲ್ಪ ಪಡೆಯುವಿರಿ. ಸಂಜೆಯ ವೇಳೆಗೆ ಅನಿರೀಕ್ಷಿತ ಧನಲಾಭ ಉಂಟಾಗುತ್ತದೆ. ನಿಮ್ಮ ಅದೃಷ್ಟ ನಕ್ಷೆಯು ಇಂದು ಮೇಲ್ಮುಖವಾಗಿ ಸಾಗುತ್ತದೆ ಮತ್ತು ನೀವು ನಿಗದಿಪಡಿಸಿದ ಕಾರ್ಯವನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವಿರಿ. ಸಂಭ್ರಮಾಚರಿಸಲು ಮತ್ತು ಆತ್ಮೀಯ ಸ್ನೇಹಿತರೊಂದಿಗೆ ಸಾಹಸಿ ಪ್ರವಾಸ ತೆರಳಲು ಇದು ಉತ್ತಮ ಸಮಯ.
ವೃಶ್ಚಿಕ :-
ಇಂದು ಧನಾತ್ಮಕ ಶಕ್ತಿಗಳು ನಿಮ್ಮ ಸುತ್ತಲೂ ಆವರಿಸುತ್ತಿರುತ್ತದೆ. ಇಂದು ನೀವು ಅತ್ಯುತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಿರುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮನೋಭಾವದ ಬದಲಾಗುವಿಕೆಯಿಂದ ಮನೆಯಲ್ಲಿನ ಶಾಂತಿಯ ವಾತಾರಣವನ್ನು ಹಾಳುಗೆಡಹುವ ಮೂಲಕ ವಿನೋದಗೇಡಿಗಳಾಗಬೇಡಿ. ಒಟ್ಟಾರೆಯಾಗಿ ಇಂದು ಎಲ್ಲವೂ ಉತ್ಸಾಹದಿಂದಿರುತ್ತದೆ.ಇಂದು ನಿನ್ನ ಕೋಪವನ್ನು ನಿಯಂತ್ರಣದಲ್ಲಿಡಿ ಮತ್ತು ಯಾವುದೇ ಒರಟು ಮಾತುಗಳನ್ನು ನುಡಿಯುವ ಮುನ್ನ ನಾಲಗೆಯ ಮೇಲೆ ಹಿಡಿತವಿರಲಿ. ನೀವು ಅಪರೂಪಕ್ಕೆ ಭೇಟಿಯಾಗುವ ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ದಿನವನ್ನು ಸಂಪೂರ್ಣವಾಗಿ ಆನಂದಿಸಿ. ದಿನದ ದ್ವಿತೀಯಾರ್ಧವು ವಿದ್ಯಾರ್ಥಿಗಳಿಗೆ ಕಷ್ಟಕರವಾಗಬಹುದು ಮತ್ತು ನೀವು ನಿಮ್ಮ ಅಧ್ಯಯನದಲ್ಲಿ ತೊಂದರೆಗಳನ್ನು ಎದುರಿಸಬಹುದು. ಇಂದು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ.
ಧನು :-
ಈ ದಿನವು ಸಾಮಾನ್ಯ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ದಿನದ ಪೂರ್ವಾರ್ಧವು ನಿಮಗೆ ಸಾಕಷ್ಟು ಒತ್ತಡವನ್ನು ನೀಡುತ್ತದೆ ಮತ್ತು ನಿಮ್ಮ ಆರೋಗ್ಯ ಸ್ಥಿತಿಯು ಉತ್ತಮವಾಗಿರುವುದಿಲ್ಲ. ಮನೆಯಲ್ಲಿ ಸಂಘರ್ಷ ಅಥವಾ ಕಲಹ ಉಂಟಾಗಬಹುದು. ನೀವು ಪ್ರೌಢತೆಯಿಂದ ವರ್ತಿಸಿದರೆ ಇದನ್ನು ತಪ್ಪಿಸಬಹುದು. ಇಂದು ಶಸ್ತ್ರಚಿಕಿತ್ಸೆ ಅಥವಾ ಸರ್ಜರಿಗೆ ಒಳಗಾಗಬೇಕಾಗದಲ್ಲಿ ಅದನ್ನು ಮುಂದೂಡಿ ಯಾಕೆಂದರೆ, ಚೂರಿಯಡಿಯಲ್ಲಿ ಕೆಲಸ ಮಾಡಲು ಇದು ಉತ್ತಮ ಸಮಯವಲ್ಲ. ಏನೇ ಆದರೂ, ಕಷ್ಟಕರ ಪರಿಸ್ಥಿತಿಗಳು ಸದ್ಯದಲ್ಲಿಯೇ ಬದಲಾಗಲಿವೆ. ದಿನದ ದ್ವಿತೀಯಾರ್ಧದಲ್ಲಿ ಎಲ್ಲವೂ ಉತ್ತಮವಾಗಿರುವಂತೆ ಕಂಡುಬರುತ್ತದೆ. ಜನರೊಂದಿಗೆ ಹೊಂದಾಣಿಕೆಯಾಗಿರಿ ಮತ್ತು ಅವರೊಂದಿಗೆ ಕಾಲ ಕಳೆಯಿರಿ. ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು; ಉತ್ತಮವಾಗಿದ್ದ ಹಳೆಯ ದಿನಗಳನ್ನು ಕಾಫಿ ಜೊತೆ ಹಂಚಿಕೊಳ್ಳಿ. ಇಂದು ನೀವು ಶಾಂತಿಯ ನಿದ್ರೆಯನ್ನು ಹೊಂದುವಿರಿ.
ಮಕರ :-
ಗಣೇಶನ ಪ್ರಕಾರ, ಇಂದು ನೀವು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸುವುದರಿಂದ, ಈ ದಿನವು ಆರ್ಥಿಕವಾಗಿ, ವೃತ್ತಿಪರವಾಗಿ ಮತ್ತು ಸಾಮಾಜಿಕವಾಗಿ ಫಲಪ್ರದವಾಗಿರುತ್ತದೆ.ಏನೇ ಆದರೂ, ನಂತರದ ಅವಧಿಯಲ್ಲಿ ನೀವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಆರೋಗ್ಯಕ್ಕೆ ಸಂಬಂಧಿಸಿ ಸಾಧಾರಣ ದಿನ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಇಂದು ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಗೊಂದಲದ ಮತ್ತು ಒತ್ತಡತುಂಬಿದ ದಿನದ ನಂತರ, ಅದ್ಭುತ ಭೋಜನ ಅಥವಾ ಸಿನಿಮಾ ಮುಂತಾದ ಮನರಂಜನೆಯಲ್ಲಿ ತೊಡಗಿಕೊಳ್ಳುವುದರೊಂದಿಗೆ ನಿಮ್ಮ ದಿನವನ್ನು ಕೊನೆಗೊಳಿಸುವಿರಿ.
ಕುಂಭ :-
ನಿರೀಕ್ಷಿತ ಮತ್ತು ಅನಿರೀಕ್ಷಿತ ಧನಲಾಭ ಉಂಟಾಗುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಕೆಲಸದಲ್ಲಿ ನೀವು ಉತ್ತಮ ನಿರ್ವಹಣೆಯನ್ನು ತೋರುತ್ತೀರಿ ಮತ್ತು ನಿಮ್ಮ ಕೆಲಸದಲ್ಲಿನ ಪ್ರಯತ್ನದ ಬಗ್ಗೆ ನಿಮ್ಮ ಮೇಲಾಧಿಕಾರಿಗಳು ಸಂತುಷ್ಟರಾಗಿರುವ ಕಾರಣ ರತ್ನಗಂಬಳಿಯಲ್ಲಿ ನಡೆಯಲು ಸಿದ್ಧರಾಗಿರಿ. ನಿಮಗೆ ಬಡ್ತಿ ನೀಡುವ ಸಂಭಾವ್ಯತೆಯಿದೆ. ಇದರ ಜೊತೆಗೆ, ಕಾರ್ಯಸ್ಥಳದಲ್ಲಿ ಲಾಭ ಉಂಟಾಗಬಹುದು. ದಿನದ ಗೊಂದಲಗಳಿಂದ ನೆಮ್ಮದಿಯನ್ನು ಪಡೆಯಲು ಈಜಲು ತೆರಳಿ ಅಥವಾ ದೂರ ಪ್ರಯಾಣ ಮಾಡಿ.
ಮೀನ :-
ಬೌದ್ಧಿಕ ಚರ್ಚೆ ಮತ್ತು ಯೋಜನೆಗಳು ಅಥವಾ ಕ್ರಿಯಾತ್ಮಕ ಬರಹಗಳಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಕ್ರಿಯಾತ್ಮಕ ಮತ್ತು ವಿಶ್ಲೇಷಣಾತ್ಮಕ ಅರ್ಹತೆಗಳನ್ನು ಪೋಷಿಸುವ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಯಾವುದೇ ಯೋಜನೆಗಳನ್ನು ಹೊಂದಿದ್ದಲ್ಲಿ, ಅದನ್ನು ಕಾರ್ಯರೂಪಗೊಳಿಸಲು ಇದು ತಕ್ಕುದಾದ ಸಮಯ, ನೀವು ಕೈಗೊಳ್ಳುವ ಯಾವುದೇ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಧನಲಾಭದ ಯೋಗವಿದೆ. ನಿಮ್ಮ ದೈಹಿಕ ಆರೋಗ್ಯ ಮಟ್ಟವು ಕುಗ್ಗಬಹುದು ಆದರೆ, ಮನೆಯಲ್ಲಿನ ಸ್ನೇಹಪರ ಹಾಗೂ ಉತ್ಸಾಹದ ವಾತಾವರಣವು ಶೀಘ್ರ ಚೇತರಿಕೆಯನ್ನು ಕಾಣಲು ಸಹಕಾರಿಯಾಗಬಹುದು. ವಿದೇಶದಲ್ಲಿ ನೆಲೆಸಿರುವ ನಿಮ್ಮ ಸಂಬಂಧಿಗಳು ಮತ್ತು ಪ್ರೀತಿಪಾತ್ರರಿಂದ ಶುಭ ಸುದ್ದಿಗಳನ್ನು ನಿರೀಕ್ಷಿಸಿ.
Horoscope Today : 05 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now