ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ವಿಚಾರದಲ್ಲಿ ಬಹಳ ದೊಡ್ಡ ಅಪರಾಧ ನಡೆದಿದೆ. 200ಕ್ಕೂ ಅಧಿಕ ಮತಗಳನ್ನು ಅಧಿಕಾರಿಗಳೇ ತಿದ್ದಿದ್ದಾರೆ, ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗಿರುವ ದೊಡ್ಡ ಕಳಂಕ.
ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿಗೆ ಸಮೀಪದ ತುಂಗಭದ್ರಾ ಅಣೆಕಟ್ಟೆಗೆ ಭಾನುವಾರ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಮತಪತ್ರಗಳಲ್ಲಿ ಹಸ್ತಕ್ಷೇಪ ನಡೆದಿದೆ. ಹಾಲಿ ಕಾಂಗ್ರೆಸ್ ಶಾಸಕರಿಗೆ ಬಂದಿರುವ ಮತಗಳನ್ನು ತಿದ್ದಿದ್ದಾರೆ. ಈ ಬಗ್ಗೆ ದೊಡ್ಡ ತನಿಖೆ ಆಗಲೇಬೇಕು. ಅದನ್ನು ನಾವು ಮಾಡಲಿದ್ದೇವೆ. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ಜಯನಗರ ಕ್ಷೇತ್ರದಲ್ಲೂ ಇಂತಹದೇ ಘಟನೆ ನಡೆದಿದೆ ಎಂದರು.
ಶಾಸಕ ರಾಜೇಗೌಡ ಮತ್ತು ಜೀವರಾಜ್ ಇಬ್ಬರ ಕಡೆಯವರೂ ಸರಿಯಾಗಿ ಸಹಿ ಹಾಕಿಲ್ಲ ಎಂದು ಗೃಹ ಸಚಿವರೇ ಹೇಳಿದ್ದಾರಲ್ಲ ಎಂದು ಕೇಳಿದಾಗ, ಸಿಗ್ನೇಚರ್ ಮಾಡಿದ್ದರ ದಾಖಲೆ ಇದೆ, ನಾನೂ ವರದಿ ತರಿಸಿಕೊಂಡಿದ್ದೇನೆ ಎಂದರು.
ಶೃಂಗೇರಿ ಮತಎಣಿಕೆಯಲ್ಲಿ ಕುತಂತ್ರ, ದೇಶಕ್ಕೆ ದೊಡ್ಡ ಕಳಂಕ : ಡಿಸಿಎಂ ಡಿ.ಕೆ. ಶಿವಕುಮಾರ್
WhatsApp Group
Join Now