ಸಚಿವ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್ಗೆ ಹೋಗ್ತಿದ್ದಾರೆ. ಕೇಂದ್ರ ಸಚಿವ ಹಾಗೂ JDS ವರಿಷ್ಠ ಹೆಚ್ಡಿ ಕುಮಾರಸ್ವಾಮಿ ಜೊತೆ ಕೂಡ ಈ ಬಗ್ಗೆ ಗೌಪ್ಯ ಮಾತುಕತೆ ನಡೆದಿದೆ ಎನ್ನುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಕ್ರಮಕ್ಕೆ ಬೇಸತ್ತು ಜಮೀರ್ ಪಕ್ಷ ತೊರೆಯುವ ಸಾಧ್ಯತೆ ಇದೆ ಎನ್ನಲಾಗ್ತಿತ್ತು. ಆದ್ರೆ ಈ ಎಲ್ಲಾ ಗೊಂದಲಕ್ಕೆ ಇದೀಗ ಜಮೀರ್ ತೆರೆ ಎಳೆದಿದ್ದಾರೆ.
ಜೆಡಿಎಸ್ ಸೇರುವ ಬಗ್ಗೆ ಜಮೀರ್ ಸ್ಪಷ್ಟನೆ
ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಹೋಗ್ತಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಜಮೀರ್ ಖಾನ್, ”ಥೂ.. ಥೂ.. ಥೂ.. ಹಾಗೇನು ಇಲ್ಲ. ಇದೆಲ್ಲಾ ಊಹಾಪೋಹದ ಸುದ್ದಿ. ನಾನು ಯಾಕೇ ಜೆಡಿಎಸ್ಗೆ ಹೋಗಲಿ” ಎಂದು ಮರು ಪ್ರಶ್ನೆ ಮಾಡಿದ್ದಾರೆ.
ನಾನು ಯಾಕೆ ಜೆಡಿಎಸ್ಗೆ ಹೋಗ್ಲಿ?
ಮಾತು ಮುಂದುವರಿಸಿದ ಜಮೀರ್, ನಾನು ಯಾಕೇ ಜೆಡಿಎಸ್ಗೆ ಹೋಗಲಿ, ಈಗಾಗಲೇ ಜೆಡಿಎಸ್ ಪಕ್ಷ ಬಿಟ್ಟು ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ನನಗೇನು ಕಡಿಮೆ ಮಾಡಿದೆ. 2017ರಲ್ಲಿ ಕಾಂಗ್ರೆಸ್ ಗೆ ಬಂದೆ, 2018ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಕುಮಾರಸ್ವಾಮಿ ಸಿಎಂ ಆಗಿದ್ರು. ಆಗ ನನ್ನನ್ನು ಮಂತ್ರಿ ಮಾಡ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಯಾರ ಬಳಿನೂ ಕೇಳಿಯೂ ಇರಲಿಲ್ಲ
‘ನನಗೆ ಸಚಿವ ಸ್ಥಾನ ಕೊಟ್ರು’
ಆ ಟೈಮ್ ನಲ್ಲಿ ನನ್ನನ್ನು ಮಂತ್ರಿ ಮಾಡಿ ಐದು ಖಾತೆಗಳನ್ನು ಕೊಟ್ಟಿದ್ರು. ಇದೇ ಜೆಡಿಎಸ್ ಜೊತೆ ಇದ್ದಾಗ ವಕ್ಫ್ ಮತ್ತೆ ಹಜ್ ಖಾತೆ ಕೊಟ್ಟಿದ್ರು. ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ನಾನು ನಿರೀಕ್ಷೆ ಮಾಡದ ರೀತಿ ಖಾತೆಗಳನ್ನು ಕೊಟ್ಟಿದ್ದಾರೆ. ಮತ್ತೆ 2023ರಲ್ಲಿ ನಾಲ್ಕು ಖಾತೆಗಳನ್ನು ಕೊಟ್ಟಿದ್ದಾರೆ. ಈ ರೀತಿ ಇರುವಾಗ ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿದೆ ಅಂತ ಜೆಡಿಎಸ್ ಗೆ ಹೋಗಲಿ ಎಂದು ಜಮೀರ್ ಹೇಳಿದ್ದಾರೆ.
ಕುಮಾರಸ್ವಾಮಿ ಜೊತೆ ನಡೀತಾ ಮೀಟಿಂಗ್?
ಬಹಳ ಜನ ನನಗಿಂತಲೂ ಸೀನಿಯರ್ ಇದ್ದರು. 2018ರಲ್ಲಿ ನನ್ನನ್ನು ಮಂತ್ರಿ ಮಾಡಿದಾಗ ರೋಷನ್ ಬೇಗ್ ಹಿರಿಯರು. ತನ್ವೀರ್ ಸೇಠ್, ಹ್ಯಾರೀಸ್ ಎಲ್ಲರೂ ಇದ್ದರು. ಆದರೂ ನನ್ನನ್ನು ಮಂತ್ರಿ ಮಾಡಿರಬೇಕಾದ್ರೆ ಅದನ್ನು ನಾನು ಮರೆಯೋಕೆ ಆಗುತ್ತಾ? ನಾನು ಯಾಕ್ರೀ ರಹಸ್ಯವಾಗಿ ಕುಮಾರಸ್ವಾಮಿ ಜೊತೆ ಮಾತಾಡಲಿ. ಇದೆಲ್ಲವೂ ಊಹಾಪೋಹದ ಸುದ್ದಿ ಅಷ್ಟೇ, ಪಕ್ಷ ನನಗೇನು ಕಡಿಮೆ ಮಾಡಿಲ್ಲ ಹೀಗಿರುವಾಗ ನಾನು ಎಲ್ಲೂ ಹೋಗಲ್ಲ ಎಂದು ಜಮೀರ್ ಸ್ಪಷ್ಟನೆ ನೀಡಿದ್ದಾರೆ.
ಮತ್ತೆ ಜೆಡಿಎಸ್ ಗೂಡು ಸೇರ್ತೀರಂತೆ ನಿಜನಾ.? ಸಚಿವ ಜಮೀರ್ ಅಹ್ಮಮದ್ ಕೊಟ್ರು ಸ್ಪಷ್ಟನೆ
WhatsApp Group
Join Now