ಎಲ್ಲಡೆ ಅಪಮೃತ್ಯ, ಜಾಗತಿಕವಾಗಿ ಪ್ರಮುಖ ವ್ಯಕ್ತಿಗಳ ತಲೆದಂಡವಾಗಲಿದೆ ಎಂದು ಕೋಡಿಮಠದ ಶ್ರೀಗಳುಹೊಸ ಭವಿಷ್ಯವನ್ನು ನುಡಿದಿದ್ದಾರೆ. ಹೊಯ್ಸಳ ಶೈಲಿಯ ಪ್ರಾಚೀನ ದೇವಾಲಯಗಳಿಗೆ ಹೆಸರಾಗಿರುವ ಜಿಲ್ಲೆಯ, ಕೃಷ್ಣರಾಜಪೇಟೆ ತಾಲೂಕಿನ, ಕಿಕ್ಕೇರಿಯಲ್ಲಿ ಶ್ರೀಗಳು ಈ ಭವಿಷ್ಯವನ್ನು ಹೇಳಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕು, ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಹಾಲು ಕೆಟ್ಟರೂ ಹಾಲುಮತ ಸಮಾಜ ಕೆಡದು, ಅವರಾಗಿಯೇ ಬಿಡಬೇಕೇ ಹೊರತು, ಅವರನ್ನು ಬಲವಂತದಿಂದ ಇಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಶ್ರೀಗಳು ನುಡಿದಿದ್ದ ಭವಿಷ್ಯ ವೈರಲ್ ಆಗಿತ್ತು.
ದೇಶಕ್ಕೆ ಒಳ್ಳೆಯ ಮತ್ತು ಕೆಟ್ಟ ಸುದ್ದಿಯಿದೆ ಎಂದ ಕೋಡಿಶ್ರೀಗಳು
ಕಿಕ್ಕೇರಿಯಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, ದೇಶಕ್ಕೆ ಒಳ್ಳೆಯ ಸುದ್ದಿಯೂ ಇದೆ, ಕೆಟ್ಟ ಸುದ್ದಿಯೂ ಇದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ, ಉತ್ತಮ ಬೆಳೆಯಾಗಲಿದೆ. ಆದರೂ, ಅವಘಡ ತಪ್ಪಲಾರದು ಎಂದು ಹೇಳಿದ್ದಾರೆ. ಮಹಾಭಾರತದಲ್ಲಿ ಕೃಷ್ಣನಿದ್ದ, ಗಧಾಯುದ್ದದಲ್ಲಿ ಭೀಮ ಗೆದ್ದ, ಆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಏನೂ ತೊಂದರೆಯಿಲ್ಲ. ಆಕಾಶತತ್ವದ ಪ್ರಕಾರ, ಜಗತ್ತಿಗೆ ಒಂದಲ್ಲಾ ಒಂದು ಕಂಟಕ ತಪ್ಪಿದ್ದಲ್ಲ ಎಂದು ಕಳೆದ ತಿಂಗಳು ಶ್ರೀಗಳು ಹೇಳಿದ್ದರು.
‘ಅಡವಿಯಲ್ಲಿ ಕಂಡದ್ದು ಕೇಳದ್ದು ಕುರುಹೀನ ರಟ್ಟು’ ಹಿಂದೆ ನೋಡಿದ್ದನ್ನು, ಅನುಭವಿಸಿದ್ದನ್ನು ಹೇಳುತ್ತಾ ಬಂದಿದ್ದಾರೆ. ಅದು ಕುರುವಿನ ರಟ್ಟು, ಕೆಲವು ಕಡೆ ಕುರುಹೀನ ರಟ್ಟು ಎಂದು ಕರೆಯುತ್ತಾರೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಹೇಳಲು ಬಳಸುವ ಪದ ಇದಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.
ಕಿಕ್ಕೇರಿಯಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು
ಮತೀಯ ಗಲಭೆ ದೇಶದಲ್ಲಿ ಹೆಚ್ಚಾಗಲಿದೆ, ಅಕಾಲ ಮೃತ್ಯವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ಆದರೆ, ಸಕಾಲಕ್ಕೆ ಈ ಬಾರಿ ಮಳೆಯಾಗಲಿದೆ, ಅಣೆಕಟ್ಟುಗಳು ತುಂಬಲಿವೆ ಎಂದು ಕೋಡಿಶ್ರೀಗಳು ಕಿಕ್ಕೇರಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಮುಂದುವರಿಯುತ್ತಾ, ಅಗಸದಲ್ಲಿ ಮತ್ತು ಭೂಮಿಯಲ್ಲಿ ಅಪಘಾತಗಳು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. ಅಂದರೆ, ವಿಮಾನ ಮತ್ತು ರೈಲು ದುರಂತಗಳು ಹೆಚ್ಚಾಗಲಿದೆ ಎನ್ನುವುದು ಶ್ರೀಗಳ ಭವಿಷ್ಯದ ಅರ್ಥವಾಗಿತ್ತು.
ಜಾಗತಿಕ ಮಟ್ಟದಲ್ಲಿ ಪ್ರಮುಖ ವ್ಯಕ್ತಿಯೊಬ್ಬರ ತಲೆದಂಡ
ವಾಯು ಮತ್ತು ಗಾಳಿಯ ಆರ್ಭಟದ ಪ್ರಮಾಣದಲ್ಲಿ ವಿಪರೀತ ಎನ್ನುವ ಮಟ್ಟಿಗೆ ಹೆಚ್ಚಾಗಲಿದೆ, ಇದು ಅಲ್ಲಲ್ಲಿ ಉಸಿರುಗಟ್ಟಿಸುವ ವಾತಾವರಣವೂ ಇದರಿಂದಾಗಿ ಸೃಷ್ಟಿಯಾಗಬಹುದು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಏನಾದರೂ ಸೋಲಾಗುವ ಲಕ್ಷಣಗಳಿವೆ. ಮನುಷ್ಯಲ್ಲಾ ಒಂದು ದುಷ್ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಜಾಗತಿಕ ಮಟ್ಟದಲ್ಲಿ ಪ್ರಮುಖ ವ್ಯಕ್ತಿಯೊಬ್ಬರ ತಲೆದಂಡವಾಗಲಿದೆ ಎಂದು ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳಿದ್ದಾರೆ.
ತಾಳೇಗರಿ ಆಧಾರಿತವಾಗಿ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು
ಮಕರ ಸಂಕ್ರಾಂತಿಯ ದಿನದಂದು ಸೂರ್ಯನನ್ನು ನೋಡಿ, ಯುಗಾದಿಯಂದು ಚಂದ್ರನನ್ನು ನೋಡಿ, ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿಯುತ್ತಾರೆ. ಇದಲ್ಲದೇ, ದಸರಾ ಸಮಯದಲ್ಲೂ ಭವಿಷ್ಯವನ್ನು ಹೇಳುತ್ತಾರೆ. ಅಹ್ಮದಾಬಾದ್ ಏರ್ ಇಂಡಿಯಾ ಪತನಗೊಂಡಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ, ಜಾಗತಿಕ ಮಟ್ಟದಲ್ಲಿ ಯುದ್ದದ ಭೀತಿ, ಸುನಾಮಿ ಜಲಪ್ರಳದಂತಹ ಸುದ್ದಿಯನ್ನು ಕೋಡಿಮಠದ ಶ್ರೀಗಳು ತಮ್ಮದೇ ಶೈಲಿಯಲ್ಲಿ ನುಡಿದಿದ್ದರು. ತಾಳೇಗರಿ ಆಧಾರಿತವಾಗಿ ಕೋಡಿಶ್ರೀಗಳು ಭವಿಷ್ಯವನ್ನು ನುಡಿಯುತ್ತಾರೆ.