ನಾವೀಗ ವಿಶ್ವಗುರು ಅಲ್ಲ, ಆ ‍ಪದವನ್ನು ಬಳಸಬಾರದು : BJP ನಾಯಕ ಮುರಳಿ ಮನೋಹರ್ ಜೋಶಿ

Spread the love

ಭಾರತವು ಈಗ ‘ವಿಶ್ವಗುರು’ ಆಗಿ ಉಳಿದಿಲ್ಲ. ಆ ಪದವನ್ನು ಬಳಸಬಾರದು ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಸೋಮವಾರ ಹೇಳಿದ್ದಾರೆ.

ವಿಶ್ವಗುರು ಬಸವಣ್ಣನವರಿಂದ ಸಮಾಜದ ಬೆಸುಗೆ ಸಾಧ್ಯ..

ಸಂಸ್ಕೃತದ ಹೆಚ್ಚಿನ ಪ್ರಚಾರ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿಯೂ ಸಂಸ್ಕೃತ ಬಳಕೆಯ ಕುರಿತು ಪ್ರತಿಪಾದಿಸಿ ಅವರು ಈ ಮಾತನ್ನು ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕರು ಈ ಹಿಂದೆ ಇದಕ್ಕಾಗಿ ಪ್ರಯತ್ನಿಸಿದ್ದರು, ಆದರೆ ಆ ಪ್ರಸ್ತಾವನೆಗಳು ಅಂಗೀಕಾರವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗಸಂಸ್ಥೆಯಾದ ಸಂಸ್ಕೃತ ಭಾರತೀಯ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೀಗೆ ಹೇಳಿದ್ದಾರೆ.

ಭಾರತವು ‘ವಿಶ್ವಗುರು’ ಆಗುತ್ತಿರುವ ಮತ್ತು ಕೃತಕ ಬುದ್ಧಿಮತ್ತೆಯ (ಎ.ಐ) ಕೇಂದ್ರವಾಗಿ ಹೊರಹೊಮ್ಮುತ್ತಿರುವ ಈ ಸಮಯದಲ್ಲಿ ಸಂಸ್ಕೃತದ ಪ್ರಚಾರದಲ್ಲಿ ಭಾರತದ ಪಾತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವ ಪ್ರಶ್ನೆಗೆ, ‘ವಿಶ್ವಗುರು ಎಂಬ ಪದ ಬಳಸುವುದರಿಂದ ನಾವು ದೂರ ಇರಬೇಕು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಸದ್ಯ ನಾವು ವಿಶ್ವಗುರು ಅಲ್ಲ. ನಾವು ವಿಶ್ವಗುರು ಆಗಲು ಪ್ರಯತ್ನಿಸಬೇಕು’ ಎಂದು ಹೇಳಿದ್ದಾರೆ.

‘ವಾಸ್ತವವಾಗಿ, ನಾವು ಒಂದು ಕಾಲದಲ್ಲಿ ವಿಶ್ವಗುರು ಆಗಿದ್ದೆವು. ಆದರೆ, ಇಂದು ನಾವು ಹಾಗಲ್ಲ ಎಂಬುದು ಸತ್ಯ’ ಎಂದು ಅವರು ಹೇಳಿದ್ದಾರೆ.

WhatsApp Group Join Now

Spread the love

Leave a Reply