ಮೇಷ :-
ಹಗುರ, ಸಂತೋಷ ಹಾಗೂ ಉಲ್ಲಾಸಕರ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ವಿಷಯಗಳನ್ನು ವಿವಿಧ ದೃಷ್ಟಿಕೋನದಲ್ಲಿ ಕಾಣುವ ಅರ್ಹತೆಯನ್ನು ನೀವು ಹೊಂದಿರುವುರಿ. ನೀವು ನಿಮ್ಮ ಆಯ್ಕೆಗಳನ್ನು ಸರಿಯಾಗಿ ಅಳತೆ ಮಾಡುವಿರಿ ಮತ್ತು ವಿಚೇಚನೆಯ ಹಾಗೂ ಸಮಂಜಸ ತೀರ್ಮಾನಕ್ಕೆ ಬರುವಿರಿ.
ಅವುಗಳೊಂದಿಗೆ ಮುಂದಕ್ಕೆ ಸಾಗಿ, ಇದು ವೃತ್ತಿ, ವ್ಯವಹಾರ ಮತ್ತು ಕಾರ್ಯಗಳನ್ನು ಫಲಪ್ರದವಾಗಿಸುತ್ತದೆ. ಮನೆಯ ವಾತಾವರಣವು ಅತ್ಯಂತ ಸ್ನೇಹಪರವಾಗಿರುತ್ತದೆ ಮತ್ತು ಇದು ಉತ್ತಮ ಆರೋಗ್ಯ ಮತ್ತು ಮಾನಸಿಕ ಸ್ಥಿರತೆಯಾಗಿ ಮಾರ್ಪಡುತ್ತದೆ. ನೀವು ನಿಮ್ಮ ಹೆತ್ತವರಿಂದ ಶುಭಸುದ್ದಿಯನ್ನು ನಿರೀಕ್ಷಿಸುವಿರಿ. ಇದು ಆಸ್ತಿಯಲ್ಲಿನ ಪಿತ್ರಾರ್ಜಿತ ಅಥವಾ ಲಾಭದ ಕುರಿತಾಗಿಯೂ ಆಗಿರಬಹುದು. ನಿಮ್ಮ ಮನೆಗೆ ಅತಿಥಿಗಳು ಬಂದಿದ್ದಲ್ಲಿ, ನೀವು ಶ್ರೇಷ್ಠ ಉಡುಗೊರೆಗಳಿಗಾಗಿ ಖರ್ಚುಮಾಡಬೇಕಾದೀತು. ಆನಂದಿಸಿ. ನೀವು ಖುಷಿಯಂದಿರುವಿರಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಾಮರಸ್ಯ ಹಾಗೂ ಸದಾಶಯಗಳನ್ನು ಹಂಚಿಕೊಳ್ಳುವಿರಿ.
ವೃಷಭ :-
ಇಂದು ನೀವು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಎಲ್ಲಾ ದೃಷ್ಟಿಕೋನದಳನ್ನು ಗಮನಿಸಿ, ದೃಢ ನಿರ್ಧಾರವನ್ನು ತಾಳಿ ಮತ್ತು ನೈತಿಕತೆಯನ್ನು ಪರಿಗಣಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಅರ್ಧ ಆಲೋಚನೆಗಳು, ಅರೆಬರೆ ನಿರ್ಧಾರಗಳು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸಬಹುದು. ಪಾಲುದಾರರು ನಿಮ್ಮ ಮನಸ್ಥಿತಿಯನ್ನು ಹಂಚಿಕೊಳ್ಳಲಾರರು ಪರಿಣಾಮವಾಗಿ ಕಲಹಗಳು ಉಂಟಾಗಬಹುದು. ಎಚ್ಚರವಾಗಿರಿ, ಗ್ರಹಗತಿಗಳು ಉತ್ತಮ ದಿನದ ಶಕುನ ನೀಡುವುದಿಲ್ಲ. ಮಾನಸಿಕವಾಗಿ ಅನ್ಯಮನಸ್ಕರಾಗಿರುವಿರಿ ಮತ್ತು ಇದು ನಿಮ್ಮ ದೈಹಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಕೆಲಸದಲ್ಲಿ ಕಷ್ಟಪಡುವಿರಿ ಮತ್ತು ನಿಮ್ಮ ಪ್ರಯತ್ನಗಳು ತಕ್ಕುದಾದ ಫಲಿತಾಂಶವ್ನನು ನೀಡುಲಾರದು. ಬೆಂಕಿಗೆ ತುಪ್ಪ ಸುರಿದಂತೆ ನಿಮ್ಮ ಖರ್ಚುವೆಚ್ಚಗಳೂ ಹೆಚ್ಚಳಗೊಳ್ಳುತ್ತವೆ.ಪ್ರೀತಿಪಾತ್ರರೊಂದಿಗೆ ಹಾಗೂ ಉದ್ಯಮ ಪಾಲುದಾರರೊಂದಿಗೆ ಮರುಸಂಧಾನ ಮಾಡಿಕೊಳ್ಳಲು ಪ್ರಯತ್ನಿಸಿ.
ಮಿಥುನ :-
ಗಣೇಶ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಬಹು ಲಾಭಗಳನ್ನು ನೀಡುತ್ತಾರೆ. ಸಂತೋಷವಾಗಿರಿ. ನೀವು ನಿಮ್ಮ ಮಕ್ಕಳಿಂದ ಅಥವಾ ಕಿರಿಯ ಸಂಬಂಧಿಗಳಿಂದ ಉತ್ತೇಜನಕಾರಿ ಸುದ್ದಿಯನ್ನು ಪಡೆಯುವಿರಿ. ಆದ್ದರಿಂದ ಪ್ರತಿಷ್ಠಿತ ಸಂಸ್ಥೆಯಿಂದ ನಿಮ್ಮ ಮಗನಿಗಾಗಿ ನೇಮಕಾತಿ ಪತ್ರವನ್ನು ನಿರೀಕ್ಷಿಸುತ್ತಿದ್ದಲ್ಲಿ, ನಿಮಗೆ ಸಂತಸದ ಅಚ್ಚರಿ ಕಾದಿರಬಹುದು. ಅಥವಾ ನಿಮ್ಮ ಪತ್ನಿಯು ಒಮ್ಮೆ ಯಾವುದೇ ತಿಳುವಳಿಕೆಯಿಲ್ಲದೆ ಶೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರಬಹುದು. ಚಿಂತೆ ಮಾಡಬೇಡಿ. ಇಂದು ಅವರು ನಿಮ್ಮೊಂದಿಗೆ ಹೇರಳ ಲಾಭವನ್ನು ಹಂಚಿಕೊಳ್ಳುತ್ತಾರೆ. ಈ ಸಂತೋಷವು ಆಕೆಯ ಪಾಕಶಾಸ್ತ್ರಕ್ಕೆ ವರ್ಗಾವಣೆಯಾಗುತ್ತದೆ ಮತ್ತು ಖಂಡಿತವಾಗಿಯೂ ಇದು ನಿಮಗೆ ಪ್ರಯೋಜನಕಾರಿಯಾಗಲಿದೆ. ಬಾಳಸಂಗಾತಿಯ ಅನ್ವೇಷಣೆಯಲ್ಲಿರುವವರಿಗೆ ಉತ್ತಮ ಸಮಯ. ಅವರು ಯಾರಾದರೊಬ್ಬರನ್ನು ಕಂಡುಕೊಳ್ಳಬಹುದು ಅಥವಾ ಸ್ನೇಹವು ಪ್ರಣಯವಾಗಿ ಮಾರ್ಪಾಡುಗೊಳ್ಳಬಹುದು.
ಕರ್ಕಾಟಕ :-
ವೃತ್ತಿ ಅಥವಾ ವ್ಯವಹಾರದ ಹಾದಿಯಲ್ಲಿ ಬರುವ ಅದೃಷ್ಟವು ಖಂಡಿತವಾಗಿಯೂ ನಿಮ್ಮನ್ನು ಉತ್ಸಾಹದಲ್ಲಿರಿಸುತ್ತದೆ ಮತ್ತು ನಿಮ್ಮ ಮನಸ್ಸಿನಲ್ಲಿ ಸುರಕ್ಷತೆಯ ಭಾವವನ್ನು ಉಂಟುಮಾಡುತ್ತದೆ. ನಿಮ್ಮ ಕಾರ್ಯ ಮತ್ತು ವ್ಯಾಪಾರದಲ್ಲಿ ಯಶಸ್ಸು, ಪ್ರೇರಣೆ, ಗೌರವ ಮತ್ತು ವಿವೇಚನೆಯನ್ನು ಗಣೇಶ ನಿಮಗೆ ಅನುಗ್ರಹಿಸುತ್ತಾರೆ. ಈ ಎಲ್ಲಾ ಪ್ರಶಂಸೆಗಳು ನಿಮ್ಮನ್ನು ಸಂಪೂರ್ಣವಾಗಿ ಸಂತಸದಲ್ಲಿರಿಸುತ್ತದೆ.ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಪ್ರಾಯೋಗಿಕವಾಗಿ ನೀವು ಶೋಭಿತರಾಗುವಿರಿ. ನಿಮ್ಮ ಈ ಉಜ್ವಲತೆಯನ್ನು ನಿಮ್ಮ ಮನೆಯ ಕ್ಷೇತ್ರದಲ್ಲೂ ಅಳವಡಿಸುವ ಬಗ್ಗೆ ಆಲೋಚಿಸುತ್ತೀರಿ. ಇಗು ನಿಮ್ಮ ಪ್ರೀತಿಪಾತ್ರರೊಂದಿಗಿನ ಫಲಕಾರಿ ಚರ್ಚೆಯಾಗಿರಬಹುದು ಅಥವಾ ನಿಮ್ಮ ವೈಯಕ್ತಿಕ ಸ್ಥಳವನ್ನು ಮರುಅಲಂಕರಿಸಲು ನೀವು ಹಾಕು ಶ್ರಮವಾಗಿರಬಹುದು. ಆರೋಗ್ಯವ ಸ್ಥಿತಿಯು ಉತ್ತಮವಾಗಿರುತ್ತದೆ ಮತ್ತು ವೈವಾಹಿಕ ಸಂತೋಷವನ್ನು ನಿರೀಕ್ಷಿಸಬಹುದು.
ಸಿಂಹ :-
ನ್ಯಾಯದ ಆಳ್ವಿಕೆ. ಎಲ್ಲಾ ಕ್ಷೇತ್ರಗಳಲ್ಲೂ ಕ್ರಮಬದ್ಧತೆ ಹಾಗೂ ನ್ಯಾಯವು ಇರಲೇಬೇಕೆಂದು ನೀವು ಪ್ರಾಮಾಣಿಕವಾಗಿ ಆಲೋಚಿಸುತ್ತೀರಿ. ಮತ್ತು ಇದು ನಿಮ್ಮ ಈ ದಿನದ ಸೂಕ್ತಿಯಾಗಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನನ್ನ ಸ್ನೇಹಿತರೇ ಸಮಾನತಾವಾದದಲ್ಲಿ ನಂಬಿಕೆಯಿರಿಸಿ. ಎಲ್ಲಾ ಬಾಕಿಯುಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ದೃಢವಾಗಿ ನಿರ್ಧರಿಸುವಿರಿ. ಮುಂದಕ್ಕೆ ಸಾಗಿ, ಅತ್ಯುತ್ತಮವಾಗಿದೆ ಎಂದು ನಿಮಗೆ ಯಾವುದು ಅನಿಸುತ್ತದೆಯೋ ಅದನ್ನು ಮಾಡಿ. ಕೇವಲ ನಿಮ್ಮ ಸಿಡುಕಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ಮೇಲಾಧಿಕಾರಿಗಳೊಂದಿಗಿನ ವಾಗ್ವಾದವು ನಿಮ್ಮ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರಬಹುದು. ಧಾರ್ಮಿಕ ಕಾರ್ಯಗಳಿಗಾಗಿ ನಿಮ್ಮ ಸಮಯವನ್ನು ಮೀಸಲಿರಿಸುತ್ತೀರಿ ಮತ್ತು ಇದು ಸದ್ಯಕ್ಕೆ ನಿಮ್ಮ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ನೀವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆಯೂ ಇದೆ. ಇದು ನಿಮ್ಮ ಮೇಲೆ ಶಾಂತಿಯ ಪರಿಣಾಮವನ್ನು ಬೀರುತ್ತದೆ.
ಕನ್ಯಾ :-
ನಿಮ್ಮ ಮಾತು ಮತ್ತು ಸಿಟ್ಟಿನ ಬಗ್ಗೆ ನಿಯಂತ್ರಣವಿರಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಮುಂಗೋಪಿತನಕ್ಕೆ ಇದು ಉತ್ತಮ ಸಮಯವಲ್ಲ. ಆದರೂ, ನಿಮ್ಮ ಭಾವುಕತೆಯನ್ನು ಹತೋಟಿಯಲ್ಲಿರಿಸುವ ನಿಮ್ಮ ಶಕ್ತತೆಯು ಪರಿಪಕ್ವತೆಯ ಲಕ್ಷಣವಾಗಿದೆ. ಯಾವುದೇ ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಅಥವಾ ಏನನ್ನಾದರೂ ಪುನಶ್ಚೇತನಗೊಳಿಸಲು ಈ ಸಮಯ ಅನುಕೂಲಕರವಲ್ಲ. ಪ್ರಭಾವಿ ಚರ್ಚೆಗಳು ಮತ್ತು ವಾಗ್ವಾದಗಳು ನಿಮ್ಮ ಮನಶ್ಯಾಂತಿಯ ಮೇಲೆ ಪ್ರಭಾವ ಬೀರಬಹುದು. ಮತ್ತು ನಿಮ್ಮಲ್ಲಿ ಅಪಮಾನ ಮತ್ತು ಬೇಸರದ ಭಾವನೆಯನ್ನು ಉಂಟುಮಾಡಬಹುದು. ಎಚ್ಚರಿಕೆಯಿಂದಿರಿ ಇದು ಸಂಬಂಧಗಳಲ್ಲಿ ಅಶುಭದ ಚಿಹ್ನೆಯಾಗಿದೆ. ಈ ಸಂದರ್ಭಗಳಲ್ಲಿ ವ್ಯವಹಾರ ಶತ್ರುಗಳೊಂದಿಗಿನ ವ್ಯಾಜ್ಯವು ಶ್ರಮ ಹಾಗೂ ಸಂಕಟಕ್ಕೆ ಕಾರಣವಾಗುತ್ತದೆ. ಇವುಗಳಿಂದ ದೂರವಿರಿ ಮತ್ತು ನಂತರ ನಿಮ್ಮನ್ನು ಪಶ್ಚಾತ್ತಾಪಕ್ಕೊಳಪಡಿಸುವಂತಹ ಮಾತುಗಳನ್ನು ಆಡದಂತೆ ನಿಯಂತ್ರಣದಲ್ಲಿರಿ. ಪ್ರಯಾಣವನ್ನು ತಪ್ಪಿಸಿ.
ತುಲಾ :-
ದಿನಪೂರ್ತಿ ಮೋಜು ಹಾಗೂ ಪರಮಸುಖವನ್ನು ಗಣೇಶ ದಯಪಾಲಿಸುತ್ತಾರೆ. ಬಹು ಸಂಸ್ಕೃತಿ ಸಂವಾದಗಳು ನಡೆಯಲಿವೆ ಮತ್ತು ನೀವು ಇದರ ಬಗ್ಗೆ ಏನನ್ನೂ ದೂರುವುದಿಲ್ಲ. ವಿವಿಧ ಹಿನ್ನೆಲೆಯ ವಿಭಿನ್ನ ವ್ಯಕ್ತಿಗಳ ಹಾಗೂ ನಿಮ್ಮದೇ ಹಳೆಯ ಸ್ನೇಹಿತರ ಸಂಗಡವು ಉತ್ತೇಜನ, ಚೈತನ್ಯ ಹಾಗೂ ಸಂತಸವನ್ನು ನೀಡುತ್ತದೆ. ಸದ್ಯ ನೀವು ಪ್ರಯಾಣಿಸುತ್ತಿದ್ದಲ್ಲಿ, ಅನಿರೀಕ್ಷಿತ ಮುಖಾಮುಖಿಯ ಸಾಧ್ಯತೆಯಿದೆ.ನಿಮ್ಮ ವಾರ್ಡ್ರೋಬ್ಗೆ ಮೆರುಗು ನೀಡುವ ನಿಮ್ಮ ಅಭಿಲಾಶೆಯು ಶಾಪಿಂಗ್ ತೆರಳುವಂತೆ ಮಾಡಲಿದೆ. ಬಹುಶಃ ನೀವು ಉತ್ತಮವಾಗಿ ಉಡುಗೆತೊಡಲು ಬಯಸುತ್ತೀರಿ. ಅಷ್ಟಾದರೂ, ಸಂಜೆಯ ವೇಳೆ ಸ್ವಲ್ಪ ಪ್ರಣಯ ಮನೋಭಾವವು ಕಂಡುಬರುವ ಸಾಧ್ಯತೆಯಿದೆ. ಪ್ರಣಯ ವಿಚಾರಗಳಿಗೆ ಮತ್ತು ಭೋಜನ ಹಾಗೂ ಸಂಭ್ರಮಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಿಗೆ ಉತ್ತಮ ಸಮಯ. ಇಂದು ನೀವು ಲವಲವಿಕೆ ಹಾಗೂ ಆರೋಗ್ಯದಿಂದಿರುತ್ತೀರಿ.
ವೃಶ್ಚಿಕ :-
ಗ್ರಹಗತಿಗಳು ಇನ್ನಷ್ಟು ಅಭಿವೃದ್ಧಿಗೊಳ್ಳಲು ಸಿದ್ಧಗೊಂಡಿವೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಎಲ್ಲಾ ತಾಳ್ಮೆರಹಿತ ಪ್ರಭಾವವಗಳು ಕಡಿಮೆಯಾಗುತ್ತವೆ ಮತ್ತು ಮನೆಯಲ್ಲಿ ಮತ್ತು ಕಾರ್ಯಕ್ಷೇತ್ರದಲ್ಲಿ ಶಾಂತಿಯ ವಾತಾವರಣವನ್ನು ನೀಡುವ ಭರವಸೆಯಿದೆ. ನೀವು ಉತ್ಸಾಹದಿಂದ ಕೂಡಿರುತ್ತೀರಿ ಫಲವಾಗಿ, ನೀವು ಇತ್ತೀಚಿಗೆ ಅನಾರೋಗ್ಯದಿಂದಿದ್ದರೆ, ಅದರಲ್ಲಿ ಚೇತರಿಕೆ ಕಾಣುತ್ತೀರಿ. ಮಾನಸಿಕ ಶಾಂತಿಯು ಹೆಚ್ಚು ಅಮೂಲ್ಯ ಮತ್ತು ಅದು ನಿಮಗೆ ಮನವರಿಕೆಯಾಗಲಿದೆ. ನೀವು ಅಗತ್ಯ ವಿಚಾರಗಳ ಬಗ್ಗೆ ಕಾಲಕಳೆಯಬಹುದು. ನಿಮ್ಮ ವರಿಷ್ಠರು ಮತ್ತು ಮೇಲಾಧಿಕಾರಿಗಳಿಂದ ನೀವು ಸಹಕಾರ ಹಾಗೂ ಉತ್ತೇಜನವನ್ನು ಪಡೆಯಬಹುದು. ಇದು ನಿಮಗೆ ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಜೊತೆಗೆ ಆರ್ಥಿಕ ಲಾಭವನ್ನು ಪಡೆಯಲು ಸಹಕಾರಿಯಾಗುತ್ತದೆ. ಎಲ್ಲವೂ ಒಳ್ಳೆಯದೇ.ಬೆಂಕಿ ಮತ್ತು ಮಹಿಳೆಯರಿಂದ ದೂರವಿರಿ. ಹೆತ್ತವರಿಂದ ಸುದ್ದಿಯೊಂದು ನಿಮ್ಮ ಹಾದಿಯಲ್ಲಿದೆ.
ಧನು :-
ಮೋಡಗಳು ಇನ್ನೂ ತಿಳಿಯಾದಂತೆ ಕಂಡುಬರುವುದಿಲ್ಲ ಎಂಬುದಾಗಿ ಗಣೇಶ ಸೂಚಿಸುತ್ತಾರೆ. ಆದರೂ, ನಿನ್ನೆಯಂತೆ ಯಾವುದೂ ತೀವ್ರ ಪರಿಣಾಮವನ್ನು ಹೊಂದಿರುವುದಿಲ್ಲ. ಸಂಜೆಯ ಪ್ರಾರಂಭದ ವೇಳೆಗೆ ಗ್ರಹಗತಿಗಳ ಪ್ರಭಾವವು ಖಂಡಿತವಾಗಿಯೂ ಉತ್ತಮವಾಗಲಿದೆ. ಅಲ್ಲಿಯವರೆಗೆ ಕಾಯಿರಿ. ಸಾಧ್ಯವಿದ್ದರೆ, ಯಾವುದೇ ಪ್ರಯಾಣದ ಯೋಜನೆಗಳನ್ನು ಮುಂದೂಡಿ. ಮಕ್ಕಳ ಆರೋಗ್ಯವು ಚಿಂತಗೆ ಕಾರಣವಾಗಬಹುದು. ಕಾರ್ಯಕ್ಷೇತ್ರದಲ್ಲಿ ಎಲ್ಲವೂ ಸುಸ್ಥಿತಿಯಲ್ಲಿರುವುದಿಲ್ಲ. ಪರಿಣಾಮವಾಗಿ, ಫಲಿತಾಂಶವು ವಿಳಂಬವಾಗುತ್ತದೆ. ನಿಮ್ಮ ಅಡ್ಡಿಯುಂಟುಮಾಡುವಂತಹ ಭಾವುಕತೆಯನ್ನು ನಿಯಂತ್ರಿಸಿ. ಪುಣ್ಯಕ್ಕೆ, ದಿನ ಸಾಗಿದಂತೆ ಉತ್ತಮ ವಾತಾವರವು ವರ್ಧಿಸುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ವಿಶ್ರಮಿಸುತ್ತೀರಿ ಮತ್ತು ಪ್ರಣಯಭರಿತ ಕಾಫಿಯನ್ನು ಹಂಚಿಕೊಳ್ಳುವಿರಿ. ನಿಮ್ಮ ಊಹನೆಯು ವರ್ಧಿಸಲಿದೆ ಮತ್ತು ಸಾಹಿತ್ಯದತ್ತ ನೀವು ಒಲವು ತೋರುವಿರಿ. ಎಲ್ಲ ಪ್ರೀತಿ ಮತ್ತು ನಗುವನ್ನು ಆನಂದಿಸಿ. ಗಂಭೀರ ಚರ್ಚೆಗಳನ್ನು ತಪ್ಪಿಸಿ.ಎಲ್ಲಾ ಗಂಭೀರ ಚರ್ಚೆಗಳನ್ನು ತಪ್ಪಿಸಿ.
ಮಕರ :-
ನಿನ್ನೆಯ ಉತ್ಸಾಹಯುತ ಶಕ್ತಿ, ಮಕ್ಕು ಉಲ್ಲಾಸಕರ ವಿನಿಮಯವು ಇಂದು ಬರಿದಾಗಿರುವಂತೆ ಕಂಡುಬರುತ್ತದೆ. ದೈಹಿಕವಾಗಿ ನೀವು ಚೈತನ್ಯದಿಂದ ಕೂಡಿರುವುದಿಲ್ಲ ಮತ್ತು ನಿಮ್ಮ ಮನಸ್ಸೂ ಇದನ್ನೇ ಅನುಸರಿಸುತ್ತದೆ. ನಿನ್ನೆ ನಡೆದ ಏನೋ ಒಂದು ಇನ್ನೂ ನಿಮ್ಮನ್ನು ಕಾಡುತ್ತಿರಬಹುದು. ಮತ್ತು ನಿಮಗೆ ಅಹಿತಕರ ಭಾವನೆಯನ್ನು ಉಂಟುಮಾಡುತ್ತಿರಬಹುದು. ಇದು ನಿಮ್ಮ ಸಂಗಾತಿಯ ಮುನಿಸು ಆಗಿರಬಹುದು ಅಥವಾ ನಿಮ್ಮನ್ನು ಸರಿಯಾಗಿ ನಿದ್ರಿಸಲು ಬಿಡದ ನಿದ್ರಾಹೀನತೆಯೂ ಆಗಿರಬಹುದು. ಎದೆ ನೋವು, ಆಸಿಡಿಟಿ ಮುಂತಾದ ಸಣ್ಣ ಕಾಯಿಲೆಗಳು ಕಾಡಬಹುದು. ಎಚ್ಚರಿಕೆಯಿಂದಿರಿ. ನಿರುಪಯುಕ್ತ ಚರ್ಚೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಮಹಿಳೆ ಮತ್ತು ನೀರಿನಿಂದ ದೂರವಿರಿ. ಹೊಸ ಈಜು ತರಗತಿಗಳಿಗೆ ನೀವು ಸರಿಯಾದ ಮಾನಸಿಕ ಸ್ಥಿತಿಯನ್ನು ಹೊಂದಿಲ್ಲ. ಅವುಗಳನ್ನು ಮುಂದೂಡುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.
ಕುಂಭ :-
ಹುಮ್ಮಸ್ಸು ಗಾಳಿಯಲ್ಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಹಾದಿ ವರ್ಣರಂಜಿತವಾಗಿರುತ್ತದೆ, ನಿಮ್ಮ ಮನಸ್ಥಿತಿಯು ಚಟುವಟಿಕೆ ಹಾಗೂ ಉಲ್ಲಾಸದಿಂದಿರುತ್ತದೆ. ನಿಮ್ಮ ಸುತ್ತಲೂ ಮಸುಕನ್ನು ತುಂಬಿದ್ದ ಋಣಾತ್ಮಕತೆಯ ಮೋಡಗಳು ಇಂದು ದೂರ ಸರಿಯಲಿವೆ. ಜೊತೆಗೆ ಕೆಲವು ಸಮಸ್ಯೆಗಳು ಕೂಡ. ಅಕ್ಷರಶಃ ಸುರಿಯುವ ಅದೃಷ್ಟದೊಂದಿಗೆ ನೀವು ಸಡಗರದಿಂದ ಕೂಡಿರುತ್ತೀರಿ. ಮನೆಮಂದಿಯವರ, ಒಡಹುಟ್ಟಿದವರ, ಸ್ನೇಹಿತರ ಮತ್ತು ಪ್ರೀತಿಪಾತ್ರರ ಸಂಗಡವು ನಿಮ್ಮನ್ನು ಖುಷಿಯಲ್ಲಿರಿಸುತ್ತದೆ ಮತ್ತು ಸಣ್ಣ ವಿನೋದ ಕೂಟದ ಯೋಜನೆಯನ್ನು ರೂಪಿಸುತ್ತದೆ. ಸ್ಪರ್ಧಿಗಳ ವಿರುದ್ಧದ ಗೆಲುವು ಸಂಭ್ರಮಾಚರಣೆಗೆ ಇನ್ನೊಂದು ಕಾರಣವಾಗಿದೆ. ಈ ಸಂಜೆ ನೀವು ನಿಮ್ಮ ಪ್ರೇಮಿಯೊಂದಿಗೆ ಮೋಹದ,ಪ್ರಣಯಾಸಕ್ತ ಕ್ಷಣಗಳನ್ನು ಕಳೆಯುವುದರಿಂದ ಈ ಸಂಜೆಯು ಜೀವನದ ಕ್ಷಣವಾಗಲಿದೆ.
ಮೀನ :-
ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸುವಂತೆ ಗಣೇಶ ಸಲಹೆ ನೀಡುತ್ತಾರೆ ಇಲ್ಲವಾದಲ್ಲಿ ನೀವು ಒಟ್ಟಾಗಿ ಕಾರ್ಯ ನಡೆಸದೇ ಇದ್ದಲ್ಲಿ, ಹತೋಟಿ ಮೀರಬಹುದು. ಹಣ ಕೊಡುಕೊಳ್ಳುವಿಕೆಯ ವ್ಯವಹಾರ ಬೇಡ. ಇದು ಉತ್ತಮ ಸಮಯವಲ್ಲ. ಈ ಉಕ್ತಿಯು ಮಾತು ಮತ್ತು ಸಿಟ್ಟು ಸೇರಿದಂತೆ ನಿಮ್ಮ ಜೀವನದ ಇತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.ನಿಮ್ಮ ವ್ಯಂಗ್ಯ ಮಾತುಗಳನ್ನು ನಿಯಂತ್ರಿಸಿ. ದುರಾದೃಷ್ಟವೆಂಬಂತೆ, ಜನರು ನಿಮ್ಮ ಹಾಸ್ಯ ಮನೋಭಾವವನ್ನು ಹಂಚಿಕೊಳ್ಳಲು ವಿಫಲರಾಗುತ್ತಾರೆ. ಅವರು ಗಂಭೀರ ಅವಮಾನವಾಗಿ ಕೆಲವು ಅನುದ್ದೇಶಿತ ಟೀಕೆಗಳನ್ನು ಮಾಡಬಹುದು. ಇದು ಕಾರ್ಯ ಸಂಬಂಧದ ಮೇಲೆ ಸಂಭಾವ್ಯ ಘಾತಕವನ್ನು ಉಂಟುಮಾಡಲಿದೆ. ಎಲ್ಲದಕ್ಕೂ ಇದೇ ಅನ್ವಯವಾಗುತ್ತದೆ ಆದರೂ, ವೈಯಕ್ತಿಕ ಸಂಬಂಧಗಳಿಗೆ ಅಷ್ಟು ಕಟ್ಟುನಿಟ್ಟಾಗಿ ಅಲ್ಲ. ಯಾವುದೇ ಸಂದರ್ಭಗಳಲ್ಲೂ ಋಣಾತ್ಮಕತೆಯನ್ನು ಬಿಟ್ಟುಬಿಡಿ. ನಿಮ್ಮ ಆಹಾರ ಕ್ರಮದ ಬಗ್ಗೆ ಗಮನವಿರಿ.
Horoscope Today : 18 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now