ಪ್ರದೀಪ್‌ ಈಶ್ವರ್ ಅನ್‌ಪಡ್ : ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ ವಿಚಾರದಲ್ಲಿ ಸುರೇಶ್‌ ಕುಮಾರ್ ಟಕ್ಕರ್

Spread the love

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತೆ ಸುದ್ದಿಯಲ್ಲಿದ್ದಾರೆ. ದಾವಣಗೆರೆಯಲ್ಲಿ ಚುನಾವಣೆ ಪ್ರಚಾರ ವೇಳೆ ಪ್ರದೀಪ್ ಈಶ್ವರ್ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದು ನಮ್ಮ ಕಾಂಗ್ರೆಸ್ ಎಂದಿದ್ದರು. ಆದರೆ, ಇದೀಗ ಪ್ರದೀಪ್ ಈಶ್ವರ್ಗೆ ಸುರೇಶ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಪ್ರದೀಪ್ ಈಶ್ವರ್ ಮಾತಿಗೆ ಆಕ್ರೋಶ

ಪ್ರದೀಪ್ ಈಶ್ವರ್ ದಾವಣಗೆರೆಯಲ್ಲಿ ಅಬ್ದಲ್ ಕಲಾಂ ಬಗ್ಗೆ ನೀಡಿದ ಮಾಹಿತಿಯಲ್ಲಿ ಲೋಪವಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಸುರೇಶ್ ಕುಮಾರ್ ಕೂಡಾ ಟಾಂಗ್ ಕೊಟ್ಟಿದ್ದಾರೆ.

ಸುರೇಶ್ ಕುಮಾರ್ ಟ್ವೀಟ್ನಲ್ಲಿ ಏನಿದೆ?

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಈ ಮಾಹಿತಿ.
ಶ್ರೀ ಎ ಪಿ ಜೆ ಅಬ್ದುಲ್ ಕಲಾಂ ಅವರು ಭಾರತದ ರಾಷ್ಟ್ರಪತಿ ಆಗಿದ್ದು 25 ಜುಲೈ 2002 ರಂದು. ಆಗ ಭಾರತದ ಪ್ರಧಾನ ಮಂತ್ರಿ ಆಗಿದ್ದವರು ಶ್ರೀ ಅಟಲ್ ಬಿಹಾರಿ ವಾಜಪೇಯಿ. ಆಗ ಇದ್ದ ಸರ್ಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದು ಸುರೇಶ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಅಸಲಿಯತ್ತೇನು?

ದೇಶ ಕಂಡ ಅಪ್ರತಿಮ ಸಾಧಕ ಡಾ ಎಪಿಜೆ ಅಬ್ದುಲ್ ಕಲಾಂ 2002 ರಿಂದ 2007 ರವರೆಗೆ ಭಾರತದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. 2002 ರಲ್ಲಿ ಅಧಿಕಾರದಲ್ಲಿದ್ದಿದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ.
ರಾಷ್ಟ್ರಪತಿ ಅಭ್ಯರ್ಥಿಯಾಗಿ ಅಂದು ಅಬ್ದುಲ್ ಕಲಾಂರನ್ನು ಮುನ್ನಲೆಗೆ ತಂದಿದ್ದು ಬಿಜೆಪಿ ನೇತೃತ್ವದ ಎನ್ ಡಿಎ. ಬಳಿಕ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಡಾ ಅಬ್ದುಲ್ ಕಲಾಂರನ್ನು ಬೆಂಬಲಿಸಿತ್ತು.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ, ಅವಿರೋಧವಾಗಿ ಭಾರತದ ರಾಷ್ಟ್ರಪತಿಗಳಾಗಿ ಆಯ್ಕೆಯಾದರು ಅಬ್ದುಲ್ ಕಲಾಂ. ಜನರೂ ಅವರನ್ನು ಒಬ್ಬ ವ್ಯಕ್ತಿಯಾಗಿ, ವಿಜ್ಞಾನಿಯಾಗಿ ಮತ್ತು ರಾಷ್ಟ್ರಪತಿಯಾಗಿ ಆದರ್ಶ ವ್ಯಕ್ತಿಯಾಗಿ ಕಂಡಿದ್ದರು.

ಪ್ರದೀಪ್ ಈಶ್ವರ್ಗೆ ಬಿಜೆಪಿ ಕಾರ್ಯಕರ್ತರ ತರಾಟೆ
ಪ್ರದೀಪ್ ಈಶ್ವರ್, ಅಬ್ದುಲ್ ಕಲಾಂ 2002 ರಲ್ಲಿ ರಾಷ್ಟ್ರಪತಿ ಆಗಿದ್ದು. ಆಗ ಇದ್ದಿದ್ದು ಕಾಂಗ್ರೆಸ್ ಸರ್ಕಾರ ಅಲ್ಲ, ವಾಜಪೇಯಿ ನೇತೃತ್ವದ NDA ಸರ್ಕಾರ. ಅದಕ್ಕೆ ಅಲ್ಲಿರೋರು ಕೂಗೋದು ನೋಡಿ, MP ಪ್ರಭಾ ಮಲ್ಲಿಕಾರ್ಜುನ್ ಚಪ್ಪಾಳೆ ಹಾಕ್ತಾ ಇರೋದು ನೋಡಿ. ಎಂಥಾ ಅದ್ಭುತ..

ಇವನು ಬಿಜೆಪಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋಗಳು ಶೇಖರಣೆ ಮಾಡಿ ಕೇಸ್ ಹಾಕಬೇಕು ಎಂದು ಓರ್ವ ಕಾರ್ಯಕರ್ತ ಹೇಳಿದ್ದಾನೆ.ಬರೀ ಸುಳ್ಳು ಹೇಳ್ತಾನೆ. ‘ಬಾಯಿ ಬಿಟ್ಟರೆ ಸುಳ್ಳು ಹೇಳೋದೇ ಇವನ ಕೆಲಸ. ಅವತ್ತು ರಾಷ್ಟ್ರಪತಿ ಆಗಬೇಕೆಂದು ಅಬ್ದುಲ್ ಕಲಾಂರನ್ನು ವಾಜಪೇಯಿ ಸರ್ಕಾರ ಹೊರಟಾಗ ಒಬ್ಬ ಮುಸಲ್ಮಾನ ಹೇಗೆ ಈ ದೇಶದ ರಾಷ್ಟ್ರಪತಿ ಆಗುತ್ತಾನೆ ಎಂದು ಕಾಂಗ್ರೆಸ್ ವಿರೋಧಿಸಿತ್ತು. ಪ್ರದೀಪ್ ಈಶ್ವರ್ ಧಮ್ ಇದ್ರೆ ಓಪನ್ ಡಿಬೇಟ್ ಸಾಕ್ಷಿ ಸಮೇತ ಬಾ ಎಂದು ಬಿಜೆಪಿ ಕಾರ್ಯಕರ್ತರು ಸವಾಲ್ ಹಾಕಿದ್ದಾರೆ.

WhatsApp Group Join Now

Spread the love

Leave a Reply