ಮೇಷ :-
ಶಾಂತ ಮನಸ್ಥಿತಿ ಮತ್ತು ಕುಟುಂಬ ವಿಚಾರಗಳಲ್ಲಿ ಸಂತೋಷವನ್ನು ಇಂದು ಗಣೇಶ ನಿಮಗೆ ದಯಪಾಲಿಸುತ್ತಾರೆ. ಇಂದು ಹೆಚ್ಚಿನ ಶ್ರಮಪಡುವಂತೆ ಗ್ರಹಗತಿಗಳು ನಿಮ್ಮನ್ನು ಪ್ರಚೋದಿಸುತ್ತವೆ ಮತ್ತು ಇದು ಕಳೆದುಹೋದ ಆಸ್ತಿಗಳನ್ನು ಮರುಪಡೆಯುವತ್ತ ಹಾದಿಮಾಡಿಕೊಡುತ್ತದೆ. ಇಂದು ನೀವು ಸ್ವಾದಿಷ್ಟ ಭೋಜನದಲ್ಲಿ ತೊಡಗಿಸಿಕೊಳ್ಳುತ್ತೀರಿ ಮತ್ತು ಖುಷಿಯ ಮನಸ್ಥಿತಿಯೊಂದಿಗೆ ಆನಂದಿಸುವಿರಿ.
ವಿದೇಶಿ ವ್ಯಾಪಾರದಲ್ಲಿ ತೊಡಗಿರುವವರಿಗೆ ಇಂದು ಅದೃಷ್ಟದಾಯಕ ದಿನ. ಆದರೂ, ನಿಮ್ಮ ಕೋಪದ ಬಗ್ಗೆ ನಿಯಂತ್ರಣವಿರಿಸುವಂತೆ ಮತ್ತು ಅನಗತ್ಯ ಆಧ್ಯಾತ್ಮ ಚರ್ಚೆಯಲ್ಲಿ ತೊಡಗದಂತೆ ಮತ್ತು ಸಮಚಿತ್ತತೆಯನ್ನು ಕಾಯ್ದುಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.
ವೃಷಭ :-
ಈ ದಿನವು ಅತ್ಯುತ್ತಮ ದಿನವಾಗಿರುವ ಭರವಸೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ನೀವು ಸುಸ್ಥಿತಿಯಲ್ಲಿರುವಿರಿ. ಉತ್ತಮ ವಿಚಾರಗಳಿಗಾಗಿ ದಿನಪೂರ್ತಿ ನೀವು ನಗುವಿನಿಂದ ಕೂಡಿರುವಿರಿ. ಎಲ್ಲವೂ ಸರಿಯಾದ ಸ್ಥಳದಲ್ಲಿ ಸಂಭವಿಸಲಿದೆ ಮತ್ತು ಇಂದು ನೀವು ಪೂರ್ಣಗೊಳಿಸಲು ಆಯೋಜಿಸಿದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನಿಮ್ಮ ಬಂಡವಾಳದಿಂದ ಉತ್ತಮ ಪ್ರತಿಫಲವನ್ನು ಪಡೆಯುವ ನಿರೀಕ್ಷಿಯಿದೆ. ಹೆತ್ತವರ ಸಹಾಯದಿಂದ ಬ್ರಹತ್ ಪ್ರಮಾಣದ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ನೀವು ಕಷ್ಟಕರ ಹಾದಿಯಲ್ಲಿ ಸಾಗುತ್ತಿದ್ದಲ್ಲಿ ಇಂದು ಎಲ್ಲವೂ ಸುಗಮವಾಗಲಿದೆ.
ಮಿಥುನ :-
ಇಂದು ನೀವು ನೆನಪಿನಲ್ಲಿಡಬಯಸುವಂತಹ ಉತ್ತಮ ದಿನವಾಗಿರುವುದಿಲ್ಲ. ನೀವು ಅವಮರ್ಯಾದೆ ಮತ್ತು ಮುಜುಗರವನ್ನು ಎದುರಿಸಬೇಕಾಗಬಹುದು. ಹೊಸದನ್ನೇನಾದರು ಪ್ರಾರಂಭಿಸಲು ನೀವು ಯೋಜನೆ ರೂಪಿಸಬಹುದು ಆದರೆ, ಅವುಗಳು ನೀವೆಣಿಸಿದ ಹಾದಿಯಲ್ಲಿ ಸಾಗುವುದಿಲ್ಲ. ನಿಮ್ಮ ಮಕ್ಕಳ ಶಿಕ್ಷಣ, ಆರೋಗ್ಯ ಅಥವಾ ನೆಮ್ಮದಿಗೆ ಸಂಬಂಧಿಸಿ ನೀವು ಸಾಕಷ್ಟು ಖರ್ಚುಮಾಡಬೇಕಾಗುತ್ತದೆ. ನಿಮ್ಮದೇ ಆರೋಗ್ಯವು ಚಿಂತೆಗೆ ಕಾರಣವಾಗುತ್ತದೆ ಇದು ನಿಮ್ಮ ನಿರಾಶೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಸ್ಥಿತಿಯನ್ನು ಮತ್ತೊಮ್ಮೆ ಹೇಳಬೇಕಾಗಿಲ್ಲ, ಖಂಡಿತವಾಗಿಯೂ ಇದು ನಿಮ್ಮನ್ನು ರಾತ್ರಿಯಿಡೀ ನಿದ್ದೆಗೆಡಿಸುವಂತೆ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಇಂದು ಸಾಮಾನ್ಯ ದಿನವಾಗಿದೆ ಮತ್ತು ಕಠಿಣ ಪರಿಶ್ರಮಪಟ್ಟರೆ ಉತ್ತಮವಾಗಿ ಪರಿವರ್ತನೆಗೊಳ್ಳಬಹುದು. ಇಂದು ಲೈಂಗಿಕವಾಗಿ ಕ್ರಿಯಾಶೀಲರಾಗುವಿರಿ ಎಂಬುದಾಗಿ ಗಣೇಶ ಭಾವಿಸುತ್ತಾರೆ.
ಕರ್ಕಾಟಕ :-
ಇಂದು ಉತ್ತಮ ದಿನವಲ್ಲ. ಮತ್ತು ನೀವು ಕೆಟ್ಟದಾದ ಮನಸ್ಥಿತಿಯಲ್ಲಿರಬಹುದು. ಏನು ತಪ್ಪು ನಡೆದಿದೆ ಮತ್ತು ನೀವೇನು ತಪ್ಪು ಮಾಡಿದಿರಿ ಎಂಬುದರ ಬಗ್ಗೆ ನೀವು ಆಶ್ಚರ್ಯ ಪಡಬಹುದು. ಇದು ಗ್ರಹಗತಿಗಳ ಕೆಟ್ಟ ಪ್ರಭಾವದಿಂದ ಹೀಗಾಗುತ್ತಿದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ನಿಮ್ಮ ಮನಸ್ಸು ಆತಂಕ ಮತ್ತು ಗೊಂದಲದಿಂದ ತುಂಬಿರುತ್ತದೆ ಮತ್ತು ಇತರರೊಂದಿಗೆ ವ್ಯವಹರಿಸುವಾಗ ಯಾರು ಒರಟಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಲು ನಿಮಗೆ ಅಸಾಧ್ಯವಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಮಹಿಳೆಯರೊಂದಿಗೆ ನೀವು ಜಗಳವಾಡುವ ಸಾಧ್ಯತೆಯಿದೆ. ಇಂದು ನೀವು ಮೋಸದಿಂದ ನಿಮ್ಮ ಹಣವನ್ನು ಕಳೆದುಕೊಳ್ಳುವಿರಿ. ಆದ್ದರಿಂದ ಅವುಗಳ ಬಗ್ಗೆ ಜಾಗರೂಕರಾಗಿರಿ. ಅವಮರ್ಯಾದೆಯನ್ನು ಎದುರಿಸುವ ಸಾಧ್ಯತೆಯಿದೆ. ಗಣೇಶ ನಿಮಗೆ ಸಹಾಯ ಮಾಡಲಿ.
ಸಿಂಹ :-
ಈ ದಿನವು ಅದ್ಭುತ ದಿನವಾಗಲಿದೆ ಎಂಬುದಾಗಿ ಗಣೇಶ ನಂಬುತ್ತಾರೆ. ಉತ್ತಮ ಆರೋಗ್ಯ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ರಚನಾತ್ಮಕ ಸಂವಾದವನ್ನು ಹೊಂದುವಿರಿ. ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಸುಂದರ ಸ್ಥಳಗಳಿಗೆ ಪ್ರವಾಸ ತೆರಳುವ ಸಾಧ್ಯತೆಯಿದೆ. ನಿಮ್ಮ ಏಳಿಗೆಯಿಂದ ನಿಮ್ಮ ಪ್ರೀತಿಪಾತ್ರರು ಮತ್ತು ಸ್ನೇಹಿತರು ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. ಎಲ್ಲಾ ಕಲಾತ್ಮಕತೆಯ ಬಗ್ಗೆ ನೀವು ತೀವ್ರ ಒಲವು ತೋರಲಿದ್ದೀರಿ ಮತ್ತು ವಿಚಾರಗಳಲ್ಲಿನ ನಿಮ್ಮ ದೃಷ್ಟಿಯಲ್ಲಿ ಭಾವುಕರಾಗಿರುವ ಸಾಧ್ಯತೆಯಿಲ್ಲ. ನಿಮ್ಮ ಮನಸ್ಸು, ದೇಹ ಮತ್ತು ಆತ್ಮಕ್ಕೆ ಉತ್ತಮ ದಿನ.
ಕನ್ಯಾ :-
ನೀನು ಮಾಡಲಾರೆಯಾ? ಎಂಬ ಪದದೊಂದಿಗೆ ನೀವು ಹಾದಿಯನ್ನು ಹೊಂದಿರುವಿರಿ. ನಿಮ್ಮನ್ನು ಅನುಸರಿಸುತ್ತಿರುವವರೊಂದಿಗೆ ನೀವು ಉತ್ತಮ ಸಂವಾದವನ್ನು ಹೊಂದಬಹುದು ಮತ್ತು ಆಕರ್ಷಿಸಬಹುದು. ಸಾಮಾನ್ಯವಾಗಿಲ್ಲದಿದ್ದರೂ, ಸ್ವಲ್ಪಮಟ್ಟಿಗೆ ಮೇಲೆ ಸೂಚಿಸಿದ ವಿವರಣೆಯು ನಿಮಗೆ ಸರಿಹೊಂದುತ್ತದೆ.ನಿಮ್ಮ ಕುಟುಂಬವು ನಿಮ್ಮನ್ನು ಗೌರವಿಸುತ್ತದೆ ಮತ್ತು ನಿಮ್ಮೊಂದಿಗಿನ ಸಾಂಗತ್ಯವನ್ನು ಆನಂದಿಸುತ್ತದೆ. ನಿಮ್ಮ ಮೋಹಗೊಳಿಸುವಿಕೆಯ ಸ್ವಭಾವವು ಹಣವನ್ನು ನಿಮ್ಮತ್ತ ಆಕರ್ಷಿಸುತ್ತದೆ ಮತ್ತು ಉತ್ತಮ ಆರೋಗ್ಯವು ಈ ದಿನಪೂರ್ತಿ ಸಂತಸದಿಂದಿರುವ ಭರವಸೆಯನ್ನು ನೀಡುತ್ತದೆ. ಬೌದ್ಧಿಕ ಚರ್ಚೆಯಲ್ಲಿ ಒಳಗೊಳ್ಳಬಹುದು. ಆದರೆ ನಮ್ರತೆಯು ಮಾತ್ರವೇ ಸರಿಯಾದ ಪ್ರತಿಕ್ರಿಯೆಯನ್ನು ನೀಡುತ್ತದೆ. ಇಲ್ಲವಾದಲ್ಲಿ ನಿಮ್ಮ ಸಂವಾದವು ಸಣ್ಣ ಜಗಳವಾಗಿ ಮಾರ್ಪಡಬಹುದು.
ತುಲಾ :-
ಸೃಜನಶೀಲತೆ ಮತ್ತು ನಿಮ್ಮನ್ನು ಕಲಾವಿದನನ್ನಾಗಿಸಿದ ನಿಮ್ಮ ಕೌಶಲ್ಯಗಳಿಗೆ ಈ ದಿನವು ಅತ್ಯುತ್ತಮ ದಿನವಾಗಲಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಸದೃಢರಾಗಿರುವಿರಿ. ಅನ್ವೇಷಣಾ ಮಟ್ಟ ಮತ್ತು ಚೌಕಟ್ಟಿಗೂ ಮೀರಿದ ಅರ್ಹತೆ ಅಗತ್ಯವಿರುವ ಕಾರ್ಯಗಳಲ್ಲಿ ಇಂದು ನೀವು ಯಶಸ್ಸು ಕಾಣಲಿದ್ದೀರಿ. ಸದೃಢ ಪರಿಪೂರ್ಣತೆಯು ನಿಮ್ಮ ಗುರಿಯನ್ನು ಸಾಧಿಸಲು ಮತ್ತು ಹಣಕಾಸು ವಿಚಾರಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ನಿಮಗೆ ಸಹಕಾರಿಯಾಗಲಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಮತ್ತು ನೀವು ಅವರ ಸಾಂಗತ್ಯವನ್ನು ಆನಂದಿಸುವಿರಿ.
ವೃಶ್ಚಿಕ :-
ನಿಮ್ಮ ದುರಾಕ್ರಮಣ ಸ್ವಭಾವ ಮತ್ತು ಮಾತಿನ ಮೇಲೆ ಹತೋಟಿ ಇಡುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಮನಸು ಒತ್ತಡ ಮತ್ತು ಉದ್ವೇಗದಿಂದ ಕೂಡಿರುವ ಹಾಗೂ ದೈಹಿಕ ತೊಂದರೆಯಿಂದಿರುವ ಸಂಭವವಿದೆ. ಅಪಘಾತಗಳನ್ನು ತಪ್ಪಿಸಲು ವಾಹನ ಚಾಲನೆಯ ಮೇಲೆ ಸೂಕ್ಷ್ಮ ಗಮನವಿರಲಿ. ಸಾಧ್ಯವಿದ್ದರೆ ಶಸ್ತ್ರಕ್ರಿಯೆಗಳನ್ನು ತಪ್ಪಿಸಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಕುಟುಂಬ ಸದಸ್ಯರೊಂದಿಗೆ ಸಂಘರ್ಷಗಳನ್ನು ಹೊಂದಬಹುದು. ಕಾನೂನು ಕಲಹಗಳನ್ನು ತಪ್ಪಿಸಿ ಆದರೆ, ಬೇರೆ ದಾರಿಯೇ ಇಲ್ಲವಾದಲ್ಲಿ ಅವುಗಳನ್ನು ಜಾಗರೂಕತೆಯಿಂದ ನಿಭಾಯಿಸಿ.ಮನರಂಜನೆಯಿಂದ ದಿನವನ್ನು ಕಳೆಯಲಿದ್ದೀರಿ.
ಧನು :-
ಈ ದಿನವು ಫಲಪ್ರದವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹಣಕಾಸು, ಸಾಮಾಜಿಕ ಹಾಗೂ ವೈಯಕ್ತಿಕ ನೆಲೆಯಿಂದ ನಿಮಗೆ ಲಾಭ ಉಂಟಾಗಲಿದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉಲ್ಲಾಸಕರ ಪ್ರವಾಸಕ್ಕೆ ಯೋಜನೆ ರೂಪಿಸಬಹುದು. ವ್ಯವಹಾರಕ್ಕೆ ಇದು ಉತ್ತಮ ದಿನ. ಶಾಂತಿಯು ನಿಮ್ಮ ಕುಟುಂಬದಲ್ಲಿ ನೆಲೆಯಾಗಿರುವ ಸಾಧ್ಯತೆಯಿದೆ. ವಿವಾಹದ ಯೋಜನೆ ನಡೆಸುತ್ತಿರುವವರಿಗೆ ಇಂದು ಸೂಕ್ತ ಸಂಗಾತಿ ದೊರೆಯಬಹುದು.
ಮಕರ :-
ನಿಮ್ಮ ಕುಟುಂಬದಿಂದ ಸಂತಸ ಅನುಭವಿಸುವ ಸಂಭವವಿದೆ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಭೇಟಿಯಿಂದಲೂ ನೀವು ಖುಷಿ ಅನುಭವಿಸುವಿರಿ. ವ್ಯವಹಾರದಲ್ಲಿನ ಬಂಡವಾಳ ವೃದ್ಧಿಗೊಳಿಸಲು ತೀವ್ರ ಪ್ರಯತ್ನ ನಡೆಸುತ್ತಿರುವವರಿಗೆ ಅವರ ಆಲೋಚನೆಗಳು ಕೈಗೂಡುವ ಸಂಭವವಿದೆ. ಇದರಿಂದ ನಿಮಗೆ ಪ್ರಯೋಜನವುಂಟಾಗಬಹುದು. ಬಡ್ತಿ ಸಿಗುವ ಸಾಧ್ಯತೆಯಿದೆ. ಅಪಘಾತ ಸಂಭಾವ್ಯತೆಯಿರುವುದರಿಂದ ಎಚ್ಚರಿಕೆಯಿಂದಿರಿ.
ಕುಂಭ :-
ನಿಮ್ಮ ಪ್ರತಿಸ್ಪರ್ಧಿಗಳೊಂದಿಗಿನ ಹೋರಾಟವನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನೀವು ದೈಹಿಕವಾಗಿ ಅನಾರೋಗ್ಯದಿಂದಿರಬಹುದು. ಆಲಕ್ಷ್ಯವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಆದರೂ, ನೀವು ಮಾನಸಿಕ ಸಂತೋಷವನ್ನು ಅನುಭವಿಸುವಿರಿ. ಮೇಲಾಧಿಕಾರಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಮನರಂಜನೆಗಾಗಿ ಖರ್ಚು ಮಾಡುವ ಸಂಭವವಿದೆ. ಮಕ್ಕಳಿಗೆ ಸಂಬಂಧಿಸಿದ ಒತ್ತಡವು ನಿಮ್ಮನ್ನು ಇನ್ನಷ್ಟು ಕಾಡಲಿದೆ. ವಿದೇಶದಿಂದ ಶುಭಸುದ್ದಿ ಬರಬಹುದು.
ಮೀನ :-
ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿಕೆಯು ನಿಮ್ಮನ್ನು ಸಂಕಷ್ಟಕ್ಕೀಡುಮಾಡಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ.ನಿಮ್ಮ ನಾಲಗೆ ಮತ್ತು ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಿ. ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದನ್ನು ತಪ್ಪಿಸಿ. ವೈದ್ಯಕೀಯ ಬಿಲ್ಗೆ ಸಂಬಂಧಿಸಿದ ವೆಚ್ಚಗಳು ಉಂಟಾಗುವ ಸಾಧ್ಯತೆಯಿದೆ. ಇಂದು ನೀವು ವಿಶ್ರಾಂತಿರಹಿತರಾಗಬಹುದು. ನಕಾರಾತ್ಮಕತೆಯು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು ಅವುಗಳಿಂದ ದೂರವಿರಿ. ದೇವರ ಮೇಲಿನ ನಂಬಿಕೆ ಹಾಗೂ ಆಶೀರ್ವಾದವು ನಿಮಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಬಹುದು.
Horoscope Today : 09 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now