ಚಿಕ್ಕಮಗಳೂರು : ಅರೆ ಬೆಂದ ಅನ್ನ, ಮಸಾಲೆ ಇಲ್ಲದ ಸಾರು…. ಇದು ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳ ದರ್ಬಾರ್. ಇಲ್ಲಿ ಹೇಳೋರಿಲ್ಲ-ಕೆಳೋರಿಲ್ಲ.. ಮಕ್ಕಳು ಅನ್ನ ಬೆಂದಿಲ್ಲಾ, ಹುಳ ಇದೆ ಅಂದರೂ, ಶಿಕ್ಷಕರು ಡೋಂಟ್ ಕೇರ್..ಇದು ಕಡೂರು ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿನ ಘಟನೆಗಳು.
ಆ ಶಾಲೆಯಲ್ಲಿ ಕಲಿಯುವ ಪುಟ್ಟ-ಪುಟ್ಟ ಮಕ್ಕಳು ಸರ್ಕಾರದ ಬಿಸಿ ಊಟವನ್ನೇ ತೊರೆಯುತ್ತಿದ್ದಾರೆ. ಯಾಕೆಂದರೆ ಸರ್ಕಾರದ ಬಿಸಿಯೂಟದ ಯೋಜನೆಯ ಊಟದಲ್ಲಿ ಹುಳುಗಳದ್ದೇ ಕಾರುಬಾರು.
ಮಕ್ಕಳು ಹುಳ ಇದೆ ಎಂದು ಊಟ ಬಿಟ್ರು ಶಿಕ್ಷಕರು – ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತಿಲ್ಲ. ಅನ್ನದಲ್ಲಿ ಹುಳ ಕಂಡ ನಂತರ ಕೆಲ ಮಕ್ಕಳು ಮನೆಯಿಂದಲೇ ಊಟ ತರುತ್ತಿದ್ದಾರೆ. ಮಕ್ಕಳಿಗೆ ಕಳಪೆ ಗುಣಮಟ್ಟದ ಬಿಸಿಯೂಟ ನೀಡಿದರೂ ಆಡಳಿತ ವ್ಯವಸ್ಥೆ ಮೌನ ವಹಿಸಿದೆ.
ಊಟ ಮಾಡುವಾಗ ಬೇಯಿಸಿದ ಆಹಾರದಲ್ಲಿ ಹುಳಗಳು ಪತ್ತೆಯಾಗಿ, ಹುಳ ಕಂಡು ಊಟ ಮಾಡಲಾಗದೇ ಮಕ್ಕಳು ಅನ್ನವನ್ನು ಚೆಲ್ಲಿ ಹೋಗಿದ್ದು, ಮಕ್ಕಳು ಅನುಭವಿಸುತ್ತಿರುವ ಈ ಸಮಸ್ಯೆ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
WhatsApp Group
Join Now