ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ :
ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಕೆಲಸದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಕೈಗೊಳ್ಳುವುದು ಅಗತ್ಯವಾಗಿ ಇರುತ್ತದೆ.
ವೃಷಭ ರಾಶಿ :
ಮನೆಯಲ್ಲಿ ನೆಮ್ಮದಿ ಇದ್ದು ಜಮೀನು ಆಸ್ತಿ ಕೆಲಸಗಳು ಮುಂದೆ ಹೋಗುತ್ತವೆ. ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಿದೆ.
ಮಿಥುನ ರಾಶಿ :
ಹೊಸ ಯೋಜನೆಗಳನ್ನು ಆರಂಭಿಸಲು ಅನುಕೂಲಕರ ದಿನವಾಗಿದೆ. ಚಿಕ್ಕ ಪ್ರಯಾಣವು ಬಹಳಷ್ಟು ಲಾಭವನ್ನು ಇಂದು ತಂದುಕೊಡಬಹುದು.
ಕಟಕ ರಾಶಿ :
ಈ ರಾಶಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗಬಹುದು. ಹಾಗಾಗಿ ತಾಳ್ಮೆಯಿಂದ ಇದ್ದರೆ ಒಳ್ಳೆಯದು. ಕುಟುಂಬದವ ರೊಂದಿಗೆ ಇಂದು ಉತ್ತಮ ಸಮಯ ಕಳೆಯುವಿರಿ.
ಸಿಂಹ ರಾಶಿ :
ವೃತ್ತಿಜೀವನದಲ್ಲಿ ಪ್ರಗತಿಯ ಸೂಚನೆಗಳಿವೆ. ಆರ್ಥಿಕ ಸ್ಥಿತಿ ಸುಧಾರಿಸಬಹುದು. ಅಂದುಕೊಂಡ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತವೆ
ಕನ್ಯಾ ರಾಶಿ :
ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ದೊರೆಯಬಹುದು. ಉದ್ಯೋಗ ಹುಡುಕುತ್ತಿದ್ದವರಿಗೆ ಹೊಸ ಅವಕಾಶ ಸಿಗಬಹುದು.
ತುಲಾ ರಾಶಿ :
ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಉತ್ತಮ ಲಾಭ ತಂದು ಕೊಡಬಹುದು.
ವೃಶ್ಚಿಕ ರಾಶಿ :
ಈ ರಾಶಿಯವರು ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಇಂದು ಜಾಗೃತಿ ವಹಿಸುವುದು ಅಗತ್ಯ.
ಧನು ರಾಶಿ :
ಈ ರಾಶಿಗೆ ಪ್ರಯಾಣದ ಸಾಧ್ಯತೆ ಇದೆ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ಕುಟುಂಬದವರ ಬೆಂಬಲ ಇಂದು ಹೆಚ್ಚಾಗುತ್ತದೆ.
ಮಕರ ರಾಶಿ :
ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆದರೆ ಖರ್ಚು ನಿಯಂತ್ರಣ ಮಾಡಿದರೆ ಇಂದು ಉತ್ತಮ.ಆರೋಗ್ಯದಲ್ಲಿ ಜಾಗೃತಿ ಅಗತ್ಯ ಇರುತ್ತದೆ.
ಕುಂಭ ರಾಶಿ :
ಈ ರಾಶಿಗೆ ಹೊಸ ವಿಚಾರಗಳು ಮತ್ತು ಯೋಜನೆ ಗಳು ಯಶಸ್ಸು ಕಾಣಬಹುದು. ಸ್ನೇಹಿತರ ನೆರವು ಕೂಡ ಸಿಗಲಿದೆ.
ಮೀನ ರಾಶಿ :
ಮನಸ್ಸಿನಲ್ಲಿದ್ದ ಕೆಲವು ಗೊಂದಲಗಳು ನಿವಾರಣೆ ಯಾಗುತ್ತದೆ. ಕಷ್ಟಗಳು ದೂರವಾಗಿ ಹಣಕಾಸಿನಲ್ಲಿ ಸ್ಥಿರತೆಯನ್ನು ಕಾಣುತ್ತೀರಿ.
ದಿನ ಭವಿಷ್ಯ, ಇಂದು ಗಣೇಶ ಚತುರ್ಥಿ! ಈ ರಾಶಿಯವರ ಜೀವನದಲ್ಲಿ ಮುಖ್ಯ ಬದಲಾವಣೆ ಸಾಧ್ಯ
WhatsApp Group
Join Now